ಹೈದರಾಬಾದ್: ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭಕ್ಕೂ ಮೊದಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಭಿಮಾನಿಗಳಿಗೆ ಶುಭ ಸುದ್ದಿ ಸಿಕ್ಕಿದೆ. ಬಿಗ್ ಬ್ಯಾಷ್ ಲೀಗ್ನಲ್ಲಿ ಕಳಪೆ ಫಾರ್ಮ್ನಿಂದ ಕಂಗೆಟ್ಟಿದ್ದ ಜಾಕೋಬ್ ಬೆಥೆಲ್ ಸ್ಪೋಟಕ ಬ್ಯಾಟಿಂಗ್ ಮೂಲಕ ಫಾರ್ಮ್ಗೆ ಮರಳಿದ್ದಾರೆ.
ಇಂದು ಹೋಬರ್ಟ್ ಹರಿಕೇನ್ಸ್ ಮತ್ತು ಮೇಲ್ಬೋರ್ನ್ ರೆನೆಗೇಡ್ಸ್ ನಡುವೆ ಬಿಗ್ ಬ್ಯಾಷ್ ಲೀಗ್ನ 34ನೇ ಪಂದ್ಯ ನಡೆಯಿತು. ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಮೇಲ್ಬೋರ್ನ್ ರೆನಿಗೇಡ್ಸ್ 7 ವಿಕೆಟ್ ನಷ್ಟಕ್ಕೆ 154 ರನ್ ಕಲೆ ಹಾಕಿತು. ಆದರೇ ಆರಂಭದಲ್ಲಿ 23 ರನ್ಗಳಿಗೆ 3 ವಿಕೆಟ್ ಕಳೆದುಕೊಂಡು ತಂಡ ಸಂಕಷ್ಟಕ್ಕೆ ಸಿಲುಕಿತ್ತು. ಆರಂಭಿಕ ಬ್ಯಾಟರ್ಗಳಾದ ಜೋಶ್ ಬ್ರೌನ್ (6), ಹ್ಯಾರಿಸ್ (1), ಜೇಕ್ ಫ್ರೇಸರ್ ಮೆಕ್ಗುರ್ಕ್ (7) ಎರಡಂಕಿ ತಲುಪಲು ಸಾಧ್ಯವಾಗದೇ ಪೆವಿಲಿಯನ್ ಸೇರಿದ್ದರು. ಇದರಿಂದಾಗಿ ತಂಡ 100 ರನ್ಗಳ ಗಡಿ ತಲುಪುವುದು ಡೌಟ್ ಎಂದೇ ಭಾವಿಸಲಾಗಿತ್ತು.
Jacob Bethell kept the game alive for the Renegades in Hobart.
— KFC Big Bash League (@BBL) January 14, 2025
87 off 50 to go along with 12 huge boundaries! 🔥 #BBL14 pic.twitter.com/5IMjdCI8G5
ಈ ವೇಳೆ, ಬ್ಯಾಟಿಂಗ್ಗೆ ಆಗಮಿಸಿದ ಜಾಕೋಬ್ ಬೆಥೆಲ್ ಸ್ಪೋಟಕ ಬ್ಯಾಟಿಂಗ್ ಮೂಲಕ ಅರ್ಧಶತಕ ಪೂರ್ಣಗೊಳಿಸಿದರು. 50 ಎಸೆತಗಳಲ್ಲಿ 87 ರನ್ಗಳನ್ನು ಚಚ್ಚಿದರು. ಇದರಲ್ಲಿ 8 ಬೌಂಡರಿ ಮತ್ತು 4 ಸಿಕ್ಸರ್ಗಳು ಸೇರಿದವು. ಇವರು ಬ್ಯಾಟಿಂಗ್ ನೆರವಿನಿಂದ ರೆನಿಗೇಡ್ಸ್ ತಂಡ 150ರ ಗಡಿ ದಾಟಲು ಸಾಧ್ಯವಾಯ್ತು. ಬೆಥೆಲ್ ಹೊರತುಪಡಿಸಿ ಉಳಿದ ಆಟಗಾರರು ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲರಾದರು. ಇದರಿಂದಾಗಿ ರೆನಿಗೇಡ್ಸ್ ತಂಡ ಈ ಪಂದ್ಯದಲ್ಲಿ 4 ವಿಕೆಟ್ಗಳಿಂದ ಸೋಲನುಭವಿಸಿತು.
Jacob Bethell is loving the power surge!
— KFC Big Bash League (@BBL) January 14, 2025
Back-to-back bombs! #BBL14 pic.twitter.com/CWKQJGgCdH
ಆಲ್ರೌಂಡರ್ ಪ್ರದರ್ಶನ: ಬೆಥೆಲ್ ಬ್ಯಾಟಿಂಗ್ನಲ್ಲಿ ಮಾತ್ರವಲ್ಲದೇ ಬೌಲಿಂಗ್ನಲ್ಲೂ ಉತ್ತಮ ಪ್ರದರ್ಶನ ತೋರಿದರು. ಈ ಪಂದ್ಯದಲ್ಲಿ 3 ಓವರ್ ಬೌಲಿಂಗ್ ಮಾಡಿದ ಅವರು 29 ರನ್ ನೀಡಿ 2 ವಿಕೆಟ್ ಅನ್ನು ಪಡೆದರು. ಬೆಥೆಲ್ ಅವರ ಆಲ್ರೌಂಡರ್ ಪ್ರದರ್ಶನಕ್ಕೆ RCB ಅಭಿಮಾನಿಗಳು ಫಿದಾ ಆಗಿದ್ದು, ನಮ್ಮ ಆರ್‌ಸಿಬಿ ತಂಡದಲ್ಲೂ ಇದೇ ರೀತಿ ಫಾರ್ಮ್ ಮುಂದುವರಿಸಿ ಕಪ್ ಗೆಲ್ಲಲು ಸಹಾಯ ಮಾಡಲಿ ಎಂದು ಆಶಿಸಿದ್ದಾರೆ.
ಏತನ್ಮಧ್ಯೆ, ಇತ್ತೀಚೆಗೆ ಮುಕ್ತಾಯಗೊಂಡ ಐಪಿಎಲ್ ಹರಾಜಿನಲ್ಲಿ ಜಾಕೋಬ್ ಬೆಥೆಲ್ ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ₹2.6 ಕೋಟಿಗೆ ಖರೀದಿಸಿತು. ಈ ಬಾರಿ ಆರ್‌ಸಿಬಿ ಜಾಕೋಬ್ ಬೆಥೆಲ್ ಮೇಲೆ ಹೆಚ್ಚಿನ ನಿರೀಕ್ಷೆಗಳನ್ನು ಹೊಂದಿದ್ದು ಇದೇ ಕಾರಣಕ್ಕೆ ವಿಲ್ ಜಾಕ್ಸ್ ಅವರನ್ನು ತಂಡದಿಂದ ಕೈಬಿಟ್ಟಿದೆ.
ಇದನ್ನೂ ಓದಿ: 6,6,6,6,6,6! RCB ಆಟಗಾರನ ಸಿಡಿಲಬ್ಬರದ ಬ್ಯಾಟಿಂಗ್; ಫ್ಯಾನ್ಸ್ ಫುಲ್ ಖುಷ್!