ನವದೆಹಲಿ:ಭಾರತ ಕ್ರಿಕೆಟ್ ತಂಡದ ವೇಗದ ಬೌಲರ್ ಭುವನೇಶ್ವರ್ ಕುಮಾರ್ ಇಂದು ತಮ್ಮ 34ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಭುವಿ ಅವರು ಇನ್ ಸ್ವಿಂಗ್ ಮತ್ತು ಔಟ್ ಸ್ವಿಂಗ್ ಬೌಲಿಂಗ್‌ಗೆ ಹೆಸರುವಾಸಿಯಾಗಿದ್ದಾರೆ. ಅಷ್ಟೇ ಅಲ್ಲ ಕಾರಣಕ್ಕಾಗಿ ಅಭಿಮಾನಿಗಳು ಅವರನ್ನು ‘ದಿ ಸ್ವಿಂಗ್ ಕಿಂಗ್’ ಎಂದೂ ಕರೆಯುತ್ತಾರೆ. ಅವರು ಪ್ರಪಂಚದಾದ್ಯಂತದ ದೊಡ್ಡ ದೊಡ್ಡ ಬ್ಯಾಟ್ಸ್‌ಮನ್‌ಗಳಿಗೆ ತಮ್ಮದೇ ಆದ ಬೌಲಿಂಗ್ ಶೈಲಿ ಮೂಲಕ ನಡುಕ ಹುಟ್ಟಿಸಿದ್ದಾರೆ.
ಭುವನೇಶ್ವರ್ ಕುಮಾರ್ ಇತ್ತೀಚಿನ ದಿನಗಳಲ್ಲಿ ಟೀಂ ಇಂಡಿಯಾದಿಂದ ಹೊರಗುಳಿದಿದ್ದಾರೆ. 2022ರಲ್ಲಿ ನಡೆದ ಟಿ20 ವಿಶ್ವಕಪ್‌ನಲ್ಲಿ ಭುವಿ ಟೀಂ ಇಂಡಿಯಾ ಪರ ಕೊನೆಯ ಪಂದ್ಯವನ್ನು ಆಡಿದ್ದರು, ಅಲ್ಲಿ ಅವರು ಇಂಗ್ಲೆಂಡ್‌ನೊಂದಿಗಿನ ಸೆಮಿಫೈನಲ್‌ನಲ್ಲಿ ಒಂದೇ ಒಂದು ವಿಕೆಟ್ ಅನ್ನು ಸಹ ಪಡೆಯಲು ಸಾಧ್ಯವಾಗಲಿಲ್ಲ. ಅಂದ ಹಾಗೆ ಇಂದು ಭುವನೇಶ್ವರ್ ಅವರ ಜನ್ಮದಿನ. ಭುವನೇಶ್ವರನ ಜೀವನಕ್ಕೆ ಸಂಬಂಧಿಸಿದ ಕೆಲವು ಪ್ರಮುಖ ವಿಷಯಗಳು ಇಲ್ಲಿವೆ ನೋಡಿ.
ಭುವಿ ಉತ್ತರ ಪ್ರದೇಶದ ಮೀರತ್ ಜಿಲ್ಲೆಯಲ್ಲಿ 5 ಫೆಬ್ರವರಿ 1990 ರಂದು ಜನಿಸಿದರು. ಅವರ ತಂದೆ ಕಿರಣ್ ಪಾಲ್ ಸಿಂಗ್, ಯುಪಿ ಪೊಲೀಸ್‌ನಲ್ಲಿ ಸಬ್ ಇನ್ಸ್‌ಪೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಇನ್ನು ಅವರ ತಾಯಿ ಇಂದ್ರೇಶ್ ಸಿಂಗ್ ಗೃಹಿಣಿಯಾಗಿದ್ದಾರೆ.
ಭುವನೇಶ್ವರ್ ಕುಮಾರ್ 10 ನೇ ವಯಸ್ಸಿನಲ್ಲಿ ಟೆನಿಸ್ ಬಾಲ್ ಕ್ರಿಕೆಟ್ ಆಡಲು ಪ್ರಾರಂಭಿಸಿದರು. ಭುವಿ 13 ವರ್ಷಕ್ಕೆ ಕಾಲಿಟ್ಟಾಗ ತಮ್ಮ ಹವ್ಯಾಸವನ್ನು ವೃತ್ತಿಪರತೆಗೆ ಬದಲಾಯಿಸಿಕೊಳ್ಳಲು ಯೋಚಿಸಿದರು. ಮತ್ತು ಮೀರತ್‌ನಲ್ಲಿರುವ ಭಾಮಾಶಾ ಕ್ರಿಕೆಟ್ ಅಕಾಡೆಮಿಗೆ ಸೇರ್ಪಡೆಯಾದರು.
- ಭುವನೇಶ್ವರ್ ಕುಮಾರ್ ಅವರು 23 ನವೆಂಬರ್ 2017 ರಂದು ನೂಪುರ್ ಅವರನ್ನು ಸರಳವಾಗಿ ವಿವಾಹವಾದರು.
- ಭುವನೇಶ್ವರ್ ತಮ್ಮ ಬೌಲಿಂಗ್‌ನ ಹೊರತಾಗಿ ಬ್ಯಾಟಿಂಗ್‌ಗೂ ಹೆಸರುವಾಸಿಯಾಗಿದ್ದಾರೆ. 2012 ರಲ್ಲಿ ಅವರು ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಕ್ರಮ ಸಂಖ್ಯೆ 8 ರಲ್ಲಿ ಬ್ಯಾಟಿಂಗ್ ಮಾಡುವಾಗ 253 ಎಸೆತಗಳಲ್ಲಿ 128 ರನ್ ಗಳಿಸಿ ಮಿಂಚಿದ್ದರು. ಅವರು ಭಾರತಕ್ಕೆ ಬ್ಯಾಟ್‌ನಿಂದಲೂ ಕೊಡುಗೆ ನೀಡಿದ್ದಾರೆ.
- ಭುವನೇಶ್ವರ್ ಕುಮಾರ್ 30 ಡಿಸೆಂಬರ್ 2012 ರಂದು ಪಾಕಿಸ್ತಾನದ ವಿರುದ್ಧದ ಏಕದಿನ ಪಂದ್ಯದಲ್ಲಿ ಪದಾರ್ಪಣೆ ಮಾಡಿದರು. 22 ಫೆಬ್ರವರಿ 2013 ರಲ್ಲಿ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಮ್ಯಾಚ್ಗೆ ಎಂಟ್ರಿ ಕೊಟ್ಟರು ಮತ್ತು 25 ಡಿಸೆಂಬರ್ 2012 ರಂದು ಪಾಕಿಸ್ತಾನದ ವಿರುದ್ಧ ಚೊಚ್ಚಲ ಟಿ20 ಪಂದ್ಯವನ್ನು ಆಡಿದ್ದಾರೆ.
- ಪಾಕಿಸ್ತಾನದ ವಿರುದ್ಧ 4 ಓವರ್ ಗಳಲ್ಲಿ 9 ರನ್ ನೀಡಿ 4 ವಿಕೆಟ್ ಪಡೆದು ಎಲ್ಲರ ಫೇವರಿಟ್ ಎನಿಸಿಕೊಂಡರು.
- ಭಾರತ ತಂಡದ ಪರ ಭುವಿ ಟೆಸ್ಟ್‌ನಲ್ಲಿ 63, ಏಕದಿನದಲ್ಲಿ 141 ಮತ್ತು ಟಿ20ಯಲ್ಲಿ 90 ವಿಕೆಟ್‌ಗಳನ್ನು ಪಡೆದಿದ್ದಾರೆ. ಇದರೊಂದಿಗೆ ಟೆಸ್ಟ್‌ನಲ್ಲಿ 552 ರನ್, ಏಕದಿನದಲ್ಲಿ 552 ರನ್ ಮತ್ತು ಟಿ20ಯಲ್ಲಿ 67 ರನ್ ಗಳಿಸಿದ್ದಾರೆ. ಟಿ20ಯಲ್ಲಿ ಭುವಿ 4 ರನ್‌ಗಳಿಗೆ 5 ವಿಕೆಟ್ ಕಬಳಿಸಿದ್ದು ವಿಶ್ವ ದಾಖಲೆಯಾಗಿದೆ.
ಓದಿ:ರಣಜಿ ಟ್ರೋಫಿ: ಮನೀಶ್ ಅಜೇಯ ಆಟ, ರೈಲ್ವೇಸ್ ವಿರುದ್ಧ ಕರ್ನಾಟಕಕ್ಕೆ 1 ವಿಕೆಟ್ ರೋಚಕ ಜಯ