ETV Bharat / technology

ಸೈನಿಕರ ಪ್ರಾಣ ರಕ್ಷಿಸುವ ಹಗುರ​ ಬುಲೆಟ್ ಪ್ರೂಫ್ ಜಾಕೆಟ್‌ 'ಅಭೇದ್'​ ಅಭಿವೃದ್ಧಿಪಡಿಸಿದ DRDO - Lightweight Bulletproof Jackets - LIGHTWEIGHT BULLETPROOF JACKETS

Lightweight Bulletproof Jackets: ಭಾರತೀಯ ತಂತ್ರಜ್ಞಾನ ಸಂಸ್ಥೆ-ದೆಹಲಿಯ ಸಂಶೋಧಕರ ಸಹಯೋಗದೊಂದಿಗೆ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ಹಗುರವಾದ ಬುಲೆಟ್ ಪ್ರೂಫ್ ಜಾಕೆಟ್‌ಗಳನ್ನು (ABHED-ಅಡ್ವಾನ್ಸ್ಡ್ ಬ್ಯಾಲಿಸ್ಟಿಕ್ಸ್ ಫಾರ್ ಹೈ ಎನರ್ಜಿ ಡಿಫೀಟ್) ಅಭಿವೃದ್ಧಿಪಡಿಸಿದೆ.

ABHED BULLET PROOF JACKETS  DRDO AND IIT DELHI  BULLET PROOF JACKETS FEATURES
ಲೈಟ್​ವೇಟ್​ ಬುಲೆಟ್ ಪ್ರೂಫ್ ಜಾಕೆಟ್‌ ಅಭಿವೃದ್ಧಿಪಡಿಸಿದ ಡಿಆರ್​ಡಿಒ-ದೆಹಲಿ (PIB)
author img

By ETV Bharat Tech Team

Published : Sep 27, 2024, 8:25 AM IST

Lightweight Bulletproof Jackets: ದೇಶ ಹಾಗೂ ಸೈನಿಕರ ಭದ್ರತೆಗಾಗಿ DRDO ಹೊಸ ಹೊಸ ಸುಧಾರಿತ ಶಸ್ತ್ರಾಸ್ತ್ರಗಳನ್ನು ಸಿದ್ಧಪಡಿಸುತ್ತದೆ. ಈ ಅನುಕ್ರಮದಲ್ಲಿ, IIT ದೆಹಲಿಯ ಸಂಶೋಧಕರ ಸಹಯೋಗದೊಂದಿಗೆ ಸಂಸ್ಥೆಯು ಅಡ್ವಾನ್ಸ್ಡ್ ಬ್ಯಾಲಿಸ್ಟಿಕ್ ಫಾರ್ ಹೈ ಎನರ್ಜಿ ಡಿಫೀಟ್ (ABHED) ಎಂಬ ಹೊಸ ಹಗುರವಾದ ಬುಲೆಟ್ ಪ್ರೂಫ್ ಜಾಕೆಟ್ ಅಭಿವೃದ್ಧಿಪಡಿಸಿದೆ.

ಜಾಕೆಟ್‌ನ ರಕ್ಷಾಕವಚ ಫಲಕಗಳು ಅಗತ್ಯವಿರುವ ಎಲ್ಲ ಸಂಶೋಧನಾ ಪರೀಕ್ಷೆಗಳಲ್ಲೂ ಪಾಸ್ ಆಗಿವೆ. ಜಾಕೆಟ್ ಗರಿಷ್ಠ ಬೆದರಿಕೆಗಳನ್ನು ತಡೆದುಕೊಳ್ಳುವ ಸಾಮರ್ಥ್ಯ ಹೊಂದಿದೆ. 360 ಡಿಗ್ರಿ ರಕ್ಷಣೆ ಒದಗಿಸುತ್ತದೆ. ಹಾಗಾಗಿ ಇದಕ್ಕೆ 'ಅಭೇದ್ಯ' ಎಂದು ಹೆಸರಿಡಲಾಗಿದೆ.

ವಿದೇಶಿ ಜಾಕೆಟ್​ಗಿಂತ ಕಡಿಮೆ ತೂಕ: ಡಿಆರ್‌ಡಿಒ ಇಂಡಸ್ಟ್ರಿ ಅಕಾಡೆಮಿಕ್ ಸೆಂಟರ್ ಆಫ್ ಎಕ್ಸಲೆನ್ಸ್‌ನಲ್ಲಿ ಜಾಕೆಟ್‌ ಸಿದ್ಧಪಡಿಸಿದೆ. ಇದರ ಎರಡು ಆವೃತ್ತಿಗಳನ್ನು ಉತ್ಪಾದಿಸಲಾಗುತ್ತಿದೆ. ಪ್ರಸ್ತುತ ಸೈನಿಕರು 10.5 ಕೆಜಿ ತೂಕದ ಬುಲೆಟ್ ಪ್ರೂಫ್ ಜಾಕೆಟ್‌ಗಳನ್ನು ಬಳಸುತ್ತಿದ್ದಾರೆ. ಈಗಿನ ಜಾಕೆಟ್‌ನ ತೂಕ ವಿದೇಶಿ ಜಾಕೆಟ್‌ಗಿಂತ 2.5 ಕೆಜಿ ಕಡಿಮೆ ಇದೆ.

ವೈಶಿಷ್ಟ್ಯಗಳೇನು?: ರಕ್ಷಣಾ ಸಚಿವಾಲಯದ ಪ್ರಕಾರ, ಪಾಲಿಮರ್ ಮತ್ತು ಸ್ಥಳೀಯ ಬೋರಾನ್ ಕಾರ್ಬೈಡ್ ಸೆರಾಮಿಕ್ ವಸ್ತುಗಳಿಂದ ಹಗುರ ಜಾಕೆಟ್‌ಗಳನ್ನು ತಯಾರಿಸಲಾಗುತ್ತಿದೆ. DRDO ಸಹಯೋಗದೊಂದಿಗೆ ಸರಿಯಾದ ಮಾಡೆಲಿಂಗ್ ಮತ್ತು ಸಿಮ್ಯುಲೇಶನ್ ನಡೆಸಿದ ನಂತರ ವಿವಿಧ ವಸ್ತುಗಳೊಂದಿಗೆ ವಿನ್ಯಾಸಗೊಳಿಸಲಾಗಿದೆ.

ಆರ್ಮರ್ ಪ್ಲೇಟ್ ಪ್ರೋಟೋಕಾಲ್ ಪ್ರಕಾರ, ಜಾಕೆಟ್‌ಗೆ ಅಗತ್ಯವಿರುವ ಎಲ್ಲ ಪರೀಕ್ಷೆಗಳನ್ನು ನಡೆಸಲಾಗಿದೆ. ಇವು ಅತ್ಯಧಿಕ ಬೆದರಿಕೆ ಮಟ್ಟವನ್ನು ಪೂರೈಸುತ್ತವೆ ಮತ್ತು ಭಾರತೀಯ ಸೇನೆ ನಿಗದಿಪಡಿಸಿದ ಮಾನದಂಡಗಳಂತೆ ಗರಿಷ್ಠ ತೂಕದ ಮಿತಿಗಿಂತ ಹಗುರವಿದೆ. ವಿಭಿನ್ನ ಬಿಐಎಸ್ ಮಟ್ಟಗಳಿಗೆ ಕನಿಷ್ಠ 8.2 ಕೆ.ಜಿ ಮತ್ತು 9.5 ಕೆ.ಜಿ ತೂಕದೊಂದಿಗೆ, ಮಾಡ್ಯುಲರ್ ಜಾಕೆಟ್‌ಗಳು ಮುಂಭಾಗ ಮತ್ತು ಹಿಂಭಾಗದ ರಕ್ಷಾಕವಚದೊಂದಿಗೆ 360 ಡಿಗ್ರಿ ರಕ್ಷಣೆ ಒದಗಿಸಬಲ್ಲವು.

ಅಷ್ಟೇ ಅಲ್ಲ, ಸ್ನೈಪರ್ ಬುಲೆಟ್‌ಗಳು ಸೇರಿದಂತೆ ಇತರ ಶಸ್ತ್ರಾಸ್ತ್ರಗಳಿಂದಲೂ ಭಾರತೀಯ ಸೈನಿಕರಿಗೆ ರಕ್ಷಣೆ ನೀಡುವ ಸಾಮರ್ಥ್ಯ ಹೊಂದಿವೆ. BIS ಮಟ್ಟ 6 ZAC ಎಂಟು AK 47 ಬುಲೆಟ್‌ಗಳನ್ನು ತಡೆದುಕೊಳ್ಳುವ ಸಾಮರ್ಥ್ಯ ಇದಕ್ಕಿದೆ ಎಂಬುದು ವಿಶೇಷ.

ಸುಧಾರಿತ ಆಯ್ಕೆಯ ಮಾನದಂಡದ ಮ್ಯಾಟ್ರಿಕ್ಸ್‌ನ ಆಧಾರದ ಮೇಲೆ ಕೆಲವು ಭಾರತೀಯ ಕೈಗಾರಿಕೆಗಳನ್ನು ತಂತ್ರಜ್ಞಾನ ವರ್ಗಾವಣೆ ಮತ್ತು ಹ್ಯಾಂಡ್‌ಹೋಲ್ಡಿಂಗ್‌ಗಾಗಿ ಆಯ್ಕೆ ಮಾಡಲಾಗಿದೆ. ಮೂರು ಕೈಗಾರಿಕೆಗಳಿಗೆ ತಂತ್ರಜ್ಞಾನವನ್ನು ವರ್ಗಾಯಿಸಲು ಕೇಂದ್ರ ಸಜ್ಜಾಗಿದೆ.

ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಮತ್ತು ಡಿಆರ್‌ಡಿಒ ಅಧ್ಯಕ್ಷ ಡಾ. ಸಮೀರ್ ವಿ.ಕಾಮತ್ ಮಾತನಾಡಿ, "ಈ ಸಾಧನೆಗೆ DIA-CoEಯನ್ನು ಅಭಿನಂದಿಸುತ್ತೇನೆ. ಲೈಟ್ ವೇಟ್ ಬುಲೆಟ್ ಪ್ರೂಫ್ ಜಾಕೆಟ್ ಡಿಆರ್‌ಡಿಒ, ಶೈಕ್ಷಣಿಕ ಮತ್ತು ರಕ್ಷಣಾ ಆರ್&ಡಿಯ ಪರಿಣಾಮಕಾರಿ ಪರಿಸರ ವ್ಯವಸ್ಥೆಗೆ ಉದಾಹರಣೆ" ಎಂದು ಹೇಳಿದ್ದಾರೆ.

ರಕ್ಷಣಾ R&Dಗಾಗಿ ಉದ್ಯಮ ಮತ್ತು ಶಿಕ್ಷಣವನ್ನು ಒಳಗೊಳ್ಳಲು IIT ದೆಹಲಿಯಲ್ಲಿ DRDOನ ಜಂಟಿ ಸುಧಾರಿತ ತಂತ್ರಜ್ಞಾನ ಕೇಂದ್ರವನ್ನು ಮಾರ್ಪಡಿಸುವ ಮೂಲಕ DIA-CoE ಅನ್ನು 2022ರಲ್ಲಿ ರಚಿಸಲಾಯಿತು. ಇದು DRDO ವಿಜ್ಞಾನಿಗಳು, ಶೈಕ್ಷಣಿಕ ಸಂಶೋಧಕರು ಮತ್ತು ಉದ್ಯಮ ಪಾಲುದಾರರನ್ನು ಒಳಗೊಂಡ ಸುಧಾರಿತ ತಂತ್ರಜ್ಞಾನಗಳ ವಿವಿಧ ಯೋಜನೆಗಳನ್ನು ಸಕ್ರಿಯವಾಗಿ ಅನುಸರಿಸುತ್ತಿದೆ.

ಇದನ್ನೂ ಓದಿ: OpenAI ಸಿಟಿಒ ಮೀರಾ ಮುರತಿ ರಾಜೀನಾಮೆ - OpenAI CTO Mira Murati Resigns

ETV Bharat Logo

Copyright © 2025 Ushodaya Enterprises Pvt. Ltd., All Rights Reserved.