Apple TV+ Free Streaming: ಟೆಕ್ ದೈತ್ಯ ಆ್ಯಪಲ್ ತನ್ನ 'Apple TV+' ಸೇವೆಯಲ್ಲಿ ಒರಿಜಿನಲ್ ಶೋಗಳ ಮೇಲೆ ಉಚಿತ ಸ್ಟ್ರೀಮಿಂಗ್ ಘೋಷಿಸಿದೆ. ಇದರೊಂದಿಗೆ ನೀವು ಯಾವುದೇ ಚಂದಾದಾರಿಕೆ ಇಲ್ಲದೆಯೇ 'Apple TV+'ಗೆ ಎಂಟ್ರಿ ಪಡೆಯಬಹುದು. ಅಲ್ಲದೆ, ಈ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ನಲ್ಲಿ ನೀವು ಅವಾರ್ಡ್ ವಿನ್ನಿಂಗ್ ಕಂಟೆಂಟ್ ಅನ್ನು ಕೂಡಾ ಉಚಿತವಾಗಿಯೇ ವೀಕ್ಷಿಸಬಹುದು. ಈ ಆ್ಯಫರ್ ಸೀಮಿತ ಅವಧಿಗೆ ಮಾತ್ರ ಲಭ್ಯ.
ಕಂಪನಿ ತನ್ನ OTT ಪ್ಲಾಟ್‌ಫಾರ್ಮ್ 'Apple TV+' ಪ್ರಚಾರದ ಭಾಗವಾಗಿ ಈ ಕೊಡುಗೆ ನೀಡುತ್ತಿದೆ. 'ಸೀವೆರೆನ್ಸ್ ಸೀಸನ್ 2', 'ಮಿಥಿಕ್ ಕ್ವೆಸ್ಟ್' ಮತ್ತು 'ಪ್ರೈಮ್ ಟಾರ್ಗೆಟ್'ನಂತಹ ಹೊಸ ಮೂಲ ಶೀರ್ಷಿಕೆಗಳ ಬಿಡುಗಡೆಗೆ ಮೊದಲು ಸೀಮಿತ ಸಮಯದ ಕೊಡುಗೆ ಸಿಗಲಿದೆ. ಇವೆಲ್ಲವೂ ಜನವರಿ 2025ರಲ್ಲಿ ಪ್ರೀಮಿಯರ್ ಆಗಲಿವೆ.
ಈ ಕೊಡುಗೆ ಎಲ್ಲಿವರಿಗೆ ಲಭ್ಯ?: ಜನವರಿ 4ರಿಂದ 5ರವರೆಗೆ ಯಾವುದೇ ಚಂದಾದಾರಿಕೆಯ ಅಗತ್ಯವಿಲ್ಲದೆಯೇ Apple Originals ಅನ್ನು ಸ್ಟ್ರೀಮ್ ಮಾಡಲು ಸಾಧ್ಯವಾಗುತ್ತದೆ ಎಂದು Apple ಘೋಷಿಸಿದೆ. ಬಳಕೆದಾರರು 'Apple TV+' ಅಪ್ಲಿಕೇಶನ್ ಓಪನ್ ಮಾಡಿ ಕಂಟೆಂಟ್ ಅನ್ನು ಉಚಿತವಾಗಿ ವೀಕ್ಷಿಸಬಹುದು. Apple ಸಾಧನಗಳಲ್ಲಿ 'Apple TV+' ಅಪ್ಲಿಕೇಶನ್ ಮೊದಲೇ ಇನ್ಸ್ಟಾಲ್ ಮಾಡಲಾಗಿದೆ. ಆಂಡ್ರಾಯ್ಡ್ ಬಳಕೆದಾರರು ಇದನ್ನು ಗೂಗಲ್ ಪ್ಲೇ ಸ್ಟೋರ್‌ನಿಂದಲೂ ಇನ್ಸ್ಟಾಲ್ ಮಾಡಿಕೊಳ್ಳಬಹುದು.
Apple ತನ್ನ 'TV+' ಸೇವೆಗಳಿಗಾಗಿ ಇತರ ಪ್ರಚಾರಗಳನ್ನೂ ನಡೆಸುತ್ತದೆ. ಇದರ ಭಾಗವಾಗಿ, ಹೊಸ ಸಾಧನಗಳು ಈ ಪ್ಲಾಟ್‌ಫಾರ್ಮ್‌ಗೆ 3 ತಿಂಗಳವರೆಗೆ ಉಚಿತ ಪ್ರವೇಶ ನೀಡುತ್ತವೆ. ಇದಲ್ಲದೇ ನೀವು 'Apple TV+'ನ ಪಾವತಿಸಿದ ಚಂದಾದಾರರಾಗಲು ಬಯಸಿದರೆ ತಿಂಗಳಿಗೆ 99 ರೂ.ಯ ಮಾಸಿಕ ಚಂದಾದಾರಿಕೆಯನ್ನು ತೆಗೆದುಕೊಳ್ಳುವ ಮೊದಲು ನೀವು ಏಳು ದಿನಗಳವರೆಗೆ ಅಪ್ಲಿಕೇಶನ್ನ ಸದುಪಯೋಗ ಮಾಡಿಕೊಳ್ಳಬಹುದಾಗಿದೆ.
ಇವುಗಳಲ್ಲದೇ ತಿಂಗಳಿಗೆ 195 ರೂ.ಗೆ 'ಆ್ಯಪಲ್ ಒನ್' ಯೋಜನೆಯನ್ನೂ ತೆಗೆದುಕೊಳ್ಳಬಹುದು. ಇದು 200GB iCloud ಸ್ಟೋರೇಜ್, 'Apple Music', 'Apple Arcade'ಗೆ ಪ್ರವೇಶ ಒದಗಿಸುತ್ತದೆ. ಗಮನಾರ್ಹವಾಗಿ, 'Apple Music' ವಿದ್ಯಾರ್ಥಿ ಯೋಜನೆಯು 'Apple TV+'ಗೆ ಉಚಿತ ಚಂದಾದಾರಿಕೆಯೊಂದಿಗೆ ಬರುತ್ತದೆ.
ಏರ್‌ಟೆಲ್ ಬಳಕೆದಾರರಿಗೆ ಆ್ಯಪಲ್ ಚಂದಾದಾರಿಕೆ: ಏರ್‌ಟೆಲ್ ಬಳಕೆದಾರರು ಭಾರತದಲ್ಲಿ ಪ್ರಿಪೇಯ್ಡ್ ಮತ್ತು ಪೋಸ್ಟ್‌ಪೇಯ್ಡ್ ಯೋಜನೆಗಳ ಮೂಲಕ Apple Music ಮತ್ತು Apple TV+ ಚಂದಾದಾರಿಕೆಗಳನ್ನು ಪಡೆಯಬಹುದು. ಈ ಚಂದಾದಾರಿಕೆಗಳು ಏರ್‌ಟೆಲ್‌ನ ಪ್ರೀಮಿಯಂ ವೈಫೈ ಯೋಜನೆಗಳು ಮತ್ತು ಪೋಸ್ಟ್‌ಪೇಯ್ಡ್ ಪ್ಲಾನ್‌ಗಳೊಂದಿಗೆ ಲಭ್ಯ. ಹೆಚ್ಚುವರಿಯಾಗಿ ಮೊಬೈಲ್ ಬಳಕೆದಾರರು ಏರ್‌ಟೆಲ್ ವಿಂಕ್ ಪ್ರೀಮಿಯಂ ಚಂದಾದಾರಿಕೆ ಮತ್ತು ಆ್ಯಪಲ್ ಮ್ಯೂಸಿಕ್ ಚಂದಾದಾರಿಕೆ ಪಡೆಯಬಹುದು.
ಇದನ್ನೂ ಓದಿ: ಹೈಬ್ರಿಡ್ ಎಂಜಿನ್, ಹೊಸ ಡಿಸೈನ್: ಕಿಯಾ ಸೆಲ್ಟೋಸ್ ಶೀಘ್ರದಲ್ಲೇ ಮಾರುಕಟ್ಟೆಗೆ