2025 Kia Seltos Hybrid: ಕಿಯಾ ಮೋಟಾರ್ಸ್ ಇಂಡಿಯಾ ಇತ್ತೀಚೆಗೆ Syros SUV ಬಿಡುಗಡೆ ಮಾಡಿತ್ತು. ಇದೀಗ ಸೆಲ್ಟೋಸ್‌ನ ಹೈಬ್ರಿಡ್ ಆವೃತ್ತಿಯನ್ನು ಮಾರುಕಟ್ಟೆಗೆ ಬಿಡಲು ಉತ್ಸುಕವಾಗಿದೆ. ಇದರ ಭಾಗವಾಗಿ ಈ ಹೈಬ್ರಿಡ್ ಕಾರನ್ನು ಹಲವು ಬಾರಿ ಪರೀಕ್ಷೆಗೊಳಪಡಿಸಲಾಗಿದೆ. ಕಿಯಾ ಮೋಟಾರ್ಸ್, ಭಾರತ್ ಮೊಬಿಲಿಟಿ ಎಕ್ಸ್‌ಪೋದಲ್ಲಿ ಸೆಲ್ಟೋಸ್‌ನ ಹೊಸ ಆವೃತ್ತಿಯನ್ನು ರಿಲೀಸ್ ಮಾಡಬಹುದು. ವಿನೂತನ ಶೈಲಿ, ಆಕರ್ಷಕ ವಿನ್ಯಾಸದಲ್ಲಿ ಕಾರು ಗ್ರಾಹಕರನ್ನು ಸೆಳೆಯಲಿದೆ.
ಕಿಯಾ ಸೆಲ್ಟೋಸ್ ಹೈಬ್ರಿಡ್ ವಿಶೇಷತೆ: ಚೌಕಾಕಾರದ ಹೆಡ್‌ಲ್ಯಾಂಪ್ಸ್, ಎಲ್‌ಇಡಿ ಡೇಟೈಮ್ ರನ್ನಿಂಗ್ ಲೈಟ್‌ಗಳನ್ನು ಹೊಂದಿದೆ. ಎಂಜಿನ್ ಬಗ್ಗೆ ಇನ್ನೂ ಯಾವುದೇ ಮಾಹಿತಿ ಬಹಿರಂಗವಾಗಿಲ್ಲ. ಆದರೆ ಟರ್ಬೊ ಪೆಟ್ರೋಲ್, ಟರ್ಬೊ ಡೀಸೆಲ್, ಪೆಟ್ರೋಲ್ ಹೈಬ್ರಿಡ್ ಮುಂತಾದ ಇಂಧನ ಆಯ್ಕೆಗಳೊಂದಿಗೆ ಹೊರಬರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.
ಯಾವಾಗ ಮಾರುಕಟ್ಟೆಗೆ?: ಕಿಯಾ ಇಂಡಿಯಾ ಈ ಹೊಸ ಸೆಲ್ಟೋಸ್‌ನ ಮಾರಾಟವನ್ನು 2025ರ ಮಧ್ಯದ ವೇಳೆಗೆ ಪ್ರಾರಂಭಿಸಬಹುದು ಎಂದು ವರದಿಯಾಗಿದೆ. 3 ಹೊಸ ಮಾದರಿಗಳೊಂದಿಗೆ ಎಸ್‌ಯುವಿ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ ಎಂಬ ಮಾಹಿತಿ ದೊರೆತಿದೆ.
ಇದು ಕಿಯಾ ಕಂಪನಿಯ ಹೊಸ ಕಾಂಪ್ಯಾಕ್ಟ್ SUV, ಕ್ಯಾರೆನ್ಸ್ ಫೇಸ್‌ಲಿಫ್ಟ್ ಮತ್ತು ಕ್ಯಾರೆನ್ಸ್ EV ಅನ್ನು ಒಳಗೊಂಡಿದೆ. ಇತ್ತೀಚೆಗೆ ಕಿಯಾ ಸಿರೋಸ್ ಬಿಡುಗಡೆಯಾಗಿತ್ತು. ಕಂಪನಿ ಈ ಕಾರಿನಲ್ಲಿ ಹಲವು ಬದಲಾವಣೆಗಳನ್ನು ಮಾಡಿದೆ. ಆದ್ದರಿಂದ ವಾಹನ ನೋಡಲು ವಿಶಾಲವಾಗಿದೆ. ಹಿಂಬದಿಯ ಆಸನವನ್ನೂ ಇದು ಹೊಂದಿದೆ. ಜನವರಿ 3ರಿಂದ ಬುಕಿಂಗ್ ಪ್ರಾರಂಭಿಸುವುದಾಗಿ ಅಧಿಕೃತವಾಗಿ ಘೋಷಿಸಿದೆ. ವಿತರಣೆಗಳು ಫೆಬ್ರವರಿಯಿಂದ ಪ್ರಾರಂಭವಾಗುತ್ತವೆ.
ಕಿಯಾ ಸಿರೋಸ್ ಎಸ್‌ಯುವಿ ವೈಶಿಷ್ಟ್ಯಗಳು: ಕಿಯಾ ಸಿರೋಸ್ ಎಸ್‌ಯುವಿ ಸಾಕಷ್ಟು ವೈಶಿಷ್ಟ್ಯಗಳನ್ನು ಹೊಂದಿದೆ. ಎಲ್‌ಇಡಿ ಲೈಟ್ಸ್, ಎಲ್‌ಇಡಿ ಡಿಆರ್‌ಎಲ್ಸ್, ಪನೋರಮಿಕ್ ಸನ್‌ರೂಫ್, ಎಲ್‌ಇಡಿ ಟೈಲ್‌ಲೈಟ್ಸ್, ಆ್ಯಂಬಿಯೆಂಟ್ ಲೈಟ್ಸ್, ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, 10.25-ಇಂಚಿನ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಟೆರೈನ್, ಡ್ರೈವಿಂಗ್ ಮೋಡ್ಸ್, ವೆಂಟಿಲೇಟೆಡ್ ಸೀಟ್ಸ್, ವೈರ್‌ಲೆಸ್ ಚಾರ್ಜರ್, ಹರ್ಮನ್ ಕಾರ್ಡನ್ ಆಡಿಯೊ ಸಿಸ್ಟಮ್, ಲೆವೆಲ್-2 ಎಡಿಎಎಸ್ ಸೇರಿದಂತೆ ಸಿಕ್ಸ್ ಏರ್ಬ್ಯಾಗ್ಸ್ಗಳು ಇದರಲ್ಲಿವೆ. ಇವುಗಳಲ್ಲದೆ, ಎಬಿಎಸ್, ಇಬಿಡಿ, ಐಸೊಫಿಕ್ಸ್ ಚೈಲ್ಡ್ ಆಂಕಾರೇಜ್ ಕೂಡಾ ಈ ಕಾರಿನಲ್ಲಿದೆ.
ಎಂಜಿನ್ ಆಯ್ಕೆಗಳು: Kia Syrosನಲ್ಲಿ ಎರಡು ಎಂಜಿನ್ ಆಯ್ಕೆಗಳು ಲಭ್ಯ. ಇವುಗಳಲ್ಲಿ ಮೊದಲನೆಯದು 1.0-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್. ಇದು 118bhp ಪವರ್ ಮತ್ತು 172Nm ಟಾರ್ಕ್ ಉತ್ಪಾದಿಸುತ್ತದೆ. ಎರಡನೆಯದು 1.5-ಲೀಟರ್ ಡೀಸೆಲ್ ಎಂಜಿನ್ ಆಗಿದ್ದು, 114bhp ಪವರ್ ಮತ್ತು 250Nm ಟಾರ್ಕ್ ಉತ್ಪಾದಿಸುತ್ತದೆ. 6-ಸ್ಪೀಡ್ ಮ್ಯಾನುವಲ್ ಟ್ರಾನ್ಸ್ಮಿಷನ್ ಪ್ರಮಾಣಿತವಾಗಿ ಲಭ್ಯವಿದೆ. ಆದಾಗ್ಯೂ, 6-ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮೆಟಿಕ್ ಮತ್ತು 7-ಸ್ಪೀಡ್ DCT ಯುನಿಟ್ ಆಯ್ಕೆಗಳಾಗಿ ದೊರೆಯುತ್ತದೆ.
ಇದನ್ನೂ ಓದಿ: 16 ಸೂರ್ಯೋದಯ, ಸೂರ್ಯಾಸ್ತ ವೀಕ್ಷಣೆಯೊಂದಿಗೆ ನ್ಯೂ ಇಯರ್ ಸ್ವಾಗತಿಸಿದ ಸುನೀತಾ ವಿಲಿಯಮ್ಸ್!