ETV Bharat / bharat

ದೆಹಲಿ ವಿಧಾನಸಭೆ ಚುನಾವಣೆ ಮತ ಎಣಿಕೆ: ಆರಂಭಿಕ ಕೌಂಟಿಂಗ್​​ನಲ್ಲಿ ಬಹುಮತದ ಮಾರ್ಕ್​ ತಲುಪಿದ ಕಮಲ, ಆಪ್​​​ಗೆ ಹಿನ್ನಡೆ - DELHI ELECTIONS RESULTS UPDATES

Delhi Assembly Elections Live Updates
ದೆಹಲಿ ವಿಧಾನಸಭೆ ಚುನಾವಣೆ ಮತ ಎಣಿಕೆ (ETV Bharat)
author img

By ETV Bharat Karnataka Team

Published : Feb 8, 2025, 8:00 AM IST

Updated : Feb 8, 2025, 10:16 AM IST

ನವದೆಹಲಿ: ದೆಹಲಿ ವಿಧಾನಸಭೆ ಚುನಾವಣೆ ಮತ ಎಣಿಕೆ ನಡೆಯುತ್ತಿದೆ. ದೆಹಲಿ ಮತದಾರರು ಆಮ್‌ ಆದ್ಮಿ ಪಕ್ಷ (AAP) ವನ್ನು ಸತತ ಮೂರನೇ ಬಾರಿಗೆ ದೆಹಲಿ ಗದ್ದುಗೆಗೆ ಏರಿಸುತ್ತಾರಾ? ಇಲ್ಲವೇ, 27 ವರ್ಷಗಳ ಬಳಿಕ ರಾಷ್ಟ್ರ ರಾಜಧಾನಿಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆಯಾ ಎಂಬ ಪ್ರಶ್ನೆಗೆ ಇಂದು ಉತ್ತರ ಸಿಗಲಿದೆ. ಕಳೆದ ಎರಡು ಚುನಾವಣೆಗಳಲ್ಲಿ ಒಂದೂ ಸ್ಥಾನ ಗೆಲ್ಲದ ಕಾಂಗ್ರೆಸ್ ಕೂಡ ಫಲಿತಾಂಶದ ಮೇಲೆ ಸಾಕಷ್ಟು ನಿರೀಕ್ಷೆ ಹೊಂದಿದೆ. ಬಹುತೇಕ ಮತದಾನೋತ್ತರ ಸಮೀಕ್ಷೆಗಳು ಬಿಜೆಪಿಯೇ ಗೆಲ್ಲುವ ಬಗ್ಗೆ ಭವಿಷ್ಯ ನುಡಿದಿವೆ. ಬೆಳಗ್ಗೆ 8 ಗಂಟೆಯಿಂದ ದೆಹಲಿಯ 11 ಜಿಲ್ಲೆಗಳ ಒಟ್ಟು 19 ಕೇಂದ್ರಗಳಲ್ಲಿ ಮತಗಳ ಎಣಿಕೆ ನಡೆಯುತ್ತಿದೆ. ಪಾರದರ್ಶಕತೆ ಮತ್ತು ನಿಖರತೆಯನ್ನು ಖಚಿತಪಡಿಸಿಕೊಳ್ಳಲು, ಭಾರತೀಯ ಚುನಾವಣಾ ಆಯೋಗ (ECI) ಸಂಪೂರ್ಣ ಪ್ರಕ್ರಿಯೆಯ ಮೇಲ್ವಿಚಾರಣೆ ನಡೆಸುತ್ತಿದೆ. ಜೊತೆಗೆ, ಆಯೋಗವು ತನ್ನ ವೆಬ್‌ಸೈಟ್‌ನಲ್ಲಿ ನೈಜ-ಸಮಯದ ಆಧಾರದ ಮೇಲೆ ಫಲಿತಾಂಶದ ಕುರಿತು ವಿವರಗಳನ್ನು ನೀಡುತ್ತಿದೆ. ಮತ ಎಣಿಕೆಯ ಲೈವ್​ ಮಾಹಿತಿಗಾಗಿ ಭಾರತೀಯ ಚುನಾವಣಾ ಆಯೋಗದ ಅಧಿಕೃತ ವೆಬ್​ಸೈಟ್​ ಗಮನಿಸಬಹುದು. ಇದರಲ್ಲಿ ಕ್ಷೇತ್ರವಾರು ಫಲಿತಾಂಶ ಹಾಗೂ ವಿಜೇತರ ಬಗ್ಗೆ ಕ್ಷಣ ಕ್ಷಣದ ಮಾಹಿತಿ ನೀಡಲಾಗುತ್ತದೆ. ಅದೇ ರೀತಿ, ಫಲಿತಾಂಶಗಳ ಸಮಗ್ರ ಲೈವ್​ ಮಾಹಿತಿಗಾಗಿ ವೀಕ್ಷಕರು ಈಟಿವಿ ಭಾರತ (etvbharat.com) ಅನ್ನು ಪರಿಶೀಲಿಸುತ್ತಿರಿ.

LIVE FEED

9:50 AM, 8 Feb 2025 (IST)

ಹಿನ್ನಡೆಯಲ್ಲಿದ್ದ ಕೇಜ್ರಿವಾಲ್​​ಗೆ​​ ಮುನ್ನಡೆ

ನವದೆಹಲಿ ಕ್ಷೇತ್ರದಲ್ಲಿ ಅರವಿಂದ್ ಕೇಜ್ರಿವಾಲ್ 4,679 ಮತಗಳಿಂದ ಮುನ್ನಡೆಯಲ್ಲಿದ್ದಾರೆ.

ಪಟೇಲ್ ನಗರದಿಂದ ಆಮ್ ಆದ್ಮಿ ಪಕ್ಷದ ಪ್ರವೇಶ್ ರತನ್ ಮುನ್ನಡೆ ಕಾಯ್ದುಕೊಂಡಿದ್ದಾರೆ.

ತ್ರಿಲೋಕಪುರಿಯಲ್ಲಿ ಆಮ್ ಆದ್ಮಿ ಪಕ್ಷದ ಅಂಜನಾ ಪರ್ಚಾ 6,000 ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ.

ಕೊಂಡ್ಲಿಯಲ್ಲಿ ಆಮ್ ಆದ್ಮಿ ಪಕ್ಷದ ಕುಲದೀಪ್ ಕುಮಾರ್ 2,000 ಮತಗಳಿಂದ ಮುನ್ನಡೆಯಲ್ಲಿದ್ದಾರೆ.

Delhi Assembly Elections Live Updates
ಅರವಿಂದ್​ ಕೇಜ್ರಿವಾಲ್​​ಗೆ​​ ಮುನ್ನಡೆ (ETV Bharat)

9:14 AM, 8 Feb 2025 (IST)

ಬಹುಮತದತ್ತ ಬಿಜೆಪಿ; 27 ವರ್ಷಗಳ ಬಳಿಕ ದಿಲ್ಲಿ ಗದ್ದುಗೆಯತ್ತ

  • ಎಕ್ಸಿಟ್​ ಪೋಲ್​ ಗಳ ಭವಿಷ್ಯ ನಿಜವಾಗುವ ಸಾಧ್ಯತೆಗಳಿವೆ
  • ಕೊನೆ ಕ್ಷಣದಲ್ಲಿ ಎಎಪಿ ಬಿಟ್ಟು ಬಿಜೆಪಿ ಸೇರಿದ್ದ ಕೆಲವರಿಗೆ ಮುನ್ನಡೆ
  • ಮುಸ್ಲಿಂ ಪ್ರಾಬಲ್ಯದ ಕ್ಷೇತ್ರಗಳಲ್ಲೂ ಬಿಜೆಪಿ ಮುನ್ನಡೆ ಎನ್ನುತ್ತಿವೆ ಆರಂಭಿಕ ವರದಿಗಳು

9:05 AM, 8 Feb 2025 (IST)

37 ಸ್ಥಾನಗಳಲ್ಲಿ ಬಿಜೆಪಿ ಮುನ್ನಡೆ

ಆರಂಭಿಕ ಟ್ರೆಂಡ್​ನಲ್ಲಿ ಬಿಜೆಪಿ 37 ಸ್ಥಾನಗಳಲ್ಲಿ ಮುನ್ನಡೆಯಲ್ಲಿದೆ, ಎಎಪಿ 27 ಸ್ಥಾನಗಳಲ್ಲಿ ಮುನ್ನಡೆ ಹಾಗೂ ಕಾಂಗ್ರೆಸ್ 1ರಲ್ಲಿ ಮುನ್ನಡೆ ಗಳಿಸಿದೆ.

ನವದೆಹಲಿ ಕ್ಷೇತ್ರದಲ್ಲಿ ಬಿಜೆಪಿಯ ಪರ್ವೇಶ್ ವರ್ಮಾ ವಿರುದ್ಧ ಸ್ಪರ್ಧಿಸಿರುವ ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಹಿನ್ನಡೆಯಲ್ಲಿದ್ದಾರೆ.

ಕಲ್ಕಾಜಿ ಸ್ಥಾನದಲ್ಲಿ, ಮುಖ್ಯಮಂತ್ರಿ ಅತಿಶಿ ಬಿಜೆಪಿಯ ರಮೇಶ್ ಬಿಧುರಿ ವಿರುದ್ಧ ಹಿನ್ನಡೆಯಲ್ಲಿದ್ದಾರೆ.

ಜಂಗ್‌ಪುರದಲ್ಲಿ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಕೂಡ ಹಿನ್ನಡೆಯಲ್ಲಿದ್ದಾರೆ.

ಕಾರ್ವಾಲ್ ನಗರ ಅಭ್ಯರ್ಥಿ ಕಪಿಲ್ ಮಿಶ್ರಾ ಮುನ್ನಡೆಯಲ್ಲಿದ್ದರೆ, ಗ್ರೇಟರ್ ಕೈಲಾಶ್ ಸ್ಥಾನದಲ್ಲಿ ಎಎಪಿಯ ಸೌರಭ್ ಭಾರದ್ವಾಜ್ ಮುಂದಿದ್ದಾರೆ.

8:27 AM, 8 Feb 2025 (IST)

ಕೇಜ್ರಿವಾಲ್, ಸಿಸೋಡಿಯಾ, ಅತಿಶಿಗೆ ಆರಂಭಿಕ ಹಿನ್ನಡೆ

  • ಆರಂಭಿಕ ಮತ ಎಣಿಕೆಯಲ್ಲಿ ಎಎಪಿ ಮತ್ತು ಬಿಜೆಪಿ ಸಮಬಲ ಸಾಧಿಸುತ್ತಿವೆ.
  • ಕೇಜ್ರಿವಾಲ್, ಸಿಸೋಡಿಯಾ, ಅತಿಶಿಗೆ ಆರಂಭಿಕ ಹಿನ್ನಡೆ
  • ಅಂಚಮತ ಪತ್ರದ ಎಣಿಕೆ ವೇಳೆ ಎಎಪಿ ದಿಗ್ಗಜರಿಗೆ ಹಿನ್ನಡೆ

7:47 AM, 8 Feb 2025 (IST)

ಅಂಚೆ ಮತ ಎಣಿಕೆ

ದೆಹಲಿ ಚುನಾವಣೆಗೆ ಫಲಿತಾಂಶದ ಆರಂಭಿಕ ಹಂತದಲ್ಲಿ ಅಂಚೆ ಮತಗಳ ಎಣಿಕೆ ಕಾರ್ಯ ಶುರುವಾಗಿದೆ. 8 ಗಂಟೆಗೆ ಎಣಿಕೆ ಪ್ರಾರಂಭವಾಗಿದ್ದು, ಅಂಚೆ ಮತಪತ್ರಗಳನ್ನು ಮಹಾರಾಣಿ ಬಾಗ್​ನ ಮೀರಾಬಾಯಿ ಡಿಎಸ್‌ಇಯು ಎಣಿಕೆ ಕೇಂದ್ರಕ್ಕೆ ತರಲಾಗಿದೆ.

Last Updated : Feb 8, 2025, 10:16 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.