New Upcoming Smartphones 2025: ಹೊಸ ಸ್ಮಾರ್ಟ್‌ಫೋನ್ ಖರೀದಿಸುವ ಯೋಚನೆ ಇದೆಯೇ?. ಹಾಗಾದರೆ, ಸ್ವಲ್ಪ ದಿನ ಕಾಯಿರಿ. ಕೆಲವೇ ದಿನಗಳಲ್ಲಿ ಹೊಸ ಬಗೆಯ ಸ್ಮಾರ್ಟ್‌ಫೋನ್‌ಗಳು ದೇಶಿಯ ಮಾರುಕಟ್ಟೆಗೆ ಬರಲಿವೆ. ಅವುಗಳಲ್ಲಿ ಒನ್ಪ್ಲಸ್, ರೆಡ್ಮಿ, ಇನ್ಟೆಲ್ನಂತಹ ಬ್ರ್ಯಾಂಡ್‌ಗಳಿವೆ. ಜನವರಿಯಲ್ಲಿ ಬಿಡುಗಡೆಯಾಗಲು ರೆಡಿಯಾಗಿರುವ ಮೊಬೈಲ್ಫೋನ್ಗಳ ಪಟ್ಟಿ ಇಲ್ಲಿದೆ.
Redmi 14C 5G: 'ರೆಡ್ಮಿ 14ಸಿ 5ಜಿ' ಸ್ಮಾರ್ಟ್‌ಫೋನ್ ಜನವರಿ 6ರಂದು ಭಾರತೀಯ ಮತ್ತು ಇತರ ಜಾಗತಿಕ ಮಾರುಕಟ್ಟೆಗಳಲ್ಲಿ ಬಿಡುಗಡೆಯಾಗಲಿದೆ. ಇದರ ಮೈಕ್ರೋಸೈಟ್ ಈಗಾಗಲೇ ಅಮೆಜಾನ್ ಮತ್ತು ಫ್ಲಿಪ್ಕಾರ್ಟ್ ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳಲ್ಲಿ ಲೈವ್ ಆಗಿದೆ. ಅಂದರೆ ಬಿಡುಗಡೆಯ ಬಳಿಕ ನೀವು ಈ ಫೋನ್ ಅನ್ನು ಈ ಎರಡು ಪ್ಲಾಟ್‌ಫಾರ್ಮ್‌ಗಳಿಂದ ಖರೀದಿಸಬಹುದು. ಫೋನ್‌ನ ಹಿಂಭಾಗದ ಪ್ಯಾನಲ್ ಮಧ್ಯದಲ್ಲಿ ವೃತ್ತಾಕಾರದ ಕ್ಯಾಮೆರಾ ಮಾಡ್ಯೂಲ್ ಅಳವಡಿಸಲಾಗಿದೆ. 50-ಮೆಗಾಪಿಕ್ಸೆಲ್ ಮೇನ್ ರಿಯರ್ ಕ್ಯಾಮೆರಾದೊಂದಿಗೆ ಬರುತ್ತದೆ.
ಇದು 'Redmi 14R 5G'ಯ ಮರುಬ್ಯಾಡ್ಜ್ ಆವೃತ್ತಿಯಾಗಿರಬಹುದು ಎಂಬ ವದಂತಿ ಇದೆ. ಇದೇ ನಿಜವಾಗಿದ್ದರೆ ಈ ಸ್ಮಾರ್ಟ್‌ಫೋನ್ ಸ್ನಾಪ್‌ಡ್ರಾಗನ್ 4 ಜನ್ 2 ಚಿಪ್‌ಸೆಟ್, 5160mAh ಬ್ಯಾಟರಿ ಜೊತೆಗೆ 18W ಚಾರ್ಜಿಂಗ್ ಸಪೋರ್ಟ್ನೊಂದಿಗೆ ಬರಬಹುದು. 6.68-ಇಂಚಿನ 120Hz HD Plus LCD ಸ್ಕ್ರೀನ್, Android 14 ಆಧಾರಿತ HyperOS ಹೊಂದಿದೆ ಎಂದು ಟೆಕ್ ತಜ್ಞರು ನಿರೀಕ್ಷಿಸಿದ್ದಾರೆ. ಬಣ್ಣದ ಆಯ್ಕೆಗಳಿಗೆ ಸಂಬಂಧಿಸಿದಂತೆ, 'Redmi 14C 5G' ಬ್ಲ್ಯಾಕ್, ಬ್ಲೂ ಮತ್ತು ಪರ್ಪುಲ್ ಶೇಡ್ಸ್ಗಳಲ್ಲಿ ಸಿಗಬಹುದು.
OnePlus 13 Series: ಒನ್ಪ್ಲಸ್ ಕಂಪನಿ ಜನವರಿ 7ರಂದು ಭಾರತ ಸೇರಿದಂತೆ ಜಾಗತಿಕ ಮಾರುಕಟ್ಟೆಯಲ್ಲಿ 'ಒನ್ಪ್ಲಸ್ 13 ಸೀರಿಸ್' ಬಿಡುಗಡೆ ಮಾಡಲು ತಯಾರಿ ನಡೆಸುತ್ತಿದೆ. ಈ ಸೀರಿಸ್ನಲ್ಲಿ 'OnePlus 13' ಮತ್ತು 'OnePlus 13R' ಎಂಬೆರಡು ಮಾದರಿಗಳು ಬರಲಿವೆ ಎಂದು ವರದಿಯಾಗಿದೆ. ಎರಡೂ ಫೋನ್‌ಗಳ ಮೈಕ್ರೋಸೈಟ್ Amazonನಲ್ಲಿ ಲೈವ್ ಆಗಿದೆ. ಅಲ್ಲದೆ, ಈ ಸ್ಮಾರ್ಟ್‌ಫೋನ್‌ನ ಬಣ್ಣ ಮತ್ತು ವಿಶೇಷತೆಗಳ ಮಾಹಿತಿಯೂ ಬಹಿರಂಗಗೊಂಡಿದೆ.
'OnePlus 13' Snapdragon 8 Elite ಚಿಪ್‌ಸೆಟ್ ಅನ್ನು ಪ್ಯಾಕ್ ಮಾಡಿದರೆ, 'OnePlus 13R' ಮಾದರಿಯು Snapdragon 8 Gen 3 ಪ್ರೊಸೆಸರ್‌ನೊಂದಿಗೆ ಬರುತ್ತದೆ. ಇವುಗಳ ಹೊರತಾಗಿ, ಎರಡೂ ಫೋನ್‌ಗಳು 'OnePlus AI' ಸಪೋರ್ಟ್ನೊಂದಿಗೆ AI ವೈಶಿಷ್ಟ್ಯಗಳನ್ನು ಹೊಂದಿವೆ. OnePlus 13 ಭಾರತದಲ್ಲಿ ಆರ್ಕ್ಟಿಕ್ ಡಾನ್, ಬ್ಲ್ಯಾಕ್ ಎಕ್ಲಿಪ್ಸ್ ಮತ್ತು ಮಿಡ್ನೈಟ್ ಓಷನ್ ಬಣ್ಣ ಆಯ್ಕೆಗಳಲ್ಲಿ ಬಿಡುಗಡೆಯಾಗಲಿದೆ.
OnePlus 13R ಆಸ್ಟ್ರಲ್ ಟ್ರಯಲ್ ಮತ್ತು ನೆಬ್ಯುಲಾ ನಾಯ್ರ್ ಶೇಡ್ಸ್ಗಳಲ್ಲಿ ಬರುತ್ತದೆ. ಈ ಎರಡೂ ಸ್ಮಾರ್ಟ್‌ಫೋನ್‌ಗಳು 6000mAh ಬ್ಯಾಟರಿಯನ್ನು ಹೊಂದಿವೆ. 'OnePlus 13' ಡಸ್ಟ್ ಮತ್ತು ವಾಟರ್ ರೆಸಿಸ್ಟೆನ್ಸಿ IP68 ಮತ್ತು IP69 ರೇಟಿಂಗ್‌ಗಳೊಂದಿಗೆ ಬರುತ್ತದೆ. ಭಾರತೀಯ ಮಾರುಕಟ್ಟೆಯಲ್ಲಿ OnePlus 13 ಬೆಲೆ 67,000-70,000 ರೂ ನಡುವೆ ಇರುವ ಸಾಧ್ಯತೆ ಇದೆ. 'Oneplus 13R' ಸಿಂಗಲ್ RAM, (12GB+256GB) ಸ್ಟೋರೇಜ್ ಕಾನ್ಫಿಗರೇಶನ್‌ನಲ್ಲಿ ಗ್ರಾಹಕರಿಗೆ ಸಿಗಲಿದೆ ಎಂದು ವರದಿಯಾಗಿದೆ. ಆದರೆ ಇದರ ಬೆಲೆ ಶ್ರೇಣಿಯ ವಿವರಗಳು ಬಹಿರಂಗವಾಗಿಲ್ಲ.
Samsung Galaxy S25 Series: 'Samsung Galaxy S25' ಸೀರಿಸ್ ಬಗ್ಗೆ ಇನ್ನೂ ಯಾವುದೇ ಅಧಿಕೃತ ಪ್ರಕಟಣೆ ಇಲ್ಲ. ಆದರೆ ಮುಂಬರುವ ಗ್ಯಾಲಕ್ಸಿ ಅನ್ಪ್ಯಾಕ್ಡ್ ಈವೆಂಟ್ ಜನವರಿ 22, 2025 ರಂದು ನಡೆಯಲಿದೆ ಎಂದು ಟೆಕ್ ತಜ್ಞರು ಭವಿಷ್ಯ ನುಡಿದಿದ್ದಾರೆ. ಮಾಹಿತಿ ಪ್ರಕಾರ 'ಗ್ಯಾಲಕ್ಸಿ ಎಸ್25' ಸೀರಿಸ್ನಲ್ಲಿ ಮೂರು ಮಾದರಿಯ ಮೊಬೈಲ್‌ಗಳು ಬಿಡುಗಡೆಯಾಗಲಿವೆಯಂತೆ. ಅವುಗಳೆಂದರೆ 'Galaxy S25', 'Galaxy S25 Plus', 'Galaxy S25 Ultra'. ಈ ಅಪ್ಡೇಟ್ಡ್ ಮಾದರಿಗಳು ಉತ್ತಮ ಕ್ಯಾಮೆರಾ ಮತ್ತು ಕಾರ್ಯಕ್ಷಮತೆಯೊಂದಿಗೆ ಬರುತ್ತವೆ. Galaxy S25 Ultra' ಪ್ರಮುಖ ಕಾರ್ಯಕ್ಷಮತೆ ಒದಗಿಸುವ ಸ್ನಾಪ್‌ಡ್ರಾಗನ್ 8 ಎಲೈಟ್ ಚಿಪ್‌ಸೆಟ್ ಹೊಂದಿದೆ.
Oppo Reno 13 5G Series: 'Oppo Reno 13 5G' ಸೀರಿಸ್ ಎರಡು ಮಾದರಿಗಳಲ್ಲಿ ಲಭ್ಯವಿರಲಿದೆ. ಅವುಗಳೆಂದರೆ, Oppo Reno 13 5G ಮತ್ತು Oppo Reno 13 Pro 5G. ಎರಡೂ ಮಾದರಿಗಳನ್ನು ಮಧ್ಯಮ ಶ್ರೇಣಿಯ ವಿಭಾಗದಲ್ಲಿ ಬಿಡುಗಡೆ ಮಾಡಲಾಗುತ್ತದೆ. ಈ ಸ್ಮಾರ್ಟ್‌ಫೋನ್‌ಗಳು ಮೀಡಿಯಾ ಟೆಕ್ ಡೈಮೆನ್ಸಿಟಿ 8350 ಚಿಪ್‌ಸೆಟ್‌ನೊಂದಿಗೆ 5,640mAh ಬ್ಯಾಟರಿಯೊಂದಿಗೆ ಬರುತ್ತವೆ ಎಂಬ ವದಂತಿಗಳಿವೆ. ಕಂಪನಿ ಅಧಿಕೃತ ಬಿಡುಗಡೆ ದಿನಾಂಕವನ್ನು ಘೋಷಿಸಿಲ್ಲ.
Poco X7 Series: 'Poco X7' ಸೀರಿಸ್ ಜನವರಿ 9, 2025ರಂದು ಬಿಡುಗಡೆಯಾಗಲಿದೆ. ಈ ಸಾಲಿನಲ್ಲಿ, 'Poco X7 5G' ಮತ್ತು 'Poco X7 Pro 5G' ಮಾದರಿಗಳು ಡ್ಯುಯಲ್-ಟೋನ್ ಎಲ್ಲೋ ಮತ್ತು ಬ್ಲ್ಯಾಕ್ ಕಲರ್ ಬಣ್ಣದ ರೂಪಾಂತರಗಳಲ್ಲಿ ಮಾರುಕಟ್ಟೆಗೆ ಬರುತ್ತವೆ.
Realme 14 Pro: 'Realme 14 Pro' ಸೀರಿಸ್ ಕ್ಯಾಮೆರಾ ಸೆಂಟ್ರಿಕ್ ಸ್ಮಾರ್ಟ್‌ಫೋನ್ ಕೆಲವೇ ದಿನಗಳಲ್ಲಿ ಬಿಡುಗಡೆಯಾಗುವ ಸಾಧ್ಯತೆ ಗೋಚರಿಸಿದೆ. ಕಂಪನಿ ಈ ಮೊಬೈಲ್‌ನ ವಿನ್ಯಾಸ, ವೈಶಿಷ್ಟ್ಯಗಳು ಮತ್ತು ಬಣ್ಣ ಆಯ್ಕೆಗಳನ್ನು ಬಹಿರಂಗಪಡಿಸಿದೆ. ಈ 'Realme 14 Pro' ಸೀರಿಸ್ IP69 ರೇಟಿಂಗ್‌ನೊಂದಿಗೆ ಗ್ರಾಹಕರಿಗೆ ದೊರೆಯಲಿದೆ.
Itel Geno 10: 'Itel Geno 10' ಸ್ಮಾರ್ಟ್‌ಫೋನ್ ಶೀಘ್ರದಲ್ಲೇ ಭಾರತೀಯ ಮಾರುಕಟ್ಟೆ ಪ್ರವೇಶಿಸಲಿದೆ. ಫೋನ್ ಈಗಾಗಲೇ ಮೈಕ್ರೋಸೈಟ್ Amazonನಲ್ಲಿ ಲೈವ್ ಆಗಿದೆ. Itel ಈ ಸ್ಮಾರ್ಟ್‌ಫೋನ್ ಅನ್ನು ಜನವರಿ 2025ರಲ್ಲಿ ಕಂಪನಿ ಬಿಡುಗಡೆ ಮಾಡಲಿದೆ. ಆದರೂ ತನ್ನ ಆರಂಭಿಕ ಬೆಲೆ ಮತ್ತು ಬಿಡುಗಡೆ ದಿನಾಂಕವನ್ನು ಅಧಿಕೃತವಾಗಿ ಬಹಿರಂಗಪಡಿಸಿಲ್ಲ.
ಇದು ಜೆನಿಟಲ್ ಡಿಸೈನ್ ಜೊತೆ ಸ್ಕ್ವೇರ್ ಶೇಪ್ಡ್ ಕ್ಯಾಮೆರಾ ಮಾಡ್ಯೂಲ್ ಜೊತೆ ಬರುತ್ತದೆ. ಇವುಗಳ ಜೊತೆಗೆ ಡ್ಯುಯಲ್ ರಿಯಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಐಫೋನ್‌ನ ಡೈನಾಮಿಕ್ ಐಲ್ಯಾಂಡ್‌ನಂತೆಯೇ ವಾಟರ್‌ಡ್ರಾಪ್ ನಾಚ್ ಇದರಲ್ಲಿ ಅಳವಡಿಸಲಾಗಿದೆ. ಈ Gen Z-ಫೋಕಸ್ ಫೋನ್ 5000mAh ಬ್ಯಾಟರಿ ಹೊಂದಿದೆ.
ಇದನ್ನೂ ಓದಿ: ಗೂಗಲ್ ಕ್ರೋಮ್ ಬಳಕೆದಾರರಿಗೆ ಹೈ-ರಿಸ್ಕ್ ವಾರ್ನಿಂಗ್ ನೀಡಿದ ಸರ್ಕಾರ - ನೀವು ಇದನ್ನು ಮಾಡದಿದ್ದರೆ ಅಷ್ಟೆ!