ETV Bharat / state

ಮನಪಾ ಆಯುಕ್ತರ ವಿರುದ್ಧ ಸಾಲು ಸಾಲು ಭಷ್ಟಾಚಾರದ ಆರೋಪ ; ಸರ್ಕಾರಕ್ಕೆ ಪತ್ರ ಬರೆಯುವೆ ಎಂದ ಮೇಯರ್ - CORRUPTION ALLEGATION

ಮನಪಾ ಆಯುಕ್ತರ ವಿರುದ್ಧ ವಿಪಕ್ಷ ಸದಸ್ಯ ಅಬ್ದುಲ್​ ರವೂಫ್ ಅವರು ಭ್ರಷ್ಟಾಚಾರದ ಆರೋಪ ಹೊರಿಸಿದ್ದಾರೆ.

manapa
ಮಂಗಳೂರು ಮಹಾನಗರ ಪಾಲಿಕೆ (ETV Bharat)
author img

By ETV Bharat Karnataka Team

Published : Jan 4, 2025, 8:54 PM IST

ಮಂಗಳೂರು (ದಕ್ಷಿಣ ಕನ್ನಡ) : ಮಂಗಳೂರು ಮಹಾನಗರ ಪಾಲಿಕೆಯ ಆಯುಕ್ತ ಆನಂದ ಎಲ್‌. ಸಿ ವಿರುದ್ಧ ವಿಪಕ್ಷ ಸದಸ್ಯ ಅಬ್ದುಲ್ ರವೂಫ್ ಅವರು ಸಾಮಾನ್ಯ ಸಭೆಯಲ್ಲಿಯೇ ಭ್ರಷ್ಟಾಚಾರದ ಗಂಭೀರ ಆರೋಪ ಹೊರಿಸಿದ್ದಾರೆ.

ಸಾಮಾನ್ಯ ಸಭೆಯ ಆರಂಭದಲ್ಲಿ ನಗರಕ್ಕೆ ಕಲುಷಿತಗೊಂಡಿರುವ ಕುಡಿಯುವ ನೀರು ಸರಬರಾಜು ಬಗ್ಗೆ ಚರ್ಚೆ ನಡೆಯಿತು. ಈ ವಿಚಾರವನ್ನು ವಿಪಕ್ಷ ಸದಸ್ಯ ಅಬ್ದುಲ್ ರವೂಫ್ ಕೈಗೆತ್ತಿಕೊಂಡು, ದಾಖಲೆಗಳನ್ನು ತೋರಿಸಿ ನೇರವಾಗಿ ಸಾಲು ಸಾಲು ಆರೋಪಗಳನ್ನು ಮಾಡಿದರು. ಇದರಲ್ಲಿ ಭ್ರಷ್ಟಾಚಾರ ನಡೆಸಲಾಗಿದೆ ಎಂದು ಮನಪಾ ಆಯುಕ್ತರನ್ನು ಉಲ್ಲೇಖಿಸಿ ಗಂಭೀರ ಆರೋಪವನ್ನು ಮಾಡಿದ್ದರು. ಒಂದು ಹಂತದಲ್ಲಿ ಆಯುಕ್ತರು ಸ್ಪಷ್ಟನೆ ಕೊಡಲು ಮುಂದಾದರೂ ಮೇಯರ್ ಅವರನ್ನು ತಡೆದು, ವಿಪಕ್ಷ ಸದಸ್ಯ ಅಬ್ದುಲ್ ರವೂಫ್ ಅವರಿಗೆ ಮಾತನಾಡಲು ಅವಕಾಶ ನೀಡಿ ಪರೋಕ್ಷವಾಗಿ ತಮ್ಮ ಸಹಮತವನ್ನು ಸೂಚಿಸಿದರು.

20 ವರ್ಷಗಳ ಹಿಂದೆ ವಸತಿ ಹಾಗೂ ವಾಣಿಜ್ಯ ಸಂಕೀರ್ಣಗಳನ್ನು ಕಾನೂನಾತ್ಮಕವಾಗಿ ಕಟ್ಟಿಲ್ಲವೆಂದು ಈ ಹಿಂದಿನ ಯಾವ ಆಯುಕ್ತರೂ ಕಂಪ್ಲಿಷನ್ ಸರ್ಟಿಫಿಕೇಟ್ ಕೊಟ್ಟಿರಲಿಲ್ಲ. ಆದರೆ ಆನಂದ ಎಲ್. ಸಿ ಅವರು ಬಂದ ತಕ್ಷಣ ಅದಕ್ಕೆ ಕಂಪ್ಲಿಷನ್ ಸರ್ಟಿಫಿಕೇಟ್ ನೀಡಿದ್ದಾರೆ. ಮನಪಾ ಸ್ಥಾಯಿ ಸಮಿತಿಯಲ್ಲಿರುವುದೇ 60 ಕೋಟಿ ರೂ ಹಣ. ಆದರೆ 164 ಕೋಟಿ ರೂ. ಮಂಜೂರು ಮಾಡಲಾಗಿದೆ. ಇದರಲ್ಲಿ ಭ್ರಷ್ಟಾಚಾರದ ವಾಸನೆಯಿದೆ ಎಂದು ಗಂಭೀರ ಆರೋಪ ಮಾಡಿದರು.

ಇಬ್ಬರು ಜೆಇ ಹಾಗೂ ಇಬ್ಬರು ಎಇಇಯ ಇಬ್ಬರು ಅಧಿಕಾರಿಗಳಿಗೆ ಹುದ್ದೆಗೆ ನೇಮಕವಾದ 29 ದಿನ ಅಧಿಕಾರ ನೀಡಿರಲಿಲ್ಲ. 30 ವರ್ಷಗಳ ಅನುಭವವಿರುವ ಜೆಇ ಮತ್ತು ಎಇಇಗಳನ್ನು ಬಿಟ್ಟು ಡೆಪ್ಯುಟೇಷನ್‌ಗೆ ಬಂದವರಿಗೆ ಸೀನಿಯರ್ ಇಂಜಿನಿಯರ್ ಚಾರ್ಜ್ ಕೊಟ್ಟಿದ್ದಾರೆ. ಇದರ ಹಿಂದೆಯೂ ಭ್ರಷ್ಟಾಚಾರ ಅಡಗಿದೆ ಎಂದು ಆರೋಪಿಸಿದರು.

ಇದಕ್ಕೆ ಆಯುಕ್ತ ಆನಂದ ಎಲ್. ಸಿ ಅವರು ಸ್ಪಷ್ಟನೆ ನೀಡಿದರು. ಆದರೆ,ಇದನ್ನು ತನಿಖೆ ನಡೆಸಬೇಕೆಂದು ಸರ್ಕಾರಕ್ಕೆ ಪತ್ರ ಬರೆಯಬೇಕೆಂದು ಅಬ್ದುಲ್ ರವೂಫ್ ಮೇಯರ್ ಅವರನ್ನು ಒತ್ತಾಯಿಸಿದರು. ಸದನದಲ್ಲಿಯೇ ಇಂತಹ ಗಂಭೀರ ಆರೋಪ ಬಂದಿರುವುದರಿಂದ ಸರ್ಕಾರಕ್ಕೆ ಪತ್ರ ಬರೆಯುತ್ತೇನೆ ಎಂದು ಮೇಯರ್ ಆದೇಶಿಸಿದರು.

ಇಡೀ ಸದನದಲ್ಲಿ ಈ ಆರೋಪಕ್ಕೆ ಚಕಾರವೆತ್ತದೆ ಮನಪಾ ಸದಸ್ಯರೆಲ್ಲರೂ ಈ ವಿಚಾರದಲ್ಲಿ ಒಗ್ಗಟ್ಟಿನಲ್ಲಿದ್ದರು. ಸದನದಲ್ಲಿಯೇ ಓರ್ವ ಆಯುಕ್ತರ ವಿರುದ್ಧ ಇಷ್ಟೊಂದು ಮಟ್ಟದ ಗಂಭೀರ ಆರೋಪ ಬಂದಿರುವುದು ಇತ್ತೀಚಿನ ವರ್ಷಗಳಲ್ಲಿ ಇದೇ ಮೊದಲು ಎನ್ನಬಹುದು.

ಆಯುಕ್ತರ ಸೃಷ್ಟೀಕರಣ : ಈ ಬಗ್ಗೆ ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ಆನಂದ್ ಎಲ್ ಸಿ ಅವರು ಈ ಕೆಳಗಿನಂತೆ ಸೃಷ್ಟೀಕರಣ ನೀಡಿದ್ದಾರೆ. ಮಂಗಳೂರು ಮಹಾನಗರಪಾಲಿಕೆಯಲ್ಲಿ ನಡೆದ ಪರಿಷತ್ತಿನ ಸಾಮಾನ್ಯ ಸಭೆಯಲ್ಲಿ ಪಾಲಿಕೆಯ ಸದಸ್ಯರಾದ ಅಬ್ದುಲ್ ರವೂಪ್, ಇವರು ನನ್ನ ಮೇಲೆ ಹೊರಿಸಲಾದ ಆರೋಪಗಳ ಬಗ್ಗೆ ಈ ಕೆಳಗಿನ ಸ್ಪಷ್ಟಿಕರಣ ನೀಡಲು ಬಯಸುತ್ತೇನೆ.

ಅಧೀಕ್ಷಕ ಅಭಿಯಂತರರ ಅಧಿಕ ಪ್ರಭಾರ: ಮಂಗಳೂರು ಮಹಾನಗರಪಾಲಿಕೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಅಧೀಕ್ಷಕ ಅಭಿಯಂತರರು ಮೇ 2024 ರಂದು ವಯೋ ನಿವೃತ್ತಿಯಾಗಿ ಖಾಲಿಯಾದ ಹುದ್ದೆಗೆ ಸರ್ಕಾರದಿಂದ ಯಾವುದೇ ಅಧಿಕಾರಿಗಳು ಭರ್ತಿಯಾಗದ ಸಂದರ್ಭದಲ್ಲಿ, ಪಾಲಿಕೆಯ ದೈನಂದಿನ ಕೆಲಸ ಕಾರ್ಯಗಳು ಮತ್ತು ಸಾರ್ವಜನಿಕ ಸೇವೆಗಳನ್ನು ಸಕಾಲದಲ್ಲಿ ನಿರ್ವಹಿಸುವ ನಿಟ್ಟಿನಲ್ಲಿ ಹಾಗೂ ಆಡಳಿತಾತ್ಮಕ ಕೆಲಸ ಕಾರ್ಯಗಳನ್ನು ಸುಗಮವಾಗಿ ನಿರ್ವಹಿಸುವ ಉದ್ದೇಶದಿಂದ ಸದ್ರಿ ಹುದ್ದೆಯನ್ನು ಖಾಲಿಯಿರಿಸುವುದು ಸೂಕ್ತವಲ್ಲವೆಂದು ಪರಿಗಣಿಸಿ, ಈ ಸಂದರ್ಭದಲ್ಲಿ ಪಾಲಿಕೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ 3 ಕಾರ್ಯಪಾಲಕ ಅಭಿಯಂತರರ ಸೇವಾ ದಾಖಲೆಗಳಾದ ವಿದ್ಯಾರ್ಹತೆ, ಜನ್ಮ ದಿನಾಂಕ ಹಾಗೂ ಸೇವೆಗೆ ಸೇರಿದ ದಿನಾಂಕಗಳ ಆಧಾರವನ್ನು ಪರಿಗಣಿಸಿ ಅರ್ಹ ಅಧಿಕಾರಿಯನ್ನು ಅಧೀಕ್ಷಕ ಅಭಿಯಂತರರ ಹುದ್ದೆಗೆ ಅಧಿಕ ಪ್ರಭಾರವನ್ನು ವಹಿಸಲಾಗಿರುತ್ತದೆ. ಆದರೆ ಸದಸ್ಯರು ಪರೋಕ್ಷವಾಗಿ ಪ್ರಸ್ತಾಪಿಸಿದ ಅಧಿಕಾರಿಯವರು ಸೂಕ್ತ ವಿದ್ಯಾರ್ಹತೆಯನ್ನು ಹೊಂದಿರದ ಕಾರಣ ಕ್ರಮಬದ್ಧವಾದ ನಿರ್ಣಯವನ್ನು ಕೈಗೊಳ್ಳಲಾಗಿರುತ್ತದೆ.

ಇ ಟೆಂಡರ್ : ಪಾಲಿಕೆಯಲ್ಲಿ ಸ್ವಂತ ನಿಧಿಯಲ್ಲಿ ಕೈಗೊಳ್ಳುತ್ತಿರುವ ಕಾಮಗಾರಿಗಳ ಪೈಕಿ ರೂ. 5 ಲಕ್ಷ ಮೌಲ್ಯಕ್ಕೆ ಮೇಲ್ಪಟ್ಟ ಕಾಮಗಾರಿಗಳಿಗೆ ಮಾತ್ರ ಇ-ಪ್ರೊಕ್ಯುರ್‌ಮೆಂಟ್​ನಲ್ಲಿ ಹಾಗೂ ರೂ. 5 ಲಕ್ಷದ ಕೆಳಗಿನ ಕಾಮಗಾರಿಗಳನ್ನು Manual Tender ಮೂಲಕ ಕರೆಯಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ಬಹುತೇಕ ಎಲ್ಲ ಗುತ್ತಿಗೆದಾರರು ತಮ್ಮ ಹಂತದಲ್ಲಿಯೇ ಪರಸ್ಪರ ಒಳ ಒಪ್ಪಂದದ ಮೂಲಕ ಕಾಮಗಾರಿಗಳನ್ನು ಗೊತ್ತುಪಡಿಸಿಕೊಂಡು ಅಧಿಕ ಮೊತ್ತಕ್ಕೆ ಟೆಂಡರ್ ಪಡೆಯುತ್ತಿರುವುದು ವಾಡಿಕೆಯಾಗಿದೆ. ಈ ವ್ಯವಸ್ಥೆಯಲ್ಲಿ ಪಾರದರ್ಶಕತೆಯ ಕೊರತೆಯು ಕಂಡುಬಂದಿರುತ್ತದೆ. ಅಲ್ಲದೇ ಈ ಪದ್ದತಿಯಿಂದ ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ ಗುತ್ತಿಗೆದಾರರಿಗೆ ಸರ್ಕಾರ ರೂಪಿಸಿರುವ ಮೀಸಲಾತಿ ನಿಯಮದಂತೆ ಹಂಚಿಕೆ ಮಾಡಬೇಕಾದ ಕಾಮಗಾರಿಗಳಿಂದ ವಂಚಿತರಾಗಿ ಸಾಮಾಜಿಕ ನ್ಯಾಯಕ್ಕೆ ದಕ್ಕೆಯಾಗುತ್ತಿರುವುದು ಗಮನಕ್ಕೆ ಬಂದಿರುತ್ತದೆ. ಗುತ್ತಿಗೆದಾರರು ಮತ್ತು ಕಾರ್ಪೋರೇಟರ್‌ಗಳ ಒಳ ಒಪ್ಪಂದದಲ್ಲಿ, ತಮಗೆ ಬೇಕಾದ ಗುತ್ತಿಗೆದಾರರಿಂದ ಕಾಮಗಾರಿಗಳನ್ನು ನಿರ್ವಹಿಸುತ್ತಿದ್ದರು. ಇದರಿಂದ ಪರಿಣಾಮಕಾರಿಯಾಗಿ ಸರ್ಕಾರದ ಹಾಗೂ ಸಾರ್ವಜನಿಕರ ಆಶಾದಾಯಕವಾದ ಕೆಲಸ ಮಾಡಲು ಸಾಧ್ಯವಾಗುತ್ತಿರುವುದಿಲ್ಲ.

ಈ ನಿಟ್ಟಿನಲ್ಲಿ ಕಾಮಗಾರಿ ನಿರ್ವಹಣೆಯಲ್ಲಿ ಹೆಚ್ಚಿನ ಪಾರದರ್ಶಕತೆ, ಪಾಲಿಕೆಯ ಆರ್ಥಿಕತೆಯಲ್ಲಿ ಶಿಸ್ತು ರೂಪಿಸಲು, ಕಾಮಗಾರಿ ಅನುಷ್ಠಾನವನ್ನು ಕ್ರಮಬದ್ಧವಾಗಿ ನಿರ್ವಹಿಸಲು ಹಾಗೂ ಸೋರಿಕೆಯನ್ನು ನಿಯಂತ್ರಿಸುವ ಉದ್ದೇಶದಿಂದ ಈ ಹಿಂದೆ ಪಾಲಿಕೆಯಲ್ಲಿ ಪಾಲನೆಯಾಗುತ್ತಿದ್ದ ರೂ. 5 ಲಕ್ಷವರೆಗಿನ ಮ್ಯಾನುವಲ್ ಟೆಂಡರನ್ನು ರದ್ದುಪಡಿಸಿ ರೂ. 1 ಲಕ್ಷಕ್ಕೂ ಮೀರಿದ ಎಲ್ಲಾ ಕಾಮಗಾರಿಗಳಿಗೆ ಇ-ಪ್ರೋಕ್ಯುರ್‌ಮೆಂಟ್ ವ್ಯವಸ್ಥೆಯಲ್ಲಿ ಟೆಂಡ‌ರ್ ಕರೆಯಲು ತೀರ್ಮಾನ ಕೈಗೊಂಡಿರುತ್ತಾರೆ.

ಈ ವ್ಯವಸ್ಥೆಯನ್ನು ಸೆಪ್ಟೆಂಬರ್ 2023 ರಿಂದ ಜಾರಿಗೊಳಿಸಿದ್ದು, 2023-24ನೇ ಸಾಲಿನಲ್ಲಿ ಪಾಲಿಕೆಯ ಸ್ವಂತ ಅನುದಾನದಲ್ಲಿ ರೂ. 83 ಕೋಟಿ ವೆಚ್ಚದಲ್ಲಿ ಸುಮಾರು 944 ಕಾಮಗಾರಿಗಳನ್ನು ನಿರ್ವಹಿಸಲಾಗಿದ್ದು, ಸದ್ರಿ ಕಾಮಗಾರಿಗಳಿಗೆ ಇ-ಟೆಂಡರ್ ಕರೆದಿರುವುದರಿಂದ ಸದ್ರಿ ಟೆಂಡರ್‌ನಲ್ಲಿ ಅತ್ಯಧಿಕ ಬಿಡ್‌ದಾರರು ಭಾಗವಹಿಸುತ್ತಿರುವುದಲ್ಲದೇ ಟೆಂಡ‌ರ್ ದರದಲ್ಲಿ ಹೆಚ್ಚಿನ ಸ್ಪರ್ಧಾತ್ಮಕ ರೂಪುಗೊಳ್ಳುತ್ತಿರುವ ಪರಿಣಾಮವಾಗಿ ಪ್ರತಿಯೊಂದು ಬಿಡ್‌ನಲ್ಲಿಯೂ ಸಹ ಟೆಂಡರ್ ಪ್ರೀಮಿಯಂ ದರಕ್ಕಿಂತ ಸುಮಾರು 5 ರಿಂದ 10% (below) ಕಡಿಮೆ ದರಕ್ಕೆ ಸಲ್ಲಿಕೆಯಾಗಿ ಒಟ್ಟಾರೆ ರೂ. 10 ಕೋಟಿಯಷ್ಟು ಅನುದಾನ ಉಳಿಕೆಯಾಗಿದೆ. ಈ ಅನುದಾನವನ್ನು ಮತ್ತಷ್ಟು ಅಭಿವೃದ್ಧಿ ಕಾಮಗಾರಿಗಳಿಗೆ ವಿನಿಯೋಗಿಸಲು ಸಹಕಾರವಾಗುತ್ತಿರುವುದು ಕಂಡುಬಂದಿದೆ. ಹಾಗೂ ಗುತ್ತಿಗೆಯಿಂದ ವಂಚಿತರಾಗುತ್ತಿದ್ದ ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ ಗುತ್ತಿಗೆದಾರರಿಗೆ ಕಾಮಗಾರಿಗಳ ಗುತ್ತಿಗೆಯನ್ನು ನೀಡಲಾಗುತ್ತಿದ್ದು, ಸರ್ಕಾರದ ಆಶಯದಂತೆ ಸಾಮಾಜಿಕ ನ್ಯಾಯವನ್ನು ಒದಗಿಸುತ್ತಿರುವುದು ಶ್ಲಾಘನೀಯ ಹಾಗೂ ಪರಿಣಾಮಕಾರಿಯಾದ ಆಡಳಿತಾತ್ಮಕ ಕ್ರಮವಾಗಿದೆ.

ತುರ್ತು ಒಳಚರಂಡಿ ಕಾಮಗಾರಿಗಳ ನಿರ್ವಹಣೆ ಬಗ್ಗೆ : ಪಾಲಿಕೆ ವ್ಯಾಪ್ತಿಯಲ್ಲಿ ಸುಮಾರು 50 ವರ್ಷ ಹಳೆಯ ಒಳಚರಂಡಿ ಜಾಲವಿದ್ದು, ಸದ್ರಿ ಒಳಚರಂಡಿ ಜಾಲದಲ್ಲಿ ಅನಿರೀಕ್ಷಿತವಾಗಿ ಉಂಟಾಗುವ ಮ್ಯಾನ್‌ಹೋಲ್‌ಗಳ ಕುಸಿತ, ಕೊಳವೆಯ ದುರಸ್ಥಿ ಕಾಮಗಾರಿಗಳ ತುರ್ತು ನೆಲೆಯಲ್ಲಿ ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಕೈಗೊಳ್ಳಬೇಕಾಗಿರುತ್ತದೆ. ಈ ಸಂಬಂದ ನಗರಪಾಲಿಕಾ ಸದಸ್ಯರು, ಸಾರ್ವಜನಿಕರಿಂದ ಬರುವ ದೂರುಗಳಿಗೆ ತುರ್ತಾಗಿ ಕ್ರಮವಹಿಸಲು ಮೇಯರ್ ಅವರ ನಿರ್ದೇಶನದಂತೆ ತುರ್ತು ಒಳಚರಂಡಿ ಕಾಮಗಾರಿಗಳಿಗೆ ರೂ. 5 ಲಕ್ಷದ ವರೆಗೆ ಇ ಟೆಂಡ‌ರ್ ಕರೆಯಲು ವಿನಾಯಿತಿ ನೀಡಲಾಗಿರುತ್ತದೆ.

ಪಾಲಿಕೆ ಅನುದಾನದ ಬಳಕೆ ಬಗ್ಗೆ : 2023-24ನೇ ಸಾಲಿನಲ್ಲಿ ಅಂದಾಜು ರೂ. 165 ಕೋಟಿ ವೆಚ್ಚಕ್ಕೆ ಆಯುಕ್ತರು ಏಕ ಪಕ್ಷೀಯವಾಗಿ ನಿರ್ಣಯವನ್ನು ಕೈಗೊಂಡು ಕಾಮಗಾರಿಗಳಿಗೆ ಅನುಮೋದನೆ ನೀಡಿರುತ್ತಾರೆಂದು ಆರೋಪಿಸಿರುತ್ತಾರೆ. ಆದರೆ ಪಾಲಿಕೆ ವ್ಯವಸ್ಥೆಯಲ್ಲಿ ಪ್ರತಿಯೊಂದು ಕಾಮಗಾರಿಗಳನ್ನು ಸ್ಥಳೀಯ ಸದಸ್ಯರ ಶಿಫಾರಸ್ಸಿನ ಮೇಲೆ ಅಂದಾಜು ಪಟ್ಟಿಯನ್ನು ತಯಾರಿಸಿ ಆಯುಕ್ತರಿಂದ ಅನುಮೋದನೆ ಪಡೆದು ಪಟ್ಟಣ ಯೋಜನೆ ಮತ್ತು ಸುಧಾರಣೆ ಸ್ಥಾಯಿ ಸಮಿತಿಯ ತೀರ್ಮಾನಕ್ಕೆ ಮಂಡಿಸಲಾಗುತ್ತಿರುತ್ತದೆ. ಈ ತೀರ್ಮಾನವು ಪರಿಷತ್ತಿನಲ್ಲಿ ಸ್ಥಿರೀಕರಣಗೊಳ್ಳುತ್ತದೆ. ಮೇಲಿನ ಕಾಮಗಾರಿಗಳ ಅನುಮೋದನೆಯ ವಿಷಯದಲ್ಲಿ ಆಯುಕ್ತರ ಏಕಪಕ್ಷೀಯ ನಿರ್ಣಯವಿರುವುದಿಲ್ಲ. ಪೌರನಿಗಮಗಳ ಕಾಯ್ದೆಯನ್ವಯ ಪಟ್ಟಣ ಯೋಜನೆ ಮತ್ತು ಸುಧಾರಣೆ ಸ್ಥಾಯಿ ಸಮಿತಿಯ ಹಾಗೂ ಪರಿಷತ್ತಿನ ಮಂಜೂರಾತಿಯೊಂದಿಗೆ ಕ್ರಮವಹಿಸುವ ವ್ಯವಸ್ಥೆಯಾಗಿರುತ್ತದೆ.

ಕಟ್ಟಡ ಪ್ರವೇಶ : ಪಾಲಿಕೆಯ ವ್ಯಾಪ್ತಿಯಲ್ಲಿ ಪ್ರವೇಶ ಪತ್ರ ಕೋರಿದ ಕೆಲವು ಪ್ರಕರಣಗಳಿಗೆ ಸಂಬಂಧಿಸಿ ಯಾವುದೇ ಕಟ್ಟಡ ನಕ್ಷೆಗಳಲ್ಲಿ ಉಲ್ಲಂಘನೆ ಆದಲ್ಲಿ ಕೆಎಂಸಿ ಕಾಯ್ದೆ ಕಲಂ 308 ರಂತೆ ವಿಚಾರಣೆ ನಡೆಸಿ ಸೂಕ್ತ ಆದೇಶ ಹೊರಡಿಸಲು ಪಾಲಿಕೆಯ ಆಯುಕ್ತರಿಗೆ ಕಾಯ್ದೆಯಂತೆ ಅಧಿಕಾರ ಪ್ರದತ್ತವಾಗಿದೆ. ಹಾಗಾಗಿ ಕಾಯ್ದೆಯಂತೆ ಪಾಲಿಕೆಯ ಆಯುಕ್ತರು ಕಟ್ಟಡ ಉಲ್ಲಂಘನೆ ಆಗಿರುವ ಪ್ರಕರಣಗಳಲ್ಲಿ ನಿಯಮಾನುಸಾರ ಆಯುಕ್ತರ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಿ ವಹಿಸಿರುವ ಕ್ರಮವು ಸೂಕ್ತವಾಗಿದೆ. ಪಾಲಿಕೆಯ ನಿರ್ದಿಷ್ಟ ಪ್ರಕರಣ ತಿಳಿಸದೇ ಆಪಾದನೆ ಮಾಡಿರುವುದು ಸೂಕ್ತವಾಗಿರುವುದಿಲ್ಲ. ನಿರ್ದಿಷ್ಟ ಪ್ರಕರಣದ ಬಗ್ಗೆ ಸದಸ್ಯರು ತಿಳಿಸಿದಲ್ಲಿ ಈ ಬಗ್ಗೆ ಪಾಲಿಕೆಯಿಂದ ನಿಯಮಾನುಸಾರ ಪರಿಶೀಲಿಸಿ ಕ್ರಮವಹಿಸಲಾಗುವುದು.

ಸದಸ್ಯರು ಯಾವುದೇ ಸತ್ಯಾಂಶ, ಪುರಾವೆಗಳಿಲ್ಲದೆ ಕೇವಲ ಆಯುಕ್ತರ ತೇಜೋವಧೆಗೆ ಮೇಲಿನ ಸುಳ್ಳು ಆರೋಪಗಳನ್ನು ದುರುದ್ದೇಶದಿಂದ ಸ್ವಹಿತಾಸಕ್ತಿಗಾಗಿ ಪರಿಷತ್ತಿನಲ್ಲಿ ಪ್ರಸ್ತಾಪಿಸಿರುತ್ತಾರೆ.

ಇದನ್ನೂ ಓದಿ : ಕಡಬ: ಲಂಚಕ್ಕೆ ಕೈಯೊಡ್ಡಿದ ಪಿಡಿಒಗೆ 3 ವರ್ಷ ಜೈಲು ಶಿಕ್ಷೆ, 50 ಸಾವಿರ ರೂ. ದಂಡ - PDO SENTENCED FOR IMPRISONMENT

ETV Bharat Logo

Copyright © 2025 Ushodaya Enterprises Pvt. Ltd., All Rights Reserved.