ETV Bharat / international

ಟ್ರಂಪ್​ ಆಡಳಿತದಲ್ಲಿ ಭಾರತದೊಂದಿಗಿನ ಸಂಬಂಧ ವೃದ್ಧಿಗೆ ಆದ್ಯತೆ; ಶ್ವೇತ ಭವನದ ಮಾಜಿ ಅಧಿಕಾರಿ - TRUMP RELATIONS WITH INDIA

ಜಾಗತಿಕ ಶಕ್ತಿಯಾಗಿ ಹೊರಹೊಮ್ಮುವಲ್ಲಿ ಭಾರತವೂ ಪ್ರಮುಖವಾಗಿದೆ ಎಂದು ಟ್ರಂಪ್​ ಈ ಹಿಂದಿನ ಆಡಳಿತದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

trump-administration-prioritising-relations-with-india-former-white-house-official
ಟ್ರಂಪ್​- ಮೋದಿ (ANI)
author img

By ETV Bharat Karnataka Team

Published : Feb 12, 2025, 10:28 AM IST

ನ್ಯೂಯಾರ್ಕ್​, ಅಮೆರಿಕ: ಡೋನಾಲ್ಡ್​ ಟ್ರಂಪ್​ ಆಡಳಿತದಲ್ಲಿ ಭಾರತ ಸಂಬಂಧಕ್ಕೆ ಆದ್ಯತೆ ನೀಡಲಾಗುತ್ತಿದೆ. ಇಂಡೋ ಫೆಸಿಫಿಕ್​ ಪ್ರದೇಶದಲ್ಲಿ ಭಾರತ ಸಾಮರ್ಥ್ಯದಾಯಕ ಪರಿವರ್ತನೆ ಹೊಂದುತ್ತಿದ್ದು, ಚೀನಾದ ವಿರುದ್ಧ ಪರಿಣಾಮಕಾರಿ ಸ್ಪರ್ಧೆ ನೀಡುವಲ್ಲಿ ಪ್ರಮುಖ ಭಾಗಿದಾರ ದೇಶವಾಗಿದೆ ಎಂದು ಶ್ವೇತಭವನದ ಮಾಜಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪ್ಯಾರಿಸ್​ ಬಳಿಕ ಅಮೆರಿಕಕ್ಕೆ ತೆರಳುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರ ವಾಷಿಂಗ್ಟನ್​​​​ ಭೇಟಿಗೆ ಮುನ್ನ ಲಿಸಾ ಕರ್ಟಿಸ್​ ಈ ಹೇಳಿಕೆ ನೀಡಿದ್ದಾರೆ. ಲೀಸಾ, ಟ್ರಂಪ್​ ಮೊದಲ ಅವಧಿ ಆಡಳಿತದಲ್ಲಿ 2017 ರಿಂದ 2021ರವರೆಗೆ ರಾಷ್ಟ್ರೀಯ ಭದ್ರತಾ ಮಂಡಳಿಯ ದಕ್ಷಿಣ ಮತ್ತು ಕೇಂದ್ರ ಏಷ್ಯಾದ ಹಿರಿಯ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ್ದರು.

ಇಂಡೋ ಫೆಸಿಪಿಕ್​​ನಲ್ಲಿ ಭಾರತದ ಪ್ರಾಬಲ್ಯ: ಮೋದಿ ಆಗಮನದ ಮುನ್ನಾ ದಿನ ಸಂಜೆ ವಾಷಿಂಗ್ಟನ್​ ಡಿಸಿ ಮೂಲದ ಥಿಂಕ್​ ಟಾಂಕ್​​​​​​​​​ನ ​ಹೊಸ ಅಮೆರಿಕ ಭದ್ರತಾ ಕೇಂದ್ರ (ಸಿಎನ್​ಎಎಸ್​) ಆನ್​ಲೈನ್​ ಭಾಷಣದಲ್ಲಿ ಕರ್ಟಿಸ್​ ಮಾತನಾಡಿದ್ದು, ಭಾರತದೊಂದಿಗಿನ ಸಂಬಂಧವನ್ನು ಟ್ರಂಪ್​ ಆಡಳಿತ ಸ್ಪಷ್ಟ ಆದ್ಯತೆಯನ್ನಾಗಿಸಿಕೊಂಡಿದೆ ಎಂದು ಅವರು ಹೇಳಿದ್ದಾರೆ. ಜಾಗತಿಕ ಶಕ್ತಿಯಾಗಿ ಹೊರಹೊಮ್ಮುವಲ್ಲಿ ಭಾರತವೂ ಪ್ರಮುಖವಾಗಿದೆ ಎಂದು ಗುರುತಿಸಲಾಗಿದೆ. ಅಲ್ಲದೇ ಜಗತ್ತು ಮತ್ತು ಇಂಡೋ ಫೆಸಿಫಿಕ್​ ಪ್ರದೇಶದಲ್ಲಿ ಇದು ಸಾಮರ್ಥ್ಯದಾಯಕ ಪರಿವರ್ತನೆ ಹೊಂದಿದೆ ಎಂದಿದ್ದಾರೆ.

ಅಮೆರಿಕದ 47ನೇ ಅಧ್ಯಕ್ಷರಾಗಿ ಅಮೆರಿಕದ ನಾಯಕ ಅಧಿಕಾರ ಸ್ವೀಕರಿಸಿದ ಕೆಲವೇ ವಾರಗಳಲ್ಲಿ ಟ್ರಂಪ್ ಅವರನ್ನು ಭೇಟಿ ಮಾಡಿದ ನಾಲ್ಕನೇ ವಿದೇಶಿ ನಾಯಕ ಮೋದಿ ಅವರಾಗಲಿದ್ದಾರೆ. ಟ್ರಂಪ್​ ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ ಇಸ್ರೇಲ್​ ಪ್ರಧಾನಿ ಬೆಂಜಮಿನ್​ ನೆತನ್ಯಾಹು, ಜಪಾನ್​ ಪ್ರಧಾನಿ ಶಿಗೆರು ಇಶಿಬ ಮತ್ತು ಜೋರ್ಡನ್​ ರಾಜ ಅಬ್ದುಲ್ಲಾ 2 ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.

ಗುರುವಾರದ ಸಭೆಯಲ್ಲಿ ಮಹತ್ವದ ಮಾತುಕತೆ: ಟ್ರಂಪ್​ ಹೊಸ ಆಡಳಿತ, ಅಮೆರಿಕದಲ್ಲಿ ತೆಗೆದುಕೊಳ್ಳುತ್ತಿರುವ ನಿರ್ಧಾರಗಳ ಬಗ್ಗೆ ಭಾರತವೂ ಅತ್ಯಂತ ಸೂಕ್ಷ್ಮವಾಗಿ ಗಮನಿಸುತ್ತಿದೆ. ಈ ಬಗ್ಗೆ ಗ್ರೌಂಡ್​ವರ್ಕ್​ ಮಾಡಿರುವ ಭಾರತ ಸರ್ಕಾರ ಈ ಸಂಬಂಧ ಸಕಾರಾತ್ಮಕ ಹೆಜ್ಜೆ ಇಟ್ಟಿದ್ದು, ಸಂಬಂಧ ಸುಧಾರಣೆಗೆ ಮತ್ತಷ್ಟು ಆದ್ಯತೆ ನೀಡುವ ಬಗ್ಗೆ ಗುರುವಾರ ಸಭೆ ನಡೆಯಲಿದೆ ಎಂದು ಇದೇ ವೇಳೆ ಕರ್ಟಿಸ್​​​​ ಹೇಳಿದ್ದಾರೆ.

ಟ್ರಂಪ್​ ಆಡಳಿತದಲ್ಲಿ ಜಪಾನ್​, ಇಂಡಿಯಾ, ಆಸ್ಟ್ರೇಲಿಯಾ ಹಾಗೂ ಅಮೆರಿಕಗಳನ್ನೊಳಗೊಂಡ ಕ್ವಾಡ್​ ಸಂಘಟನೆ ಪ್ರಮುಖವಾಗಿದೆ. ಟ್ರಂಪ್​ ಅಧಿಕಾರಕ್ಕೆ ಬಂದ ದಿನವೇ ಕ್ವಾಡ್​​ನ ವಿದೇಶಾಂಗ ಸಚಿವರ ಸಭೆ ಕರೆದಿದ್ದನ್ನು ಈಗಾಗಲೇ ನಾವು ನೋಡಿದ್ದೇವೆ. ಇದರಲ್ಲಿ ಟ್ರಂಪ್ ಆಡಳಿತವು ಭಾರತ ಮತ್ತು ಕ್ವಾಡ್​ ಪಾತ್ರದ ಪ್ರಾಮುಖ್ಯತೆಯನ್ನು ತೋರಿಸುತ್ತದೆ ಎಂದು ಕರ್ಟಿಸ್​​ ವಿವರಿಸಿದ್ದಾರೆ.

ಜನವರಿ 21ರಂದು ಟ್ರಂಪ್​ ಅಧಿಕಾರ ಸ್ವೀಕಾರ ದಿನ ವಿದೇಶಾಂಗ ಸಚಿವ ಎಸ್​ ಜೈಶಂಕರ್, ಅಮೆರಿಕ ರಾಜ್ಯ ಕಾರ್ಯದರ್ಶಿ ಮ್ಯಾಕ್ರೊ ರುಬಿಯೊ ದ್ವಿಪಕ್ಷೀಯ ಸಭೆ ಕೂಡಾ ನಡೆಸಿದ್ದರು. ಈ ವೇಳೆ ರುಬಿಯೊ ಆಸ್ಟ್ರೇಲಿಯಾದ ವಿದೇಶಾಂಗ ಸಚಿವ ಪೆನ್ನಿ ವಾಂಗ್ ಮತ್ತು ಜಪಾನ್ ವಿದೇಶಾಂಗ ಸಚಿವ ಇವಾಯಾ ತಕೇಶಿ ಅವರನ್ನು ಕ್ವಾಡ್ ಗುಂಪಿನ ಇತರ ವಿದೇಶಾಂಗ ಮಂತ್ರಿಗಳನ್ನು ಭೇಟಿ ಮಾಡಿ ಮಹತ್ವದ ಮಾತುಕತೆ ನಡೆಸಿದ್ದರು.

ಇದನ್ನೂ ಓದಿ: ಅಮೆರಿಕ ಪ್ರವಾಸಕ್ಕೂ ಮುನ್ನ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಜತೆ ಮೋದಿ ದ್ವಿಪಕ್ಷೀಯ ಮಾತುಕತೆ

ಇದನ್ನೂ ಓದಿ: ಸುಂದರ್​ ಪಿಚೈ ಜತೆ ಪ್ರಧಾನಿ ಸಂವಾದ: ಭಾರತದಲ್ಲಿ AIನ ನಂಬಲಸಾಧ್ಯವಾದ​​​​ ಅವಕಾಶಗಳ ಕುರಿತು ಚರ್ಚೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.