ETV Bharat / state

ವಿಜ್ಞಾನ ಲೋಕದ ಬಗ್ಗೆ ಆಸಕ್ತಿ ಮೂಡಿಸಲು ಲಿಲ್ ಬಿಗ್ ಫ್ಯಾಂಟಸಿ ಸೈನ್ಸ್‌ ಬಸ್‌ ಅನಾವರಣ; ಆಯ್ದ ಮಕ್ಕಳಿಗೆ ನಾಸಾ ಭೇಟಿಯ ಅವಕಾಶ - Science Bus unveiled - SCIENCE BUS UNVEILED

ಮಕ್ಕಳಲ್ಲಿ ವಿಜ್ಞಾನ ಲೋಕದ ಬಗ್ಗೆ ಆಸಕ್ತಿ ಮೂಡಿಸಲು ಲಿಲ್ ಬಿಗ್ ಫ್ಯಾಂಟಸಿ ಸೈನ್ಸ್‌ ಬಸ್‌ ಅನಾವರಣಗೊಳಿಸಲಾಗಿದ್ದು, ಆಯ್ದ ಮಕ್ಕಳಿಗೆ ನಾಸಾ ಭೇಟಿಯ ಅವಕಾಶ ಕಲ್ಪಿಸಲಾಗಿದೆ.

LIL BIG FANTASY SCIENCE BUS  WORLD OF SCIENCE  WORLD OF SCIENCE FOR CHILDREN  BENGALURU
ಲಿಲ್ ಬಿಗ್ ಫ್ಯಾಂಟಸಿ ಸೈನ್ಸ್‌ ಬಸ್‌ ಅನಾವರಣ (ETV Bharat)
author img

By ETV Bharat Tech Team

Published : Sep 28, 2024, 2:30 PM IST

ಬೆಂಗಳೂರು: ವಿಜ್ಞಾನ ಲೋಕದ ಕೌತಕಗಳನ್ನು ಕಣ್ತುಂಬಿಕೊಳ್ಳಲು ಮಕ್ಕಳ ಬಳಿಯೇ ಲಿಲ್ ಬಿಗ್ ಫ್ಯಾಂಟಸಿಯ ಸೈನ್ಸ್‌ ಬಸ್‌ ವಿನ್ಯಾಸ ಮಾಡಲಾಗಿದೆ. ಮಕ್ಕಳಿಗೆ ವಿಜ್ಞಾನದ ಬಗ್ಗೆ ಆಸಕ್ತಿ ಮೂಡಿಸಲು ವಿಜ್ಞಾನವನ್ನು ಅನ್ವೇಷಿಸಿ ಅದರ ಅನುಭವ ಪಡೆದುಕೊಳ್ಳಲು ಐಟಿಸಿ ಸನ್‌ಫೀಸ್ಟ್‌ ಡಾರ್ಕ್‌ ಫ್ಯಾಂಟಸಿ ಈ ವಿನೂತನ ಸೈನ್ಸ್‌ ಬಸ್‌ ಅನ್ನು ಅನವರಣಗೊಳಿಸಲಾಗಿದೆ.

ಶುಕ್ರವಾರ ನಗರದ ವಿಠ್ಠಲ್ ಮಲ್ಯ ರಸ್ತೆಯಲ್ಲಿರುವ ಸೇಂಟ್ ಜೋಸೆಫ್ ಸ್ಕೂಲ್​ನಲ್ಲಿ ಬಸ್ ಅನಾವರಣಗೊಳಿಸಿ ಮಾತಾನಾಡಿದ ಇಸ್ರೋ ಮಾಜಿ ಅಧ್ಯಕ್ಷ ಪ್ರಕಾಶ್ ರಾವ್, ಪ್ರತಿಯೊಂದು ಮಕ್ಕಳಲ್ಲೂ ವಿಶೇಷ ಪರಿಕಲ್ಪನೆಗಳಿರುತ್ತವೆ. ವಿಜ್ಞಾನದ ಬಗ್ಗೆ ತಿಳಿದುಕೊಳ್ಳುವ ಕುತೂಹಲವಿರುತ್ತದೆ. ಅವರ ಸೃಜನಶೀಲತೆಯನ್ನು ಉತ್ತೇಜಿಸಿ ಕಲ್ಪನೆಗೆ ಜೀವ ನೀಡುವ ಉದ್ದೇಶದಿಂದ ಸೈನ್ಸ್‌ ಬಸ್‌ ಅನ್ನು ಐಟಿಸಿ ತಂಡ ಬಿಡುಗಡೆ ಮಾಡಿದೆ. ಮಕ್ಕಳು ಈ ಬಸ್‌ನಲ್ಲಿ ತಮ್ಮ ಕಲ್ಪನೆಯನ್ನು ಜೀವಂತವಾಗಿ ಇರಿಸಿಕೊಳ್ಳಬಹುದಾಗಿದೆ. ವಿಜ್ಞಾನದ ಬಗ್ಗೆ ಹೆಚ್ಚು ತಿಳಿದುಕೊಳ್ಳಬಹುದಾಗಿದೆ. ಈ ರೀತಿಯ ಪ್ರಯತ್ನಗಳು ಮಕ್ಕಳಲ್ಲಿ ವಿಜ್ಞಾನದ ಬಗ್ಗೆ ಇನ್ನಷ್ಟು ಆಸಕ್ತಿ ಹಾಗೂ ಕುತೂಹಲ ಮೂಡಿಸಲು ಸಹಕಾರಿಯಾಗಲಿದೆ ಎಂದು ಹೇಳಿದರು.

Lil Big Fantasy Science Bus  world of science  world of science for children  Bengaluru
ಲಿಲ್ ಬಿಗ್ ಫ್ಯಾಂಟಸಿ ಸೈನ್ಸ್‌ ಬಸ್‌ ಅನಾವರಣ (ETV Bharat)

ಐಟಿಸಿ ಲಿಮಿಟೆಡ್ ಬಿಸ್ಕೆಟ್ಸ್ ಮತ್ತು ಕೇಕ್ಸ್ ಕ್ಲಸ್ಟರ್, ಫುಡ್ಸ್ ಡಿವಿಷನ್ ಸಿಒಒ ಅಲಿ ಹ್ಯಾರಿಸ್ ಶೇರ್ ಮಾತನಾಡಿ, ಈಗಿನ ಮಕ್ಕಳು ಸಾಕಷ್ಟು ಫ್ಯಾಂಟಸಿ ಆಲೋಚನೆಗಳನ್ನು ಹೊಂದಿರುತ್ತಾರೆ. ಅವರ ಆಲೋಚನೆಗಳಿಗೆ ತಕ್ಕಂತೆ ಐಟಿಸಿ ತಂಡ ಈ ವಿನೂತನ ಹಾಗೂ ಅತ್ಯಾಧುನಿಕ ತಂತ್ರಜ್ಞಾನದಿಂದ ಸೈನ್ಸ್‌ ಬಸ್‌ನನ್ನು ತಯಾರಿಸಿದೆ. ಇದರಿಂದ ಮಕ್ಕಳ ಫ್ಯಾಂಟಸಿ ಮತ್ತು ಕಲ್ಪನಾಶೀಲತೆಯನ್ನು ಪ್ರದರ್ಶಿಸಬಹುದಾಗಿದೆ.

ಈ ಬಸ್‌ನಲ್ಲಿ ಅಳವಡಿಸಿರುವ ತಂತ್ರಜ್ಞಾನದಲ್ಲಿ ಮಕ್ಕಳು ತಮಗೆ ಇಷ್ಟವಾದ ಚಿತ್ರ, ಕಾರ್ಟೂನ್ ಅಥವಾ ಯಾವುದೇ ಕಲೆಯನ್ನು ಇಲ್ಲಿ ತಮ್ಮ ಕೈಯಿಂದ ಬಿಡಿಸಿದರೆ ಅದು 3ಡಿ ಸಂವಾದಾತ್ಮಕ ಅಕ್ಷರಗಳಾಗಿ ಪರಿವರ್ತನೆಗೊಂಡು ಡಿಜಿಟಲ್‌ ರಚನೆಯಾಗಿ ಪರದೆ ಮೇಲೆ ಪ್ರದರ್ಶನಗೊಳ್ಳಲಿದೆ. ಇದು ಮಕ್ಕಳಿಗೆ ಮಾಯಾ ಲೋಕದ ಅನುಭವ ನೀಡುವ ಜೊತೆಗೆ ನಮ್ಮ ವಿಜ್ಞಾನದ ತಾಕತ್ತನ್ನು ತಿಳಿಸಲಿದೆ. ಈ ಮೂಲಕ ಕಲೆ, ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಸಂಯೋಜಿಸುವ ಮೂಲ ಉದ್ದೇಶವನ್ನು ಒಳಗೊಂಡಿದೆ ಎಂದು ವಿವರಿಸಿದರು.

ಬಾಲಿವುಡ್‌ ನಟಿ ಮಂದಿರಾ ಬೇಡಿ ಮಾತನಾಡಿ, ನನ್ನ ಮಗಳಿಗೆ ಈಗ 8 ವರ್ಷ ವಯಸ್ಸಾಗಿದೆ. ಆಕೆಗೆ ಪ್ರತಿದಿನ ಒಂದೊಂದು ಇಮ್ಯಾಜಿನೇಷನ್‌ ಮಾಡಿಕೊಳ್ಳುತ್ತಾಳೆ. ಒಮ್ಮೆ ತಾನು ಪೈಲೆಟ್‌ ಆಗ ಬಯಸುವೆನ್ನುವ ಆಕೆ, ಮತ್ತೊಂದು ದಿನ ಚೇಫ್‌ ಆಗುವೆ ಎನ್ನುತ್ತಾಳೆ. ಹೀಗೆ ಮಕ್ಕಳ ಕಲ್ಪನೆಗಳು ದಿನದಿಂದ ದಿನಕ್ಕೆ ಬದಲಾಗುತ್ತಿರುತ್ತದೆ. ಅವರ ಕಲ್ಪನೆಗೆ ರೆಕ್ಕೆ ಪುಕ್ಕ ನೀಡುವುದು ನಮ್ಮ ಜವಾಬ್ದಾರಿಯಾಗಿದೆ. ಈ ನಿಟ್ಟಿನಲ್ಲಿ ಐಟಿಸಿ ತಂಡ ಈ ಪ್ರಯತ್ನ ಮಾಡುವ ಮೂಲಕ ಮಕ್ಕಳ ವಿನೂತನ ಕಲ್ಪನೆಗಳಿಗೆ ರೆಕ್ಕೆ ಕಟ್ಟಿದಂತಾಗಲಿದೆ ಎಂದರು. ಸಮಾರಂಭದಲ್ಲಿ ಸೇಂಟ್ ಜೋಸೆಫ್ ಶಾಲೆ ಪ್ರಾಂಶುಪಾಲ ರೋಹನ್ ಡಿ ಅಲ್ಮೇಡಾ, ನಿಮ್ಹಾನ್ಸ್‌ನ ಡೀನ್ ಡಾ. ಮೇಘಾ ಮಹಾಜನ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಆಯ್ದ ಮಕ್ಕಳಿಗೆ ನಾಸಾ ಭೇಟಿಯ ಅವಕಾಶ: ಈ ಬಸ್‌ನಲ್ಲಿ ಮಕ್ಕಳು ತಮ್ಮ ಆಸಕ್ತಿದಾಯಕ ವಿಚಾರ ಹಾಗೂ ಕಲೆಯನ್ನು ಪ್ರದರ್ಶಿಸಬಹುದಾಗಿದೆ. ಯಾವ ಮಗುವು ಕಲ್ಪನೆಯು ಹೆಚ್ಚು ವಿಭಿನ್ನ ಹಾಗೂ ವಿಶೇಷವಾಗಿರುತ್ತದೆಯೋ ಆ ಆಯ್ದ ಮಕ್ಕಳನ್ನು ನಾಸಾಗೆ ಭೀಟಿ ನೀಡುವ ಅವಕಾಶವನ್ನು ಐಟಿಸಿ ಡಾರ್ಕ್‌ ಫ್ಯಾಂಟಸಿ ತಂಡ ಮಾಡಲಿದೆ. ಪ್ರಸ್ತುತ ಬೆಂಗಳೂರಿನಲ್ಲಿ ಈ ಹೊಸ ಬಸ್‌ಗೆ ಚಾಲನೆ ಸಿಕ್ಕಿದ್ದು, ಈ ಬಸ್‌ ಇಡೀ ದೇಶಾದ್ಯಂತ ಎಲ್ಲೆಡೆ ಸಂಚರಿಸಿ, ಕೋಟ್ಯಂತರ ಮಕ್ಕಳ ಕ್ರಿಯಾತ್ಮಕತೆ ಹಾಗೂ ಕಲ್ಪನೆಗೆ ಸಾಕ್ಷಿಯಾಗಲಿದೆ.

ಬಸ್‌ನ ವಿಶೇಷತೆ ಏನು?: ಫ್ಯಾಂಟಸಿ ಸ್ಪೇಸ್‌ಶಿಪ್‌ ಆಗಿರುವ ಈ ಬಸ್‌ ಹಲವು ವಿಶೇಷ ಹಾಗೂ ಕೌತುಕದಿಂದ ಕೂಡಿದೆ. ಈ ಬಸ್‌ನಲ್ಲಿ ವಿಸ್ತಾರವಾದ ಪರದೆ ಇದ್ದು, ಅತ್ಯಾಧುನಿಕ ತಂತ್ರಜ್ಞಾನದ ಸಂಯೋಜನೆಯಿದೆ. ಈ ಬಸ್‌ನಲ್ಲಿ ಮಕ್ಕಳು ತಮ್ಮ ಕೈಯಿಂದ ಬಿಡಿಸುವ ಚಿತ್ರ ಅಥವಾ ಪಾತ್ರವು ರೋಮಾಂಚಕ ಡಿಜಿಟಲ್ ರಚನೆಗಳಾಗಿ ಪರಿವರ್ತನೆಗೊಳ್ಳಲಿದೆ.

ಮಕ್ಕಳು ಪೇಪರ್‌ ಮೇಲೆ ಬರೆದ ಕಲಾಕೃತಿಯನ್ನು ಸ್ಕ್ಯಾನ್ ಮಾಡಿದ ನಂತರ ಕ್ಯಾರೆಕ್ಟರ್‌ಗಳು ಅಥವಾ ಕಲಾಕೃತಿಗಳು ಸ್ಪೇಸ್‌ಶಿಪ್‌ನಲ್ಲಿ ಡಿಜಿಟಲ್ ರೂಪದಲ್ಲಿ 3ಡಿ ಸಂವಾದಾತ್ಮಕ ಅಕ್ಷರಗಳಾಗಿ ಪ್ರದರ್ಶನಗೊಳ್ಳಲಿದೆ. ಈ ಸ್ಕ್ರೀನ್‌ನಲ್ಲಿ ಮೂಡಿಬರುವ ಕಲಾಕೃತಿಗಳನ್ನು ಮಕ್ಕಳು ತಮ್ಮ ಕೈಯ್ಯಾರೆ ಮುಟ್ಟುವ ಮೂಲಕ ತಾವೇ ಸ್ಪೇಸ್‌ಶಿಪ್‌ನಲ್ಲಿ ಓಡಾಡುತ್ತಿರುವ ಅನುಭವ ಪಡೆಯಬಹುದಾಗಿದೆ. ಈ ಬಸ್‌ನಲ್ಲಿ ಆಕಾಶಯಾನದ ನೈಜ ಅನುಭವವನ್ನು ಪಡೆದುಕೊಳ್ಳಬಹುದಾಗಿದೆ.

ನೂರಾರು ಕಕ್ಷೆಗಳು ತಮ್ಮ ಸುತ್ತ ಹಾದು ಹೋಗುವ ಅನುಭವ, ಗಗನಯಾತ್ರಿಗಳು ನಮ್ಮ ಸುತ್ತಲೇ ಸುತ್ತುತ್ತಿರುವ ಅನುಭವ ಹೀಗೆ ಆಕಾಶಯಾನದ ವಾಸ್ತವ ಆನಂದವನ್ನು ಮಕ್ಕಳು ಈ ಬಸ್‌ನಲ್ಲಿ ಪಡೆಯುವ ವ್ಯವಸ್ಥೆ ಮಾಡಲಾಗಿದೆ. ಇನ್ನಷ್ಟು ವಿಶೇಷ ಹಾಗೂ ವಿಜ್ಞಾನದ ಅನುಭವ ಕೂಡ ಇಲ್ಲಿ ಪಡೆದುಕೊಳ್ಳಬಹುದಾಗಿದೆ.

ಓದಿ: ಮಕ್ಕಳ ಮೇಲೆ ಹೆಚ್ಚುತ್ತಿರುವ ಲೈಂಗಿಕ ದೌರ್ಜನ್ಯ, ಕಾಮುಕರಿಗೆ ದಾರಿಯಾಗುತ್ತಿದೆ ಸಾಮಾಜಿಕ ಜಾಲತಾಣ; ಸಂಶೋಧನೆ - Social Media Danger for Children

ETV Bharat Logo

Copyright © 2025 Ushodaya Enterprises Pvt. Ltd., All Rights Reserved.