ETV Bharat / bharat

ಮುದ್ದಾದ ಮೊಲಕ್ಕೂ ಇದೆ ಒಂದು ದಿನ; ಅಂತಾರಾಷ್ಟ್ರೀಯ ಮೊಲದ ದಿನದ ಬಗ್ಗೆ ಇಲ್ಲಿದೆ ಕುತೂಹಲದ ಮಾಹಿತಿ - International Rabbit Day

ಮೊದಲ ಬಾರಿಗೆ ಅಂತಾರಾಷ್ಟ್ರೀಯ ಮೊಲದ ದಿನವನ್ನು 1998ರ ಸೆಪ್ಟೆಂಬರ್​ 4ನೇ ಶನಿವಾರದಂದು ಆಚರಿಸಲಾಯಿತು.

international-rabbit-day-histroy-and-significance
ಮೊಲ (FILE PHOTO)
author img

By ETV Bharat Karnataka Team

Published : Sep 28, 2024, 2:21 PM IST

ಹೈದರಾಬಾದ್​: ಸೆಪ್ಟೆಂಬರ್​ 4ನೇ ಶನಿವಾರವನ್ನು ಮೊಲಕ್ಕಾಗಿ (Rabbit) ಮೀಸಲಿಡಲಾಗಿದೆ. ಮೊಲದ ಅರೈಕೆ ಮತ್ತು ಅವುಗಳ ಮೇಲಿನ ದೌರ್ಜನ್ಯದ ಕುರಿತು ಜಾಗೃತಿ ಮೂಡಿಸಲು ಈ ದಿನವನ್ನು ಅಂತಾರಾಷ್ಟ್ರೀಯ ಮೊಲದ ದಿನವಾಗಿ ಆಚರಿಸಲಾಗುವುದು. ಈ ಬಾರಿ ಸೆಪ್ಟೆಂಬರ್​ 28ರಂದು(ಇಂದು) ಅಂತಾರಾಷ್ಟ್ರೀಯ ಮೊಲದ ದಿನವನ್ನಾಗಿ ಆಚರಿಸಲಾಗುತ್ತಿದೆ.

ಇತಿಹಾಸ: ಮೊದಲ ಬಾರಿಗೆ ಅಂತಾರಾಷ್ಟ್ರೀಯ ಮೊಲದ ದಿನವನ್ನು 1998ರ ಸೆಪ್ಟೆಂಬರ್​ 4ನೇ ಶನಿವಾರದಂದು ಆಚರಿಸಲಾಯಿತು. ಯುಕೆಯಲ್ಲಿ ಮೊದಲಿಗೆ ಈ ಅಂತಾರಾಷ್ಟ್ರೀಯ ಮೊಲದ ದಿನವನ್ನು ಪ್ರಾರಂಭಿಸಲಾಯಿತು. ಬಳಿಕ ಅದು ಅಸ್ಟ್ರೇಲಿಯಾಗೆ ಹರಡಿ ನಂತರ ಜಗತ್ತಿನಾದ್ಯಂತ ಹಬ್ಬಿತು. ಹೌಸ್ ರ್ಯಾಬಿಟ್ ಸೊಸೈಟಿಯು ಮೊದಲ ಜನಪ್ರಿಯತೆ ಹೆಚ್ಚಳ ಹಿನ್ನೆಲೆ ಮತ್ತು ಅವುಗಳ ಆರೈಕೆ ಕುರಿತು ಗಮನ ಸೆಳೆಯಲು ಸೆಪ್ಟೆಂಬರ್​ 4ನೇ ಶನಿವಾರದಂದು ಅದಕ್ಕೆಂದೇ ಒಂದು ದಿನವನ್ನು ನಿಗದಿಸಿತು.

ಆಚರಣೆ ಹೇಗೆ: ಅಂತಾರಾಷ್ಟ್ರೀಯ ಮೊಲದ ದಿನವನ್ನು ಮೊಲವನ್ನು ದತ್ತು ತೆಗೆದುಕೊಳ್ಳುವುದು. ಇಲ್ಲ, ಮೊದಲ ಸಂಗ್ರಾಹಾಲಯಕ್ಕೆ ಭೇಟಿ ನೀಡುವ ಮೂಲಕ ಅಥವಾ ಮೊಲದ ಕುರಿತು ಪಿಸ್ತಕ ಓದುವುದು, ಮೊಲದ ಕುರಿತು ಕಥೆ ಪುಸ್ತಕ ಓದುವ ಮೂಲಕ ಆಚರಿಸಬಹುದು.

ಮೊಲದ ಕುರಿತು ಕೌತುಕ: ಮೊಲಗಳು ಲಾಗೊಮೊರ್ಫಾ ವರ್ಗದ ಸಣ್ಣ ಸಸ್ತನಿಗಳಾಗಿವೆ. ಅಂಟಾರ್ಟಿಕಾ ಹೊರತುಪಡಿಸಿ ಎಲ್ಲೆಡೆ ಇವು ಕಂಡು ಬರುತ್ತವೆ. ಜಗತ್ತಿನಲ್ಲಿ 10 ಕುಲದ 29 ಜಾತಿಯ ಮೊಲಗಳಿವೆ. ಉತ್ತರ ಮತ್ತು ದಕ್ಷಿಣ ಅಮೆರಿಕದಲ್ಲಿ 17 ಜಾತಿಗಳಿದ್ದು ಸಿಲ್ವಿಲಾಗಸ್ ಅತ್ಯಂತ ಪ್ರಸಿದ್ಧ ಜಾತಿ.

ಗಾತ್ರ: ಮೊಲಗಳು ಗಾತ್ರದಲ್ಲಿ ವ್ಯಾಪಕವಾಗಿ ಬದಲಾಗುತ್ತವೆ. ಇದರಲ್ಲಿ ಡೇರಿಯಸ್​ ಮೊಲವು 4 ಅಡಿ 4 ಇಂಚುಗಳಷ್ಟು ಮತ್ತು ಸುಮಾರು 50 ಪೌಂಡ್‌ಗಳಷ್ಟಿದ್ದು, ಇವು ವಿಶ್ವದ ಅತಿ ಉದ್ದದ ಮೊಲಗಳಾಗಿ ಗಿನ್ನೆಸ್​ ದಾಖಲೆ ಸೇರಿವೆ. ಇನ್ನು ಇದರಲ್ಲಿನ ಪಿಗ್ಮಿ ಮೊಲಗಳು ಕೇವಲ 7.9 ಇಂಚು ಉದ್ದ ಮತ್ತು 0.9 ಪೌಂಡ್​ ತೂಕ ಹೊಂದಿರುತ್ತವೆ.

ಇವು ಉದ್ದವಾದ ಕಿವಿ ಹೊಂದಿದ್ದು, ಪರಭಕ್ಷಕನ ಪತ್ತೆಗಾಗಿ ರೂಪಾಂತರ ಹೊಂದುತ್ತವೆ. ಉದ್ದವಾದ, ಶಕ್ತಿಯುತ ಹಿಂಗಾಲುಗಳನ್ನು ಮತ್ತು ಚಿಕ್ಕದಾದ ಬಾಲವಿದೆ. ಇದರ ಸಂಪೂರ್ಣ ದೇಹ ಮೊಟ್ಟೆಯಾಕಾರದಲ್ಲಿರುತ್ತದೆ. ದೇಹದ ಪ್ರಮಾಣ ಮತ್ತು ನಿಲುವುಗಳು ಒಂದೇ ರೂಪದಲ್ಲಿರುತ್ತದೆ. ಕಂದು ಮತ್ತು ಬಿಳಿ ಬಣ್ಣದಲ್ಲಿರುತ್ತವೆ. ಮೊದಲ ತುಪ್ಪಳವು ಉದ್ದ ಮತ್ತು ಮೃದುವಾಗಿರುತ್ತದೆ. ಇವುಗಳ ಜಾತಿ ಮತ್ತು ತಳಿಯನ್ನು ಅವಲಂಬಿಸಿ ಕೆಲವು ವಿಭಿನ್ನವಾಗಿರುತ್ತವೆ. ಆದರೆ, ಜಪಾನ್‌ನ ಕಪ್ಪು ಅಮಾಮಿ ಮೊಲಗಳು ಮತ್ತು ಆಗ್ನೇಯ ಏಷ್ಯಾ ಎರಡು ಕಪ್ಪು ಪಟ್ಟಿ ಮೊಲ ಈ ಬದಲಾವಣೆ ಹೊಂದುವುದಿಲ್ಲ.

ಆಹಾರ: ಇವು ಸಸ್ಯಹಾರಿಯಾಗಿದ್ದು, ಹುಲ್ಲು ತರಕಾರಿ ಸೇವಿಸುತ್ತವೆ.

ಆವಾಸಸ್ಥಾನ: ಮೊಲಗಳು ಮರುಭೂಮಿಯಿಂದ ಉಷ್ಣವಲಯದ ಅರಣ್ಯ ಮತ್ತು ಆರ್ದ್ರ ಭೂಮಿಯಲ್ಲಿ ಇರುತ್ತವೆ. ಅಂಟಾರ್ಟಿಕಾವನ್ನು ಹೊರತುಪಡಿಸಿ ಉಳಿದೆಲ್ಲ ಕಡೆ ವಿವಿಧ ಜಾತಿಯ ಮೊಲಗಳು ಕಾಣಬಹುದು. ಆಸ್ಟ್ರೇಲಿಯಾದಲ್ಲಿ ಮಾತ್ರ ಮೊಲಗಳು 18ನೇ ಶತಮಾನದಲ್ಲಿ ಕಂಡು ಬಂದಿವೆ.

ಸಂತಾನೋತ್ಪತ್ತಿ: ಮೊಲಗಳು ಸಾಮಾನ್ಯವಾಗಿ ಚಿಕ್ಕ ವಯಸ್ಸಿನಲ್ಲಿ ಸಂತಾನೋತ್ಪತ್ತಿ ಪ್ರಾರಂಭಿಸುತ್ತವೆ. ಪ್ರತಿ ವರ್ಷ ಅನೇಕ ಮರಿಗಳನ್ನು ಹಾಕುತ್ತವೆ. ಮೊಲವೊಂದು ವರ್ಷಕ್ಕೆ ನಾಲ್ಕರಿಂದ ಐದು ಬಾರಿ ಗರ್ಭಧರಿಸಿ, ಏಳು ಮರಿವರೆಗೆ ಜನ್ಮ ನೀಡುತ್ತವೆ. ಇದು ಹೆಚ್ಚು ಸಂತಾನೋತ್ಪತ್ತಿ ನಡೆಸಲು ಕಾರಣ ಇದರ ಕೊರತೆ ಮತ್ತು ಬೆದರಿಕೆಯನ್ನು ಹತ್ತಿಕ್ಕುವುದಾಗಿದೆ.

ನವಜಾತ ಮೊಲಗಳು ಕುರುಡಾಗಿದ್ದು, ಅಸಹಾಯಕವಾಗಿರುತ್ತವೆ. ಮೊಲಗಳು ಅವುಗಳ ಮರಿಗಳ ಬಗ್ಗೆ ಹೆಚ್ಚು ಕಾಳಜಿವಹಿಸುವುದಿಲ್ಲ. ತಾಯಿ ತನ್ನ ಮರಿಯನ್ನು ದಿನಕ್ಕೆ ಒಮ್ಮೆ ಮಾತ್ರ ಕೇವಲ ಕೆಲವು ನಿಮಿಷ ಆರೈಕೆ ಮಾಡುತ್ತದೆ. ತಾಯಿಯ ಪೋಷಣೆ ಸರಿದೂಗಿಸಲು ಇದು ಹೆಚ್ಚು ಪೌಷ್ಟಿಕ ಹಾಲನ್ನು ನೀಡುತ್ತದೆ. ಗಂಡು ಮೊಲಗಳು ಕೂಡ ಮರಿಗಳ ಆರೈಕೆಗೆ ಸಹಾಯ ಮಾಡುವುದಿಲ್ಲ. ಇವು ವೇಗವಾಗಿ ಬೆಳೆದು ತಿಂಗಳೊಳಗೆ ತಾಯಿ ಹಾಲು ಸೇವನೆಯಿಂದ ದೂರವಾಗುತ್ತವೆ.

ಬೆದರಿಕೆ : ತೋಳಗಳು, ನರಿಗಳು, ಬಾಬ್‌ಕ್ಯಾಟ್‌ಗಳು, ವೀಸೆಲ್‌ಗಳು, ಗಿಡುಗಗಳು, ಹದ್ದುಗಳು ಮತ್ತು ಗೂಬೆಗಳು ಸೇರಿದಂತೆ ಹಲವು ಪ್ರಾಣಿ, ಪಕ್ಷಿಗಳು ಮೊಲಗಳನ್ನು ಬೇಟೆಯಾಡುತ್ತವೆ. ಅನೇಕ ಪರಭಕ್ಷಕಗಳಿಗೆ ಮೊದಲ ಪ್ರಾಥಮಿಕ ಆಹಾರ ಮೂಲವಾಗಿದೆ. ಕಾಡು ಮತ್ತು ಸಾಕು ಮೊಲಕ್ಕೆ ಮಾನವ ಕೂಡ ಬೆದರಿಕೆ ಹಾಕುತ್ತಾನೆ. ಇದರ ತುಪ್ಪಳವನ್ನು ಅನೇಕ ಕ್ರೀಡೆ ಮತ್ತ ಆಹಾರಕ್ಕೆ ಬಳಕೆ ಮಾಡಲಾಗುವುದು. ಮೊಲದ ಮಾಂಸ ಪ್ರೋಟಿನ್​ನಿಂದ ಕೂಡಿದ್ದು, ಇದು ಸಾಕು ಪ್ರಾಣಿಯೂ ಆಗಿದೆ. ಅಲ್ಲದೇ ಮೊಲಗಳನ್ನು ವೈದ್ಯಕೀಯ ಮತ್ತು ವೈಜ್ಞಾನಿಕ ಉದ್ದೇಶಗಳಿಗಾಗಿ ಪ್ರಯೋಗಕ್ಕೆ ಒಳಪಡಿಸಲಾಗುವುದು.

ಸಂರಕ್ಷಣೆ: ಮೊಲದ ಅರ್ಧದಷ್ಟು ಪ್ರಭೇದಗಳು ಅಳಿವಿನಂಚಿನಲ್ಲಿವೆ. ಐಯುಸುಎನ್​ ಪ್ರಕಾರ ಇದರ ಸಂಖ್ಯೆ ಕುಗ್ಗುತ್ತಿದೆ, ಅವಾಮಿ, ಯುರೋಪಿಯನ್​ ಮೊಲಗಳು ಅಳಿವಿನಂಚಿನಲ್ಲಿವೆ. ದಕ್ಷಿಣ ಆಫ್ರಿಕಾದಲ್ಲಿ ಕಂಡುಬರುವ ರಿವರ್ನ್ ಮೊಲಗಳು ಕೂಡ ಅಳಿವಿನಂಚಿನಲ್ಲಿವೆ.

ಸಂರಕ್ಷಣೆ ಪ್ರಯತ್ನ: ವನ್ಯಜೀವಿ ಸಂರಕ್ಷಣಾ ಸೊಸೈಟಿ ಸೇರಿದಂತೆ ಹಲವಾರು ವನ್ಯಜೀವಿ ಗುಂಪುಗಳು ಮೊಲ ಸಂರಕ್ಷಣಾ ಕಾರ್ಯಕ್ರಮದಲ್ಲಿ ಭಾಗಿಯಾಗಿವೆ. 2015ರಿಂದ ಡಬ್ಲ್ಯೂ ಸಿಎಸ್​ ಕ್ವೀನ್ಸ್​ ಮೃಗಾಲಯದಲ್ಲಿ ನ್ಯೂ ಇಂಗ್ಲೆಂಡ್ ಕಾಟನ್‌ಟೈಲ್ ಮೊಲಗಳನ್ನು ಪರಿಚಯಿಸಿ, ಯಶಸ್ವಿಯಾಗಿ ಸಾಕಲಾಯಿತು.

ಭಾರತದ ಮೊಲದ ಕುರಿತು ಕುತೂಹಲಕಾರ ಮಾಹಿತಿ:

ಮೊಲದ ತುಪ್ಪಳಕ್ಕಾಗಿ ಮೊಲಗಳನ್ನು ಸಾಕಾಣೆ ಮಾಡಿದ ದೇಶ ಭಾರತ.

1956-2019-ಅಖಿಲ ಭಾರತ ಅವಧಿಯಲ್ಲಿ ಜಾನುವಾರು ಮತ್ತು ಕೋಳಿ ಸಂಖ್ಯೆಯ ಪ್ರಕಾರ ಭಾರತವು 0.55 ಮಿಲಿಯನ್ ದೇಶೀಯ ಮೊಲಗಳನ್ನು ಹೊಂದಿದೆ.

ಭಾರತದಲ್ಲಿ ಬಿಳಿ ಮೊಲವನ್ನು ಸಾಕಬಹುದಾಗಿದೆ. ಆದರೆ, ಕಾಡು ಮೊಲವನ್ನು ಸಾಕುವುದು ಕಾನೂನುಬಾಹಿರವಾಗಿದೆ.

ಭಾರತದ ಕೆಲವು ರೆಸ್ಟೋರೆಂಟ್‌ಗಳಲ್ಲಿ ಮೊಲದ ಮಾಂಸ ಸಿಗುತ್ತದೆ.. ಚೆಟ್ಟಿನಾಡ್ ಆಹಾರದಲ್ಲೂ ಮೊಲವನ್ನು ಕಾಣಬಹುದು. ಡಾಬಾ ಅಥವಾ ರಸ್ತೆಬದಿಯ ತಿನಿಸುಗಳು, ವಿಶೇಷವಾಗಿ ಹೈದರಾಬಾದ್‌ನ ಹೊರವಲಯದಲ್ಲಿ, ಸಾಮಾನ್ಯವಾಗಿ ಬಿರಿಯಾನಿ ಮತ್ತು ಮೊಲದ ಮಾಂಸದಿಂದ ಮಾಡಿದ ಇತರ ಭಕ್ಷ್ಯಗಳನ್ನು ಕಾಣಬಹುದಾಗಿದೆ.

ಮೊಲದ ತುಪ್ಪಳವನ್ನು ಮಫ್ಲರ್‌ಗಳು, ಟೋಪಿಗಳು, ಕ್ಯಾಪ್‌ಗಳು, ಕೋಟುಗಳು, ಉಡುಪುಗಳು, ಕೈಗವಸುಗಳು, ಪಾದರಕ್ಷೆಗಳು, ಕೈಚೀಲಗಳು, ಬ್ಯಾಗ್‌ಗಳು, ಪರ್ಸ್‌ಗಳು, ಟ್ರಿಮ್ಮಿಂಗ್‌ಗಳು, ಕುಶನ್ ಕವರ್‌ಗಳು, ರಗ್ಗುಗಳು, ಆಟಿಕೆಗಳು, ಆಭರಣಗಳು, ನಿಕ್‌ನಾಕ್‌ಗಳು ಇತ್ಯಾದಿಗಳಿಗೆ ಬಳಸಲಾಗುವುದು.

ಮೊಲದ ದೇಹದ ಭಾಗಗಳನ್ನು ಅಲೋಪತಿ, ಆಯುರ್ವೇದ ಮತ್ತು ಯುನಾನಿ ಔಷಧಿಗಳಲ್ಲಿ ಬಳಸಲಾಗುತ್ತದೆ. ಭಾರತದಲ್ಲಿ ಬುಡಕಟ್ಟು ಅಥವಾ ಜೆನೆರಿಕ್ ಔಷಧಿಗಳಲ್ಲಿ ಬಳಸಲಾಗುವ 200 ಪ್ರಾಣಿ ಮತ್ತು ಪಕ್ಷಿಗಳಲ್ಲಿ ಮೊಲವು ಒಂದಾಗಿದೆ.

ಇದನ್ನೂ ಓದಿ: ಆಟವಾಡುತ್ತಿದ್ದಾಗ ಮಕ್ಕಳ ಕೈಗೆ ಸಿಕ್ತು 1,000 ವರ್ಷಗಳಷ್ಟು ಹಳೆಯದಾದ ಈಳಂ ನಾಣ್ಯ: ಏನಿದರ ಐತಿಹಾಸಿಕ ವಿಶೇಷತೆಗಳು!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.