India WTC Scenario: ಬಾರ್ಡರ್ ಗವಾಸ್ಕರ್ ಟ್ರೋಫಿ ಭಾಗವಾಗಿ ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಟೆಸ್ಟ್ ಸರಣಿಯ ನಾಲ್ಕನೇ ಪಂದ್ಯದಲ್ಲಿ ಭಾರತ ತಂಡ 184 ರನ್‌ಗಳಿಂದ ಹೀನಾಯವಾಗಿ ಸೋಲನುಭವಿಸಿದೆ. ಭಾರತದ ಈ ಸೋಲು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (WTC) ಫೈನಲ್ ರೇಸ್ಗೂ ಹೊಡೆತ ನೀಡಿದೆ.
ಸಧ್ಯ ಭಾರತದ WTC ಫೈನಲ್ ಕನಸು ಜೀವಂತವಾಗಿದ್ದರೂ, ಅದು ಸುಲಭವಾಗಿಲ್ಲ. ಆಸ್ಟ್ರೇಲಿಯ ತಂಡಕ್ಕೆ ಫೈನಲ್ ತಲುಪಲು ಹೆಚ್ಚಿನ ಅವಕಾಶಗಳಿವೆ. ಸತತ ಎರಡು ಬಾರಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ತಲುಪಿರುವ ಭಾರತ ಮೂರನೇ ಬಾರಿಗೂ ಫೈನಲ್‌ಗೆ ಪ್ರವೇಶಿಸಲು ಒಂದೇ ಒಂದು ಮಾರ್ಗವಿದೆ. ಹಾಗಾದಲ್ಲಿ ಮಾತ್ರ ಭಾರತ ಫೈನಲ್‌ಗೆ ಪ್ರವೇಶ ಪಡೆಯಬಹುದಾಗಿದೆ.
ಸಧ್ಯ ದಕ್ಷಿಣ ಆಫ್ರಿಕಾ ಶೇ.66.67 ಅಂಕಗಳೊಂದಿಗೆ WTC ಫೈನಲ್ ಪ್ರವೇಶ ಪಡೆದಿದೆ. ಎರಡನೇ ಸ್ಥಾನಕ್ಕಾಗಿ ಆಸ್ಟ್ರೇಲಿಯಾ, ಭಾರತ ಮತ್ತು ಶ್ರೀಲಂಕಾ ಮಧ್ಯ ಪೈಪೋಟಿ ಏರ್ಪಟ್ಟಿದೆ. ಹಾಗಾದ್ರೆ WTC ಫೈನಲ್‌ಗೆ ತಲುಪಲು ಭಾರತಕ್ಕಿರುವ ಅವಕಾಶಗಳೇನು ಎಂದು ಇದೀಗ ತಿಳಿಯಿರಿ.
WTC ಫೈನಲ್‌ಗೆ ತಲುಪಲು ಭಾರತಕ್ಕಿರುವ ಅವಕಾಶಗಳೇನು?
- ಮುಂದಿನ ವರ್ಷ ನಡೆಯಲಿರುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ನೇರವಾಗಿ ಪ್ರವೇಶ ಪಡೆಯಲು ಭಾರತಕ್ಕೆ ಸಾಧ್ಯವಿಲ್ಲ. ಆದ್ರೆ ಶ್ರೀಲಂಕಾ ತಂಡದ ಅಂಕವನ್ನು ಅವಲಂಭಿಸಿ ಫೈನಲ್‌ಗೆ ಪ್ರವೇಶಿಸಬಹುದಾಗಿದೆ.
- ಜ.3ರಿಂದ ಸಿಡ್ನಿ ಮೈದಾನದಲ್ಲಿ ನಡೆಯಲಿರುವ ಆಸ್ಟ್ರೇಲಿಯಾ ವಿರುದ್ಧ ಭಾರತ 5ನೇ ಮತ್ತು ಅಂತಿಮ ಟೆಸ್ಟ್ ಪಂದ್ಯವನ್ನು ಗೆಲ್ಲಲೇಬೇಕು. ಒಂದು ವೇಳೆ ಪಂದ್ಯವನ್ನು ಸೋತರೇ ಅಥವಾ ಡ್ರಾ ಮಾಡಿಕೊಂಡರೇ WTC ಫೈನಲ್ ರೇಸ್ನಿಂದ ಭಾರತ ಅಧಿಕೃತವಾಗಿ ಹೊರಬೀಳಲಿದೆ.
- ಆಸೀಸ್ ವಿರುದ್ದ ಟೀಂ ಇಂಡಿಯಾ 4ನೇ ಪಂದ್ಯ ಗೆದ್ದರೆ, ಮುಂದಿನ ವರ್ಷ ಆಸ್ಟ್ರೇಲಿಯಾ ವಿರುದ್ದ ನಡೆಯಲಿರುವ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಶ್ರೀಲಂಕಾ 2-0 ಅಂತರದಲ್ಲಿ ಗೆಲುವು ಸಾಧಿಸಬೇಕು. ಆಗ ಭಾರತದ ಶೇಕಡವಾರು ಅಂಕ 55.26 ಆಗಲಿದೆ. ಆಸ್ಟ್ರೇಲಿಯಾ ಶೇ.53.51ಕ್ಕೆ ಕುಸಿಯಲಿದೆ. ಮತ್ತು ಶ್ರೀಲಂಕಾ 53.85 ಪ್ರತಿಶತ ಅಂಕ ಪಡೆಯಲಿದೆ. ಹೀಗಾದ್ರೆ ಭಾರತ ಫೈನಲ್‌ಗೆ ಪ್ರವೇಶ ಪಡೆಯಲಿದೆ.
- ಒಂದು ವೇಳೆ ಶ್ರೀಲಂಕಾ ಮತ್ತು ಆಸ್ಟ್ರೇಲಿಯಾ ನಡುವಿ ಟೆಸ್ಟ್ ಸರಣಿಯ ಎರಡೂ ಪಂದ್ಯಗಳು ಡ್ರಾ ಗೊಂಡರೆ, ಶೇಕಡವಾರು ಅಂಕ ಆಧಾರದ ಮೇಲೆ ಮೂರಲ್ಲಿ (ಭಾರತ, ಆಸ್ಟ್ರೇಲಿಯಾ, ಶ್ರೀಲಂಕಾ) ಒಂದು ತಂಡ ಫೈನಲ್‌ಗೆ ಪ್ರವೇಶ ಪಡೆಯಲಿದೆ.
- ಬಾರ್ಡರ್ ಗವಾಸ್ಕರ್ ಟ್ರೋಫಿಯಲ್ಲಿ ಭಾರತ ಕೊನೆಯ ಟೆಸ್ಟ್ ಪಂದ್ಯ ಗೆದ್ದರೂ, ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಆಸ್ಟ್ರೇಲಿಯಾ ಒಂದೇ ಒಂದು ಪಂದ್ಯ ಜಯಿಸಿದರೇ ಭಾರತದ ಫೈನಲ್ ಕನಸು ಭಗ್ನವಾಗಲಿದೆ.
ಇದನ್ನೂ ಓದಿ: ಟೆಸ್ಟ್ ಕ್ರಿಕೆಟ್ನಲ್ಲಿ ಅತ್ಯಂತ ವೇಗದ/ನಿಧಾನಗತಿಯ ಶತಕ-ಅರ್ಧಶತಕ ಸಿಡಿಸಿದ ಆಟಗಾರರು ಇವರೇ!