ETV Bharat / bharat

'ಒಂದೇ ದಿನ ಶಾಸಕರಾಗಿದ್ದರೂ ನಿವೃತ್ತಿ ಸೌಲಭ್ಯ': ಮಸೂದೆ ಮಂಡನೆಗೆ ತ್ರಿಪುರಾ ಸರ್ಕಾರದ ನಿರ್ಧಾರ - RETIREMENT BENEFITS TO MLAS

ಒಂದೇ ದಿನ ಶಾಸಕರಾಗಿದ್ದರೂ ಅವರಿಗೆ ಎಲ್ಲಾ ನಿವೃತ್ತಿ ಸೌಲಭ್ಯಗಳನ್ನು ಒದಗಿಸಲು ತ್ರಿಪುರಾ ಸರ್ಕಾರ ನಿರ್ಧರಿಸಿದೆ.

ತ್ರಿಪುರಾ ವಿಧಾನಸಭೆ
ತ್ರಿಪುರಾ ವಿಧಾನಸಭೆ (IANS)
author img

By IANS

Published : Jan 2, 2025, 4:45 PM IST

ಅಗರ್ತಲಾ: ಒಂದೇ ಒಂದು ದಿನ ಶಾಸಕರಾಗಿದ್ದರೂ ಅವರಿಗೆ ನಿವೃತ್ತಿ ವೇತನದ ಸೌಲಭ್ಯ ಒದಗಿಸಲು ತ್ರಿಪುರಾ ಸರ್ಕಾರ ಮುಂದಾಗಿದೆ. ಇದಕ್ಕಾಗಿ ಹಾಲಿ ಇರುವ ಕಾನೂನಿಗೆ ತಿದ್ದುಪಡಿ ತರುವ ಮಸೂದೆಯನ್ನು ತ್ರಿಪುರಾ ವಿಧಾನಸಭೆಯ ಚಳಿಗಾಲದ ಅಧಿವೇಶನದಲ್ಲಿ ಮಂಡಿಸಲಾಗುವುದು ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ. ತ್ರಿಪುರಾ ವಿಧಾನಸಭೆಯ ಮೂರು ದಿನಗಳ ಚಳಿಗಾಲದ ಅಧಿವೇಶನ ಜನವರಿ 10 ರಿಂದ ಪ್ರಾರಂಭವಾಗಲಿದೆ.

ವಿಧಾನಸಭೆಯ ಸದಸ್ಯರೊಬ್ಬರು ಪ್ರಮಾಣವಚನ ಸ್ವೀಕರಿಸಿ ಶಾಸಕರಾಗಿ ಒಂದು ದಿನ ಸೇವೆ ಸಲ್ಲಿಸಿದ್ದರೂ ಸಾಕು ಅವರು ಪಿಂಚಣಿ ಮತ್ತು ಗೃಹ ಸಾಲ ಸೇರಿದಂತೆ ಎಲ್ಲ ನಿವೃತ್ತಿ ಪ್ರಯೋಜನಗಳನ್ನು ಪಡೆಯಲಿದ್ದಾರೆ ಎಂದು ವಿಧಾನಸಭೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ಹಿಂದಿನ ತಿದ್ದುಪಡಿಯಂತೆ ನಿವೃತ್ತಿ ಸೌಲಭ್ಯಕ್ಕೆ 4.5 ವರ್ಷಗಳ ಸೇವೆ ಕಡ್ಡಾಯ: ಸಚಿವರು, ಸ್ಪೀಕರ್, ಉಪ ಸ್ಪೀಕರ್, ವಿರೋಧ ಪಕ್ಷದ ನಾಯಕ, ಮುಖ್ಯ ಸಚೇತಕ ಮತ್ತು ಶಾಸಕರ ವೇತನ, ಭತ್ಯೆ, ಪಿಂಚಣಿ ಮತ್ತು ಇತರ ಪ್ರಯೋಜನಗಳ 2022 ರ ಈ ಹಿಂದಿನ ತಿದ್ದುಪಡಿ ಪ್ರಕಾರ, ಪಿಂಚಣಿ ಸೇರಿದಂತೆ ನಿವೃತ್ತಿ ಪ್ರಯೋಜನಗಳನ್ನು ಪಡೆಯಬೇಕಾದರೆ ಶಾಸಕರು ಕನಿಷ್ಠ ನಾಲ್ಕೂವರೆ ವರ್ಷಗಳ ಕಾಲ ಸದನದ ಸದಸ್ಯರಾಗಿ ಸೇವೆ ಸಲ್ಲಿಸಿರಬೇಕಿದೆ.

ಈಗ ಹೊಸ ಪ್ರಸ್ತಾವಿತ ಮಸೂದೆ ಅಡಿ ಸಚಿವರು, ಹಾಲಿ ಶಾಸಕರು ಮತ್ತು ಮಾಜಿ ಶಾಸಕರ ವೇತನ, ಭತ್ಯೆಗಳು, ಪಿಂಚಣಿ ಮತ್ತು ಕುಟುಂಬ ಪಿಂಚಣಿಗಳನ್ನು ಹೆಚ್ಚಿಸಲಾಗುವುದು ಎಂದು ಅಧಿಕಾರಿ ಐಎಎನ್ಎಸ್​ಗೆ ತಿಳಿಸಿದ್ದಾರೆ.

ಅಸ್ತಿತ್ವದಲ್ಲಿರುವ ಕಾನೂನು ಮಾರ್ಪಡಿಸುವ ತಿದ್ದುಪಡಿ ವಿಧೇಯಕ: ಶಾಸಕರಿಗೆ ನಿವೃತ್ತಿ ಪ್ರಯೋಜನಗಳನ್ನು ಒದಗಿಸಲು ಅಸ್ತಿತ್ವದಲ್ಲಿರುವ ಕಾನೂನನ್ನು ಮಾರ್ಪಡಿಸುವ ತಿದ್ದುಪಡಿ ಮಸೂದೆ ಸೇರಿದಂತೆ ಮೂರು ಪ್ರಮುಖ ಮಸೂದೆಗಳನ್ನು ಮಂಡಿಸಲಾಗುವುದು ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ರತನ್ ಲಾಲ್ ನಾಥ್ ಹೇಳಿದ್ದಾರೆ. ಬುಧವಾರ ನಡೆದ ಕಲಾಪ ಸಲಹಾ ಸಮಿತಿ (ಬಿಎಸಿ) ಸಭೆಯಲ್ಲಿ ಜನವರಿ 10 ರಿಂದ ಮೂರು ದಿನಗಳ ಚಳಿಗಾಲದ ಅಧಿವೇಶನವನ್ನು ನಡೆಸಲು ಸರ್ವಾನುಮತದಿಂದ ನಿರ್ಧರಿಸಲಾಗಿದೆ ಎಂದು ಅವರು ಹೇಳಿದರು.

ಮೂರು ದಿನಗಳ ವಿಧಾನಸಭಾ ಅಧಿವೇಶನವು ಖಾಸಗಿ ಸದಸ್ಯರ ನಿರ್ಣಯಗಳು, ಮೂರು ಮಸೂದೆಗಳ ಮಂಡನೆ ಮತ್ತು ಚರ್ಚೆಯನ್ನು ಒಳಗೊಂಡಿರುತ್ತದೆ ಎಂದು ನಾಥ್ ತಿಳಿಸಿದರು. ಅಧಿವೇಶನದ ಮೊದಲ ದಿನವಾದ ಜನವರಿ 10 ರಂದು ರಾಜ್ಯಪಾಲ ಇಂದ್ರಸೇನಾ ರೆಡ್ಡಿ ನಲ್ಲು ಅವರು ಸದನವನ್ನುದ್ದೇಶಿಸಿ ತಮ್ಮ ಸಾಂಪ್ರದಾಯಿಕ ಭಾಷಣ ಮಾಡಲಿದ್ದಾರೆ. ರಾಜ್ಯಪಾಲರು ತಮ್ಮ ಭಾಷಣದಲ್ಲಿ ರಾಜ್ಯ ಸರ್ಕಾರದ ಕಾರ್ಯಕ್ಷಮತೆ ಮತ್ತು ದೃಷ್ಟಿಕೋನವನ್ನು ಉಲ್ಲೇಖಿಸಲಿದ್ದಾರೆ ಎಂದು ಸಚಿವರು ಮಾಧ್ಯಮಗಳಿಗೆ ತಿಳಿಸಿದರು.

ಇದನ್ನೂ ಓದಿ : ಗೋವಾ ಮೂಲದ ರಾಜೇಂದ್ರ ಅರ್ಲೇಕರ್ ಕೇರಳ ರಾಜ್ಯಪಾಲರಾಗಿ ಅಧಿಕಾರ ಸ್ವೀಕಾರ - GOVERNOR OF KERALA

ETV Bharat Logo

Copyright © 2025 Ushodaya Enterprises Pvt. Ltd., All Rights Reserved.