ETV Bharat / state

ಗಮನ ಸೆಳೆಯುತ್ತಿವೆ ಓಲ್ಡ್ ಮ್ಯಾನ್ ಪ್ರತಿಕೃತಿಗಳು: ಬೆಳಗಾವಿಯಲ್ಲಿ ವಿಭಿನ್ನ ಹೊಸ ವರ್ಷಾಚರಣೆ - OLD MAN EFFIGIES

ಕುಂದಾನಗರಿ ಬೆಳಗಾವಿಯಲ್ಲೂ‌ ಹೊಸ ವರ್ಷವನ್ನು ಸಂಭ್ರಮದಿಂದ ಬರಮಾಡಿಕೊಳ್ಳಲು‌ ಸಿದ್ಧತೆ ನಡೆದಿದೆ. "ಓಲ್ಡ್ ಮ್ಯಾನ್" ಪ್ರತಿಕೃತಿ ದಹಿಸಿ ಸಂಭ್ರಮಿಸುವ ಸಂಸ್ಕೃತಿ ಇಲ್ಲಿನ‌ ವಿಶೇಷತೆ.

old-man-effigies
ಓಲ್ಡ್ ಮ್ಯಾನ್ ಪ್ರತಿಕೃತಿಗಳು (ETV Bharat)
author img

By ETV Bharat Karnataka Team

Published : Dec 31, 2024, 10:24 PM IST

Updated : Dec 31, 2024, 10:42 PM IST

ಬೆಳಗಾವಿ: ಬೆಳಗಾವಿ ಎಲ್ಲ ಹಬ್ಬ-ಹರಿದಿನ, ಉತ್ಸವಗಳನ್ನು ವಿಜೃಂಭಣೆಯಿಂದ ಆಚರಿಸುವ ಅದ್ಧೂರಿ ನಗರಿ. ವಿವಿಧ ಭಾಷೆ, ಜನಾಂಗ, ಸಂಸ್ಕೃತಿಗಳು ಮೇಳೈಸಿರುವ ವಿಶಿಷ್ಟ ನಗರಿ. ಬೇರೆ ಜಿಲ್ಲೆ, ಹೊರರಾಜ್ಯ ಮಾತ್ರವಲ್ಲದೇ ವಿದೇಶಗಳಿಂದ ಬಂದವರು ಇಲ್ಲಿ ನೆಲೆಸಿದ್ದಾರೆ. ಕಾಲೇಜು ವ್ಯಾಸಂಗಕ್ಕಾಗಿ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಇಲ್ಲಿದ್ದಾರೆ. ಎಲ್ಲರ ಸಂಸ್ಕೃತಿಯೂ ಸೇರಿ ವಿಶೇಷ ಮತ್ತು ವಿಭಿನ್ನವಾದ ಸಂಸ್ಕೃತಿಯ ಆಚರಣೆಗಳನ್ನು ಇಲ್ಲಿ ಕಾಣಬಹುದು.

ಹಿಂದಿನ ವರ್ಷದ ಕಹಿ ನೆನಪುಗಳನ್ನು "ಓಲ್ಡ್‌ಮ್ಯಾನ್‌" ರೂಪದಲ್ಲಿ ಸುಟ್ಟು ಹಾಕಿ ಇಲ್ಲಿನ ಜನರು ವಿಶಿಷ್ಟ ರೀತಿಯಲ್ಲಿ ಹೊಸ ವರ್ಷವನ್ನು ಸ್ವಾಗತಿಸಿ, ಸಂಭ್ರಮಿಸುತ್ತಾರೆ. ನಗರದ ಕ್ಯಾಂಪ್ ಪ್ರದೇಶದಲ್ಲಿ "ಓಲ್ಡ್ ಮ್ಯಾನ್" ಪ್ರತಿಕೃತಿಗಳನ್ನು ತಯಾರಿಸುವಲ್ಲಿ ಕಲಾವಿದರು‌‌ ನಿರತರಾಗಿದ್ದು, ಅವುಗಳಿಗೆ ಬಣ್ಣ ಬಳಿಯುವುದು‌ ಸೇರಿ ಅಂತಿಮ‌ ಸ್ಪರ್ಶ ನೀಡುತ್ತಿದ್ದಾರೆ.

ಕಲಾವಿದ ಪ್ರತೀಕ ಪವಾರ ಹಾಗೂ ಪ್ರಭಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ ಮಾತನಾಡಿದರು. (ETV Bharat)

ಮಧ್ಯರಾತ್ರಿ ಓಲ್ಡ್ ಮ್ಯಾನ್ ದಹನ: ಹಳೆ ವರ್ಷದ ಕಹಿ ಘಟನೆಗಳು, ಕಾಮ-ಕ್ರೋಧ-ಮದ-ಮತ್ಸರಗಳನ್ನು ಓಲ್ಡ್ ಮ್ಯಾನ್ ರೂಪದಲ್ಲಿ ಸುಟ್ಟು ಹಾಕುವ ಯುವಕರು, ಮಕ್ಕಳು ಹೊಸ ವರ್ಷವನ್ನು ಸ್ವಾಗತಿಸುತ್ತಾರೆ. ಬೆಳಗಾವಿ ಗಲ್ಲಿ ಗಲ್ಲಿಯಲ್ಲಿ ಮಧ್ಯರಾತ್ರಿ‌ 12 ಗಂಟೆಯಾಗುತ್ತಿದ್ದಂತೆ ಈ ಪ್ರತಿಕೃತಿಗಳನ್ನು ದಹನ ಮಾಡಿ, ಕೇಕ್ ಕತ್ತರಿಸಿ, ಪಟಾಕಿ ಸಿಡಿಸಿ ಸಂಭ್ರಮಿಸಲಿದ್ದಾರೆ.

ಕ್ಯಾಂಪ್ ಪ್ರದೇಶದ ಕಲಾವಿದ ಅಮಿತ್ ಕಾಂಬಳೆ ಅವರು ತಯಾರಿಸಿರುವ ಚಿನ್ ಡಬಾಕ್ ಡಬ್ ಡಬ್ ಕಾರ್ಟೂನ್, ಮೊಟು-ಪಟ್ಲು, ವಿಲನ್,‌ ಭಯೋತ್ಪಾದಕ, ರಾಕ್ಷಸ ಪ್ರತಿಕೃತಿಗಳು ಸೇರಿ ನಾನಾ ರೀತಿ ಓಲ್ಡ್ ಮ್ಯಾನ್​ಗಳು ಗಮನ ಸೆಳೆಯುತ್ತಿವೆ. ಇವರ ಬಳಿ‌ 5 ರಿಂದ 20 ಅಡಿ ಎತ್ತರದವರೆಗೆ 500 ರೂ.ನಿಂದ 10 ಸಾವಿರ ರೂ.ವರೆಗೆ ಓಲ್ಡ್ ಮ್ಯಾನ್​ಗಳಿವೆ.

ಕಲಾವಿದ ಪ್ರತೀಕ ಪವಾರ ಅವರು ಮಾತನಾಡಿ, ''ನಮ್ಮ ಅಜ್ಜ‌ನ ಕಾಲದಿಂದಲೂ ಇದೇ ಕಾಯಕ ಮಾಡುತ್ತೇವೆ. ಅಜ್ಜನಿಂದ ನಮ್ಮ ತಂದೆ, ಮಾವ ಈ ವೃತ್ತಿ ಮುಂದುವರೆಸಿದ್ದಾರೆ. ಅವರಿಂದ ನಾನು ಕಲಿತು ಇದೇ ಕಾಯಕದಲ್ಲಿ ತೊಡಗಿದ್ದೇನೆ.‌ ಜನರು ಇಷ್ಟಪಟ್ಟು ಖರೀದಿಸುತ್ತಿದ್ದಾರೆ. ತುಂಬಾ ಖುಷಿಯಾಗುತ್ತಿದೆ'' ಎಂದು ಹೇಳಿದರು.

old-man-effigies
ಹೊಸ ವರ್ಷಾಚರಣೆಯ ಸ್ವಾಗತಕ್ಕೆ ಸಿದ್ದಗೊಂಡಿರುವ ಓಲ್ಡ್ ಮ್ಯಾನ್ ಪ್ರತಿಕೃತಿಗಳು (ETV Bharat)

''ಇಡೀ ಕುಟುಂಬದವರು ಈ ಕೆಲಸದಲ್ಲಿ ತೊಡಗಿದ್ದೇವೆ. ದೊಡ್ಡ ಪ್ರತಿಕೃತಿಗೆ 4 ರಿಂದ 5 ದಿನ, ಚಿಕ್ಕ ಪ್ರತಿಕೃತಿಗೆ 2 ದಿನ ಸಾಕು. ಜನರ ಆರ್ಡರ್​ಗೆ ತಕ್ಕಂತೆ ಪ್ರತಿಕೃತಿಯನ್ನ ತಯಾರಿಸುತ್ತೇವೆ. ಈ ವರ್ಷ ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರು ನಿಧನರಾದ ಹಿನ್ನೆಲೆ ಸ್ವಲ್ಪ ಆರ್ಡರ್ ಕಮ್ಮಿ ಇದೆ'' ಎಂದರು.

ಮಣಿಕಂಠ ಹಿರೇಮಠ ಮಾತನಾಡಿ, "ಕಹಿ ಘಟನೆಗಳನ್ನು ಮರೆತು, ಹೊಸ ನೆನಪುಗಳನ್ನ ಹುಟ್ಟುಹಾಕಲು ಪ್ರತಿ ವರ್ಷವೂ‌ ಮಧ್ಯರಾತ್ರಿ‌ 12ಕ್ಕೆ ಓಲ್ಡ್ ಮ್ಯಾನ್ ಸುಟ್ಟು ಹೊಸ ವರ್ಷ ಆಚರಿಸುತ್ತೇವೆ" ಎಂದು ಹೇಳಿದರು.

ಕೆಲವೊಂದಿಷ್ಟು ಜನರು ಮನೆ ಮುಂದೆ ಓಲ್ಡ್ ಮ್ಯಾನ್ ದಹಿಸಿ ಸಂಭ್ರಮಿಸಿದರೆ, ಹೋಟೆಲ್-ರೆಸಾರ್ಟ್‌ಗಳಲ್ಲಿ ಮಧ್ಯರಾತ್ರಿ ಹೊಸ ವರ್ಷಾಚರಣೆಗೆ ಯುವಕರ ಪಡೆ ಸಿದ್ಧತೆ ನಡೆಸಿದೆ. ಈಗಾಗಲೇ ಬುಕ್ಕಿಂಗ್ ಪ್ರಕ್ರಿಯೆ ನಡೆದಿದೆ. ಒಟ್ಟಾರೆ ಅದ್ಧೂರಿ ಆಚರಣೆಗೆ ಸರ್ವ ರೀತಿಯಲ್ಲೂ ಕುಂದಾನಗರಿ ಸನ್ನದ್ಧಗೊಂಡಿದೆ.

ಪ್ರಭಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ ಮಾತನಾಡಿ, "ಜಿಲ್ಲೆಯಾದ್ಯಂತ 45 ಚೆಕ್‌ಪೋಸ್ಟ್ ರಚಿಸಿದ್ದೇವೆ. 5 ಕೆಎಸ್ಆರ್​ಪಿ ತುಕಡಿಗಳು, 10 ಡಿಎಆರ್ ತುಕಡಿಗಳು, 5 ಡಿಎಸ್​ಪಿ, 15 ಇನ್ಸ್​ಪೆಕ್ಟರ್, 55 ಸಬ್ ಇನ್​​ಸ್ಪೆಕ್ಟರ್ ಸೇರಿ 1 ಸಾವಿರಕ್ಕೂ ಅಧಿಕ ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗಿದೆ. ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಕ್ರಮವಹಿಸಿದ್ದೇವೆ. ನಿನ್ನೆ ಒಂದೇ ದಿನ 80 ಡ್ರಂಕ್ ಆ್ಯಂಡ್ ಡ್ರೈವ್ ಕೇಸ್​ ದಾಖಲು ಮಾಡಿಕೊಂಡಿದ್ದೇವೆ. ಯಾರಿಗಾದರೂ ತೊಂದರೆ ಕೊಟ್ಟರೆ ಅವರಿಗೆ ಕಠಿಣವಾದ ಕ್ರಮ ತೆಗೆದುಕೊಳ್ಳುತ್ತೇವೆ" ಎಂದರು.

old-man-effigies
ಓಲ್ಡ್ ಮ್ಯಾನ್ ಪ್ರತಿಕೃತಿಗಳು ಕಂಡುಬಂದಿದ್ದು ಹೀಗೆ (ETV Bharat)

"ಜಿಲ್ಲೆಯಲ್ಲಿರುವ ರೆಸಾರ್ಟ್​ನವರು ಹೊಸ ವರ್ಷ ಆಚರಣೆಗೆ ಅನುಮತಿ ಪಡೆದಿರಬೇಕು. ಅಲ್ಲಿಗೆ ಬರುವ ಜನರಿಗೆ ಪಾರ್ಕಿಂಗ್ ವ್ಯವಸ್ಥೆ ಹಾಗೂ ಎಂಜಾಯ್​ಮೆಂಟ್ ಸ್ಥಳದಲ್ಲಿ ಸಿಸಿಟಿವಿ ಅಳವಡಿಸಿಕೊಂಡಿರಬೇಕು. ಅಶಾಂತಿ ಮೂಡಿಸುವವರಿಗೆ ಕಾನೂನಿನ ಅಡಿಯಲ್ಲಿ ಕಠಿಣ ಕ್ರಮ ಕೈಗೊಳ್ಳುತ್ತೇವೆ" ಎಂದು ಹೇಳಿದರು.

ಇದನ್ನೂ ಓದಿ: ಕುಂದಾನಗರಿ ಬೆಳಗಾವಿಯಲ್ಲಿ ಹೊಸ ವರ್ಷಾಚರಣೆಗೆ ಕ್ಷಣಗಣನೆ; ಗಮನ ಸೆಳೆದ ಓಲ್ಡ್ ಮ್ಯಾನ್​​ - ಕುಂದಾನಗರಿ ಬೆಳಗಾವಿ

Last Updated : Dec 31, 2024, 10:42 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.