ETV Bharat / entertainment

ಸೈಫ್ ಅಲಿ ಖಾನ್ ಮೇಲೆ ಚಾಕು ಇರಿತ: ಛತ್ತೀಸ್‌ಗಢದಲ್ಲಿ ಆರೋಪಿ ವಶಕ್ಕೆ! - SAIF CASE SUSPECT DETAINED

ಜನಪ್ರಿಯ ನಟ ಸೈಫ್ ಅಲಿ ಖಾನ್ ಮೇಲೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ರೈಲ್ವೆ ರಕ್ಷಣಾ ಪಡೆ (ಆರ್‌ಪಿಎಫ್) ಛತ್ತೀಸ್‌ಗಢದಲ್ಲಿ ಶಂಕಿತನನ್ನು ವಶಕ್ಕೆ ಪಡೆದಿದೆ.

Saif case Suspect Detained
ಸೈಫ್ ಪ್ರಕರಣ ಆರೋಪಿ ಅರೆಸ್ಟ್ (Photo: ANI, ETV Bharat)
author img

By ETV Bharat Entertainment Team

Published : Jan 18, 2025, 7:05 PM IST

ದುರ್ಗ್​​ (ಛತ್ತೀಸ್‌ಗಢ): ಬಾಲಿವುಡ್​ನ ಅತ್ಯಂತ ಜನಪ್ರಿಯ ನಟ ಸೈಫ್ ಅಲಿ ಖಾನ್ ಮೇಲೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ರೈಲ್ವೆ ರಕ್ಷಣಾ ಪಡೆ (ಆರ್‌ಪಿಎಫ್) ಛತ್ತೀಸ್‌ಗಢದಲ್ಲಿ ಶಂಕಿತನನ್ನು ವಶಕ್ಕೆ ಪಡೆದಿದೆ. ಮುಂಬೈನ ಬಾಂದ್ರಾದಲ್ಲಿರುವ ನಟ ಸೈಫ್ ಅಲಿ ಖಾನ್ ನಿವಾಸದಲ್ಲಿ ಗುರುವಾರ ಮುಂಜಾನೆ ಹಲ್ಲೆ ಘಟನೆ ನಡೆದಿದ್ದು, ಮನೆಯೊಳಗೆ ನುಗ್ಗಿದ ವ್ಯಕ್ತಿ ಚಾಕುವಿನಿಂದ ಆರು ಬಾರಿ ಇರಿದ ಪರಿಣಾಮ ನಟ ಗಂಭೀರವಾಗಿ ಗಾಯಗೊಂಡಿದ್ದರು. ಇದೀಗ ನಟನ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ.

ಇಂದು ದುರ್ಗ್ ರೈಲು ನಿಲ್ದಾಣದಲ್ಲಿ ಸಂದೀಪ್ ಅಲಿಯಾಸ್ ಆಕಾಶ್ ಎಂಬ ಶಂಕಿತನನ್ನು ಬಂಧಿಸಲಾಗಿದೆ. ಮುಂಬೈ ಪೊಲೀಸರು ಹಂಚಿಕೊಂಡ ಸುಳಿವು ಮತ್ತು ಫೋಟೋದ ಸಹಾಯದ ಮೇರೆಗೆ ಆರ್‌ಪಿಎಫ್ ಮುಂಬೈ - ಹೌರಾ ಜ್ಞಾನೇಶ್ವರಿ ಎಕ್ಸ್‌ಪ್ರೆಸ್​ಲ್ಲಿ ಆರೋಪಿಯ ಪತ್ತೆಗೆ ಕ್ರಮ ಕೈಗೊಂಡರು. ರೈಲಿನ ಜನರಲ್​ ಕಂಪಾರ್ಟ್​​ಮೆಂಟ್​ನಲ್ಲಿ ಪ್ರಯಾಣಿಸುತ್ತಿದ್ದ ಶಂಕಿತನನ್ನು, ರೈಲು ದುರ್ಗ್‌ಗೆ ಬಂದಾಗ ಮಧ್ಯಾಹ್ನ 2 ಗಂಟೆ ಸುಮಾರಿಗೆ ವಶಕ್ಕೆ ಪಡೆಯಲಾಯಿತು.

ಶಂಕಿತನ ಫೋಟೋ, ರೈಲು ಸಂಖ್ಯೆ ಮತ್ತು ಅವನು ಇರಬಹುದಾದ ಸ್ಥಳಗಳು (ಸಾಧ್ಯತೆ) ಸೇರಿದಂತೆ ನಿರ್ದಿಷ್ಟ ವಿವರಗಳನ್ನು ಮುಂಬೈ ಪೊಲೀಸರು ಒದಗಿಸಿದ್ದರು ಎಂದು ಆರ್‌ಪಿಎಫ್ ಮೂಲಗಳು ಬಹಿರಂಗಪಡಿಸಿವೆ. ಇವುಗಳ ಸಹಾಯದಿಂದ ಶಂಕಿತ ಆಗಮನ ಸಾಧ್ಯತೆ ಬಗ್ಗೆ ಯೋಚಿಸಿ, ಆರ್‌ಪಿಎಫ್ ಅಧಿಕಾರಿಗಳು ಪ್ಲಾಟ್‌ಫಾರ್ಮ್ ಸಂಖ್ಯೆ 2ರಲ್ಲಿ ಕಾರ್ಯಪ್ರವೃತ್ತರಾದರು. ಫೈನಲಿ, ಶಂಕಿತನನ್ನು ಬಂಧಿಸುವಲ್ಲಿ ಯಶಸ್ವಿಯಾದರು. ಶಂಕಿತ ಪ್ರಸ್ತುತ ಆರ್‌ಪಿಎಫ್ ವಶದಲ್ಲಿದ್ದು, ವಿಚಾರಣೆ ನಡೆಯುತ್ತಿದೆ.

ಇದನ್ನೂ ಓದಿ: ಸೈಫ್ ಮೇಲೆ ಹಲ್ಲೆ ನಡೆಸಿದ ನಂತರ ಇಯರ್‌ಫೋನ್‌ಗಳನ್ನು ಖರೀದಿಸಿದ ಶಂಕಿತ; ಸಿಸಿಟಿವಿ ದೃಶ್ಯ ಸಂಗ್ರಹಿಸಿದ ಪೊಲೀಸರು

ಶಂಕಿತನ ಗುರುತು ಮತ್ತು ಪ್ರಕರಣದಲ್ಲಿ ಅವನ ಭಾಗಿಯಾಗಿರುವಿಕೆಯನ್ನು ಖಚಿತಪಡಿಸಲು ಮುಂಬೈ ಪೊಲೀಸರ ತಂಡ ಇಂದು ರಾತ್ರಿ 9 ಗಂಟೆಯ ವೇಳೆಗೆ ದುರ್ಗ್‌ಗೆ ಆಗಮಿಸುವ ನಿರೀಕ್ಷೆ ಇದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ 30 ಪೊಲೀಸ್​ ತಂಡಗಳು ಕಾರ್ಯಪ್ರವೃತ್ತವಾಗಿದೆ.

ಇದನ್ನೂ ಓದಿ: ಸೈಫ್ ಅಲಿ ಖಾನ್ ಇರಿತ ಪ್ರಕರಣ​: ದಾಳಿಕೋರನ ಕೃತ್ಯದ ಬಗ್ಗೆ ಕರೀನಾ ಹೇಳಿದ್ದಿಷ್ಟು

ಗುರುವಾರ ಮುಂಜಾನೆ (ಬುಧವಾರ ಮಧ್ಯರಾತ್ರಿ) 54ರ ಹರೆಯದ ಬಾಲಿವುಡ್​ ಸೂಪರ್​ ಸ್ಟಾರ್ ಸೈಫ್ ಅಲಿ ಖಾನ್ ಅವರ ಮನೆಗೆ ನುಗ್ಗಿದ ಅಪರಿಚಿತ ಅವರ ಮೇಲೆ ಹಲ್ಲೆ ನಡೆಸಿದ್ದನು. ಚಾಕುವಿನಿಂದ 6 ಬಾರಿ ಇರಿದಿದ್ದನು ಬೆನ್ನುಮೂಳೆ ಮತ್ತು ಕುತ್ತಿಗೆಯ ಬಳಿ ಗಂಭೀರ ಗಾಯಗಳು ಸೇರಿದಂತೆ ದೇಹದಲ್ಲಿ ಹಲವು ಇರಿತಗಳಾಗಿವೆ. ನಂತರ ಅವರನ್ನು ಆಟೋರಿಕ್ಷಾದಲ್ಲಿ ಲೀಲಾವತಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ವೈದ್ಯರು ಐದು ಗಂಟೆಗಳ ತುರ್ತು ಶಸ್ತ್ರಚಿಕಿತ್ಸೆ ನಡೆಸಿ ಅವರ ಬೆನ್ನುಮೂಳೆಯಿಂದ 2.5 ಇಂಚಿನ ಬ್ಲೇಡ್ ತುಂಡನ್ನು ಹೊರ ತೆಗಗೆದರು. ನಟ ಪ್ರಸ್ತುತ ಚೇತರಿಸಿಕೊಳ್ಳುತ್ತಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.