ETV Bharat / state

ಮಕ್ಕಳನ್ನು ಪಡೆದು ಅವರಲ್ಲಿ ಸಂಸ್ಕಾರ ಬೆಳಸಲಿಲ್ಲವೆಂದರೆ ಉಪಯೋಗವಿಲ್ಲ: ವಿಧುಶೇಖರ ಭಾರತೀ ಸ್ವಾಮೀಜಿ - VIDHUSEKHARA BHARATI SWAMIJI

ಬ್ರಾಹ್ಮಣ ಸಮುದಾಯದಲ್ಲಿ ವಿವಾಹ ವಿಚ್ಛೇದನ ಸಮಸ್ಯೆ ಹೆಚ್ಚಾಗಿದೆ ಎಂದು ಸೋಂದಾ ಸ್ವರ್ಣವಲ್ಲೀ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಹೇಳಿದರು.

Brahmin Maha Sammelan
ಬ್ರಾಹ್ಮಣ ಮಹಾ ಸಮ್ಮೇಳನ (ETV Bharat)
author img

By ETV Bharat Karnataka Team

Published : Jan 18, 2025, 10:58 PM IST

ಬೆಂಗಳೂರು: ವಂಶವೃದ್ಧಿ ಎಂಬುದು ಆಗಬೇಕು. ಆದರೆ ಹಲವರಿಗೆ ಮಕ್ಕಳಿದ್ದು ಅವರಲ್ಲಿ ಸಂಸ್ಕಾರವಿಲ್ಲ ಎಂದರೆ ಉಪಯೋಗವಿಲ್ಲ. ಇರುವಂತಹ ಮಕ್ಕಳಿಗೆ ಸಂಸ್ಕಾರ ಕೊಡುವ ಪ್ರಯತ್ನ ಎಲ್ಲರೂ ಮಾಡಬೇಕು ಎಂದು ಶೃಂಗೇರಿ ಶಾರದಾಪೀಠಾಧೀಶ್ವರ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಸಲಹೆ ನೀಡಿದರು.

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಬೆಂಗಳೂರಿನ ಅರಮನೆ ಮೈದಾನದಲ್ಲಿ ಹಮ್ಮಿಕೊಂಡಿರುವ ಬ್ರಾಹ್ಮಣ ಮಹಾ ಸಮ್ಮೇಳನದ ಸುವರ್ಣ ಸಂಭ್ರಮ ಸಮಾರಂಭದಲ್ಲಿ ಆಶಿರ್ವಚನ ನೀಡಿ ಮಾತಾನಾಡಿದರು. ಎಲ್ಲರಿಗೂ ಸುಮಾರು ಜನ ಮಕ್ಕಳು ಹುಟ್ಟಲಿ ಎಂದು ಅಪ್ಪಣೆ ಮಾಡಿ ಎಂದು ಇತ್ತೀಚೆಗೆ ನಮ್ಮ ಬಳಿ ಬಂದಿದ್ದವರೊಬ್ಬರು ಹೇಳಿದ್ದರು. ಅದಕ್ಕೆ ನಾನು ಸಂತಾನ ಆಗಬೇಕು ಎಂದು ಹೇಳುತ್ತೇನೆ. ಅದಕ್ಕಿಂತ ಮುಖ್ಯವಾಗಿ ಇರುವಂತಹ ಸಂತಾನಕ್ಕೆ ಸಂಸ್ಕಾರ ಕೊಡಿ ಎಂದು ಒತ್ತಿ ಹೇಳುತ್ತೇನೆ ಎಂದು ತಿಳಿಸಿದರು.

Brahmin Maha Sammelan
ಬ್ರಾಹ್ಮಣ ಮಹಾ ಸಮ್ಮೇಳನ (ETV Bharat)

ದೇಶ ಹಾಗೂ ಧರ್ಮವನ್ನು ಪ್ರಧಾನವಾಗಿಟ್ಟುಕೊಂಡು ಜೀವನ ನಡೆಸಿ ನಮ್ಮ ಪ್ರಯತ್ನಗಳನ್ನೆಲ್ಲ ಮಾಡಿದಾಗ ಒಳ್ಳೆಯದಾಗುತ್ತದೆ. ಯಾವ ರೀತಿಯಾಗಿ ಸಂಕಷ್ಟಗಳು ಬಂದರೂ ಸಹ ಆ ಕಾಲದಲ್ಲಿ ಸರಿಮಾಡಲು ನಾವು ತಯಾರಾಗಿರಬೇಕು. ಅದಕ್ಕೆ ಬೇಕಾದ ಉಪಾಯ ಮಾಡಿ ಮುಂದೆ ಹೋಗಬೇಕು. ಭಗವಂತನ ದಶಾವತಾರ ಬಹಳ ಪ್ರಸಿದ್ಧವಾಗಿದೆ. ಆದರೆ, ದುಷ್ಟ ಶಿಕ್ಷಣೆ ಮತ್ತು ಶಿಷ್ಟ ಪರಿಪಾಲನೆ ದಶಾವತಾರಗಳ ಉದ್ದೇಶವಾಗಿದೆ.

ಧರ್ಮ ಸಂರಕ್ಷಣೆ ಮಾಡುವುದೇ ಭಗವಂತನ ಮುಖ್ಯ ಉದ್ದೇಶವಾಗಿದೆ. ಬ್ರಾಹ್ಮಣ್ಯವನ್ನು ಸಂರಕ್ಷಣೆ ಮಾಡಿಕೊಳ್ಳಬೇಕಾದುದು ನಮ್ಮ ಆದ್ಯ ಕರ್ತವ್ಯವಾಗಿದೆ. ಅದಕ್ಕಾಗಿ ಆಯಾ ಸಂದರ್ಭಗಳಲ್ಲಿ ಸಮುಚಿತವಾದ ಮಾರ್ಗ ಅನುಸರಿಸಬೇಕಾಗಿ ಬರುತ್ತದೆ. ಧರ್ಮ ಸಂರಕ್ಷಣೆಯನ್ನು ಮುಖ್ಯವಾದ ಸಂದೇಶ ಹೊಂದಿ ಜೀವನ ಸಾರ್ಥಕ ಮಾಡಿಕೊಳ್ಳಬೇಕು. ಸಂದ್ಯಾವಂದನೆ ಸೇರಿ ಎಲ್ಲ ಆಚರಣೆಗಳನ್ನೂ ನಿಯಮವಾಗಿ ಮಾಡಬೇಕು ಎಂದು ತಿಳಿಸಿದರು.

ಲೌಕಿಕ ಪ್ರಪಂಚದಲ್ಲಿ ಏನೇ ಸಂಪಾದಿಸಿದರೂ ಕೇವಲ ಶರೀರದಲ್ಲಿರುವವರೆಗೂ ನಮ್ಮ ಜೊತೆ ಇರುತ್ತದೆ. ಶರೀರ ಬಿಟ್ಟು ಹೋಗುವಾಗ ನಮ್ಮ ಜೊತೆ ಇರುವುದಿಲ್ಲ. ನಾವು ಮಾಡಿದ ಒಳ್ಳೆಯ ಕೆಲಸಗಳಿಂದ ನಮಗೆ ಪ್ರಾಾಪ್ತವಾದ ಪುಣ್ಯ ಯಾವಾಗಲೂ ನಮ್ಮ ಜೊತೆಗಿರುತ್ತದೆ. ಈಗಿನ ಕಾಲದಲ್ಲಿ ಧರ್ಮ ಎನ್ನುವ ಹೆಸರಿನಲ್ಲಿ ಶಾಸ್ತ್ರಗಳಿಗೆ ವಿರೋಧವಾಗಿ ಏನೇನೋ ಹೇಳುವವರೂ ಇದ್ದಾರೆ. ಬಹಳಷ್ಟು ಮಂದಿ ಅವರನ್ನು ಅನುಸರಿಸುತ್ತಾರೆ. ಬಹಳಷ್ಟು ಕಾಲದ ಬಳಿಕ ಅದು ಸರಿ ಅಲ್ಲ ಎಂಬುದು ಗೊತ್ತಾಗುತ್ತದೆ ಎಂದರು.

ಸೋಂದಾ ಸ್ವರ್ಣವಲ್ಲೀ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಮಾತನಾಡಿ, ಬ್ರಾಹ್ಮಣ ಸಮುದಾಯದಲ್ಲಿ ವಿವಾಹ ವಿಚ್ಛೇದನ ಸಮಸ್ಯೆ ಹೆಚ್ಚಾಗಿದೆ. ವಿಪ್ರ ಸಮುದಾಯ ಹಿಂದೆಂದಿಗಿಂತಲೂ ಹೆಚ್ಚಿನ ಸಮಸ್ಯೆಯಲ್ಲಿ ಸಿಲುಕಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಬ್ರಾಹ್ಮಣರಲ್ಲಿ ವೈವಾಹಿಕ ಸಂಬಂಧಿತ ತೊಂದರೆಗಳು ವಿಪರೀತವಾಗಿವೆ. ವಿವಾಹ ನಿಶ್ಚಯ, ದಾಂಪತ್ಯ ಜೀವನ, ವಿಚ್ಛೇದನಗಳು ಹೆಚ್ಚಾಗಿವೆ. ಇದು ಸಂಸ್ಕಾರವಂತ, ಬುದ್ಧಿವಂತ ಸಮುದಾಯದ ಲಕ್ಷಣವಲ್ಲ. ವಿವಾಹ ಸಮಸ್ಯೆಗಳನ್ನು ಸರಿಪಡಿಸುವ ಅಗತ್ಯವಿದೆ ಎಂದರು.

ಇವುಗಳ ಪರಿಹಾರ ದೃಷ್ಟಿಯಿಂದ ಹೆಣ್ಣುಮಕ್ಕಳಿಗೆ ದಶಹೋಮ, ಕನ್ಯಾಸಂಸ್ಕಾರ, ಮಾರ್ಗದರ್ಶಕ ಶಿಬಿರ ನೀಡಿ ಅವರು ಬದುಕಿನಲ್ಲಿ ಧರ್ಮವನ್ನು ಅನುಸರಿಸಿಕೊಂಡು ಹೋಗಬೇಕು. ದಂಪತಿ ಶಿಬಿರದ ಮೂಲಕ ವಿಚ್ಛೇದನದ ತಡೆಯುವ ಕೆಲಸ ವ್ಯಾಪಕವಾಗಬೇಕು. ಈ ನಿಟ್ಟಿನಲ್ಲಿ ಬ್ರಾಹ್ಮಣ ಮಹಾಸಭಾ ಕೆಲಸ ಮಾಡಿ ಬ್ರಾಹ್ಮಣ ಸಮುದಾಯವನ್ನು ಉಳಿಸುವ ಕೆಲಸ ಮಾಡಬೇಕು ಎಂದು ಹೇಳಿದರು.

ಇನ್ನು, ಮೊಬೈಲ್‌ ಅತಿ ಬಳಕೆಯಿಂದ ಮನಸು ವಿಕ್ಷಿಪ್ತ, ಚಂಚಲಗಳಾಗಿವೆ. ಪ್ರತಿದಿನ ಸ್ವಲ್ಪ ಹೊತ್ತು ಮೊಬೈಲ್‌ ಬದಿಗಿಟ್ಟು ಏಕಾಗ್ರತೆಯನ್ನು ಕಾಪಾಡಿಕೊಳ್ಳುವ ಅಗತ್ಯವಿದೆ ಎಂದರು.

ಇದನ್ನೂ ಓದಿ: ದಕ್ಷಿಣ ಕಾಶಿಯಲ್ಲಿ ನಡೆದ ಅಂಧಕಾಸುರ ಸಂಹಾರ ಧಾರ್ಮಿಕ ಆಚರಣೆ; ಇದರ ಐತಿಹಾಸಿಕ ಹಿನ್ನೆಲೆ ಹೀಗಿದೆ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.