ETV Bharat / state

ಪ್ರಿಯಕರನೊಂದಿಗೆ ಹೊಸ ವರ್ಷಾಚರಣೆಗೆ ಹೋದವಳ ಹತ್ಯೆ: ಆತ್ಮಹತ್ಯೆ ಕಥೆ ಕಟ್ಟಿದ್ದ ಪ್ರಿಯಕರ ಅರೆಸ್ಟ್​ - WOMAN MURDER CASE

ಪ್ರಿಯಕರನೊಂದಿಗೆ ಹೊಸ ವರ್ಷ ಆಚರಿಸಲು ಹೋಗಿ ಮಹಿಳೆಯೊಬ್ಬರು ಕೊಲೆಯಾದ ಪ್ರಕರಣ ಸಿಲಿಕಾನ್​ ಸಿಟಿಯಲ್ಲಿ ಬೆಳಕಿಗೆ ಬಂದಿದೆ.

WOMAN MURDER CASE
ಆರೋಪಿ ಇಮಾದ್ ಬಾಷಾ (ETV Bharat)
author img

By ETV Bharat Karnataka Team

Published : Jan 18, 2025, 6:32 PM IST

ಬೆಂಗಳೂರು: ಬೇರೊಬ್ಬನೊಂದಿಗೆ ವಿವಾಹಕ್ಕೆ ಸಿದ್ಧವಾಗಿದ್ದ ಪ್ರಿಯತಮೆ ಹತ್ಯೆ ಮಾಡಿ ತಾನೂ ಸಹ ಆತ್ಮಹತ್ಯೆಗೆ ಯತ್ನಿಸಿದ್ದ ವ್ಯಕ್ತಿಯನ್ನು ಹೆಚ್ಎಎಲ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಡಿಸೆಂಬರ್ 31ರಂದು ಕುಂದಲಹಳ್ಳಿಯ ದೀಪಂ ನಿವಾಸ್ ಅಪಾರ್ಟ್‌ಮೆಂಟ್‌ನಲ್ಲಿ ನಡೆದಿದ್ದ ಉಜ್ಮಾ ಖಾನ್ (45) ಎಂಬ ಮಹಿಳೆಯ ಹತ್ಯೆ ಮಾಡಿದ ಆರೋಪದ ಮೇಲೆ ಆಕೆಯ ಪ್ರಿಯಕರ ಇಮಾದ್ ಬಾಷಾ (53) ಎಂಬಾತನನ್ನು ಬಂಧಿಸಲಾಗಿದೆ ಎಂದು ವೈಟ್ ಫೀಲ್ಡ್ ವಿಭಾಗದ ಡಿಸಿಪಿ ಡಾ.ಶಿವಕುಮಾರ್ ಗುಣಾರೆ ಮಾಹಿತಿ ನೀಡಿದ್ದಾರೆ.

ಏನಿದು ಪ್ರಕರಣ?: ಹತ್ಯೆಯಾದ ಉಜ್ಮಾ ಖಾನ್ ಹಾಗೂ ಆರೋಪಿ ಇಮಾದ್ ಬಾಷಾ ಸಂಬಂಧಿಕರಾಗಿದ್ದು, ಇಬ್ಬರಿಗೂ ಬೇರೆ ಬೇರೆ ಮದುವೆಯಾಗಿತ್ತು. ಮುಂಬೈನಲ್ಲಿ ಸಾಫ್ಟ್‌ವೇರ್ ಉದ್ಯೋಗಿಯಾಗಿದ್ದ ಇಮಾದ್, 2017ರಲ್ಲಿ ಹೆಂಡತಿಯನ್ನು ತೊರೆದು ಬೆಂಗಳೂರಿಗೆ ಬಂದಿದ್ದ. ಇತ್ತ ಗಂಡನನ್ನು ತೊರೆದಿದ್ದ ಉಜ್ಮಾ, ಇಮಾದ್‌ನನ್ನು ಪ್ರೀತಿಸಲಾರಂಭಿಸಿದ್ದಳು. ಆರಂಭದಲ್ಲಿ ಥಣಿಸಂದ್ರದ ಅಪಾರ್ಟ್‌ಮೆಂಟ್‌ವೊಂದರಲ್ಲಿ ಪ್ರತ್ಯೇಕ ಫ್ಲ್ಯಾಟ್​ಗಳಲ್ಲಿ ಇಮಾದ್ ಹಾಗೂ ಉಜ್ಮಾ ವಾಸವಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಕರಣದ ಬಗ್ಗೆ ಡಿಸಿಪಿ ಮಾಹಿತಿ (ETV Bharat)

ಮಹಿಳೆಯ ಮೊಬೈಲ್​​ ಕ್ಲೋನ್​ ಮಾಡಿದ್ದ ಆರೋಪಿ: 10 ತಿಂಗಳುಗಳ ಬಳಿಕ ಮತ್ತೆ ಮುಂಬೈಗೆ ವಾಪಸಾಗಲು ನಿರ್ಧಾರ ಮಾಡಿದ್ದ ಇಮಾದ್, ಎರಡೂ ಫ್ಲ್ಯಾಟ್ ಖಾಲಿ ಮಾಡಿದ್ದ. ಹೀಗಾಗಿ, ಉಜ್ಮಾ ಹೆಚ್​ಬಿ‌ಆರ್ ಲೇಔಟ್‌ನಲ್ಲಿರುವ ತನ್ನ ತಾಯಿಯ ಮನೆ ಸೇರಿಕೊಂಡಿದ್ದಳು. ಇದಾದ ಕೆಲ‌ ತಿಂಗಳುಗಳ ಬಳಿಕ ಪುನಃ ಬೆಂಗಳೂರಿಗೆ ಮರಳಿದ್ದ ಇಮಾದ್, ಕುಂದಲಹಳ್ಳಿಯ ದೀಪಂ ನಿವಾಸ್ ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸಲಾರಂಭಿಸಿದ್ದ. ಉಜ್ಮಾ ಸಹ ಆಗಾಗ ಇಮಾದ್ ಮನೆಗೆ ಬಂದು ಹೋಗಿ ಬರುತ್ತಿದ್ದಳು. ಆದರೆ, 2024ರಲ್ಲಿ ಉಜ್ಮಾಗೆ ಬೇರೊಂದು ಮದುವೆ ಮಾಡಲು ನಿರ್ಧರಿಸಿದ್ದರು. ಮೊದಲೇ ಉಜ್ಮಾಳ ಮೊಬೈಲ್ ಫೋನ್​ ಕ್ಲೋನ್ (Clone) ಮಾಡಿಕೊಂಡಿದ್ದ ಇಮಾದ್‌ಗೆ ಈ ವಿಚಾರಗಳು ಗೊತ್ತಾಗಿದ್ದವು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಘಟನೆ ವಿವರ: 2024ರ ಡಿಸೆಂಬರ್ 31ರಂದು ತಾನೇ ಮಾಡಿರುವ ಅಡುಗೆಯ ಫೋಟೋವನ್ನು ಉಜ್ಮಾಳಿಗೆ ಕಳಿಸಿದ್ದ ಇಮಾದ್, ಆಕೆಯನ್ನು ತನ್ನ ಮನೆಗೆ ಆಹ್ವಾನಿಸಿದ್ದ. ಕೊನೆಯದಾಗಿ "THAT LOOKS SIZZLING" ಎಂದು ಮೆಸೇಜ್ ಮಾಡಿದ್ದ ಉಜ್ಮಾ, ರಾತ್ರಿ 9.30ರ ಸುಮಾರಿಗೆ ಇಮಾದ್‌ನ ಮನೆ ತಲುಪಿದ್ದಳು. ರಾತ್ರಿ 12:30ರ ಸುಮಾರಿಗೆ ಮನೆಯಲ್ಲಿ ಗಲಾಟೆಯ ಸದ್ದು ಕೇಳಿದ್ದ ಅಪಾರ್ಟ್‌ಮೆಂಟ್‌ನ ಸೆಕ್ಯೂರಿಟಿ ಗಾರ್ಡ್ ಬಂದು ಬಾಗಿಲು ಬಡಿದಾಗ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಆದರೆ ಜನವರಿ 1ರಂದು ಮಧ್ಯಾಹ್ನ 12 ಗಂಟೆ ಸುಮಾರಿಗೆ ''ನಮ್ಮ ಎರಡನೇ ಮದುವೆಗೆ ನನ್ನ ಮೊದಲ ಪತ್ನಿ ಅಡ್ಡ ಬರುತ್ತಿದ್ದಾಳೆ, ಹೀಗಾಗಿ ನಾವಿಬ್ವರೂ ಆತ್ಮಹತ್ಯೆಗೆ ಶರಣಾಗುತ್ತಿದ್ದೇವೆ'' ಎಂದು ಸಂಬಂಧಿಕರಿಗೆ ಇಮಾದ್ ಮೆಸೇಜ್ ಕಳಿಸಿದ್ದ. ತಕ್ಷಣ ಆತನ ಸಂಬಂಧಿ ಪೊಲೀಸ್ ಸಹಾಯವಾಣಿಗೆ ಕರೆ ಮಾಡಿ ವಿಷಯ ತಿಳಿಸಿದ್ದರು. ಮಧ್ಯಾಹ್ನ 1 ಗಂಟೆಯ ಸುಮಾರಿಗೆ ಹೆಚ್ಎಎಲ್ ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿ ನೋಡಿದಾಗ ಉಜ್ಮಾ ಖಾನ್ ಮೃತಪಟ್ಟಿದ್ದಳು. ಅಸ್ವಸ್ಥನಾಗಿದ್ದ ಇಮಾದ್‌ನನ್ನು ತಕ್ಷಣ ಪೊಲೀಸರು ಆಸ್ಪತ್ರೆಗೆ ದಾಖಲಿಸಿದ್ದರು.

ಇದನ್ನೂ ಓದಿ: ಹುಬ್ಬಳ್ಳಿ: ಪ್ರೀತಿ ಹೆಸರಲ್ಲಿ ಹಣದಾಸೆ ತೋರಿಸಿ ಅಪ್ರಾಪ್ತೆಗೆ ಲೈಂಗಿಕ ದೌರ್ಜನ್ಯ - ಆರೋಪಿ ಬಂಧನ

ಹೆಚ್ಎಎಲ್ ಠಾಣೆ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡು ಪರಿಶೀಲಿಸಿದಾಗ ಉಜ್ಮಾ ಖಾನ್ ಮೃತಪಟ್ಟು ಅದಾಗಲೇ 10ರಿಂದ 12 ಗಂಟೆ ಆಗಿದೆ ಎಂಬುದು ತಿಳಿದು ಬಂದಿತ್ತು. ಅಲ್ಲದೆ, ಆಕೆಯ ಮೊಬೈಲ್ ಫೋನ್‌ನಲ್ಲಿದ್ದ ಕೆಲ ಚಾಟ್ ಹಿಸ್ಟರಿ ಸಹ ಡಿಲೀಟ್ ಮಾಡಲಾಗಿತ್ತು‌. ಅನುಮಾನಗೊಂಡ ಪೊಲೀಸರು ಇಮಾದ್‌ನನ್ನು ತೀವ್ರ ವಿಚಾರಣೆಗೊಳಪಡಿಸಿದಾಗ ಹತ್ಯೆಯ ಕಹಾನಿ ಬಯಲಾಗಿದೆ. ಉಜ್ಮಾ ಖಾನ್ ಮದುವೆಯ ವಿಚಾರ ತಿಳಿದು ಹತ್ಯೆ ಮಾಡಿರುವುದಾಗಿ ಆಕೆಯ ಕುಟುಂಬಸ್ಥರು ಹೆಚ್ಎಎಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಇಮಾದ್‌ನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಉಜ್ಮಾಳ ಸಾವಿಗೆ ನಿಖರ ಕಾರಣವೇನು ಎಂಬುದು ಮರಣೋತ್ತರ ಪರೀಕ್ಷೆಯ ವರದಿಯ ಬಳಿಕ ತಿಳಿಯಬೇಕಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ಹಾಸನ: ಮಾರಕಾಸ್ತ್ರಗಳಿಂದ ಕೊಚ್ಚಿ ವ್ಯಕ್ತಿಯ ಬರ್ಬರ ಹತ್ಯೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.