ನವದೆಹಲಿ: ವಾಷಿಂಗ್ಟನ್ ಡಿಸಿಯಲ್ಲಿ ಹಾರಾಟದ ವೇಳೆ ವಿಮಾನ ಮತ್ತು ಹೆಲಿಕಾಪ್ಟರ್ ನಡುವೆ ಸಂಭವಿಸಿದ ಅಪಘಾತದಲ್ಲಿ ಸಾವನ್ನಪ್ಪಿದವರಿಗೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ವ್ಯಕ್ತಪಡಿಸಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಅವರು, ವಾಷಿಂಗ್ಟನ್ ಡಿಸಿಯಲ್ಲಿ ನಡೆದ ವಿಮಾನ ಅಪಘಾತದಲ್ಲಿ ಸಾವನ್ನಪ್ಪಿದ ಸುದ್ದಿ ದುಃಖ ತರಿಸಿತು. ಮೃತರ ಕುಟುಂಬಗಳಿಗೆ ನನ್ನ ಸಂತಾಪಗಳು. ಈ ಸಂಕಷ್ಟದ ಸಮಯದಲ್ಲಿ ನಾವು ಅಮೆರಿಕದ ಜನರೊಂದಿಗೆ ನಿಲ್ಲುತ್ತೇವೆ ಎಂದು ತಿಳಿಸಿದ್ದಾರೆ.
Deeply saddened by loss of lives in the tragic collision in Washington DC.
— Narendra Modi (@narendramodi) January 31, 2025
Our heartfelt condolences to the families of the victims.
We stand in solidarity with the people of the United States. @realDonaldTrump
ವಿಮಾನದಲ್ಲಿ ಎಲ್ಲ 64 ಮಂದಿ ಸಾವು: ಬುಧವಾರ ರಾತ್ರಿ 9ರ ಸುಮಾರಿಗೆ ರೊನಾಲ್ಡ್ ರೀಗನ್ ವಾಷಿಂಗ್ಟನ್ ನ್ಯಾಷನಲ್ ಏರ್ಪೋರ್ಟ್ ಸಮೀಪ ಪ್ಯಾಸೆಂಜರ್ ವಿಮಾನ ಮತ್ತು ಸೇನಾ ಹೆಲಿಕಾಪ್ಟರ್ ನಡುವೆ ಡಿಕ್ಕಿ ಸಂಭವಿಸಿತ್ತು. ಪ್ಯಾಸೆಂಜರ್ ಜೆಟ್ ವಿಮಾನದಲ್ಲಿದ್ದ ಸಿಬ್ಬಂದಿ ಸೇರಿ ಎಲ್ಲ 64 ಮಂದಿ ಸಾವನ್ನಪ್ಪಿದ್ದಾರೆ ಎಂದು ಅಮೆರಿಕದ ಅಧಿಕಾರಿಗಳು ತಿಳಿಸಿದ್ದಾರೆ.
ಒಬಾಮಾ, ಬೈಡನ್ ಅವಧಿಯಲ್ಲಿ ವಾಯು ಸುರಕ್ಷತೆಯಲ್ಲಿ ರಾಜಿ-ಟ್ರಂಪ್ ವಾಗ್ದಾಳಿ: ಈ ಅಪಘಾತ ಬೆನ್ನಲ್ಲೇ ಮಾತನಾಡಿದ ಅಮೆರಿಕ ಅಧ್ಯಕ್ಷ ಟ್ರಂಪ್, ಡೆಮಾಕ್ರಟಿಕ್ ನೀತಿಯ ವಿರುದ್ಧ ಕಿಡಿಕಾರಿದ್ದಾರೆ. ಒಬಾಮಾ ಮತ್ತು ಬೈಡನ್ ಅವಧಿಯಲ್ಲಿ ವಾಯು ಸುರಕ್ಷತೆಯಲ್ಲಿ ರಾಜಿ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ: ವಾಷಿಂಗ್ಟನ್ನಲ್ಲಿ 64 ಜನರಿದ್ದ ಪ್ಯಾಸೆಂಜರ್ ಜೆಟ್-ಸೇನಾ ಹೆಲಿಕಾಪ್ಟರ್ ನಡುವೆ ಡಿಕ್ಕಿ- ಅವಘಡದ ದೃಶ್ಯ ಸೆರೆ