ETV Bharat / health

ಮಧುಮೇಹಿಗಳು ಜಿಮ್​ ಮಾಡಿದರೆ ಏನಾಗುತ್ತೆ? ತಜ್ಞರು ಹೇಳೋದು ಹೀಗೆ - WHAT HAPPENS IF DIABETES DO GYM

ಇಂದಿನ ಒತ್ತಡದ ಜೀವನದಲ್ಲಿ ಮಧುಮೇಹ ಪೀಡಿತರ ಸಂಖ್ಯೆ ಹೆಚ್ಚುತ್ತಿದೆ. ಮಧುಮೇಹಿಗಳು ಜಿಮ್​ ಮಾಡಿದರೆ ಏನಾಗುತ್ತೆ? ತಜ್ಞರು ಹೇಳುವುದೇನು ನೋಡೋಣ.

BENEFITS FOR DIABETES TO DO GYM  WHAT HAPPENS IF DIABETES DO GYM  DIABETICS WHILE GOING TO THE GYM  Diabetes
ಸಾಂದರ್ಭಿಕ ಚಿತ್ರ (ETV Bharat)
author img

By ETV Bharat Health Team

Published : Feb 7, 2025, 5:42 PM IST

What happens if diabetes Do Gym: ಇತ್ತೀಚಿನ ದಿನಗಳಲ್ಲಿ ವಯಸ್ಸಿನ ಭೇದವಿಲ್ಲದೆ ಅನೇಕರು ಸಕ್ಕರೆ ಕಾಯಿಲೆಯಿಂದ ಬಳಲುತ್ತಿದ್ದಾರೆ. ದೀರ್ಘಕಾಲೀನ ಈ ಆರೋಗ್ಯ ಸಮಸ್ಯೆಗೆ ಹಲವು ಕಾರಣಗಳಿವೆ. ಒಮ್ಮೆ ನಿಮಗೆ ಶುಗರ್​ ಬಂದರೆ, ನಂತರ ನೀವು ಜೀವನಶೈಲಿಯಲ್ಲಿ ವಿವಿಧ ಬದಲಾವಣೆಗಳನ್ನು ಮಾಡಬೇಕಾಗುತ್ತದೆ. ಆಹಾರ ಪದ್ಧತಿಯಲ್ಲಿ ಬದಲಾವಣೆ ಮಾಡಿಕೊಳ್ಳಲೇಬೇಕಾಗುತ್ತದೆ.

ಮಧುಮೇಹಿಗಳು ಔಷಧಗಳನ್ನು ಬಳಸುವುದನ್ನು ಬಿಟ್ಟು ಬೇರೆ ಯಾವುದೇ ದಾರಿಯಿಲ್ಲ. ಅದಕ್ಕಾಗಿಯೇ ನೀವು ಆರಂಭದಿಂದಲೇ ಇದರ ಬಗ್ಗೆ ಜಾಗರೂಕರಾಗಿ ಇರಬೇಕಾಗುತ್ತದೆ. ಮಧುಮೇಹ ಸಮಸ್ಯೆ ಇರುವವರು ಜಿಮ್‌ಗೆ ಹೋಗಲು ಸಾಧ್ಯವೇ ಎಂಬ ಬಗ್ಗೆ ಅನೇಕ ಹಲವು ಜನರು ಅನೇಕ ರೀತಿಯ ಅನುಮಾನಗಳಿವೆ.

BENEFITS FOR DIABETES TO DO GYM  WHAT HAPPENS IF DIABETES DO GYM  DIABETICS WHILE GOING TO THE GYM  Diabetes
ಜಿಮ್​ನಲ್ಲಿ ಕಸರತ್ತು ಮಾಡುತ್ತಿರುವ ದೃಶ್ಯ- ಸಾಂದರ್ಭಿಕ ಚಿತ್ರ (pexels)

ವೈದ್ಯರ ಸಲಹೆ: ಮಧುಮೇಹದಿಂದ ಬಳಲುತ್ತಿರುವವರು ಖಂಡಿತವಾಗಿಯೂ ಜಿಮ್‌ಗೆ ಹೋಗುವುದು ತುಂಬಾ ಒಳ್ಳೆಯದು. ಆದ್ರೆ, ಅಗತ್ಯ ಮುನ್ನೆಚ್ಚರಿಕೆಗಳನ್ನು ವಹಿಸಬೇಕಾಗುತ್ತದೆ. ವಿಶೇಷವಾಗಿ ಜಿಮ್‌ಗೆ ಹೋಗುವ ಮೊದಲು ನಿಮ್ಮ ರಕ್ತದಲ್ಲಿನ ಶುಗರ್​ ಲೆವಲ್​ ಪರೀಕ್ಷಿಸುವುದು ತುಂಬಾ ಮುಖ್ಯ. ಏಕೆಂದರೆ ಸಾಮಾನ್ಯವಾಗಿ ನೀವು ವ್ಯಾಯಾಮ ಮಾಡುವಾಗ ಶುಗರ್​ ಲೆವಲ್​ ಕಡಿಮೆಯಾಗುತ್ತದೆ. ಕೆಲವು ಸಂದರ್ಭಗಳಲ್ಲಿ ಮಾತ್ರ ವ್ಯಾಯಾಮದ ನಂತರ ಗ್ಲೂಕೋಸ್ ಮಟ್ಟವು ಹೆಚ್ಚಾಗುತ್ತದೆ. ಹಾಗಾಗಿ ಜಿಮ್‌ಗೆ ಹೋಗುವ ಮೊದಲು ನಿಮ್ಮ ಶುಗರ್​ನ್ನು ಪರೀಕ್ಷಿಸಬೇಕಾಗುತ್ತದೆ ಎಂದು ಎಂಡೋಕ್ರಿನಾಲಜಿಸ್ಟ್ ಡಾ.ರವಿಶಂಕರ್ ಇರುಕುಲಪತಿ ಸಲಹೆ ನೀಡಿದ್ದಾರೆ.

ಜಿಮ್​ಗೆ ಹೋಗುವ ಮುನ್ನ ಆಹಾರ ಕ್ರಮ: ಜಿಮ್‌ಗೆ ಹೋಗುವ ಮೊದಲು ತೆಗೆದುಕೊಳ್ಳಬೇಕಾದ ಆಹಾರದ ಬಗ್ಗೆಯೂ ವಿಶೇಷವಾದ ಕಾಳಜಿ ವಹಿಸಬೇಕು. ಜಿಮ್‌ಗೆ ಹೋಗುವ ಮೊದಲು ಬಾಳೆಹಣ್ಣು ಹಾಗೂ ಸೇಬುಗಳಂತಹ ಆರೋಗ್ಯಕರ ಕಾರ್ಬೋಹೈಡ್ರೇಟ್ ಆಹಾರ ಸೇವಿಸುವುದರಿಂದ ಶುಗರ್​ ಲೆವಲ್​ ಇಳಿಯುವುದು ತಡೆಯಲು ಸಹಾಯ ಮಾಡುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ.

ಮಧುಮೇಹಿಗಳು ಜಿಮ್‌ನಲ್ಲಿ ಯಾವ ವ್ಯಾಯಾಮ ಮಾಡಬೇಕು ಗೊತ್ತಾ?: ಏರೋಬಿಕ್ ಹಾಗೂ ರೆಸಿಸ್ಟೆನ್ಸ್ ವ್ಯಾಯಾಮದ ಸಂಯೋಜನೆಯು ಒಳ್ಳೆಯ ಫಲಿತಾಂಶ ನೀಡುತ್ತದೆ. ರೆಸಿಸ್ಟೆನ್ಸ್ ವ್ಯಾಯಾಮ ಎಂದರೆ ತೂಕ ಎತ್ತುವುದು, ಪುಷ್ ಅಪ್‌ಗಳು ಮತ್ತು ಪುಲ್ ಅಪ್‌ಗಳು ಆಗಿವೆ. ಏರೋಬಿಕ್ ವ್ಯಾಯಾಮಗಳಲ್ಲಿ ಟ್ರೆಡ್‌ಮಿಲ್, ವಾಕಿಂಗ್ ಹಾಗೂ ಸ್ವಿಮ್ಮಿಂಗ್​ ಸೇರಿವೆ. ಇದರಿಂದಾಗಿ ಜಿಮ್‌ನಲ್ಲಿ ಈ ಎರಡೂ ಸಂಯೋಜನೆಗಳನ್ನು ಪ್ರಯತ್ನಿಸುವುದರಿಂದ ಶುಗರ್​ ನಿಯಂತ್ರಣದಲ್ಲಿಡಲು ಹೆಚ್ಚು ಸಹಾಯವಾಗುತ್ತದೆ. ಹೃದಯದ ಆರೋಗ್ಯ ಹಾಗೂ ಸ್ನಾಯುಗಳ ವರ್ಧನೆಗೆ ಸಹಾಯ ಮಾಡುತ್ತದೆ ಎಂದು ಡಾ.ರವಿಶಂಕರ್ ಹೇಳಿದ್ದಾರೆ.

"ಕೇವಲ ಏರೋಬಿಕ್ಸ್ ಅಲ್ಲ, ಏರೋಬಿಕ್ ಹಾಗೂ ರೆಸಿಸ್ಟೆನ್ಸ್ ವ್ಯಾಯಾಮಗಳ ಸಂಯೋಜನೆಯು ಇನ್ಸುಲಿನ್ ಪ್ರತಿರೋಧ ಕಡಿಮೆ ಮಾಡುತ್ತದೆ. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡಲು ಪೂರಕವಾಗಿದೆ. ಜೊತೆಗೆ ಒಂದು ಗಂಟೆ ಜಿಮ್‌ಗೆ ಹೋಗುವುದರಲ್ಲಿ ತಪ್ಪೇನಿದೆ? ನೀವು ಇದನ್ನು ದೀರ್ಘಕಾಲದವರೆಗೆ ಮಾಡಬೇಕಾದರೆ, ನಿಮ್ಮ ಸಕ್ಕರೆ ಮಟ್ಟ ಮೇಲ್ವಿಚಾರಣೆ ಮಾಡಬೇಕಾಗುತ್ತದೆ. ಮಧುಮೇಹಿಗಳು ವ್ಯಾಯಾಮ ಮಾಡುವಾಗ ಸರಿಯಾದ ಬೂಟುಗಳನ್ನು ಧರಿಸುವುದು ಮುಖ್ಯವಾಗಿದೆ. ಇದರಿಂದ ನೀವು ಕಾಲಿಗೆ ಗಾಯವಾಗುವುದನ್ನು ತಡೆಯಲು ಸಾಧ್ಯವಿದೆ".

-ಡಾ.ರವಿಶಂಕರ್ ಇರುಕುಲಪತಿ, ಎಂಡೋಕ್ರಿನಾಲಜಿಸ್ಟ್

ಓದುಗರಿಗೆ ಪ್ರಮುಖ ಸೂಚನೆ: ಈ ಲೇಖನದಲ್ಲಿ ನಿಮಗೆ ನೀಡಿರುವ ಎಲ್ಲ ಆರೋಗ್ಯ ಮಾಹಿತಿ, ಸಲಹೆಗಳು ನಿಮ್ಮ ತಿಳಿವಳಿಕೆಗಾಗಿ ಮಾತ್ರ. ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯನ್ನು ಆಧರಿಸಿ ನಾವು ಈ ಮಾಹಿತಿಯನ್ನು ಒದಗಿಸುತ್ತಿದ್ದೇವೆ. ಆದರೆ, ಇವುಗಳನ್ನು ಅನುಸರಿಸುವ ಮೊದಲು ಪರಿಣತ ವೈದ್ಯರ ಸಲಹೆಗಳನ್ನು ತೆಗೆದುಕೊಳ್ಳುವುದು ಉತ್ತಮ.

ಇವುಗಳನ್ನೂ ಓದಿ:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.