ETV Bharat / health

ಮೆಗ್ನೀಸಿಯಂ ಕೊರತೆಯಿಂದ ಅನೇಕ ಕಾಯಿಲೆಗಳು: ಮೆಗ್ನೀಸಿಯಂ ಸಮೃದ್ಧ ಆಹಾರಗಳಿವು - MAGNESIUM RICH FOODS

Magnesium Deficiency: ಮನುಷ್ಯನ ದೇಹದಲ್ಲಿ ಮೆಗ್ನೀಸಿಯಂ ಕೊರತೆ ಅನೇಕ ರೋಗಗಳಿಗೆ ಕಾರಣವಾಗಬಹುದು. ಮೆಗ್ನೀಸಿಯಂ ಕೊರತೆಯನ್ನು ತಡೆಯುವ ಆಹಾರಗಳು ಯಾವುವು ನೋಡೋಣ.

MAGNESIUM DEFICIENCY SYMPTOMS  MAGNESIUM RICH FOODS  WHAT TO EAT TO INCREASE MAGNESIUM  MAGNESIUM DEFICIENCY
ಮೆಗ್ನೀಸಿಯಮ್ ಸಮೃದ್ಧವಾಗಿರುವ ಆಹಾರಗಳಿವು (Getty Images)
author img

By ETV Bharat Health Team

Published : Feb 7, 2025, 5:32 PM IST

Magnesium Deficiency Symptoms: ದೇಹಕ್ಕೆ ಅಗತ್ಯವಾದ ಖನಿಜಗಳಲ್ಲಿ ಮೆಗ್ನೀಸಿಯಂ ಕೂಡ ಒಂದು. ಬಲವಾದ ಮೂಳೆಗಳು, ರಕ್ತದಲ್ಲಿನ ಶುಗರ್​ ಲೆವಲ್ ನಿಯಂತ್ರಣ, ಸ್ನಾಯುಗಳು ಹಾಗೂ ನರಗಳನ್ನು ಆರೋಗ್ಯವಾಗಿಡುವ ಕಾರ್ಯಗಳಿಗೆ ಮೆಗ್ನೀಸಿಯಂ ಅವಶ್ಯಕ.

ದೇಹದಲ್ಲಿ ಮೆಗ್ನೀಸಿಯಂ ಕೊರತೆಯಿದ್ದರೆ ವಾಕರಿಕೆ, ವಾಂತಿ, ಸ್ನಾಯುಗಳ ದೌರ್ಬಲ್ಯ, ನಡುಕ ಹಾಗೂ ಹಸಿವಿನ ಕೊರತೆಯಂತಹ ಲಕ್ಷಣಗಳು ಕಂಡುಬರುತ್ತವೆ. ಮೆಗ್ನೀಸಿಯಂ ಕೊರತೆಯಿಂದ ಹೃದ್ರೋಗ, ಸಿಂಗಲ್ಟನ್ ಹಾಗೂ ಟೈಪ್-2 ಮಧುಮೇಹದಂತಹ ಕಾಯಿಲೆಗಳೂ ಉಂಟಾಗುತ್ತವೆ.

ಸಂಶೋಧನೆ ಹೇಳುವುದೇನು?: ರಾಷ್ಟ್ರೀಯ ಆರೋಗ್ಯ ಸಂಸ್ಥೆಯ ಪ್ರಕಾರ, ಪುರುಷರಿಗೆ ಪ್ರತಿದಿನ 400 ರಿಂದ 420 ಮಿಲಿಗ್ರಾಂ ಮೆಗ್ನೀಸಿಯಂ ಬೇಕಾಗುತ್ತದೆ. ಮಹಿಳೆಯರಿಗೆ 310ರಿಂದ 320 ಮಿಲಿಗ್ರಾಂ ಮೆಗ್ನೀಸಿಯಂ ಅಗತ್ಯವಿದೆ. ಆಯಾಸ ಕಡಿಮೆ ಮಾಡಲು ಹಾಗೂ ದೇಹದ ಶಕ್ತಿ ಮಟ್ಟವನ್ನು ಹೆಚ್ಚಿಸಲು ಮೆಗ್ನೀಸಿಯಂಭರಿತ ಪದಾರ್ಥಗಳನ್ನು ಆಹಾರದಲ್ಲಿ ಸೇವಿಸಿಕೊಳ್ಳಬೇಕಾಗುತ್ತದೆ.

ಮೆಗ್ನೀಸಿಯಂ ಹೇರಳವಾಗಿರುವ ಆಹಾರಗಳು:

ಪಾಲಕ್: ಪಾಲಕ್ ಮೆಗ್ನೀಸಿಯಂ​ನ ಕಣಜ. ಒಂದು ಕಪ್ ಬೇಯಿಸಿದ ಪಾಲಕ್ ಸೊಪ್ಪಿನಲ್ಲಿ 157 ಮಿಲಿಗ್ರಾಂ ಮೆಗ್ನೀಸಿಯಂ ದೊರೆಯುತ್ತದೆ. ಪಾಲಕ್​ ಅನ್ನು ದೈನಂದಿನ ಆಹಾರದಲ್ಲಿ ಸೇರಿಸಿದರೆ, ನಿಮಗೆ ಶೇ.40ರಷ್ಟು ಮೆಗ್ನೀಸಿಯಂ ಲಭಿಸುತ್ತದೆ. ಪಾಲಕ್ ಸೊಪ್ಪಿನಲ್ಲಿರುವ ಕಬ್ಬಿಣ ಹಾಗೂ ವಿಟಮಿನ್ ಸಿ ದೇಹದಲ್ಲಿ ಆಮ್ಲಜನಕದ ಪೂರೈಕೆ ಸುಧಾರಿಸುತ್ತದೆ ಹಾಗೂ ಆಯಾಸ ನಿವಾರಿಸಲು ಸಹಾಯ ಮಾಡುತ್ತದೆ.

MAGNESIUM DEFICIENCY SYMPTOMS  MAGNESIUM RICH FOODS  WHAT TO EAT TO INCREASE MAGNESIUM  MAGNESIUM DEFICIENCY
ಪಾಲಕ್ (pexels)

ಬಾದಾಮಿ: ಒಂದು ಹಿಡಿ ಬಾದಾಮಿಯಲ್ಲಿ 76 ಮಿಗ್ರಾಂ ಮೆಗ್ನೀಸಿಯಮ್ ಲಭಿಸುತ್ತದೆ. ಆರೋಗ್ಯಕರ ಕೊಬ್ಬುಗಳು ಹಾಗೂ ಪ್ರೋಟೀನ್‌ಗಳಿಂದ ಸಮೃದ್ಧವಾಗಿರುವ ಬಾದಾಮಿ ದಿನವಿಡೀ ನಿರಂತರ ಶಕ್ತಿ ಒದಗಿಸುತ್ತದೆ. ಬ್ರಿಟಿಷ್ ಜರ್ನಲ್ ಆಫ್ ನ್ಯೂಟ್ರಿಷನ್ (2016) ಪ್ರಕಟಿಸಿದ ಅಧ್ಯಯನವು, ಬಾದಾಮಿ ತಿನ್ನುವುದರಿಂದ ಶಕ್ತಿ ದೊರೆಯುತ್ತದೆ ಹಾಗೂ ಹಸಿವು ಕಡಿಮೆಯಾಗುತ್ತದೆ. ಚಯಾಪಚಯ ಕ್ರಿಯೆ ಸುಧಾರಿಸಲು ಸಹಾಯ ಮಾಡುತ್ತದೆ ಎಂದು ತಿಳಿದು ಬಂದಿದೆ.

ಬದಾಮಿ (pexels)

ಆವಕಾಡೊ ಹಣ್ಣು: ಒಂದು ಆವಕಾಡೊ ಹಣ್ಣು ಸುಮಾರು 58 ಮಿಗ್ರಾಂ ಮೆಗ್ನೀಸಿಯಂ ಜೊತೆಗೆ ಪೊಟ್ಯಾಸಿಯಂ, ಫೈಬರ್ ಹಾಗೂ ಆರೋಗ್ಯಕರ ಕೊಬ್ಬು ಹೊಂದಿರುತ್ತದೆ. ನ್ಯೂಟ್ರಿಯೆಂಟ್ಸ್ (2019) ಜರ್ನಲ್‌ನಲ್ಲಿ ನಡೆಸಿದ ಅಧ್ಯಯನವು ಆವಕಾಡೊ ಸೇವನೆಯು ಶಕ್ತಿಯನ್ನು ಹೆಚ್ಚಿಸುತ್ತದೆ ಎಂದು ವಿಷಯವು ತೋರಿಸಿದೆ.

ಕುಂಬಳಕಾಯಿ ಬೀಜ: ಕುಂಬಳಕಾಯಿ ಬೀಜಗಳು ಮೆಗ್ನೀಸಿಯಂನ ಉತ್ತಮ ಮೂಲವಾಗಿದ್ದು, ಕುಂಬಳಕಾಯಿಯಲ್ಲಿ 150 ಮಿಗ್ರಾಂ ಮೆಗ್ನೀಸಿಯಂ ಇರುತ್ತದೆ. ಕುಂಬಳಕಾಯಿಯಲ್ಲಿರುವ ಸತು ಹಾಗೂ ಒಮೆಗಾ- 3 ಕೊಬ್ಬಿನಾಮ್ಲಗಳು ಉರಿಯೂತ ಕಡಿಮೆ ಮಾಡಲು ಪ್ರಯೋಜನಕಾರಿಯಾಗಿದೆ.

ಡಾರ್ಕ್ ಚಾಕೊಲೇಟ್: ಒಂದು ಔನ್ಸ್ ಡಾರ್ಕ್ ಚಾಕೊಲೇಟ್ 64 ಮಿಲಿಗ್ರಾಂ ಮೆಗ್ನೀಸಿಯಂ ಹೊಂದಿರುತ್ತದೆ. ಫ್ರಾಂಟಿಯರ್ಸ್ ಇನ್ ನ್ಯೂಟ್ರಿಷನ್ (2020) ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಡಾರ್ಕ್ ಚಾಕೊಲೇಟ್ ಮಾನಸಿಕ ಆರೋಗ್ಯ ಸುಧಾರಿಸುತ್ತದೆ. ಒತ್ತಡ ಕಡಿಮೆ ಮಾಡುತ್ತದೆ ಹಾಗೂ ಸಮತೋಲನಕ್ಕೆ ಉತ್ತಮವಾಗಿದೆ.

ಮೊಸರು: ಒಂದು ಕಪ್ ಮೊಸರಿನಲ್ಲಿ 42 ಮಿಲಿಗ್ರಾಂ ಮೆಗ್ನೀಸಿಯಂ ಇರುತ್ತದೆ. ಇದರದಲ್ಲಿರುವ ಪ್ರೋಬಯಾಟಿಕ್‌ಗಳು ಕರುಳಿನ ಆರೋಗ್ಯ ಸುಧಾರಿಸುತ್ತದೆ ಹಾಗೂ ಪೋಷಕಾಂಶಗಳನ್ನು ಉತ್ತಮವಾಗಿ ಹೀರಿಕೊಳ್ಳಲು ಸಹಾಯವಾಗುತ್ತದೆ.

ಮೊಸರು (pexels)

ಬಾಳೆಹಣ್ಣು: ಪೊಟ್ಯಾಸಿಯಂನಲ್ಲಿ ಸಮೃದ್ಧವಾಗಿರುವ ಒಂದು ಬಾಳೆಹಣ್ಣು 32 ಮಿ.ಗ್ರಾಂ ಮೆಗ್ನೀಸಿಯಂ ದೊರೆಯುತ್ತದೆ. ಇದು ನೈಸರ್ಗಿಕವಾಗಿ ಸಿಹಿ ಮತ್ತು ನಾರು ಅಂಶವನ್ನು ಹೊಂದಿದ್ದು, ದೇಹಕ್ಕೆ ಶಕ್ತಿಯನ್ನು ಹೆಚ್ಚಿಸುತ್ತದೆ. ವ್ಯಾಯಾಮಕ್ಕೂ ಮುನ್ನ ಬಾಳೆಹಣ್ಣು ಸೇವಿಸಿದರೆ ಉತ್ತಮ ಎಂದು ತಜ್ಞರು ತಿಳಿಸುತ್ತಾರೆ.

ಬಾಳೆಹಣ್ಣು (pexels)

ಹೆಚ್ಚಿನ ಮಾಹಿತಿಗಾಗಿ ಈ ವೆಬ್​ಸೈಟ್​ಗಳನ್ನು ವೀಕ್ಷಿಸಬಹುದು:

ಓದುಗರಿಗೆ ಮುಖ್ಯ ಸೂಚನೆ: ಈ ಲೇಖನದಲ್ಲಿ ನಿಮಗೆ ನೀಡಿರುವ ಎಲ್ಲ ಆರೋಗ್ಯ ಮಾಹಿತಿ, ಸಲಹೆಗಳು ನಿಮ್ಮ ತಿಳಿವಳಿಕೆಗಾಗಿ ಮಾತ್ರ. ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯನ್ನು ಆಧರಿಸಿ ನಾವು ಈ ಮಾಹಿತಿಯನ್ನು ಒದಗಿಸುತ್ತಿದ್ದೇವೆ. ಆದರೆ, ಇವುಗಳನ್ನು ಅನುಸರಿಸುವ ಮೊದಲು ಪರಿಣತ ವೈದ್ಯರ ಸಲಹೆಗಳನ್ನು ತೆಗೆದುಕೊಳ್ಳುವುದು ಉತ್ತಮ.

ಇವುಗಳನ್ನೂ ಓದಿ:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.