ETV Bharat / bharat

ಯಮುನೆಗೆ ವಿಷ ಆರೋಪ: ಇಂದು ಚು.ಆಯೋಗದ ಮುಂದೆ ಹೇಳಿಕೆ ದಾಖಲಿಸಲಿರುವ ಕೇಜ್ರಿವಾಲ್​ - YAMUNA POISON ROW

ಕೇಂದ್ರ ಚುನಾವಣಾ ಆಯೋಗದ ಮೊದಲ ನೋಟಿಸ್​ಗೆ ನೀಡಿದ ಉತ್ತರ ಸಮಾಧಾನಕಾರವಾಗಿರದ ಹಿನ್ನೆಲೆಯಲ್ಲಿ ಆಯೋಗ, ಕೇಜ್ರಿವಾಲ್​ಗೆ ನಿನ್ನೆ ಮತ್ತೊಂದು ನೋಟಿಸ್​ ನೀಡಿತ್ತು. ಅದರಂತೆ, ಇಂದು ಅವರು ಹೇಳಿಕೆ ದಾಖಲಿಸಲಿದ್ದಾರೆ.

yamuna-poison-row-kejriwal-to-visit-ec-office-submit-reply-to-notice
ಅರವಿಂದ್​ ಕೇಜ್ರಿವಾಲ್​ (ANI)
author img

By ETV Bharat Karnataka Team

Published : Jan 31, 2025, 11:14 AM IST

ನವದೆಹಲಿ: ಯಮುನಾ ನದಿಗೆ ವಿಷ ಹಾಕಲಾಗುತ್ತಿದೆ ಎಂಬ ತಮ್ಮ ಆರೋಪದ ವಿಚಾರವಾಗಿ ವಿವರವಾದ ಸ್ಪಷ್ಟನೆ ನೀಡುವಂತೆ ಕೇಂದ್ರ ಚುನಾವಣಾ ಆಯೋಗ ನೋಟಿಸ್​ ಜಾರಿ ಮಾಡಿದ ಹಿನ್ನೆಲೆಯಲ್ಲಿ ಇಂದು ದೆಹಲಿಯ ಮಾಜಿ ಸಿಎಂ ಅರವಿಂದ್​ ಕೇಜ್ರಿವಾಲ್​ ಹೇಳಿಕೆ ದಾಖಲಿಸಲಿದ್ದಾರೆ.

ಬೆಳಗ್ಗೆ 11 ಗಂಟೆಗೆ ಚುನಾವಣಾ ಆಯೋಗದ ಕಚೇರಿಗೆ ಅವರು ಆಗಮಿಸಲಿದ್ದು, ದೆಹಲಿ ಮುಖ್ಯಮಂತ್ರಿ ಅತಿಶಿ ಮತ್ತು ಪಂಜಾಬ್​ ಸಿಎಂ ಭಗವಂತ್​ ಮಾನ್​ ಕೂಡ ಜೊತೆಗಿರಲಿದ್ದಾರೆ.

ಹರಿಯಾಣದಿಂದ ದೆಹಲಿಗೆ ಬರುತ್ತಿರುವ ಯಮುನಾ ನದಿ ನೀರಿನಲ್ಲಿ ಅಧಿಕ ಮಟ್ಟದ ಅಮೋನಿಯಂ ಅಂಶವಿದೆ ಎಂಬ ತಮ್ಮ ಹೇಳಿಕೆಯ ಕುರಿತು ರಾಜಕೀಯ ಮಾಡಲಾಗುತ್ತಿದೆ. ಚುನಾವಣಾ ಆಯೋಗದ ಆಯುಕ್ತರು ಕೂಡ ರಾಜಕೀಯ ಮಾಡುವ ಮೂಲಕ ಆಯೋಗದ ವಿಶ್ವಸಾರ್ಹತೆಯನ್ನು ಹಾಳು ಮಾಡುತ್ತಿದ್ದಾರೆ ಎಂದು ಕೇಜ್ರಿವಾಲ್​ ನಿನ್ನೆ ಪತ್ರಿಕಾಗೋಷ್ಟಿ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದರು.

ಯಮುನೆಯ ಕುರಿತ ತಮ್ಮ ಹೇಳಿಕೆಯ ವಿಚಾರವಾಗಿ ಚುನಾವಣಾ ಆಯೋಗದ ನೋಟಿಸ್​​ಗೆ ಕೇಜ್ರಿವಾಲ್​ ಉತ್ತರ ನೀಡಿದ್ದರು. ಇತ್ತೀಚೆಗೆ ಹರಿಯಾಣದಿಂದ ಹರಿದು ಬರುತ್ತಿರುವ ನದಿ ನೀರು ಹೆಚ್ಚು ಕಲುಷಿತವಾಗಿದ್ದು, ಇದು ಮಾನವ ದೇಹಕ್ಕೆ ವಿಷಕಾರಿಯಾಗಿದೆ. ಇಂತಹ ನೀರನ್ನು ಜನರು ಸೇವಿಸಲು ಬಿಟ್ಟರೆ ಇದು ಆರೋಗ್ಯಕ್ಕೆ ಮಾರಣಾಂತಿಕ ಹಾನಿ ಉಂಟು ಮಾಡುತ್ತದೆ ಎಂದು 14 ಪುಟಗಳ ಉತ್ತರ ಸಲ್ಲಿಸಿದ್ದರು.

ಈ ಉತ್ತರದಿಂದ ಸಮಾಧಾನಗೊಳ್ಳದ ಆಯೋಗ, ಜನವರಿ 31ರೊಳಗೆ ಮತ್ತಷ್ಟು ಸ್ಪಷ್ಟನೆ ನೀಡಬೇಕು. ಇಲ್ಲದೇ ಹೋದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿತ್ತು. ಈ ಹಿನ್ನೆಲೆಯಲ್ಲಿ ಇಂದು ಮತ್ತೆ ಅವರು ಚುನಾವಣಾ ಆಯೋಗದ ಮುಂದೆ ಸ್ಪಷ್ಟನೆ ನೀಡಲಿದ್ದಾರೆ.

ಇದನ್ನೂ ಓದಿ: ಯಮುನಾಗೆ ವಿಷ ಹಾಕಿದ ಆರೋಪಕ್ಕೆ ಮಾತ್ರ ಸಾಕ್ಷ್ಯ ನೀಡಿ: ಕೇಜ್ರಿವಾಲ್​ಗೆ ಚುನಾವಣಾ ಆಯೋಗ ತಾಕೀತು

ಇದನ್ನೂ ಓದಿ: ನಿವೃತ್ತಿ ಬಳಿಕ ಹುದ್ದೆ ಬಯಸಿದ್ದೀರಾ?' : ನೋಟಿಸ್​ ನೀಡಿದ ಚುನಾವಣಾ ಆಯುಕ್ತರ ವಿರುದ್ಧ ಕೇಜ್ರಿವಾಲ್​ ಗರಂ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.