'ಬಿಗ್ ಬಾಸ್' ಶೀರ್ಷಿಕೆಯ ಕಿರುತೆರೆ ಕಾರ್ಯಕ್ರಮ ಭಾರತದ ಬಹುಭಾಷೆಗಳಲ್ಲಿ ಪ್ರಸಾರ ಕಾಣುವ ಅತ್ಯಂತ ಪಾಪ್ಯುಲರ್ ಪ್ರೋಗ್ರಾಮ್. ಬಿಗ್ ಬಾಸ್ ಹಿಂದಿ ಸೀಸನ್ 18ರ ಗ್ರ್ಯಾಂಡ್ ಫಿನಾಲೆ ನಾಳೆ ನಡೆದರೆ, ಕನ್ನಡ ಬಿಗ್ ಬಾಸ್ನ ಪ್ರೋಗ್ರಾಮ್ ಮುಂದಿನ ಭಾನುವಾರ ಪ್ರಸಾರವಾಗಲಿದೆ. ಬಿಗ್ ಬಾಸ್ ಕನ್ನಡ ಸೀಸನ್ 11ರ ಕೊನೆ ಕಿಚ್ಚನ ಪಂಚಾಯ್ತಿ ಇಂದು ಪ್ರಸಾರ ಆಗಲಿದ್ದು, ಡಬಲ್ ಎಲಿಮಿನೇಷನ್ ಪಕ್ಕಾ ಆಗಿದೆ.
ಹೌದು, ಇಂದು ಒಬ್ಬರು ಎಲಿಮಿನೇಟ್ ಆದರೆ ನಾಳೆ ಮತ್ತೊಬ್ಬರು ಮನೆ ಬಿಡಬೇಕಿದೆ. ಇದರ ಒಂದು ಸುಳಿವನ್ನು 'ಸೂಟ್ಕೇಸ್ ಓಪನ್ ಆದ್ರೆ ಆಟ ಖತಂ! ವಾರದ ಕಥೆ ಕಿಚ್ಚನ ಜೊತೆ, ಇಂದು ರಾತ್ರಿ 9ಕ್ಕೆ ಪ್ರಸಾರ' ಎಂಬ ಕ್ಯಾಪ್ಷನ್ನಡಿ ಅನಾವರಣಗೊಂಡಿರುವ ಪ್ರೋಮೋದಲ್ಲಿ ಕಾಣಬಹುದು.
ಪ್ರೋಮೋದಲ್ಲಿ, ಬಿಗ್ ಬಾಸ್ ಕನ್ನಡ ಸೀಸನ್ 11ರ ಟ್ರೋಫಿಯನ್ನು ನಿರೂಪಕ ಕಿಚ್ಚ ಸುದೀಪ್ ಅವರು ಸ್ಪರ್ಧಿಗಳಿಗೆ ತೋರಿಸಿದ್ದಾರೆ. ಇದನ್ನು ಕಂಡ ಮನೆ ಮಂದಿ ಬಹಳ ಉತ್ಸುಕರಾಗಿದ್ದಾರೆ. ಮೂವರು ಕಂಟಸ್ಟೆಂಟ್ಸ್ನ ಫಿನಾಲೆ ವರೆಗೂ ಕಳುಹಿಸ್ಬಿಟ್ಟು, ಐದು ಜನ ಮನೆ ಬಾಗಿಲತ್ರ ಬಂದು ನಿಂತಿದ್ದೀರಿ. ಡಬಲ್ ಎವಿಕ್ಷನ್ ಆಗೋದೊಂತೂ ಹೌದು. ಇಂದು ಒಬ್ಬರು ಹೊರಗಡೆ ಬರ್ತಾರೆ ಎಂದು ಸುದೀಪ್ ತಿಳಿಸಿದ್ದಾರೆ. ನಂತರ, ನಾಮಿನೇಷನ್ ನಲ್ಲಿರೋ ಕಂಟಸ್ಟೆಂಟ್ಸ್ ಆ್ಯಕ್ಟಿವಿಟಿ ರೂಮ್ಗೆ ಬರಬೇಕು. ನಿಮ್ಮಲ್ಲಿ ಒಬ್ಬರು ಈ ಮನೆಗೆ ವಾಪಸ್ ಬರೋಲ್ಲ ಎಂದು ತಿಳಿಸಿದ್ದಾರೆ. ಅಲ್ಲದೇ, ಸೂಟ್ ಕೇಸ್ ಒಳಗಡೆ ನಿಮ್ಮ ಭವಿಷ್ಯ ಇದೆ ಎಂದು ತಿಳಿಸಿದ್ದಾರೆ. ಇದು ಸ್ಪರ್ಧಿಗಳ ಆಶ್ಚರ್ಯಕ್ಕೆ ಕಾರಣವಾಗಿದೆ. ನಿಮ್ಮಲ್ಲಿ ಇಂದು ಓರ್ವರ ಪ್ರಯಾಣ ಮುಗಿಯುತ್ತೆ ಎಂದು ಸಹ ತಿಳಿಸಿದ್ದಾರೆ. ಪ್ಲೀಸ್ ಓಪನ್ ಯುವರ್ ಸೂಟ್ಕೇಸ್ ಎಂದು ಕಿಚ್ಚ ತಿಳಿಸಿದ್ದು, ನಾಮಿನೇಟ್ ಆದ ಸ್ಪರ್ಧಿಗಳೆಲ್ಲರೂ ಒಮ್ಮೆಲೆ ಸೂಟ್ಕೇಸ್ ತೆರೆದಿದ್ದಾರೆ. ಅದರಲ್ಲಿ ಅವರ ಭವಿಷ್ಯವಿದೆ. ಯಾರು ಮನೆಗೆ ಹೋಗ್ತಾರೆ ಅನ್ನೋ ಕುತೂಹಲ ಪ್ರೇಕ್ಷಕರಲ್ಲಿದೆ.
ಫೈನಲಿಸ್ಟ್:
- ಹನುಮಂತು.
- ಮೋಕ್ಷಿತಾ.
- ತ್ರಿವಿಕ್ರಮ್.
ಎಲಿಮಿನೇಷನ್ಗೆ ನಾಮಿನೇಷನ್ನಲ್ಲಿರೋರು?
- ಗೌತಮಿ.
- ಭವ್ಯಾ.
- ಮಂಜು.
- ಧನರಾಜ್.
- ರಜತ್.
ಇದನ್ನೂ ಓದಿ: ಬಿಗ್ ಬಾಸ್ ಗ್ರ್ಯಾಂಡ್ ಫಿನಾಲೆ: ವಿಜೇತರಿಗೆ ಸಿಗುವ ಹಣವೆಷ್ಟು? ಗೆಲುವು ಯಾರಿಗೆ? ಈವೆಂಟ್ ಡೀಟೆಲ್ಸ್
ಭಾಯ್ಜಾನ್ ಖ್ಯಾತಿಯ ಸಲ್ಮಾನ್ ಖಾನ್ ನಿರೂಪಣೆಯಲ್ಲಿ ಮೂಡಿಬರುತ್ತಿರುವ ಭಾರತೀಯ ಮನರಂಜನಾ ಕ್ಷೇತ್ರದ ಅತ್ಯಂತ ಜನಪ್ರಿಯ ಕಾರ್ಯಕ್ರಮ ಬಿಗ್ ಬಾಸ್ ಹಿಂದಿ ಸೀಸನ್ 18ರ ಫಿನಾಲೆ ಜನವರಿ 19, 2025 ಅಂದರೆ ನಾಳೆ ರಾತ್ರಿ 9:30ಕ್ಕೆ ಕಲರ್ಸ್ ಟಿವಿ ಮತ್ತು ಜಿಯೋ ಸಿನಿಮಾದಲ್ಲಿ ಪ್ರಸಾರ ಆಗಲಿದೆ. ಕರಣ್ವೀರ್ ಮೆಹ್ರಾ, ವಿವಿಯನ್ ಡಿಸೆನಾ, ಅವಿನಾಶ್ ಮಿಶ್ರಾ, ಈಶಾ ಸಿಂಗ್, ಚುಮ್ ದರಂಗ್ ಮತ್ತು ರಜತ್ ದಲಾಲ್ ಫೈನಲಿಸ್ಟ್ಗಳಾಗಿದ್ದು, ವಿಜೇತರಿಗೆ ಬಿಗ್ ಬಾಸ್ ಟ್ರೋಫಿ ಮತ್ತು 50 ಲಕ್ಷ ರೂಪಾಯಿ ನಗದು ಬಹುಮಾನ ಸಿಗಲಿದೆ.
ಇದನ್ನೂ ಓದಿ: ಸೈಫ್ ಮೇಲೆ ಹಲ್ಲೆ ನಡೆಸಿದ ನಂತರ ಇಯರ್ಫೋನ್ಗಳನ್ನು ಖರೀದಿಸಿದ ಶಂಕಿತ; ಸಿಸಿಟಿವಿ ದೃಶ್ಯ ಸಂಗ್ರಹಿಸಿದ ಪೊಲೀಸರು