ETV Bharat / technology

ಅವಸರವೇ ಅಪಾಯ, ಎಡವಿದ್ರೆ ಹಣ ಮಾಯ: ಆನ್​ಲೈನ್​ ಶಾಪಿಂಗ್‌ಗೂ ಮುನ್ನ ಎಚ್ಚರ! - Be Careful Before Shopping Online - BE CAREFUL BEFORE SHOPPING ONLINE

Online Shopping: ಒಂದು ವಸ್ತು ಮಾರುಕಟ್ಟೆ ಬೆಲೆಗಿಂತ ಕಡಿಮೆ ಬೆಲೆಗೆ ಸಿಗುತ್ತದೆ ಎಂದ ತಕ್ಷಣ ಕೆಲವರು ಹಿಂದೆ ಮುಂದೆ ನೋಡದೆ ಖರೀದಿಗೆ ಮುಂದಾಗುತ್ತಾರೆ. ಆದರೆ ಇಂಥ ದಿಢೀರ್ ನಿರ್ಧಾರಗಳಲ್ಲಿ ವಂಚನೆಯ ಅಪಾಯ ಹೆಚ್ಚು. ಹೀಗಾಗಿ ಆನ್​ಲೈನ್​ ಶಾಪಿಂಗ್​ ಮಾಡುವ ನಿಮ್ಮ ಗಮನದಲ್ಲಿರಬೇಕಾದ ಕೆಲವು ಮುಖ್ಯ ವಿಚಾರಗಳು ಇಲ್ಲಿವೆ.

ONLINE SHOPPING SCAM  CYBER CRIME  TIPS ON ONLINE SHOPPING  ONLINE SHOPPING OFFERS
ಆನ್​ಲೈನ್​ ಶಾಪಿಂಗ್​ (IANS)
author img

By ETV Bharat Tech Team

Published : Sep 27, 2024, 11:14 AM IST

Be Careful About Online Shopping: ಅವಸರವೇ ಅಪಾಯಕ್ಕೆ ಕಾರಣ ಎಂಬ ಗಾದೆ ಮಾತಿದೆ. ಆನ್​ಲೈನ್​ ಶಾಪಿಂಗ್​ ವಿಚಾರದಲ್ಲೂ ಇದು ಅನ್ವಯ. ಹೌದು, ಸ್ವಲ್ಪ ಯಾಮಾರಿದ್ರೂ ಸಾಕು ನಮ್ಮ ಹಣ ಮಂಗಮಾಯವಾಗುತ್ತದೆ. ಇಂತಹ ಸಂದರ್ಭಗಳಲ್ಲಿ ಯಾವೆಲ್ಲ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು ಎಂಬುದರ ಕುರಿತು Bankbazaar.com ಕೆಲವು ಸಲಹೆಗಳನ್ನು ನೀಡಿದೆ.

ಆಫರ್​ ಆಸೆ: ಹಬ್ಬಗಳು ಮತ್ತು ಇತರ ಪ್ರಮುಖ ಸಂದರ್ಭಗಳಲ್ಲಿ ರಿಯಾಯಿತಿಗಳು ಎಲ್ಲೆಡೆ ಇರುತ್ತವೆ. ಈ ಕುರಿತು ಇಮೇಲ್‌ಗಳು ಮತ್ತು ಫೋನ್​ಗಳಿಗೆ ಸಂದೇಶಗಳು ಬರುತ್ತವೆ. ಉದಾಹರಣೆಗೆ, ಪ್ರಮುಖ ಇ-ಕಾಮರ್ಸ್ ಕಂಪನಿಯಲ್ಲಿ ವಿಶೇಷ ರಿಯಾಯಿತಿಯನ್ನು ನೀಡುವ ಇ-ಮೇಲ್ ಅನ್ನು ವ್ಯಕ್ತಿಯೊಬ್ಬರು ಸ್ವೀಕರಿಸಿದ್ದರು. ಆ ಸಂದೇಶದಲ್ಲಿ 'ಈ ಆಫರ್ ಕೇವಲ ಎರಡು ಗಂಟೆಗಳವರೆಗೆ ಮಾತ್ರ ಲಭ್ಯ. ಮತ್ತು ಐಟಂಗಳು ಸೀಮಿತ' ಎಂದು ಬರೆಯಲಾಗಿತ್ತು. ಇದೊಂದು ಒಳ್ಳೆಯ ಅವಕಾಶವೆಂದು ಆ ವ್ಯಕ್ತಿ ಭಾವಿಸಿದ್ದರು. ಅದರಲ್ಲಿ ನಮೂದಿಸಿದ್ದ ಲಿಂಕ್ ತೆರೆದು ತನ್ನ ಕ್ರೆಡಿಟ್ ಕಾರ್ಡ್ ವಿವರಗಳನ್ನು ನೀಡಿದ್ದಾರೆ. ಆದರೆ, ಕಾರ್ಡ್‌ನಿಂದ ಹಣ ಹೋದ ನಂತರವಷ್ಟೇ ಅವರಿಗೆ ತಾನು ವಂಚನೆಗೊಳಗಾಗಿರುವುದು ಗೊತ್ತಾಗಿದೆ. ಖ್ಯಾತ ಕಂಪನಿಗಳು ಇಂತಹ ಯಾವುದೇ ಆಫರ್​ಗಳನ್ನು ನೀಡುವುದಿಲ್ಲ ಎಂಬುದು ಅವರಿಗೆ ನಂತರ ಅರಿವಾಗಿದೆ.

ಈ ರೀತಿ ಎಚ್ಚರ ವಹಿಸಿ:

  • ಸೀಮಿತ ಸಮಯದ ಕೊಡುಗೆಗಳ ಕುರಿತ ಇಮೇಲ್‌ಗಳು ಮತ್ತು ಸಂದೇಶಗಳ ಬಗ್ಗೆ ಎಚ್ಚರದಿಂದಿರಿ.
  • ಯಾವುದೇ ಸಂದರ್ಭದಲ್ಲಿ ಇಮೇಲ್‌ನಲ್ಲಿರುವ ಲಿಂಕ್ ತೆರೆಯಬೇಡಿ. ಬದಲಿಗೆ ಆಯಾ ಸಂಸ್ಥೆಗಳ ಅಧಿಕೃತ ವೆಬ್‌ಸೈಟ್‌ಗಳಿಗೇ ಹೋಗಿ.
  • ವಿಶೇಷವಾಗಿ, ಸೀಮಿತ ಸಮಯದ ಕೊಡುಗೆಗಳ ಸಂದೇಶಗಳನ್ನು ನಿರ್ಲಕ್ಷಿಸಿ.
  • ಮೋಸದ ಇಮೇಲ್‌ಗಳು ಕಂಪನಿಯ ಹೆಸರುಗಳಲ್ಲಿ ಮುದ್ರಣದೋಷಗಳನ್ನು ಹೊಂದಿರುತ್ತವೆ. ಇವುಗಳನ್ನು ಸ್ವಲ್ಪ ಕಾಳಜಿಯಿಂದ ಗುರುತಿಸಬೇಕು ಅಷ್ಟೇ.
  • ಪಾವತಿಗಳಿಗೆ ಬಂದಾಗ, ಎರಡು ಅಂಶದ ದೃಢೀಕರಣವನ್ನು ಬಳಸಬೇಕು. ಇದು ಹೆಚ್ಚುವರಿ ರಕ್ಷಣೆ ಒದಗಿಸುತ್ತದೆ.
  • ಆಫರ್‌ಗಳನ್ನು ಎರಡು ಬಾರಿ ಪರಿಶೀಲಿಸಿದ ನಂತರವೇ ಖರೀದಿ ನಿರ್ಧಾರ ತೆಗೆದುಕೊಳ್ಳಬೇಕು. ಮೋಸ ಹೋಗಿರುವುದು ಕಂಡುಬಂದಲ್ಲಿ ಕೂಡಲೇ ಬ್ಯಾಂಕ್ ಹಾಗೂ ಸೈಬರ್ ಕ್ರೈಂ ಠಾಣೆಗೆ ದೂರು ನೀಡಿ.

ಈಗ ಹಬ್ಬದ ಸಂದರ್ಭ. ಸೈಬರ್​ ಕಳ್ಳರು ತಂತ್ರಜ್ಞಾನದ ಮೂಲಕ ಹೊಸ ರೀತಿಯಲ್ಲಿ ಅಮಾಯಕರ ಹಣ ದೋಚಲು ಯತ್ನಿಸುತ್ತಾರೆ. ಹೀಗಾಗಿ ಆನ್​ಲೈನ್​ ಶಾಪಿಂಗ್​ ಮಾಡುವ ಮುನ್ನ ಎಚ್ಚರ ವಹಿಸುವಂತೆ ಆಗಾಗ್ಗೆ ಪೊಲೀಸರು ಕೂಡಾ ಸೂಚನೆ ನೀಡುತ್ತಲೇ ಇರುತ್ತಾರೆ.

ಇದನ್ನೂ ಓದಿ: Vivo V40e ಸ್ಮಾರ್ಟ್‌ಫೋನ್‌ ಬಿಡುಗಡೆ: ಬೆಲೆ, ವಿಶೇಷತೆಗಳ ಸಂಪೂರ್ಣ ಮಾಹಿತಿ - Vivo V40e Launched

ETV Bharat Logo

Copyright © 2025 Ushodaya Enterprises Pvt. Ltd., All Rights Reserved.