ETV Bharat / state

ನಾನು ಬಿಜೆಪಿ ವ್ಯವಸ್ಥೆಯಿಂದ ಬೇಸತ್ತು ದೂರ ಉಳಿದಿದ್ದೇನೆ: ಶಾಸಕ ಶಿವರಾಮ್ ಹೆಬ್ಬಾರ್ - SHIVARAM HEBBAR

ಬಿಜೆಪಿಯಲ್ಲಿ ಎಷ್ಟು ಬಣ ಆಗಿದೆ ಎಂದು ಗೊತ್ತಾಗುತ್ತಿಲ್ಲ. ನಾನೂ ಬಣಗಳನ್ನು ಲೆಕ್ಕ ಮಾಡುತ್ತಿದ್ದೇನೆ ಎಂದು ಬಿಜೆಪಿ ಶಾಸಕ ಶಿವರಾಮ್ ಹೆಬ್ಬಾರ್ ವ್ಯಂಗ್ಯವಾಡಿದರು.

SHIVARAM HEBBAR
ಶಾಸಕ ಶಿವರಾಮ್ ಹೆಬ್ಬಾರ್ (ETV Bharat)
author img

By ETV Bharat Karnataka Team

Published : Feb 22, 2025, 10:23 PM IST

ಶಿರಸಿ (ಉತ್ತರ ಕನ್ನಡ): ಬಿಜೆಪಿಯಲ್ಲಿ ಎಷ್ಟು ಬಣ ಆಗಿದೆ ಎಂದು ಗೊತ್ತಾಗುತ್ತಿಲ್ಲ. ನಾನೂ ಬಣಗಳನ್ನು ಲೆಕ್ಕ ಮಾಡುತಿದ್ದೇನೆ. ಬಿಜೆಪಿ ವ್ಯವಸ್ಥೆಯಿಂದ ಬೇಸತ್ತು ನಾನು ದೂರ ಉಳಿದಿದ್ದೇನೆ ಎಂದು ಬಿಜೆಪಿ ಶಾಸಕ ಶಿವರಾಮ್ ಹೆಬ್ಬಾರ್ ಬೇಸರ ವ್ಯಕ್ತಪಡಿಸಿದರು.

ಶಿರಸಿಯಲ್ಲಿ ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಯಾರ‍್ಯಾರ ನಿಲುವು ಸರಿ, ಯಾರ‍್ಯಾರ ನಿಲುವು ತಪ್ಪು ಎನ್ನುವುದು ಇನ್ನೂ ಸ್ವಲ್ಪ ದಿನದಲ್ಲೇ ಗೊತ್ತಾಗುತ್ತದೆ. ನಾನು ಮತ್ತು ಸೋಮಶೇಖರ್ ನಿರ್ಣಯ ತೆಗೆದುಕೊಂಡಾಗ ತಪ್ಪು ಎಂದು ವಿಜಯೇಂದ್ರ ಹಾಗೂ ಯತ್ನಾಳ್ ಸಹ ಹೇಳಿದ್ದರು. ಯಾರ‍್ಯಾರು ನಾವು ತಪ್ಪು ಎಂದು ಹೇಳಿದವರೆಲ್ಲ ಅವರೇ ತಪ್ಪು ಮಾಡುತ್ತಿದ್ದಾರೆ. ಯಾವುದೇ ವಿವಾದಕ್ಕೆ ಬೀಳಬಾರದು ಎಂದು ನಾನು ಸುಮ್ಮನಿದ್ದೇನೆ. ಯಾವಾಗ ವಿವಾದದಲ್ಲಿ ಬೀಳಬೇಕು ಎನಿಸುತ್ತದೆಯೋ ಅಂದು ಬೀಳುತ್ತೇನೆ" ಎಂದು ಅಧ್ಯಕ್ಷ ಸ್ಥಾನದ ಕುರಿತು ಬಿಜೆಪಿ ಪಕ್ಷದಲ್ಲಿನ ಬಣ ರಾಜಕೀಯದ ಬಗ್ಗೆ ಅಸಮಾಧಾನ ಹೊರಹಾಕಿದರು.

ಶಾಸಕ ಶಿವರಾಮ್ ಹೆಬ್ಬಾರ್ (ETV Bharat)

"ಗ್ಯಾರಂಟಿ ಯೋಜನೆಯಿಂದ ಶಾಸಕರ ಕ್ಷೇತ್ರಗಳಿಗೆ ಅನುದಾನ ದೊರೆಯದ ಕುರಿತು ಪ್ರತಿಕ್ರಿಯಿಸಿ, ಗ್ಯಾರಂಟಿ ಯೋಜನೆಯಿಂದ ಅಭಿವೃದ್ಧಿ ಮೇಲೆ ಪರಿಣಾಮವಾಗಿತ್ತು. ಇದೀಗ ಎಲ್ಲ ಸರಿಯಾಗುತ್ತಿದೆ. ಸಮಾನತೆಯ ಸಮಾಜ ನಿರ್ಮಾಣವಾಗಬೇಕು. ಇದಕ್ಕಾಗಿ ಇಂತಹ ಯೋಜನೆ ಕೊಡುವುದು ಅನಿವಾರ್ಯ. ಗ್ಯಾರಂಟಿ ಟೀಕೆ ಮಾಡಿದ ಬಿಜೆಪಿ ಮುಂಬೈ, ದೆಹಲಿಯಲ್ಲಿ ಏನು ಮಾಡಿತು" ಎಂದು ಪ್ರಶ್ನಿಸಿದರು.

ಇದನ್ನೂ ಓದಿ: ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ ಆಗುತ್ತೆ, ಚುನಾವಣೆ ನಡೆದರೆ ನಮ್ಮ ಸ್ಪರ್ಧೆ ಖಚಿತ : ಕುಮಾರ ಬಂಗಾರಪ್ಪ

ಇದನ್ನೂ ಓದಿ: ಸಚಿವನಾಗಿ ನಮ್ಮ ಹೈಕಮಾಂಡ್ ಭೇಟಿ ಮಾಡದೆ ಕೇಶವ ಕೃಪಾ, ಮೋದಿ ಭೇಟಿ ಮಾಡಲಾ: ಪ್ರಿಯಾಂಕ್ ಖರ್ಗೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.