ಮೇಷ: ಉದ್ಯೋಗಕ್ಕೆ ಸಂಬಂಧಿಸಿದಂತೆ ಈ ವಾರದಲ್ಲಿ ನೀವು ಸಮಯವನ್ನು ಚೆನ್ನಾಗಿ ಕಳೆಯಲಿದ್ದೀರಿ. ಅಗತ್ಯವೆನಿಸಿದಲ್ಲಿ ನೀವು ಕೆಲಸವನ್ನು ಬದಲಾಯಿಸಬಹುದು. ನಿಮ್ಮ ಆರೋಗ್ಯದ ಕುರಿತು ಹೇಳುವುದಾದರೆ, ಯೋಗಾಭ್ಯಾಸ ಮಾಡುವ ಮೂಲಕ ಅಥವಾ ಜಿಮ್ಗೆ ಹೋಗಿ ನಿಮ್ಮ ಆರೋಗ್ಯವನ್ನು ನೀವು ಕಾಪಾಡಬಹುದು. ವ್ಯವಹಾರದಲ್ಲಿ ತೊಡಗಿಸಿಕೊಂಡಿರುವ ಜನರಿಗೆ ಸಮಯವು ಅನುಕೂಲಕರವಾಗಿದೆ. ಪ್ರಗತಿ ಸಾಧಿಸಲು ನಿಮಗೆ ಅವಕಾಶ ಲಭಿಸಲಿದೆ. ನಿಮ್ಮ ಸಂಬಂಧದ ಕುರಿತು ಮಾತನಾಡುವುದಾದರೆ, ನಿಮ್ಮ ಪ್ರೇಮಿಯೊಂದಿಗಿನ ಸಂಬಂಧವು ಅಷ್ಟೊಂದು ಚೆನ್ನಾಗಿರದು. ಸಂದೇಹದ ಕಾರಣ ಪರಸ್ಪರ ಅಂತರ ಹೆಚ್ಚುವ ಸಾಧ್ಯತೆ ಇದೆ. ನಿಮ್ಮ ವೈವಾಹಿಕ ಬದುಕಿನ ಕುರಿತು ಚರ್ಚಿಸುವುದಾದರೆ, ನಿಮ್ಮ ಜೀವನ ಸಂಗಾತಿಯ ಜೊತೆಗಿನ ಸಂಬಂಧವು ಒತ್ತಡದಿಂದ ಕೂಡಿರಲಿದೆ. ಪರಸ್ಪರ ಅರಿತುಕೊಂಡು ಮುಂದೆ ಸಾಗಿದರೆ ಸಂಬಂಧದಲ್ಲಿ ಅನುರಾಗ ಮೂಡಲಿದೆ. ಆಸ್ತಿಯನ್ನು ಖರೀದಿಸುವುದು ಲಾಭದಾಯಕ.
ವೃಷಭ: ಈ ವಾರದಲ್ಲಿ ಒಳ್ಳೆಯ ಫಲ ದೊರೆಯಲಿದೆ. ನಿಮ್ಮ ಆರೋಗ್ಯದ ಕುರಿತು ಹೇಳುವುದಾದರೆ, ಮಾನಸಿಕ ಒತ್ತಡದ ಕಾರಣ ನೀವು ಉದ್ವೇಗಕ್ಕೆ ಈಡಾಗಬಹುದು. ಇದರಿಂದಾಗಿ ಖಿನ್ನತೆಯೂ ಉಂಟಾಗಬಹುದು. ನಿಮ್ಮ ವ್ಯವಹಾರದ ಕುರಿತು ಹೇಳುವುದಾದರೆ, ಎಚ್ಚರದಿಂದ ಹೆಜ್ಜೆ ಇಡುವುದು ಒಳ್ಳೆಯದು. ನಿಮ್ಮ ವ್ಯವಹಾರದಲ್ಲಿ ಏರುಪೇರು ಉಂಟಾಗಲಿದ್ದು, ಇದರಿಂದಾಗಿ ಹತಾಶೆ ಮೂಡಬಹುದು. ಉದ್ಯೋಗದಲ್ಲಿರುವವರಿಗೆ ಈ ಸಮಯವು ಸವಾಲಿನಿಂದ ಕೂಡಿರಲಿದೆ. ಕೆಲಸದ ಕಾರಣ ನೀವು ಪ್ರಯಾಣಿಸಬೇಕಾದೀತು. ಹಳೆಯ ಹೂಡಿಕೆಗಳಿಗೆ ಹೆಚ್ಚಿನ ಲಾಭ ಬರಬಹುದು. ಪ್ರೇಮ ಸಂಬಂಧದ ಕುರಿತು ಹೇಳುವುದಾದರೆ, ಈ ವಾರದಲ್ಲಿ ನೀವು ಪ್ರೇಮಿಯೊಂದಿಗೆ ಪ್ರಣಯಭರಿತ ಕ್ಷಣಗಳನ್ನು ಆನಂದಿಸಲಿದ್ದೀರಿ. ಆದರೆ ಕೋಪದ ಕಾರಣ ವೈವಾಹಿಕ ಬದುಕಿನಲ್ಲಿ ಒತ್ತಡ ಕಾಣಿಸಿಕೊಳ್ಳಬಹುದು. ನೀವು ವಿದೇಶಕ್ಕೆ ಪ್ರಯಾಣಿಸಲು ಇಚ್ಛಿಸುವುದಾದರೆ, ಈ ನಿಟ್ಟಿನಲ್ಲಿ ನೀವು ನಿರಂತರವಾಗಿ ಪ್ರಯತ್ನಿಸಿದರೆ ಯಶಸ್ಸು ಲಭಿಸಲಿದೆ. ನೀವು ವಾಹನವನ್ನು ಖರೀದಿಸಲು ಇಚ್ಛಿಸುವುದಾದರೆ, ಸಾಲದ ಮೂಲಕ ನಿಮ್ಮ ಈ ಇಚ್ಛೆಯನ್ನು ಈಡೇರಿಸಲಿದ್ದೀರಿ.
ಮಿಥುನ: ಈ ರಾಶಿಯಲ್ಲಿ ಹುಟ್ಟಿದವರಿಗೆ ಈ ವಾರದಲ್ಲಿ ಉತ್ತಮ ಫಲ ದೊರೆಯಲಿದೆ. ನಿಮ್ಮ ಆರೋಗ್ಯದ ಕುರಿತು ಹೇಳುವುದಾದರೆ, ದೀರ್ಘ ಕಾಲದಿಂದ ನಿಮ್ಮನ್ನು ಕಾಡುತ್ತಿರುವ ಹೊಟ್ಟೆಗೆ ಸಂಬಂಧಿಸಿದ ರೋಗದಿಂದ ನಿಮಗೆ ಕಾಲಕ್ರಮೇಣ ಮುಕ್ತಿ ದೊರೆಯಲಿದೆ. ನಿಮ್ಮ ಸಂಸ್ಥೆಯು ಉತ್ತಮ ಸಾಧನೆ ಮಾಡಲಿದೆ. ನಿಮ್ಮ ಒಳ್ಳೆಯ ಕೆಲಸದ ಅವಕಾಶಗಳು ಲಭಿಸಲಿವೆ. ಕಡಿಮೆ ಪ್ರಯತ್ನ ಪಟ್ಟರೂ ಸಹ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಲಿದ್ದಾರೆ. ಪ್ರಣಯ ಸಂಬಂಧದಲ್ಲಿ ಅಹಂ ಮತ್ತು ಭ್ರಮೆಯು ಸಂಘರ್ಷವನ್ನುಂಟು ಮಾಡಬಹುದು. ನಿಮ್ಮ ಜೀವನ ಸಂಗಾತಿಯ ಜೊತೆಗಿನ ಸಂಬಂಧವು ಹದಗೆಡುವ ಸಾಧ್ಯತೆ ಇದೆ. ನಿಮ್ಮ ಜೀವನ ಸಂಗಾತಿಯು ನಿಮಗಾಗಿ ಸಾಕಷ್ಟು ಸಮಯವನ್ನು ಮೀಸಲಿಡಲು ಸಾಧ್ಯವಾಗದಿದ್ದರೆ, ಅವರ ಅಸಹಾಯಕತೆಯನ್ನು ಅರಿತುಕೊಳ್ಳಿರಿ.
ಕರ್ಕಾಟಕ: ಆರೋಗ್ಯದ ವಿಚಾರದಲ್ಲಿ ಹೇಳುವುದಾದರೆ, ವಾತಾವರಣದಲ್ಲಿ ಬದಲಾವಣೆ ಉಂಟಾಗುವ ಕಾರಣ ಈ ವಾರದಲ್ಲಿ ಶೀತ ಅಥವಾ ಕೆಮ್ಮಿನ ಲಕ್ಷಣಗಳು ಕಾಣಿಸಿಕೊಳ್ಳಬಹುದು. ನಿಮ್ಮ ವ್ಯವಹಾರದ ಕುರಿತು ಚರ್ಚಿಸುವುದಾದರೆ, ನೀವು ಸಾಕಷ್ಟು ಶ್ರಮ ಪಟ್ಟರೆ ನಿಮ್ಮ ಕೆಲಸವು ಸಕಾಲದಲ್ಲಿ ಪೂರ್ಣಗೊಳ್ಳಲಿದೆ. ಉದ್ಯೋಗದಲ್ಲಿರುವವರು ಕಚೇರಿಯ ರಾಜಕೀಯದಲ್ಲಿ ಮೂಗು ತೂರಿಸಿದರೆ ಕೆಲಸದಲ್ಲಿ ಸಮಸ್ಯೆಗಳು ಉಂಟಾಗಬಹುದು. ಉನ್ನತ ಶಿಕ್ಷಣದಲ್ಲಿ ಆಸಕ್ತಿ ಇರುವವರಿಗೆ ಈ ವಾರದಲ್ಲಿ ಪ್ರಯೋಜನ ಉಂಟಾಗಲಿದೆ. ನಿಮ್ಮ ಯಾರಾದರೂ ಸಂಬಂಧಿಕರಿಂದ ಒಳ್ಳೆಯ ಶೈಕ್ಷಣಿಕ ಮಾರ್ಗದರ್ಶನ ದೊರೆಯಲಿದೆ. ಪ್ರಣಯ ಸಂಬಂಧದ ಕುರಿತು ಹೇಳುವುದಾದರೆ, ನೀವು ಇಷ್ಟಪಡುವ ಹಳೆಯ ಸಂಗಾತಿಯತ್ತ ನೀವು ಮರಳಬಹುದು. ವಿವಾಹಿತ ವ್ಯಕ್ತಿಗಳು ಈ ಸಮಯವನ್ನು ಚೆನ್ನಾಗಿ ಆನಂದಿಸಲಿದ್ದಾರೆ. ನಿಮ್ಮ ಜೀವನ ಸಂಗಾತಿಗೆ ಉಡುಗೊರೆಯನ್ನು ನೀಡುವುದರ ಜೊತೆಗೆ ಅವರಿಗಾಗಿ ಏನಾದರೂ ಹೊಸತನ್ನು ಯತ್ನಿಸಲಿದ್ದೀರಿ.
ಸಿಂಹ: ಈ ರಾಶಿಯವರಿಗೆ ಈ ವಾರದಲ್ಲಿ ಒಳ್ಳೆಯ ಫಲ ದೊರೆಯಲಿದೆ. ಉದ್ಯೋಗದಲ್ಲಿರುವವರ ಕುರಿತು ಹೇಳುವುದಾದರೆ, ಕೆಲಸದ ಸ್ಥಳದಲ್ಲಿ ನಿಮಗೆ ಒಳ್ಳೆಯ ಅವಕಾಶಗಳು ಲಭಿಸಲಿವೆ. ವ್ಯವಹಾರದಲ್ಲಿ ತೊಡಗಿಸಿಕೊಂಡಿರುವವರಿಗೆ ಸಮಯವು ಅನುಕೂಲಕರವಾಗಿದ್ದು, ಪ್ರಮುಖ ಸಭೆಗಳಲ್ಲಿ ಭಾಗವಹಿಸಲು ಅವರಿಗೆ ಅವಕಾಶ ಲಭಿಸಲಿದೆ. ನಿಮ್ಮ ಆರೋಗ್ಯದ ಕುರಿತು ಮಾತನಾಡುವುದಾದರೆ, ಸಾಕಷ್ಟು ಮುನ್ನೆಚ್ಚರ ವಹಿಸುವುದರ ಜೊತೆಗೆ ಸಂತುಲಿತ ಆಹಾರ ಕ್ರಮವನ್ನು ಪಾಲಿಸುವುದು ಒಳ್ಳೆಯದು. ಸಂತುಲನವನ್ನು ಕಳೆದುಕೊಂಡರೆ ಹಿಂದಿನ ಕಾಯಿಲೆಯು ಮರುಕಳಿಸುವ ಸಾಧ್ಯತೆ ಇದೆ. ಆರ್ಥಿಕ ಸಂಪನ್ಮೂಲಗಳಿಗೆ ಸಂಬಂಧಿಸಿದಂತೆ ಸಮಸ್ಯೆಗಳು ಎದುರಾಗುವುದಿಲ್ಲ. ಪ್ರಣಯ ಸಂಬಂಧಕ್ಕೆ ಸಂಬಂಧಿಸಿದಂತೆ ಹೇಳುವುದಾದರೆ, ಮೂರನೇ ವ್ಯಕ್ತಿಯು ನಿಮ್ಮ ಸಂಗಾತಿ ಮತ್ತು ನಿಮ್ಮ ನಡುವೆ ಬಿರುಕನ್ನು ಮೂಡಿಸಬಹುದು. ನಿಮ್ಮ ಅಹಂ ನಿಮ್ಮ ವೈವಾಹಿಕ ಬದುಕಿನಲ್ಲಿ ಒತ್ತಡ ಸೃಷ್ಟಿಸಬಹುದು. ನಿಮ್ಮ ಅಹಂ ಅನ್ನು ದೂರವಿಟ್ಟು ನಿಮ್ಮ ಜೀವನ ಸಂಗಾತಿಯತ್ತ ನೀವು ಹೊಂದಿರುವ ನಿಜವಾದ ಭಾವನೆಗಳನ್ನು ವ್ಯಕ್ತಪಡಿಸಿ. ಇದು ನಿಮ್ಮ ನಡುವಿನ ಸಮಸ್ಯೆಗಳನ್ನು ಬಗೆಹರಿಸಲಿದ್ದು, ಪರಸ್ಪರದ ಹೃದಯದಲ್ಲಿ ಮತ್ತೆ ಸ್ಥಾನ ಗಳಿಸಲು ಸಹಕರಿಸಲಿದೆ. ಈ ವಾರದಲ್ಲಿ ನಿಮ್ಮ ಮಕ್ಕಳಿಗಾಗಿಯೂ ಸಮಯವನ್ನು ಮೀಸಲಿಡಿರಿ.
ಕನ್ಯಾ: ಈ ರಾಶಿಯಲ್ಲಿ ಜನಿಸಿದವರಿಗೆ ಈ ವಾರವು ಅನುಕೂಲಕರವಾಗಿದೆ. ಉದ್ಯೋಗದಲ್ಲಿರುವವರ ಕುರಿತು ಹೇಳುವುದಾದರೆ, ನೀವು ಅದ್ಭುತ ಸಾಧನೆ ಮಾಡಲಿದ್ದೀರಿ. ನಿಮಗೆ ಬಡ್ತಿ ದೊರೆಯಬಹುದು. ವ್ಯಾಪಾರೋದ್ಯಮಿಗಳು ಸ್ವಲ್ಪ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು. ಏನಾದರೂ ಹೊಸತನ್ನು ಪ್ರಾರಂಭಿಸುವ ಮೊದಲು ತಜ್ಞರಿಂದ ನೆರವನ್ನು ಪಡೆಯಿರಿ. ಆರೋಗ್ಯದ ಕುರಿತು ಹೇಳುವುದಾದರೆ, ನಿಮ್ಮ ದೈಹಿಕ ಕ್ಷಮತೆಯನ್ನು ಕಾಪಾಡಿಕೊಳ್ಳುವುದಕ್ಕಾಗಿ ಯೋಗ ಮತ್ತು ಬೆಳಗ್ಗಿನ ನಡಿಗೆಯನ್ನು ಮಾಡಬೇಕು. ಇಲ್ಲದಿದ್ದರೆ ಕಾಯಿಲೆಯು ಮರುಕಳಿಸಬಹುದು. ಶೈಕ್ಷಣಿಕ ಸಂಶೋಧನೆಯ ಅವಕಾಶಗಳನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ. ನೀವು ಹಣವನ್ನು ಪೋಲು ಮಾಡುವ ಸಾಧ್ಯತೆ ಇದೆ. ನಿಮ್ಮ ಪ್ರಣಯ ಸಂಬಂಧದ ಕುರಿತು ಹೇಳುವುದಾದರೆ, ನಿಮ್ಮ ಸಂಗಾತಿಯ ಕುರಿತು ನೀವು ಸಂದೇಹವನ್ನು ವ್ಯಕ್ತಪಡಿಸಬಹುದು. ಇದರಿಂದಾಗಿ ಸಂಬಂಧದಲ್ಲಿ ಬಿರುಕು ಮೂಡುವ ಸಾಧ್ಯತೆ ಇದೆ. ನಿಮ್ಮ ಜೀವನ ಸಂಗಾತಿಯೊಂದಿಗೆ ನೀವು ಆನಂದಿಸಲಿದ್ದು, ನಿಮ್ಮ ವೈವಾಹಿಕ ಬದುಕು ಸಂತಸದಿಂದ ಮುಂದೆ ಸಾಗಲಿದೆ.
ತುಲಾ: ಈ ರಾಶಿಯಲ್ಲಿ ಜನಿಸಿದವರಿಗೆ ಈ ವಾರವು ಅನುಕೂಲಕರವಾಗಿದೆ. ನೀವು ಉದ್ಯೋಗದಲ್ಲಿದ್ದರೆ, ಕೆಲಸದ ಬದಲಾವಣೆಯ ಬಗ್ಗೆ ಯೋಚಿಸಿದರೆ ನಿಮ್ಮ ಈಗಿನ ಕೆಲಸವನ್ನೇ ನೀವು ಮುಂದುವರಿಸಿ. ನಿಮ್ಮ ಸರ್ಕಾರಿ ದಾಖಲೆಗಳನ್ನು ಸರಿಯಾಗಿ ನಿರ್ವಹಿಸಿ. ವ್ಯವಹಾರವನ್ನು ನಡೆಸುವಾಗ ಎಚ್ಚರ ವಹಿಸಿ. ಇಲ್ಲದಿದ್ದರೆ ನಿಮ್ಮ ಸಂಸ್ಥೆಯ ಮೇಲೆ ದಾಳಿಯಾಗುವ ಸಾಧ್ಯತೆ ಇದ್ದು ನಿಮಗೆ ಸಮಸ್ಯೆಗಳು ಎದುರಾಗಬಹುದು. ನೀವು ಗಳಿಕೆಗಿಂತ ಹೆಚ್ಚಿನ ಹಣವನ್ನು ಖರ್ಚು ಮಾಡಲಿದ್ದು, ಇದರಿಂದ ಬೇಸರ ಉಂಟಾಗಬಹುದು. ಉನ್ನತ ಶಿಕ್ಷಣವನ್ನು ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ವಿದೇಶದಲ್ಲಿ ಕಲಿಯುವ ಅವಕಾಶ ಲಭಿಸಲಿದೆ. ಪ್ರಣಯ ಸಂಬಂಧದ ಕುರಿತು ಹೇಳುವುದಾದರೆ, ದರ್ಪದ ಕಾರಣ ಸಂಘರ್ಷ ಉಂಟಾಗಿ ಸಂಬಂಧವು ಕೊನೆಗೊಳ್ಳುವ ಸಾಧ್ಯತೆಯೂ ಇದೆ. ವೈವಾಹಿಕ ಬದುಕಿನಲ್ಲೂ ಒತ್ತಡ ಕಾಣಿಸಿಕೊಳ್ಳಬಹುದು. ನೀವು ಈ ಕುರಿತು ಮುಂಜಾಗರೂಕತೆ ವಹಿಸಬೇಕು. ಇಲ್ಲದಿದ್ದರೆ ನಿಮ್ಮ ಸಂಬಂಧವು ದುರಸ್ತಿಯಾಗದಷ್ಟು ಹದಗೆಡಬಹುದು.
ವೃಶ್ಚಿಕ: ಈ ರಾಶಿಯವರಿಗೆ ಈ ವಾರವು ಅನುಕೂಲಕರ. ಉದ್ಯೋಗಸ್ಥರ ಕುರಿತು ಹೇಳುವುದಾದರೆ, ನಿಮ್ಮ ಕೆಲಸದಲ್ಲಿ ನಿಮಗೆ ಬಡ್ತಿ ದೊರೆಯಬಹುದು. ವ್ಯವಹಾರದಲ್ಲಿ ತೊಡಗಿಸಿಕೊಂಡಿರುವವರು ಹೊಸ ಹೂಡಿಕೆದಾರನನ್ನು ಪಡೆಯಬಹುದು. ಶೈಕ್ಷಣಿಕ ಕ್ಷೇತ್ರದ ಕುರಿತು ಹೇಳುವುದಾದರೆ, ಉನ್ನತ ಶಿಕ್ಷಣವನ್ನು ಪಡೆಯುತ್ತಿರುವವರು ಯಶಸ್ಸನ್ನು ಗಳಿಸಲಿದ್ದಾರೆ. ವಿದೇಶಕ್ಕೆ ಹೋಗುವುದಕ್ಕಾಗಿ ಅಥವಾ ನಿಮ್ಮ ಕುಟುಂಬದ ಪ್ರಗತಿಗಾಗಿ ನೀವು ಸಾಕಷ್ಟು ಹಣವನ್ನು ಖರ್ಚು ಮಾಡಲಿದ್ದೀರಿ. ಪ್ರೇಮ ಸಂಬಂಧದಲ್ಲಿ, ಕೆಲಸದ ಒತ್ತಡದ ಕಾರಣ ನಿಮ್ಮ ಸಂಗಾತಿಗೆ ಸಮಯವನ್ನು ಮೀಸಲಿಡಲು ನಿಮಗೆ ಸಾಧ್ಯವಾಗದು. ಇದರಿಂದಾಗಿ ನಿಮ್ಮ ಸಂಬಂಧದಲ್ಲಿ ಒತ್ತಡ ಕಾಣಿಸಿಕೊಳ್ಳಬಹುದು. ನಿಮ್ಮ ವೈವಾಹಿಕ ಬದುಕಿನಲ್ಲಿ ಒತ್ತಡ ಉಂಟಾಗಬಹುದು. ನಿಮ್ಮ ಸಂಬಂಧವನ್ನು ಸುಧಾರಿಸಲು ನೀವು ಯತ್ನಿಸಬೇಕು. ಇಲ್ಲದಿದ್ದರೆ ನಿಮ್ಮ ಜೀವನ ಸಂಗಾತಿಯು ನೋವನ್ನು ಅನುಭವಿಸಬಹುದು. ಹೀಗಾಗಿ ನಿಮ್ಮ ವೈವಾಹಿಕ ಸಂಬಂಧವು ದುರ್ಬಲಗೊಳ್ಳಲಿದೆ.
ಧನು: ಈ ರಾಶಿಯಲ್ಲಿ ಜನಿಸಿದವರಿಗೆ ಈ ವಾರವು ಅನುಕೂಲಕರವಾಗಿದೆ. ಉದ್ಯೋಗದಲ್ಲಿರುವವರಿಗೆ ಬಡ್ತಿ ಸಿಗುವ ಸಾಧ್ಯತೆ ಇದೆ. ವ್ಯಾಪಾರೋದ್ಯಮಿಗಳಿಗೂ ಈ ವಾರದಲ್ಲಿ ಪ್ರಯೋಜನ ಲಭಿಸಲಿದೆ. ಕೆಲಸದ ಸ್ಥಳದಲ್ಲಿ ನಿಮ್ಮ ಪ್ರಯತ್ನಗಳಿಗೆ ತಕ್ಕುದಾದ ಪ್ರಶಂಸೆ ದೊರೆಯಲಿದೆ. ಇದರಿಂದಾಗಿ ನಿಮಗೆ ಸಾಕಷ್ಟು ತೃಪ್ತಿ ದೊರೆಯಲಿದೆ. ನಿಮ್ಮ ಆರೋಗ್ಯದ ಕುರಿತು ಹೇಳುವುದಾದರೆ, ನಿಮ್ಮ ದೈಹಿಕ ಯೋಗಕ್ಷೇಮವನ್ನು ಕಾಪಾಡುವುದಕ್ಕಾಗಿ ನಿಮ್ಮ ದೈನಂದಿನ ಬದುಕಿನಲ್ಲಿ ಯೋಗ, ಜಿಮ್ ಮತ್ತು ಇತರ ವ್ಯಾಯಾಮಗಳನ್ನು ಸೇರಿಸಿಕೊಳ್ಳಬೇಕು. ವ್ಯಾಪಾರೋದ್ಯಮಿಗಳು ಲಾಭವನ್ನು ಪಡೆಯಲಿದ್ದಾರೆ. ಉದ್ಯಮಿಗಳು ವ್ಯವಹಾರದ ಉದ್ದೇಶದಿಂದ ವಿದೇಶಕ್ಕೆ ಪ್ರಯಾಣಿಸಲಿದ್ದಾರೆ ಹಾಗೂ ಹೊಸ ಸಂಪರ್ಕವನ್ನು ಪಡೆಯಲಿದ್ದಾರೆ. ನಿಮ್ಮ ಪ್ರಣಯ ಸಂಬಂಧವು ಸಾಕಷ್ಟು ದುರ್ಬಲಗೊಳ್ಳಲಿದೆ. ಹೀಗಾಗಿ ಮುಂಜಾಗರೂಕತೆ ವಹಿಸಿ. ವೈವಾಹಿಕ ಬದುಕು ಚೆನ್ನಾಗಿರಲಿದೆ. ನೀವು ಮತ್ತು ನಿಮ್ಮ ಜೀವನ ಸಂಗಾತಿಯು ಒಟ್ಟಿಗೆ ಸಮಯವನ್ನು ಕಳೆಯಲಿದ್ದೀರಿ. ನೀವು ನಿಮ್ಮ ಜೀವನ ಸಂಗಾತಿಯೊಂದಿಗೆ ಎಲ್ಲಾದರೂ ಹೋಗಬಹುದು.
ಮಕರ: ಈ ರಾಶಿಯಲ್ಲಿ ಹುಟ್ಟಿದವರಿಗೆ ಈ ವಾರವು ಅನುಕೂಲಕರವಾಗಿದೆ. ಉದ್ಯೋಗದಲ್ಲಿರುವವ ಕುರಿತು ಹೇಳುವುದಾದರೆ, ಸಾಕಷ್ಟು ಎಚ್ಚರಿಕೆಯಿಂದ ಕೆಲಸದ ಸ್ಥಳದಲ್ಲಿ ಮುಂದುವರಿಯುವುದು ಒಳ್ಳೆಯದು. ನಿಮ್ಮ ಸಾಧನೆಯ ಕುರಿತು ನಿಮ್ಮ ಮೇಲ್ವಿಚಾರಕರು ಸಂತಸ ವ್ಯಕ್ತಪಡಿಸಲಿದ್ದಾರೆ. ನಿಮ್ಮ ಆರೋಗ್ಯವು ಚೆನ್ನಾಗಿರಲಿದೆ. ಮೈಗ್ರೇನ್ ಸಮಸ್ಯೆಯು ಮರುಕಳಿಸಬಹುದು. ವ್ಯವಹಾರಕ್ಕೆ ಸಂಬಂಧಿಸಿದಂತೆ ಸಮಯವು ಅನುಕೂಲಕರವಾಗಿದೆ. ನಿಮ್ಮ ಹಿಂದಿನ ವ್ಯವಹಾರವನ್ನು ನೀವು ಪುನರುಜ್ಜೀವನಗೊಳಿಸುವ ಸಾಧ್ಯತೆ ಇದೆ. ಹಣಕಾಸಿನ ವಿಚಾರದಲ್ಲಿಯೂ ಸಮಯವು ಚೆನ್ನಾಗಿರಲಿದೆ. ನಿಮ್ಮ ವ್ಯವಹಾರದ ಮೂಲಕ ನೀವು ಸಾಕಷ್ಟು ಹಣವನ್ನು ಗಳಿಸಲಿದ್ದೀರಿ. ಶಿಕ್ಷಣಕ್ಕೆ ಸಂಬಂಧಿಸಿದಂತೆ ಸಮಸ್ಯೆಗಳು ಎದುರಾಗಬಹುದು. ನಿಮ್ಮ ಅಧ್ಯಯನದ ಮೇಲೆ ಗಮನ ನೀಡಲು ನಿಮಗೆ ಸಾಧ್ಯವಾಗದು. ನಿಮ್ಮ ಪ್ರಣಯ ಸಂಬಂಧದಲ್ಲಿ ಮಾಧುರ್ಯ ನೆಲೆಸಲಿದೆ. ನಿಮ್ಮ ಸಂಗಾತಿಯೊಂದಿಗೆ ನೀವು ಯಾವುದಾದರೂ ಸ್ಥಳಕ್ಕೆ ಭೇಟಿ ನೀಡಬಹುದು. ವೈವಾಹಿಕ ಬದುಕಿನಲ್ಲೂ ಸಂತಸ ನೆಲೆಸಲಿದೆ. ನಿಮ್ಮ ಜೀವನ ಸಂಗಾತಿಗಾಗಿ ಹೆಚ್ಚಿನ ಸಮಯವನ್ನು ಮೀಸಲಿಡಲಿದ್ದೀರಿ.
ಕುಂಭ: ಈ ರಾಶಿಯವರಿಗೆ ಈ ವಾರದಲ್ಲಿ ಒಳ್ಳೆಯ ಫಲ ದೊರೆಯಲಿದೆ. ನಿಮ್ಮ ಆರೋಗ್ಯದ ಕುರಿತು ಹೇಳುವುದಾದರೆ, ನೀವು ಯಾವುದಾದರೂ ಕಾಯಿಲೆಯಿಂದ ಬಳಲುತ್ತಿದ್ದರೆ ತಜ್ಞ ವೈದ್ಯರಿಂದ ಪರೀಕ್ಷೆ ಮಾಡಿಸಿಕೊಳ್ಳುವುದು ಒಳ್ಳೆಯದು. ವೃತ್ತಿ ಮತ್ತು ವ್ಯವಹಾರಕ್ಕೆ ಸಂಬಂಧಿಸಿದಂತೆ ಹೇಳುವುದಾದರೆ, ನಿಮ್ಮ ಉದ್ಯಮವು ಪ್ರಗತಿ ಸಾಧಿಸಲಿದೆ. ನಿಮಗೆ ವಿದೇಶಿ ಸಂಪರ್ಕ ದೊರೆಯಲಿದೆ. ಇದರ ಪರಿಣಾಮವಾಗಿ ನೀವು ಹೆಚ್ಚುವರಿ ಹಣವನ್ನು ಗಳಿಸಲಿದ್ದೀರಿ. ಉದ್ಯೋಗದಲ್ಲಿರುವವರಿಗೆ ಸಮಯವು ಅನುಕೂಲಕರವಾಗಿದೆ. ನಿಮ್ಮ ಕೆಲಸದಲ್ಲಿ ನೀವು ಪ್ರಗತಿ ಸಾಧಿಸಲಿದ್ದೀರಿ. ಯುವಜನರು ಶಿಕ್ಷಣದಲ್ಲಿ ಆಸಕ್ತಿ ತೋರದ ಕಾರಣ ಅವರಿಗೆ ಒಂದಷ್ಟು ಸಮಸ್ಯೆಗಳು ಎದುರಾಗಬಹುದು. ಉನ್ನತ ಶಿಕ್ಷಣ ಪಡೆಯುತ್ತಿರುವವರಿಗೂ ಸಮಯವು ಅನುಕೂಲಕರವಾಗಿಲ್ಲ. ಪ್ರೇಮ ಸಂಬಂಧದ ಕುರಿತು ಹೇಳುವುದಾದರೆ, ನಿಮ್ಮ ಸಂಗಾತಿಯ ಜೊತೆಗಿನ ಸಂಬಂಧವು ಹದಗೆಡಬಹುದು. ಇದರಿಂದಾಗಿ ಸಂಬಂಧದಲ್ಲಿ ಒತ್ತಡ ಉಂಟಾಗಬಹುದು. ಅಹಂ ಅನ್ನು ದೂರ ಮಾಡಿ ಕರುಣೆಯನ್ನು ಮೈಗೂಡಿಸಿಕೊಳ್ಳುವುದು ಒಳ್ಳೆಯದು.
ಮೀನ: ಈ ರಾಶಿಯಲ್ಲಿ ಹುಟ್ಟಿದವರಿಗೆ ಈ ವಾರವು ಅನುಕೂಲಕರವಾಗಿದೆ. ನಿಮ್ಮ ಆರೋಗ್ಯವು ಚೆನ್ನಾಗಿರಲಿದೆ. ನೀವು ಹಿತಮಿತವಾಗಿ ಆಹಾರ ಸೇವಿಸುವುದು ಒಳ್ಳೆಯದು. ಒಂದಷ್ಟು ಮಾನಸಿಕ ಒತ್ತಡಗಳ ಕಾರಣ ನೀವು ಪ್ರತ್ಯೇಕತೆಯ ಭಾವನೆ ಅನುಭವಿಸಬಹುದು. ಇಂದು ನಿಮ್ಮ ಹೆಚ್ಚಿನ ಹಣವನ್ನು ಕುಟುಂಬಕ್ಕಾಗಿ ಖರ್ಚು ಮಾಡಬಹುದು. ನಿಮ್ಮ ವ್ಯವಹಾರದಲ್ಲಿ ನಿಮಗೆ ಯಶಸ್ಸು ದೊರೆಯಲಿದೆ. ನೀವು ವ್ಯವಹಾರದಲ್ಲಿ ಸಾಕಷ್ಟು ಪ್ರಗತಿ ಸಾಧಿಸಲಿದ್ದೀರಿ. ಉದ್ಯೋಗದಲ್ಲಿರುವವರಿಗೆ ಸಮಯವು ಅನುಕೂಲಕರವಾಗಿದೆ. ನಿಮ್ಮ ಕೆಲಸವನ್ನು ಬದಲಾಯಿಸಲು ನೀವು ಇಚ್ಛಿಸುವುದಾರೆ ಸಮಯವು ಅನುಕೂಲಕರವಾಗಿದೆ. ಪ್ರಣಯ ಸಂಬಂಧದ ಕುರಿತು ಚರ್ಚಿಸುವುದಾದರೆ, ನಿಮ್ಮ ಸಂಗಾತಿಯ ಅನುರಾಗವು ನಿಮಗೆ ಲಭಿಸಲಿದೆ. ನಿಮ್ಮ ಸಂಗಾತಿಯ ಜೊತೆಗಿನ ಸಂಬಂಧವು ಚೆನ್ನಾಗಿರಲಿದೆ. ಯುವಜನರು ತಮ್ಮ ಶಿಕ್ಷಣದ ಕ್ಷೇತ್ರದಲ್ಲಿ ಯಾವುದಾದರೂ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುತ್ತಿದ್ದರೆ ಅವರಿಗೆ ಯಶಸ್ಸು ಲಭಿಸಲಿದೆ. ಸರ್ಕಾರಿ ಕೆಲಸವನ್ನು ಪಡೆಯುವ ಸಾಧ್ಯತೆಗಳು ಅಧಿಕವಾಗಿವೆ.