How To Prepare Mysuru Tomato Rasam: ಊಟಕ್ಕಾಗಿ ಟೊಮೆಟೊ ರಸಂ ಮತ್ತು ಮೆಣಸಿನ ರಸಂ ಇದ್ದೇ ಇರುತ್ತದೆ. ಟೊಮೆಟೊ ರಸಂನಲ್ಲೂ ಹಲವು ವಿಧಗಳಿವೆ. ಇದನ್ನು ವಿವಿಧ ಪ್ರದೇಶಗಳಲ್ಲಿ ವಿಭಿನ್ನ ರುಚಿಯೊಂದಿಗೆ ತಯಾರಿಸಲಾಗುತ್ತದೆ. ಹಾಗಾದ್ರೆ ಈ ಬಾರಿ ನೀವು ಮನೆಯಲ್ಲಿಯೇ ಮೈಸೂರು ಸ್ಟೈಲ್ನ ಟೊಮೆಟೊ ರಸಂ ಟ್ರೈ ಮಾಡಿ ನೋಡಿ. ಮೈಸೂರು ಶೈಲಿಯಲ್ಲಿ ಟೊಮೆಮೊ ರಸಂ ತಯಾರಿಸಲು ಹೆಚ್ಚು ಸಮಯವೇನು ಬೇಕಾಗುವುದಿಲ್ಲ. ಇದರ ರುಚಿಯೂ ಸೂಪರ್ ಆಗಿರುತ್ತದೆ. ಈ ರಸಂ ಮಾಡುವುದು ಹೇಗೆ ಎನ್ನವುದನ್ನು ತಿಳಿಯೋಣ.
ಮೈಸೂರು ಟೊಮೆಟೊ ರಸಂಗೆ ಬೇಕಾಗುವ ಪದಾರ್ಥಗಳು:
ತೊಗರಿ ಬೇಳೆ: ನಾಲ್ಕು ಚಮಚ
ಹುಣಸೆಹಣ್ಣು- ಸುಮಾರು ನಿಂಬೆಹಣ್ಣಿನ ಗಾತ್ರದಷ್ಟು
ಟೊಮೆಟೊ - 4
ಮೆಣಸಿನಕಾಯಿ - 4
ಬೆಲ್ಲ - ಒಂದು ಚಮಚ
ಸ್ವಲ್ಪ ಕರಿಬೇವಿನ ಎಲೆಗಳು
ಅರಿಶಿನ - ಚಿಟಿಕೆ
ಅಡುಗೆ ಎಣ್ಣೆ -ಅಗತ್ಯಕ್ಕೆ ತಕ್ಕಷ್ಟು
ಉಪ್ಪು - ರುಚಿಗೆ ತಕ್ಕಷ್ಟು
ಸ್ವಲ್ಪ ಕೊತ್ತಂಬರಿ ಸೊಪ್ಪು
ರಸಂ ಪುಡಿಗಾಗಿ ಬೇಕಾಗುವ ಸಾಮಗ್ರಿಗಳು:
ಅಡುಗೆ ಎಣ್ಣೆ - 2 ಟೀ ಸ್ಪೂನ್
ಹಸಿ ಕಡಲೆ - ಒಂದು ಚಮಚ
ಹಸಿ ಕೊಬ್ಬರಿ - 1/2 ಕಪ್
ಕರಿಮೆಣಸು - 1 ಟೀ ಸ್ಪೂನ್
ಬ್ಯಾಡಗಿ ಕೆಂಪು ಮೆಣಸಿನಕಾಯಿ-3
ಧನಿಯಾ ಪುಡಿ - 1 ಟೇಬಲ್ ಸ್ಪೂನ್
ಜೀರಿಗೆ - ಅರ್ಧ ಚಮಚ
ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:
ಜೀರಿಗೆ- 1 ಟೀ ಸ್ಪೂನ್
ತುಪ್ಪ- 1 ಚಮಚ
ಸಾಸಿವೆ- 1 ಟೀ ಸ್ಪೂನ್
ಕಂಪು ಮೆಣಸಿನಕಾಯಿ - 2
ಇಂಗು - ಒಂದು ಟೀ ಚಮಚ
ಮೈಸೂರು ಟೊಮೆಟೊ ರಸಂ ಹೇಗೆ ತಯಾರಿಸೋದು ಹೇಗೆ?:
- ಮೊದಲು ತೊಗರಿ ಬೇಳೆಯನ್ನು ನೀರಿನಲ್ಲಿ ಅರ್ಧ ಗಂಟೆ ನೆನೆಸಿಡಿ.
- ನಂತರ ಕುಕ್ಕರ್‌ನಲ್ಲಿ ಈ ಬೇಳೆ ಹಾಕಿ, ಮತ್ತು ಅದಕ್ಕೆ ನೀರು ಹಾಕಿ ಎರಡು ಸೀಟಿ ಬರುವವರೆಗೆ ಕಡಿಮೆ ಉರಿಯಲ್ಲಿ ಬೇಯಿಸಿ. ಬೇಳೆ ಬೆಂದ ನಂತರ ಮುಚ್ಚಳ ತೆಗೆದು ಪಕ್ಕಕ್ಕೆ ಇಡಿ.
- ಹಾಗೆಯೇ ಇನ್ನೊಂದು ಒಲೆಯ ಮೇಲೆ ಬಾಣಲೆ ಇಟ್ಟು ಎಣ್ಣೆ ಹಾಕಿ ಬ್ಯಾಡಗಿ ಮೆಣಸಿನಕಾಯಿ, ಹಸಿಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು, ಜೀರಿಗೆ ಹಾಕಿ ಹುರಿಯಿರಿ.
- ಇದರಲ್ಲಿ ಹಸಿಕೊಬ್ಬರಿ ಹಾಕಿ ಸಣ್ಣ ಉರಿಯಲ್ಲಿ ಚೆನ್ನಾಗಿ ಪರಿಮಳ ಬರುವವರೆಗೆ ಹುರಿಯಿರಿ. ರುಚಿಕರ ಮೈಸೂರು ಶೈಲಿಯ ರಸಂ ಸವಿಯಬೇಕಾದರೆ ಬ್ಯಾಡಗಿ ಮೆಣಸಿಕಾಯಿಯನ್ನೇ ಬಳಸಬೇಕು. ಇವು ಸೂಪರ್ ಮಾರ್ಕೆಟ್ಗಳಲ್ಲಿ ದೊರೆಯುತ್ತವೆ. ನಿಮ್ಮ ಬಳಿ ಬ್ಯಾಡಗಿ ಮೆಣಸಿನಕಾಯಿ ಇಲ್ಲದಿದ್ದರೆ, ನೀವು ಒಣ ಮಿರ್ಚಿಯನ್ನು ಬಳಸಬಹುದು.
- ಈ ಮಿಶ್ರಣ ತಣ್ಣಗಾದ ನಂತರ ಮಿಕ್ಸಿ ಜಾರ್ಗೆ ಹಾಕಿ ರುಬ್ಬಿಕೊಂಡು ಪ್ಲೇಟ್ಗೆ ತೆಗೆದುಕೊಳ್ಳಿ.
- ಈಗ ಒಂದು ಬೌಲ್ ತೆಗೆದುಕೊಂಡು ಕತ್ತರಿಸಿದ ಟೊಮೆಟೊ ತುಂಡುಗಳು, ಸ್ವಲ್ಪ ಉಪ್ಪು, ಬೆಲ್ಲ ಮತ್ತು ಅರಿಶಿನ ಸೇರಿಸಿ.
- ಅಲ್ಲದೆ, ಅದರಲ್ಲಿ ಹುಣಸೆ ಹಣ್ಣು ಮತ್ತು ಕರಿಬೇವಿನ ಎಲೆಗಳನ್ನು ಹಾಕಿ ಮತ್ತು ಇನ್ನೊಂದು ಬಾರಿ ಬೆರೆಸಿ.
- ಈಗ ದೊಡ್ಡ ಬಟ್ಟಲಿನಲ್ಲಿ ಟೊಮೆಟೊ ರಸವನ್ನು ತೆಗೆದುಕೊಳ್ಳಿ. ಅದರಲ್ಲಿ ಒಂದು ಲೀಟರ್ ನೀರನ್ನು ಸುರಿಯಿರಿ. ಜೊತೆಗೆ ಹಸಿರು ಮೆಣಸಿನಕಾಯಿಯನ್ನು ಹಾಕಿ ಸಣ್ಣ ಉರಿಯಲ್ಲಿ ರಸಂ ಅನ್ನು ಕುದಿ ಬರುವವರೆಗೆ ಬೇಯಿಸಿ.
- ಕುದಿಯುವ ಟೊಮೆಟೊ ರಸಂ ಬೇಯಿಸಿದ ಬೇಳೆ, ರುಬ್ಬಿದ ಮಸಾಲಾ ಪುಡಿ ಮತ್ತು ಕೊತ್ತಂಬರಿ ಸೊಪ್ಪನ್ನು ಸೇರಿಸಿ ಮತ್ತು ಹೆಚ್ಚಿನ ಉರಿಯಲ್ಲಿ ಮತ್ತೆ ನಾಲ್ಕು ನಿಮಿಷ ಕುದಿಸಿ. ನಂತರ ರಸಂ ಕಡಿಮೆ ಉರಿಯಲ್ಲಿ ಕುದಿಸಿ.
- ಇನ್ನೊಂದು ಕಡೆ ಒಲೆ ಆನ್ ಮಾಡಿ ಬಾಣಲೆಗೆ ತುಪ್ಪ ಹಾಕಿ ಸಾಸಿವೆ, ಜೀರಿಗೆ, ಕರಿಮೆಣಸು, ಇಂಗು, ಕರಿಬೇವಿನ ಸೊಪ್ಪು ಹಾಕಿ ಹುರಿಯಿರಿ.
- ಈಗ ಕುದಿಯುತ್ತಿರುವ ರಸಂಗೆ ಒಗ್ಗರಣೆಯನ್ನು ಸೇರಿಸಿ ಕುದಿಸಿದರೆ ಸಾಕು, ಮೈಸೂರು ಟೊಮೆಟೊ ರಸಂ ರೆಡಿ.
- ಈ ಮೈಸೂರು ಸ್ಟೈಲ್ ರಸಂ ಜೊತೆಗೆ ಅನ್ನ ಅಥವಾ ರಾಗಿ ಮುದ್ದೆ ತಿನ್ನಬಹುದು. ನಿಮಗೆ ಇಷ್ಟವಾದರೆ, ಈ ರಸಂ ಅನ್ನು ನೀವು ಮನೆಯಲ್ಲಿ ಟ್ರೈ ಮಾಡಿ ನೋಡಿ.