ನವದೆಹಲಿ: ಕ್ರಿಕೆಟ್ ಇಂದು ವಿಶ್ವದ ಎರಡನೇ ಜನಪ್ರಿಯ ಕ್ರೀಡೆಯಾಗಿ ಗುರುತಿಸಿಕೊಂಡಿದೆ. ಅಲ್ಲದೇ ಈ ಕ್ರೀಡೆಯಲ್ಲಿ ಆಟಗಾರರು ಖ್ಯಾತಿ ಪಡೆಯುವುದರ ಜೊತೆಗೆ ಆರ್ಥಿಕವಾಗಿಯೂ ಬಲಿಷ್ಠರಾಗುತ್ತಾರೆ. ಕೇವಲ ಜಾಹೀರಾತು ಮಾತ್ರವಲ್ಲದೇ ಆಯಾದೇಶಗಳು ಕ್ರಿಕೆಟ್ ಮಂಡಳಿಯಿಂದಲೂ ಆಟಗಾರರು ಕೈತುಂಬ ಹಣವನ್ನು ಸಂಪಾದಿಸುತ್ತಾರೆ. ಅದರಲ್ಲೂ ಭಾರತೀಯ ಕ್ರಿಕೆಟರ್ಗಳು ವಿಶ್ವದಲ್ಲೇ ಅತೀ ಹೆಚ್ಚು ಸಂಭಾವನೆ ಪಡೆಯುವ ಆಟಗಾರರಾಗಿರುವುದು ನಮಗೆಲ್ಲ ಗೊತ್ತೇ ಇದೇ. ಹಾಗಾದರೆ ಬನ್ನಿ ಇಂದು ನೆರೆಯ ರಾಷ್ಟ್ರ ಪಾಕಿಸ್ತಾನದ ಆಟಗಾರರು ತಮ್ಮ ಕ್ರಿಕೆಟ್ ಮಂಡಳಿಯಿಂದ ವಾರ್ಷಿಕ ಎಷ್ಟು ಸಂಭಾವನೆ ಪಡೆಯುತ್ತಾರೆ ಎಂದು ಈ ಸುದ್ಧಿಯಲ್ಲಿ ತಿಳಿದುಕೊಳ್ಳೋಣ.
ನಾಲ್ಕನೇ ಶ್ರೀಮಂತ ಕ್ರಿಕೆಟ್ ಮಂಡಳಿ ಎನಿಸಿಕೊಂಡಿರುವ ಪಾಕಿಸ್ತಾನ ಎ, ಬಿ, ಸಿ, ಡಿ ಮಾದರಿಯಲ್ಲಿ ಆಟಗಾರರೊಂದಿಗೆ ಒಪ್ಪಂದ ಮಾಡಿಕೊಳ್ಳುತ್ತದೆ. ಈ ನಾಲ್ಕು ಪಟ್ಟಿಯಲ್ಲಿರುವ ಆಟಗಾರರು ವಾರ್ಷಿಕವಾಗಿ ಲಕ್ಷಾಂತರ ರೂಪಾಯಿ ಸಂಭಾವನೆ ಪಡೆದುಕೊಳ್ಳುತ್ತಾರೆ. ಈ ಬಗ್ಗೆ ಪಿಸಿಬಿ ಮಾಹಿತಿಯೊಂದನ್ನು ಹಂಚಿಕೊಂಡಿದ್ದು, 3 ವರ್ಷಗಳ (1 ಜುಲೈ 2023 ರಿಂದ 30 ಜೂನ್ 2026) ಪುರುಷರ ಒಪ್ಪಂದದ ಪಟ್ಟಿಯಲ್ಲಿ ಆಟಗಾರರು ಪಡೆಯುತ್ತಿರುವ ಸಂಭಾವನೆ ಬಗ್ಗೆ ತಿಳಿಸಿದೆ.
PCB announced the Central contract list of players:
— Shahid bloch (@Shahidbloch004) September 27, 2023
Below is the list of players with categories who are being offered contracts:
Category A: Babar Azam, Mohammad Rizwan and Shaheen Shah Afridi
Category B: Fakhar Zaman, Haris Rauf, Imam-ul-Haq, Mohammad Nawaz, Naseem Shah and… pic.twitter.com/03GpKpv17w
ಪಿಸಿಬಿಯ A ನಿಂದ D ಪಟ್ಟಿಯಲ್ಲಿರುವ ಆಟಗಾರರು
A ಕೆಟಗರಿ: ಬಾಬರ್ ಅಜಮ್, ಮೊಹಮ್ಮದ್ ರಿಜ್ವಾನ್ ಮತ್ತು ಶಾಹೀನ್ ಶಾ ಆಫ್ರಿದಿ.
B ಕೆಟಗರಿ: ಫಖರ್ ಜಮಾನ್, ಹ್ಯಾರಿಸ್ ರೌಫ್, ಇಮಾಮ್-ಉಲ್-ಹಕ್, ಮೊಹಮ್ಮದ್ ನವಾಜ್, ನಸೀಮ್ ಶಾ ಮತ್ತು ಶಾದಾಬ್ ಖಾನ್.
C ಕೆಟಗರಿ: ಇಮಾದ್ ವಾಸಿಂ ಮತ್ತು ಅಬ್ದುಲ್ಲಾ ಶಫೀಕ್
D ಕೆಟಗರಿ: ಫಹೀಮ್ ಅಶ್ರಫ್, ಹಸನ್ ಅಲಿ, ಇಫ್ತಿಕರ್ ಅಹ್ಮದ್, ಇಹ್ಸಾನುಲ್ಲಾ, ಮೊಹಮ್ಮದ್ ಹ್ಯಾರಿಸ್, ಮೊಹಮ್ಮದ್ ವಾಸಿಂ ಜೂನಿಯರ್, ಸ್ಯಾಮ್ ಅಯೂಬ್, ಸಲ್ಮಾನ್ ಅಲಿ ಆಗಾ, ಸರ್ಫರಾಜ್ ಅಹ್ಮದ್, ಸೌದ್ ಶಕೀಲ್, ಶಾನವಾಜ್ ದಹಾನಿ, ಶಾನ್ ಮಸೂದ್, ಉಸಾಮಾ ಮಿರ್ ಮತ್ತು ಜಮಾನ್ ಖಾನ್.
ಎ ನಿಂದ ಡಿ ವರ್ಗದ ಆಟಗಾರರ ಸಂಭಾವನೆ:
ವರ್ಗ A: ಪಾಕಿಸ್ತಾನ ಕ್ರಿಕೆಟ್ ಮಂಡಳಿಯ A ವರ್ಗದಲ್ಲಿ 3 ಸ್ಟಾರ್ ಆಟಗಾರರಾದ ಬಾಬರ್ ಅಜಮ್, ಶಾಹೀನ್ ಶಾ ಅಫ್ರಿದಿ ಮತ್ತು ಮೊಹಮ್ಮದ್ ರಿಜ್ವಾನ್ ಸೇರಿದ್ದಾರೆ. ಇವರು ಪಾಕಿಸ್ತಾನಿ ರೂಪಾಯಿ 4.5 ಮಿಲಿಯನ್ ಮಾಸಿಕ ವೇತನವನ್ನು ಪಡೆಯುತ್ತಾರೆ. ಈ ಮೊತ್ತವನ್ನು ಭಾರತೀಯ ರೂಪಾಯಿಯಲ್ಲಿ ನೋಡುವುದಾದರೇ 13 ಲಕ್ಷದ 56 ಸಾವಿರ ರೂಪಾಯಿ ಆಗಿದೆ.
ವರ್ಗ B: ಶಾದಾಬ್ ಖಾನ್, ಫಖರ್ ಜಮಾನ್, ಹ್ಯಾರಿಸ್ ರೌಫ್ ಮತ್ತು ನಸೀಮ್ ಶಾ ಅವರಂತಹ ಆಟಗಾರರು B ಕೆಟಗರಿಯಲ್ಲಿದ್ದಾರೆ. ಇವರು ಮಾಸಿಕ 3 ಮಿಲಿಯನ್ ಪಾಕಿಸ್ತಾನಿ ರೂಪಾಯಿ ಸಂಭಾವನೆ ಪಡೆಯುತ್ತಾರೆ. ಭಾರತೀಯ ರೂಪಾಯಿಯಲ್ಲಿ ಇದು 9 ಲಕ್ಷ ರೂಪಾಯಿ ಆಗಿದೆ.
C ಮತ್ತು D ವರ್ಗಗಳಲ್ಲಿನ ಆಟಗಾರರು ಪಾಕಿಸ್ತಾನಿ ರೂಪಾಯಿ 750,000 ರಿಂದ ಪಾಕಿಸ್ತಾನಿ ರೂಪಾಯಿ 1.5 ಮಿಲಿಯನ್ ನಡುವೆ ಮಾಸಿಕ ವೇತನವನ್ನು ಪಡೆಯುತ್ತಾರೆ.