New Bajaj Chetak Electric Launched: ಪ್ರಮುಖ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕ ಬಜಾಜ್ ಆಟೋ ತನ್ನ ಇತ್ತೀಚಿನ 'ಬಜಾಜ್ ಚೇತಕ್ ಎಲೆಕ್ಟ್ರಿಕ್' ದೇಶಿಯ ಮಾರುಕಟ್ಟೆಗೆ ಪರಿಚಯಿಸಿದೆ. ಒಂದೇ ರೀತಿಯ ವೈಶಿಷ್ಟ್ಯಗಳೊಂದಿಗೆ ಇದನ್ನು ಮೂರು ರೂಪಾಂತರಗಳಲ್ಲಿ ತರಲಾಗಿದೆ. 'ಚೇತಕ್ 35' ಸೀರಿಸ್ '3501' ಮತ್ತು '3502' ಎಂಬ ಹೆಸರಿನ ಎರಡು ಆವೃತ್ತಿಗಳನ್ನು ಹೊಂದಿದೆ. '3501' ಇವುಗಳ ಟಾಪ್-ಸ್ಪೆಕ್ ಆವೃತ್ತಿಯಾಗಿದೆ. ಕಂಪನಿಯು ಈ ಪ್ರೀಮಿಯಂ ಮಾದರಿಯನ್ನು ರೂ.1.27 ಲಕ್ಷ ಎಕ್ಸ್ ಶೋ ರೂಂ ಬೆಲೆಗೆ ಮಾರಾಟ ಮಾಡುತ್ತಿದೆ. '3502' ಮಧ್ಯಮ ಶ್ರೇಣಿಯ ರೂಪಾಂತರವಾಗಿದೆ. ಇದರ ಎಕ್ಸ್ ಶೋ ರೂಂ ಬೆಲೆ 1.20 ಲಕ್ಷ ರೂ. ಇದೆ. ಆದರೆ '3503' ಬೇಸ್ ರೂಪಾಂತರವನ್ನು ಈ ಸೀರಿಸ್ನಲ್ಲಿ ಶೀಘ್ರದಲ್ಲೇ ತರಲಾಗುವುದು.
ರೇಂಜ್ ಮತ್ತು ಪರ್ಫಾಮೆನ್ಸ್: ಈ ಹೊಸ ಬಜಾಜ್ ಚೇತಕ್ ಹೊಸ ಚೌಕಟ್ಟಿನಲ್ಲಿ ನಿರ್ಮಿಸಲಾಗಿದೆ. ಇದು 3.5kWh ಬ್ಯಾಟರಿಯೊಂದಿಗೆ ಬರುತ್ತದೆ. ಇದರ ಫ್ರೋರ್ಬೋರ್ಡ್ ಕೆಳಗೆ ಹೊಂದಿಸಿದ್ದಾರೆ. 3 ಕೆ.ಜಿ ತೂಕದ ಈ ಹೊಸ ಬ್ಯಾಟರಿ 153 ಕಿ.ಮೀ ಹೈ ರೇಂಜ್ ನೀಡಲಿದೆ ಎಂದು ಕಂಪನಿ ತಿಳಿಸಿದೆ. ಈ ಸ್ಕೂಟರ್ 950W ಚಾರ್ಜರ್‌ನೊಂದಿಗೆ ಬರುತ್ತದೆ. ಈ ಸ್ಕೂಟರ್ ಮೂರು ಗಂಟೆಗಳಲ್ಲಿ 0-80 ಪ್ರತಿಶತದಷ್ಟು ಚಾರ್ಜ್ ಮಾಡಬಹುದು ಎಂದು ಕಂಪನಿ ಹೇಳಿದೆ.
ಇದರ ವಿಶೇಷತೆಗಳಿಗೆ ಸಂಬಂಧಿಸಿದಂತೆ ಹೊಸ ಬಜಾಜ್ ಚೇತಕ್ ಅದರ ಹಿಂದಿನ ಮಾದರಿಯಂತೆಯೇ ಅದೇ ಸಾಧನಗಳೊಂದಿಗೆ ಬರುತ್ತದೆ. ಇದರಲ್ಲಿ 4kW ಎಲೆಕ್ಟ್ರಿಕ್ ಮೋಟಾರ್ ಅಳವಡಿಸಲಾಗಿದೆ. ಕಂಪನಿಯು ಹೇಳಿಕೊಂಡಂತೆ, ಅದರ ಕಾರ್ಯಕ್ಷಮತೆ ಹಳೆಯ ಮಾದರಿಯಂತೆಯೇ ಇರುತ್ತದೆ. ಇದರ ಮೊದಲ ಎರಡು ಮಾದರಿಗಳು 73kph ವೇಗ ಹೊಂದಿವೆ. ಇದರ ಬೇಸ್ 3503 ಮಾದರಿಯು 63kph ಗರಿಷ್ಠ ವೇಗ ಹೊಂದಿದೆ. ಆದರೆ ಕಂಪನಿಯು ಈ ಮಾದರಿಯನ್ನು ಇನ್ನೂ ತಂದಿಲ್ಲ. ಕಂಪನಿಯು ಶೀಘ್ರದಲ್ಲೇ ಇದನ್ನು ಬಿಡುಗಡೆ ಮಾಡುತ್ತದೆ.
ಹೊಸ ಬಜಾಜ್ ಚೇತಕ್ ಡಿಸೈನ್: ಕಂಪನಿಯು ತನ್ನ ಬ್ಯಾಟರಿಯನ್ನು ಸ್ಕೂಟರ್‌ನ ಫ್ರೋರ್ಬೋರ್ಡ್ ಕೆಳಗೆ ಅಳವಡಿಸಿದೆ. ಇದರಿಂದಾಗಿ ಇದರ ಬೂಟ್ ಸ್ಪೇಸ್ ಹೆಚ್ಚಿದೆ. ಈ ಹಿಂದೆ, ಅದರ ಹಳೆಯ ಮಾಡೆಲ್ ಚೇತಕ್ ಮೇಲೆ ಈ ಬಗ್ಗೆ ದೂರುಗಳು ಬಂದಿದ್ದವು. ಆದರೆ, ಕಂಪನಿಯು ಈ ಹೊಸ ಬಜಾಜ್ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್‌ನಲ್ಲಿ ಆ ಸಮಸ್ಯೆಯನ್ನು ಪರಿಹರಿಸಿದೆ. ಇದು 35-ಲೀಟರ್ ಬೂಟ್ ಸ್ಪೇಸ್‌ನೊಂದಿಗೆ ಬರುತ್ತದೆ. ವೀಲ್‌ಬೇಸ್ ಕೂಡ 25 ಎಂಎಂನಿಂದ 1,350 ಎಂಎಂಗೆ ಹೆಚ್ಚಾಗಿದೆ. ಇದರ ಜೊತೆಗೆ, ಅದರ ಸೀಟ್ ಈಗ 80 ಎಂಎಂ ಉದ್ದದೊಂದಿಗೆ ಬರುತ್ತದೆ.
ಇತರ ವೈಶಿಷ್ಟ್ಯಗಳು: ಈ ಹೊಸ ಬಜಾಜ್ ಚೇತಕ್ ಎಲೆಕ್ಟ್ರಿಕ್ ಟಾಪ್-ಸ್ಪೆಕ್ 3501 ರೂಪಾಂತರವು ಅನೇಕ ಪ್ರೀಮಿಯಂ ವೈಶಿಷ್ಟ್ಯಗಳನ್ನು ಹೊಂದಿದೆ. ಇಂಟಿಗ್ರೇಟೆಡ್ ಮ್ಯಾಪ್‌ಗಳೊಂದಿಗೆ TFT ಡಿಸ್ಪ್ಲೇ, ಬ್ಲೂಟೂತ್ ಕನೆಕ್ಟಿವಿಟಿ, ಸ್ಕ್ರೀನ್ ಮಿರರಿಂಗ್ ಮುಂತಾದ ವೈಶಿಷ್ಟ್ಯಗಳು ಇವುಗಳಲ್ಲಿ ಸೇರಿವೆ. ಇವುಗಳ ಹೊರತಾಗಿ ಇದು ಡಾಕ್ಯುಮೆಂಟ್ ಸ್ಟೋರೇಜ್, ಜಿಯೋ-ಫೆನ್ಸಿಂಗ್, ಥೆಫ್ಟ್ ವಾರ್ನಿಂಗ್, ಓವರ್ ಸ್ಪೀಡ್ ಅಲರ್ಟ್‌ನಂತಹ ವೈಶಿಷ್ಟ್ಯಗಳನ್ನು ಹೊಂದಿದೆ.
ವಾರಂಟಿ: ಬಜಾಜ್ ಆಟೋ ಹೊಸ ಚೇತಕ್‌ನೊಂದಿಗೆ 3 ವರ್ಷಗಳು/50,000 ಕಿಮೀ ವಾರಂಟಿ ನೀಡುತ್ತದೆ. ಇಲ್ಲಿಯವರೆಗೆ ಬಜಾಜ್ ಕೇವಲ ಎರಡು ರೂಪಾಂತರಗಳ ಬೆಲೆಗಳನ್ನು ಘೋಷಿಸಿದೆ. ಇದರ ಬೇಸ್ 3503 ರೂಪಾಂತರದ ಬೆಲೆಯನ್ನು ಶೀಘ್ರದಲ್ಲೇ ಬಹಿರಂಗಪಡಿಸಲಾಗುವುದು. ಬಜಾಜ್ ಚೇತಕ್ ಪ್ರಸ್ತುತ ಮಾರುಕಟ್ಟೆಯಲ್ಲಿ TVS iCube, Ather Rizta, Ampere Nexus, Ola S1 ಶ್ರೇಣಿಯಂತಹ ಸ್ಕೂಟರ್‌ಗಳೊಂದಿಗೆ ಸ್ಪರ್ಧಿಸುತ್ತಿದೆ.
ಓದಿ: 2030ರ ವೇಳೆಗೆ 20 ಲಕ್ಷ ಕೋಟಿಗೆ ತಲುಪಲಿದೆ ಇವಿ ಮಾರುಕಟ್ಟೆ, 5 ಕೋಟಿ ಉದ್ಯೋಗ ಸೃಷ್ಠಿ: ನಿತಿನ್ ಗಡ್ಕರಿ