Cholesterol Level According to Age: ದೇಹಕ್ಕೆ ಬೇಕಾಗಿರುವ ಕೊಲೆಸ್ಟ್ರಾಲ್ ನಿಮ್ಮ ಯಕೃತ್ತಿನಲ್ಲಿ ರೂಪಗೊಳ್ಳುತ್ತದೆ. ನಿಮ್ಮ ದೇಹವು ಅದರ ಕಾರ್ಯನಿರ್ವಹಣೆಗೆ ಬೇಕಾದಷ್ಟು ಕೊಲೆಸ್ಟ್ರಾಲ್ನ್ನು ತಯಾರು ಮಾಡುತ್ತದೆ. ಕೆಲವು ಆಹಾರಗಳ ಸೇವನೆಯಿಂದ ದೇಹಕ್ಕೆ ಕೊಲೆಸ್ಟ್ರಾಲ್ ಲಭಿಸುತ್ತದೆ. ರೋಗ ನಿಯಂತ್ರಣ ಹಾಗೂ ತಡೆಗಟ್ಟುವಿಕೆ ಕೇಂದ್ರಗಳ (CDC) ತಿಳಿಸುವಂತೆ, ಮುಖ್ಯವಾಗಿ ಕೊಲೆಸ್ಟ್ರಾಲ್‌ನಲ್ಲಿ ಎರಡು ವಿಧಗಳಿವೆ.
ಮೊದಲನೇಯದ್ದು ಕೆಟ್ಟ ಕೊಲೆಸ್ಟ್ರಾಲ್ ಹಾಗೂ ಮತ್ತೊಂದು ಒಳ್ಳೆಯ ಕೊಲೆಸ್ಟ್ರಾಲ್ ಆಗಿದೆ. ಕಡಿಮೆ ಸಾಂದ್ರತೆಯ ಲಿಪೊಪ್ರೋಟೀನ್ (LDL) ಎನ್ನವಂತಹ ಕೆಟ್ಟ ಕೊಲೆಸ್ಟ್ರಾಲ್ ನಿಮ್ಮ ರಕ್ತದಲ್ಲಿ ಇರುತ್ತದೆ. ಹೆಚ್ಚು ಕೊಲೆಸ್ಟ್ರಾಲ್ ಇರುವಂತಹ ಆಹಾರಗಳನ್ನು ಹೆಚ್ಚು ಸೇವನೆ ಮಾಡುವುದು ಕೆಲವು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ ಎಂದು ತಜ್ಞರು ತಿಳಿಸುತ್ತಾರೆ. ಇಂದಿನ ಕಾಲದಲ್ಲಿ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ (LDL) ಹೆಚ್ಚಳವು ಸಾಮಾನ್ಯ ಸಮಸ್ಯೆಯೆಂದು ಪರಿಗಣಿಸಲಾಗಿದೆ. ಈ ತೊಂದರೆ ಪ್ರಪಂಚದಾದ್ಯಂತ ಬಹುತೇಕ ಎಲ್ಲಾ ವಯಸ್ಸಿನ ಜನರಲ್ಲಿ ವೇಗವಾಗಿ ಪರಿಣಾಮ ಬೀರುತ್ತದೆ. ಇದರಿಂದ ಯಾವ ವಯಸ್ಸಿನವರದಲ್ಲಿ ಕೊಲೆಸ್ಟ್ರಾಲ್ ಮಟ್ಟ ಎಷ್ಟಿರಬೇಕು ಎಂಬುದನ್ನು ತಿಳಿದುಕೊಳ್ಳೋಣ.
ವಯಸ್ಕರಲ್ಲಿನ ಕೊಲೆಸ್ಟ್ರಾಲ್ ಮಟ್ಟ: ಅಮೆರಿಕನ್ ಹಾರ್ಟ್ ಅಸೋಸಿಯೇಷನ್ (AHA) ಪ್ರಕಾರ, 20ನೇ ವಯಸ್ಸಿನವರು ಪ್ರತಿ 4 ರಿಂದ 6 ವರ್ಷಗಳಿಗೊಮ್ಮೆ ತಮ್ಮ ಕೊಲೆಸ್ಟ್ರಾಲ್ ಅನ್ನು ಪರೀಕ್ಷಿಸಿಕೊಳ್ಳಬೇಕೆಂದು ಸಲಹೆ ನೀಡಲಾಗುತ್ತದೆ. ಈ ವಯಸ್ಸಿನವರಲ್ಲಿ ಕೊಲೆಸ್ಟ್ರಾಲ್ ಮಟ್ಟವು ಹೆಚ್ಚಾಗಲು ಆರಂಭವಾಗುತ್ತದೆ. ವಯಸ್ಕರಿಗೆ ಒಟ್ಟು ಕೊಲೆಸ್ಟ್ರಾಲ್ ಮಟ್ಟವು ಪ್ರತಿ ಡೆಸಿಲೀಟರ್‌ಗೆ 200 ಮಿಲಿಗ್ರಾಂ (mg/dL) ಅಥವಾ ಅದಕ್ಕಿಂತ ಕಡಿಮೆ ಇದ್ದರೆ ಉತ್ತಮ.
ಕೆಟ್ಟ ಕೊಲೆಸ್ಟ್ರಾಲ್ 100 ಮಿಗ್ರಾಂ/ಡಿಎಲ್ ಅಥವಾ ಅದಕ್ಕಿಂತ ಕಡಿಮೆ, ಎಚ್‌ಡಿಎಲ್ ಕೊಲೆಸ್ಟ್ರಾಲ್ ಅಥವಾ ಒಳ್ಳೆಯ ಕೊಲೆಸ್ಟ್ರಾಲ್ 60 ಮಿಗ್ರಾಂ/ಡಿಎಲ್, ಅದಕ್ಕಿಂತ ಹೆಚ್ಚು ಹಾಗೂ ಎಚ್‌ಡಿಎಲ್ ಅಲ್ಲದ ಕೊಲೆಸ್ಟ್ರಾಲ್ 130 ಮಿಗ್ರಾಂ/ಡಿಎಲ್, ಅದಕ್ಕಿಂತ ಕಡಿಮೆ ಇದ್ದರೆ ಒಳ್ಳೆಯದು. ನಿಮ್ಮ ಕೊಲೆಸ್ಟ್ರಾಲ್ ಮಟ್ಟವು ಈ ಪ್ರಮಾಣದಲ್ಲಿ ಇಲ್ಲದಿದ್ದರೆ, ನೀವು ಉತ್ತಮ ಹೃದಯ ರೋಗ ತಜ್ಞರನ್ನು ಭೇಟಿ ಮಾಡಬೇಕಾಗುತ್ತದೆ. ನಿಯಮಿತ ತಪಾಸಣೆಯು ಕೊಲೆಸ್ಟ್ರಾಲ್ ಮಟ್ಟ ನಿಯಂತ್ರಿಸಲು ಸಹಾಯ ಮಾಡುತ್ತದೆ ಎಂದು ಆರೋಗ್ಯ ತಜ್ಞರು ತಿಳಿಸುತ್ತಾರೆ.
ಜರ್ನಲ್ ಆಫ್ ದಿ ಅಮೆರಿಕನ್ ಕಾಲೇಜ್ ಆಫ್ ಕಾರ್ಡಿಯಾಲಜಿ (JACC)ನಲ್ಲಿ ಪ್ರಕಟವಾದ ರಕ್ತದ ಕೊಲೆಸ್ಟ್ರಾಲ್ ಅನ್ನು ನಿರ್ವಹಿಸುವ 2018ರ ಮಾರ್ಗಸೂಚಿಗಳಲ್ಲಿ ವಯಸ್ಕರಿಗೆ ಕೊಲೆಸ್ಟ್ರಾಲ್ ಮಟ್ಟ ಎಷ್ಟಿರಬೇಕು ಎಂಬುದನ್ನು ವಿವರವಾಗಿ ತಿಳಿಸಲಾಗಿದೆ.
ಮಕ್ಕಳಲ್ಲಿನ ಕೊಲೆಸ್ಟ್ರಾಲ್ ಮಟ್ಟ: ಮಕ್ಕಳಲ್ಲಿ ಕೊಲೆಸ್ಟ್ರಾಲ್ ಹೆಚ್ಚಾಗಲು ಅನೇಕ ಕಾರಣಗಳಿವೆ. ಇವುಗಳಲ್ಲಿ ದೈಹಿಕ ಚಟುವಟಿಕೆ, ಪೌಷ್ಟಿಕ-ಭರಿತ ಆಹಾರ ಸೇವಿಸುವುದು, ಅಧಿಕ ತೂಕ ಹೊಂದಿರುವುದು ಹಾಗೂ ಹೆಚ್ಚಿನ ಕೊಲೆಸ್ಟ್ರಾಲ್‌ಗೆ ಆನುವಂಶಿಕ ಕಾರಣವು ಸೇರಿವೆ. ಸಿಡಿಸಿ ಪ್ರಕಾರ, 9 ರಿಂದ 11 ವರ್ಷ ವಯಸ್ಸಿನ ಮಕ್ಕಳು ಹಾಗೂ 17 ರಿಂದ 21 ವರ್ಷ ವಯಸ್ಸಿನವರ ಕೊಲೆಸ್ಟ್ರಾಲ್‌ನ ಪರೀಕ್ಷೆ ಮಾಡಿಸಿಬೇಕು.
ನಿರ್ಲಕ್ಷ್ಯ ಮಾಡಿದರೆ, ಮಧುಮೇಹ, ಬೊಜ್ಜು ಸೇರಿದಂತೆ ವಿವಿಧ ಕಾಯಿಲೆ ಬರುವ ಸಾಧ್ಯತೆ ಇರುತ್ತದೆ. ಇದರಿಂದ ಮಕ್ಕಳ ಕೊಲೆಸ್ಟ್ರಾಲ್ ಮಟ್ಟ ಎಷ್ಟು ಇದೆ ಎಂಬುದನ್ನು ತಿಳಿಯಲು ಪರೀಕ್ಷೆ ಮಾಡಬೇಕಾಗುತ್ತದೆ ಎಂದು ತಜ್ಞರು ತಿಳಿಸುತ್ತಾರೆ. ಮಕ್ಕಳಲ್ಲಿನ ಕೊಲೆಸ್ಟ್ರಾಲ್ ಮಟ್ಟವು 170 ಮಿಗ್ರಾಂ/ಡಿಎಲ್ಗಿಂತ ಕಡಿಮೆ ಇರಬೇಕು. ಮಗುವಿನ ಕೆಟ್ಟ ಕೊಲೆಸ್ಟ್ರಾಲ್ 130 ಮಿಗ್ರಾಂ/ಡಿಎಲ್, ಅದಕ್ಕಿಂತ ಹೆಚ್ಚಿದ್ದರೆ ವೈದ್ಯರನ್ನು ಭೇಟಿ ಮಾಡಬೇಕಾಗುತ್ತದೆ. ಮಗುವಿನ ಟ್ರೈಗ್ಲಿಸರೈಡ್‌ಗಳ ಮಟ್ಟವು 200 mg/dL, ಅದಕ್ಕಿಂತ ಹೆಚ್ಚಿದ್ದರೆ ವೈದ್ಯರನ್ನು ಸಂಪರ್ಕಿಸಬೇಕಾಗುತ್ತದೆ. ಮಕ್ಕಳಲ್ಲಿ ಕೊಲೆಸ್ಟ್ರಾಲ್ ಮಟ್ಟ ಕಡಿಮೆ ಮಾಡಲು ಆಹಾರ ಪದ್ಧತಿ ಬದಲಾಯಿಸುವುದು ಬಹಳ ಮುಖ್ಯವಾಗಿದೆ. ಮಕ್ಕಳು ವ್ಯಾಯಾಮ ಮಾಡುವುದು ಅವಶ್ಯವಾಗಿದೆ ಎನ್ನುತ್ತಾರೆ ತಜ್ಞರು.
ಮಹಿಳೆಯರಲ್ಲಿನ ಕೊಲೆಸ್ಟ್ರಾಲ್ ಮಟ್ಟ: ಮಹಿಳೆಯರಿಗೆ ಸಾಮಾನ್ಯವಾಗಿ ಪುರುಷರಿಗಿಂತ ಹೆಚ್ಚಿನ HDL (ಒಳ್ಳೆಯ) ಕೊಲೆಸ್ಟ್ರಾಲ್ ಇರಬೇಕಾಗುತ್ತದೆ. ಮಹಿಳೆಯರಲ್ಲಿ ಒಟ್ಟು ಕೊಲೆಸ್ಟ್ರಾಲ್ ಮಟ್ಟ 200 mg/dL, ಅದಕ್ಕಿಂತ ಕಡಿಮೆ ಇದ್ದರೆ ಉತ್ತಮ. ಒಳ್ಳೆಯ ಕೊಲೆಸ್ಟ್ರಾಲ್ (HDL) 55 mg/dL, ಅದಕ್ಕಿಂತ ಹೆಚ್ಚಿರಬೇಕು. ಕೆಟ್ಟ ಕೊಲೆಸ್ಟ್ರಾಲ್ (LDL) 100 mg/dL, ಅದಕ್ಕಿಂತ ಕಡಿಮೆ ಇದ್ದರೆ ಉತ್ತಮ. ಹೃದಯದ ಆರೋಗ್ಯ ನಿರ್ಣಯಿಸಲು ಕೊಲೆಸ್ಟ್ರಾಲ್ ಮಟ್ಟವನ್ನು ಪರಿಶೀಲಿಸುವುದು ಮುಖ್ಯವಾಗಿದೆ. ರಕ್ತ ಪರೀಕ್ಷೆಯ ಸಮಯದಲ್ಲಿ ಒಟ್ಟು ಕೊಲೆಸ್ಟ್ರಾಲ್ ಮಟ್ಟ, ಕೆಟ್ಟ ಕೊಲೆಸ್ಟ್ರಾಲ್ ಹಾಗೂ ಒಳ್ಳೆಯ ಕೊಲೆಸ್ಟ್ರಾಲ್ ಮಟ್ಟವನ್ನು ಅಳೆಯಲಾಗುತ್ತದೆ. ರಕ್ತದಲ್ಲಿರುವ ಕೊಲೆಸ್ಟ್ರಾಲ್‌ನ ಅತ್ಯುತ್ತಮ ಮಟ್ಟವು ವ್ಯಕ್ತಿಯ ವಯಸ್ಸು, ಲಿಂಗ ಅವಲಂಬಿಸಿ ಬದಲಾಗುತ್ತದೆ ಎಂದು ತಜ್ಞರು ವಿವರಿಸುತ್ತಾರೆ.
ಕೊಲೆಸ್ಟ್ರಾಲ್ ಹೇಗೆ ಅಳೆಯಲಾಗುತ್ತದೆ ಗೊತ್ತೇ?: ರಕ್ತದಲ್ಲಿನ ಒಟ್ಟು ಕೊಲೆಸ್ಟ್ರಾಲ್ ಪ್ರಮಾಣ ಅಳೆಯಲು ಆರೋಗ್ಯ ವೃತ್ತಿಪರರು ಲಿಪಿಡ್ ಪ್ಯಾನಲ್ ಬ್ಲಡ್ ಟೆಸ್ಟ್ ಮಾಡುತ್ತಾರೆ. ಇದನ್ನು ಒಟ್ಟು ಕೊಲೆಸ್ಟ್ರಾಲ್ ಮಟ್ಟ ತಿಳಿಯಲು ಸಾಧ್ಯಗುತ್ತದೆ. ಇದರಿಂದ ಮೂರು ಲಿಪಿಡ್‌ಗಳನ್ನು ಹೊಂದಿರುತ್ತದೆ. ಕಡಿಮೆ ಸಾಂದ್ರತೆಯ ಲಿಪೊಪ್ರೋಟೀನ್‌ಗಳು (LDL) ರಕ್ತಪರಿಚಲನೆಯಿಂದ ಕೊಲೆಸ್ಟ್ರಾಲ್ನ್ನು ಸಾಗಿಸುತ್ತವೆ. ಹೆಚ್ಚಿನ ಪ್ರಮಾಣದಲ್ಲಿ LDL ಕೊಲೆಸ್ಟ್ರಾಲ್ ಇದ್ದರೆ, ಇದು ರಕ್ತನಾಳಗಳಲ್ಲಿ ಪ್ಲೇಕ್‌ಗಳನ್ನು ರೂಪಿಸುತ್ತದೆ. ಜೊತೆಗೆ ಹೃದಯ ಕಾಯಿಲೆಯ ಅಪಾಯ ಹೆಚ್ಚಿಸುತ್ತದೆ. ಇದನ್ನು ಕೆಟ್ಟ ಕೊಲೆಸ್ಟ್ರಾಲ್ ಎಂದು ಹೇಳುತ್ತಾರೆ.
ಹೆಚ್ಚಿನ ಸಾಂದ್ರತೆಯ ಲಿಪೊಪ್ರೋಟೀನ್‌ಗಳು (HDL) ಹೃದಯ ಕಾಯಿಲೆಯಿಂದ ನಿಮ್ಮನ್ನು ರಕ್ಷಿಸುತ್ತವೆ. ಟ್ರೈಗ್ಲಿಸರೈಡ್ಸ್ ನಿಮ್ಮ ದೇಹದಲ್ಲಿ ಸಂಗ್ರಹವಾಗುವ ಮತ್ತೊಂದು ರೀತಿಯ ಕೊಬ್ಬು ಆಗಿರುತ್ತದೆ. ಹೆಚ್ಚಿನ ಮಟ್ಟದ ಟ್ರೈಗ್ಲಿಸರೈಡ್‌ಗಳು ಮತ್ತು ಕಡಿಮೆ ಮಟ್ಟದ HDL ನಿಮ್ಮ ಹೃದಯ ಕಾಯಿಲೆಯ ಅಪಾಯ ಹೆಚ್ಚಿಸುತ್ತದೆ ಎಂದು ತಜ್ಞರು ವಿವರಿಸುತ್ತಾರೆ.
ಹೆಚ್ಚಿನ ಮಾಹಿತಿಗಾಗಿ ಈ ವೆಬ್ಸೈಟ್ನ್ನು ವೀಕ್ಷಿಸಬಹುದು:
- https://www.heart.org/en/health-topics/cholesterol/hdl-good-ldl-bad-cholesterol-and-triglycerides
- https://www.cdc.gov/cholesterol/data-research/facts-stats/index.html
- https://www.jacc.org/pb-assets/documents/guidelines/cholesterol/2018-cholesterol-guidelines-made-simple-tool-1601405582280.pdf
- https://www.heart.org/en/health-topics/cholesterol/about-cholesterol/what-your-cholesterol-levels-mean
- https://www.cdc.gov/cholesterol/testing/index.html
ಓದುಗರಿಗೆ ಸೂಚನೆ: ಇಲ್ಲಿ ನಿಮಗೆ ನೀಡಿರುವ ಎಲ್ಲ ಆರೋಗ್ಯ ಮಾಹಿತಿ ಮತ್ತು ಸಲಹೆಗಳು ನಿಮ್ಮ ತಿಳಿವಳಿಕೆಗಾಗಿ ಮಾತ್ರ. ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆ ಆಧರಿಸಿ ನಾವು ಈ ಮಾಹಿತಿ ನಿಮಗೆ ನೀಡಿದ್ದೇವೆ. ಆದರೆ, ಇವುಗಳನ್ನು ಅನುಸರಿಸುವ ಮೊದಲು ಪರಿಣತ ವೈದ್ಯರ ಸಲಹೆಯನ್ನು ತೆಗೆದುಕೊಳ್ಳುವುದು ಉತ್ತಮ.