ETV Bharat / lifestyle

ಮಹಾಶಿವರಾತ್ರಿಯಂದು ಶಿವನಿಗೆ ಅತ್ಯಂತ ಪ್ರಿಯ ಈ ಪ್ರಸಾದ : ನೈವೇದ್ಯವಾಗಿ ಅರ್ಪಿಸಿದರೆ ಒಳ್ಳೆಯದು - MAHASHIVARATRI SWEET RECIPES

Maha Shivaratri Special Sweet Recipes : ಮಹಾಶಿವರಾತ್ರಿ ಹಿನ್ನೆಲೆಯಲ್ಲಿ ಶಿವನಿಗೆ ಅತ್ಯಂತ ಪ್ರಿಯವಾದ ಪ್ರಸಾದವಾದ ಆ್ಯಪಲ್ ಶಿರಾ ಹಾಗೂ ಪಪ್ಪಾಯಿ ಹಲ್ವಾ ಸಿದ್ಧಪಡಿಸುವುದು ಹೇಗೆ ಎಂಬುದನ್ನು ತಿಳಿಯೋಣ.

MAHASHIVARATRI SPECIAL RECIPES  MAHASHIVRATRI 2025  MAHASHIVRATRI PUJA AT HOME  ಮಹಾಶಿವರಾತ್ರಿ 2025
ಮಹಾಶಿವರಾತ್ರಿ ಹಿನ್ನೆಲೆ ವಿಶೇಷ ಪೂಜೆ - ಸಾಂದರ್ಭಿಕ ಚಿತ್ರ (ETV Bharat)
author img

By ETV Bharat Lifestyle Team

Published : Feb 26, 2025, 1:29 PM IST

Maha Shivaratri Special Sweet Recipes : ಎಲ್ಲೆಡೆ ಮಹಾ ಶಿವರಾತ್ರಿಯನ್ನು ಭಕ್ತಿ ಭಾವದಿಂದ ಆಚರಿಸಲಾಗುತ್ತದೆ. ಈ ಇಂದು ಮನೆ ಮತ್ತು ದೇವಸ್ಥಾನಗಳಲ್ಲಿ ಮಂತ್ರಗಳ ಪಠಣದೊಂದಿಗೆ ಶಿವನನ್ನು ಭಕ್ತಿಯಿಂದ ಆರಾಧಿಸಲಾಗುತ್ತಿದೆ. ಇಂದು ಬಹುತೇಕರು ಉಪವಾಸ ಮಾಡಿ ಈಶ್ವರನ ನಾಮ ಸ್ಮರಣೆಯ ಮೂಲಕ ಪ್ರಾರ್ಥಿಸುತ್ತಾರೆ. ಪರಮಾತ್ಮನಿಗೆ ಹೂವುಗಳು ಹಾಗೂ ಹಣ್ಣುಗಳನ್ನು ನೈವೇದ್ಯವಾಗಿ ಅರ್ಪಿಸುತ್ತಾರೆ. ಮಹಾಶಿವರಾತ್ರಿಯಲ್ಲಿ ಯಾವಾಗಲೂ ಒಂದೇ ರೀತಿಯ ಪ್ರಸಾದವನ್ನು ಅರ್ಪಿಸುವ ಬದಲು ಈ ನೈವೇದ್ಯಗಳನ್ನು ದೇವರಿಗೆ ಅರ್ಪಿಸಿ ನೋಡಿ. ಈ ಪ್ರಸಾದಗಳ ತಯಾರಿಕೆ ಮತ್ತು ಅದಕ್ಕೆ ಬೇಕಾಗುವಂತಹ ಪದಾರ್ಥಗಳ ಕುರಿತು ವಿವರವಾಗಿ ತಿಳಿದುಕೊಳ್ಳೋಣ.

ಆ್ಯಪಲ್ ಶಿರಾ ಸಿದ್ಧಪಡಿಸಲು ಅಗತ್ಯವಿರುವ ಪದಾರ್ಥಗಳೇನು ?

  • ಊದಲು - ಮೂರು ಕಪ್‌ಗಳು (750 ಗ್ರಾಂ)
  • ಸೇಬುಗಳು - 2
  • ಗಟ್ಟಿಯಾದ ಹಾಲು - ಒಂದೂವರೆ ಕಪ್
  • ಬೆಲ್ಲದ ಪುಡಿ - ಅರ್ಧ ಕಪ್
  • ತುಪ್ಪ - ¼ ಕಪ್
  • ಏಲಕ್ಕಿ ಪುಡಿ - ಅರ್ಧ ಟೀಸ್ಪೂನ್​
  • ಕೇಸರಿ - ಸ್ವಲ್ಪ
  • ಡ್ರೈ ಫ್ರೂಟ್​ನ ಪುಡಿ​ - 2 ಟೀಸ್ಪೂನ್​

ಆ್ಯಪಲ್ ಶಿರಾ ತಯಾರಿಸುವ ವಿಧಾನ :

  • ಊದಲು ಅನ್ನು ಸ್ವಚ್ಛವಾಗಿ ತೊಳೆದು ಒಣಗಿಸಿ. ಚೆನ್ನಾಗಿ ಒಣಗಿದ ಬಳಿಕ ಅದನ್ನು ಹುರಿದು ನುಣ್ಣಗೆ ಪುಡಿಮಾಡಬೇಕು.
  • ಸೇಬು ಹಣ್ಣಿನ ಸಿಪ್ಪೆ ಹಾಗೂ ಒಳಗಿನ ಬೀಜಗಳನ್ನು ತೆಗೆದು ಮ್ಯಾಶ್ ಮಾಡಿ.
  • ಒಲೆ ಆನ್​ ಮಾಡಿ, ದಪ್ಪ ತಳವಿರುವ ಪಾತ್ರೆಯನ್ನು ಇಡಿ. ಅದರೊಳಗೆ ತುಪ್ಪ ಸೇರಿಸಿ ಬಿಸಿ ಮಾಡಬೇಕು.
  • ಸೇಬಿನ ಮಿಶ್ರಣ, ಊದಲು ಮಿಶ್ರಣ, ಬೆಲ್ಲದ ಪುಡಿ, ಕೇಸರಿ ಮತ್ತು ಏಲಕ್ಕಿ ಪುಡಿಯನ್ನು ಸೇರಿಸಿ ಹಾಗೂ ಸ್ವಲ್ಪ ಗಟ್ಟಿಯಾಗುವವರೆಗೆ ಕಡಿಮೆ ಉರಿಯಲ್ಲಿ ಬೇಯಿಸಬೇಕು.
  • ಅಂತಿಮವಾಗಿ ಡ್ರೈ ಫ್ರೂಟ್​ನ ಪುಡಿ ಸೇರಿಸಿದ ಬಳಿಕ, ಒಲೆ ಆಫ್ ಮಾಡಿ ಒಂದು ಬಟ್ಟಲಿನಲ್ಲಿ ತೆಗೆದು ನೈವೇದ್ಯವಾಗಿ ಶಿವನಿಗೆ ಅರ್ಪಿಸಿ.

ಇದನ್ನೂ ಓದಿ: ಸಿಹಿ ಗೆಣಸು - ಶಿವರಾತ್ರಿಗೂ ಇರುವ ಸಂಬಂಧವೇನು?; ಆ ದಿನವೇ ಏಕೆ ತಿನ್ನಬೇಕು?, ಇದರ ಹಿಂದಿನ ಕಾರಣಗಳೇನು?

ಪಪ್ಪಾಯಿ ಹಲ್ವಾ ಸಿದ್ಧಪಡಿಸಲು ಬೇಕಾದ ಸಾಮಗ್ರಿಗಳು :

  • ಸಕ್ಕರೆ - ಅರ್ಧ ಕಪ್
  • ತುಪ್ಪ - ಅರ್ಧ ಕಪ್
  • ಹಾಲಿನ ಪುಡಿ - ಕಾಲು ಕಪ್
  • ಪಪ್ಪಾಯಿ ಹಣ್ಣು - 2
  • ಏಲಕ್ಕಿ ಪುಡಿ - ಅರ್ಧ ಟೀಸ್ಪೂನ್​
  • ಡ್ರೈ ಫ್ರೂಟ್​ನ ಪುಡಿ​ - ಎರಡು ಟೀಸ್ಪೂನ್​

ಪಪ್ಪಾಯಿ ಹಲ್ವಾ ತಯಾರಿ ವಿಧಾನ :

  • ಪಪ್ಪಾಯಿ ಹಣ್ಣನ್ನು ಸಿಪ್ಪೆ ತೆಗೆದು ಸ್ವಚ್ಛವಾಗಿ ತೊಳೆದು, ಬೀಜಗಳನ್ನು ತೆಗೆಯಬೇಕಾಗುತ್ತದೆ.
  • ಬಳಿಕ ಪಪ್ಪಾಯಿಯನ್ನು ಪೀಸ್​​ಗಳಾಗಿ ಕತ್ತರಿಸಿ ಮ್ಯಾಶ್ ಮಾಡಿ.
  • ಒಲೆ ಹಚ್ಚಿ ಅದರ ಮೇಲೆ ಪಾತ್ರೆ ಇಡಿ. ಪಾತ್ರೆಗೆ ತುಪ್ಪ ಹಾಕಿ, ಅದು ಬಿಸಿಯಾದ ನಂತರ, ಪಪ್ಪಾಯಿ ತಿರುಳನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
  • ಸುಮಾರು 10 ನಿಮಿಷಗಳ ಬಳಿಕ, ಸಕ್ಕರೆ ಸೇರಿಸಿ ಮಿಶ್ರಣ ಮಾಡಿ. ಮಿಶ್ರಣದಿಂದ ತುಪ್ಪ ಬೇರ್ಪಟ್ಟ ಬಳಿಕ, ಹಾಲಿನ ಪುಡಿಯನ್ನು ಸೇರಿಸಿ ಹಾಗೂ ಹಾಗೆ ಮಿಕ್ಸ್​ ಮಾಡುವುದನ್ನು ಮುಂದುವರಿಸಿ.
  • ಪಪ್ಪಾಯಿ ಮಿಶ್ರಣದ ಮೇಲ್ಭಾಗಕ್ಕೆ ತುಪ್ಪ ಬೇರ್ಪಡುವವರೆಗೆ ಮಿಕ್ಸ್​ ಮಾಡುತ್ತಾ ಇರಿ. ಡ್ರೈ ಫ್ರೂಟ್​ನ ಪುಡಿ ಸೇರಿಸಿ ಬಳಿಕ ಒಲೆ ಆಫ್​ ಮಾಡಿ. ಸ್ವೀಟ್​ನ್ನು ಒಂದು ಬಟ್ಟಲಿನಲ್ಲಿ ತೆಗೆದುಕೊಳ್ಳಿ.
  • ಈ ಹಲ್ವಾವನ್ನು ನೈವೇದ್ಯವಾಗಿ ಅರ್ಪಿಸಿದರೆ ಚೆನ್ನಾಗಿರುತ್ತದೆ.

ಇದನ್ನೂ ಓದಿ: ನೀವು ಶಿವರಾತ್ರಿ ಆಚರಣೆ ಮಾಡ್ತಿದ್ದೀರಾ?: ನಿಮ್ಮ ಪ್ರೀತಿಪಾತ್ರರಿಗೆ ಹೀಗೆ ಶುಭಾಶಯ ತಿಳಿಸಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.