ETV Bharat / entertainment

ಐಷಾರಾಮಿ ಬಂಗಲೆ 'ಮನ್ನತ್'ನಿಂದ ಬಾಡಿಗೆ ಮನೆಗೆ ಶಾರುಖ್ ಖಾನ್​​​​ ಫ್ಯಾಮಿಲಿ ಶಿಫ್ಟ್​​ : ಕಾರಣ ತಿಳಿಯಿರಿ - SHAH RUKH KHAN

ವಿಶ್ವದಾದ್ಯಂತ ಕೋಟ್ಯಂತರ ಅಭಿಮಾನಿಗಳನ್ನು ಸಂಪಾದಿಸಿರುವ ಭಾರತದ ಜನಪ್ರಿಯ ನಟ ಶಾರುಖ್ ಖಾನ್​​​​ ಮನ್ನತ್​ನಿಂದ ಶಿಫ್ಟ್​​ ಆಗಿ ಬಾಡಿಗೆ ಮನೆಯಲ್ಲಿ ನೆಲೆಸಲಿದ್ದಾರೆ. ಇದಕ್ಕೆ ಕಾರಣ ಏನು ಎಂಬುದರ ಮಾಹಿತಿ ಇಲ್ಲಿದೆ..

ನಟ ಶಾರುಖ್ ಖಾನ್​
Actor Shah Rukh Khan (Photo: IANS)
author img

By ETV Bharat Entertainment Team

Published : Feb 26, 2025, 5:02 PM IST

ಬಾಲಿವುಡ್‌ ಕಿಂಗ್ ಖಾನ್​​​ ಶಾರುಖ್ ಒಡೆತನದ ಐಷಾರಾಮಿ ನಿವಾಸ 'ಮನ್ನತ್‌' ಭಾರತದ ಶ್ರೀಮಂತ ಮತ್ತು ಆಕರ್ಷಕ ಮನೆಗಳಲ್ಲೊಂದು. ಆದ್ರೀಗ ವರದಿಗಳ ಪ್ರಕಾರ, ವಿಶ್ವದಾದ್ಯಂತ ಅಭಿಮಾನಿಗಳನ್ನು ಹೊಂದಿರುವ ನಟನೀಗ ಮನ್ನತ್ ತೊರೆದು ಬಾಡಿಗೆ ಮನೆಗೆ ಸ್ಥಳಾಂತರಗೊಳ್ಳಲು ಸಜ್ಜಾಗಿದ್ದಾರೆ. ತಮ್ಮ ಕುಟುಂಬದೊಂದಿಗೆ ಬಾಡಿಗೆ ಮನೆಗೆ ಶಿಫ್ಟ್​ ಆಗಲು ಕಾರಣವೇನು ಅನ್ನೋದು ವರದಿಗಳಿಂದ ಬಹಿರಂಗವಾಗಿದೆ.

ವರದಿಗಳ ಪ್ರಕಾರ, ಶಾರುಖ್ ಮುಂಬೈನ ಪಾಲಿ ಹಿಲ್ಸ್‌ನಲ್ಲಿರುವ ಬಾಲಿವುಡ್‌ನ ಭಗ್ನಾನಿ ಕುಟುಂಬದ ಎರಡು ಐಷಾರಾಮಿ ಡ್ಯೂಪ್ಲೆಕ್ಸ್ ಅಪಾರ್ಟ್‌ಮೆಂಟ್‌ಗಳನ್ನು ಬಾಡಿಗೆಗೆ ಪಡೆದಿದ್ದಾರೆ. ಈ ಅಪಾರ್ಟ್‌ಮೆಂಟ್‌ಗಳಲ್ಲಿ ಒಂದು ನಿರ್ಮಾಪಕ ಜಾಕಿ ಭಗ್ನಾನಿ ಅವರಿಗೆ ಸೇರಿದ್ದು, ಇನ್ನೊಂದು ಅವರ ಸಹೋದರಿ ದೀಪ್​ಶಿಖಾ ದೇಶ್​​​ಮುಖ್ ಅವರಿಗೆ ಸೇರಿದೆ. ಮನ್ನತ್‌ನಲ್ಲಿ ನವೀಕರಣ ಕಾರ್ಯ ನಡೆಯುತ್ತಿರುವ ಹಿನ್ನೆಲೆ ಶಾರುಖ್ ಅಲ್ಲಿಂದ ಶಿಫ್ಟ್​ ಆಗುತ್ತಿದ್ದಾರೆ. ಮನ್ನತ್ ಗ್ರೇಡ್ III ಹೆರಿಟೇಜ್​​ ಸ್ಟ್ರಕ್ಚರ್ ಆಗಿರೋ ಹಿನ್ನೆಲೆ, ಇಲ್ಲಿ ಯಾವುದೇ ರೀತಿಯ ಬದಲಾವಣೆ ಮಾಡಬೇಕೆಂದರೂ ಅನುಮತಿ ಪಡೆಯಬೇಕು. ಹಾಗಾಗಿ ನಟ ನ್ಯಾಯಾಲಯದಿಂದ ಅನುಮತಿ ಪಡೆದಿದ್ದಾರೆ ಎಂದು ವರದಿಗಳು ಸೂಚಿಸಿವೆ.

ಎರಡೂ ಅಪಾರ್ಟ್‌ಮೆಂಟ್‌ಗಳ ಮಾಸಿಕ ಬಾಡಿಗೆ 24.15 ಲಕ್ಷ ರೂಪಾಯಿ. ಫೆಬ್ರವರಿ 14 ರಂದು ಲೀಸ್​​ ಅಗ್ರಿಮೆಂಟ್​ ರಿಜಿಸ್ಟರ್ ಆಗಿದೆ. ಒಪ್ಪಂದವು 2.22 ಲಕ್ಷ ರೂಪಾಯಿಯ ಮುದ್ರಾಂಕ ಶುಲ್ಕ ಮತ್ತು 2,000 ರೂಪಾಯಿಗಳ ನೋಂದಣಿ ಮೊತ್ತವನ್ನು ಒಳಗೊಂಡಿದೆ. ಎರಡೂ ಮನೆಗಳು ಪಾಲಿ ಹಿಲ್‌ನಲ್ಲಿರುವ ಪೂಜಾ ಕಾಸಾ ಕಟ್ಟಡದಲ್ಲಿವೆ.

ಇದನ್ನೂ ಓದಿ: ಡಿಎಂಕೆ, ಕೇಂದ್ರದ ವಿರುದ್ಧ 'ಗೆಟ್​ ಔಟ್'​ ಅಭಿಯಾನ: '26ರ ಚುನಾವಣೆಯಲ್ಲಿ ಟಿವಿಕೆ ಇತಿಹಾಸ ಸೃಷ್ಟಿಸಲಿದೆ' ಎಂದ ವಿಜಯ್

2024ರ ನವೆಂಬರ್​​ನಲ್ಲಿ, ಶಾರುಖ್​ ಪತ್ನಿ ಗೌರಿ ಖಾನ್ ಅವರು ಮನ್ನತ್‌ನ (ತಮ್ಮ ಬಂಗಲೆ/ಮನೆ) ಒಂದು ಭಾಗವನ್ನು ವಿಸ್ತರಿಸಲು ಮಹಾರಾಷ್ಟ್ರ ಕೋಸ್ಟಲ್​​ ಝೋನ್​​​ ಮ್ಯಾನೇಜ್​​​ಮೆಂಟ್​​ ಅಥಾರಿಟಿಯಿಂದ ಅನುಮತಿ ಕೋರಿದ್ದರು. ಇದರಲ್ಲಿ, ಮನ್ನತ್​ ಹಿಂದಿರುವ 6 ಮಹಡಿಗಳ ಅನೆಕ್ಸ್​​ ಕಟ್ಟಡಕ್ಕೆ ಎರಡು ಮಹಡಿಗಳನ್ನು ಸೇರಿಸಲು ಅನುಮತಿ ಕೋರಲಾಗಿತ್ತು. ಇದು ಮನೆಯ ವಿಸ್ತೀರ್ಣವನ್ನು 616.02 ಚದರ್​ ಮೀಟರ್‌ಗೆ ಹೆಚ್ಚಿಸುತ್ತದೆ. ಇಡೀ ಪ್ರಾಜೆಕ್ಟ್​ನ ವೆಚ್ಚ 25 ಕೋಟಿ ರೂಪಾಯಿ. ಮನ್ನತ್ ನವೀಕರಣಕ್ಕೆ ಎಷ್ಟು ಸಮಯ ತೆಗೆದುಕೊಳ್ಳುತ್ತದೆ ಎಂಬುದನ್ನು ಇನ್ನೂ ನಿರ್ಧರಿಸಲಾಗಿಲ್ಲ. ಆದ್ರೆ ವರದಿಗಳ ಪ್ರಕಾರ, ಶಾರುಖ್ ಕನಿಷ್ಠ 2 ವರ್ಷಗಳ ಕಾಲ ಬಾಡಿಗೆ ಮನೆಯಲ್ಲಿ ವಾಸಿಸಬೇಕಾಗುತ್ತದೆ.

ಇದನ್ನೂ ಓದಿ: ಛಾವಾ ಕಲೆಕ್ಷನ್: ಭಾರತದಲ್ಲಿ 400, ವಿಶ್ವಾದ್ಯಂತ 500 ಕೋಟಿ ರೂ. ದಾಟಲು ಸಜ್ಜಾದ ವಿಕ್ಕಿ, ರಶ್ಮಿಕಾ ಸಿನಿಮಾ

ಸಿನಿಮಾ ಬಗ್ಗೆ ಗಮನಿಸೋದಾದರೆ, ಶಾರುಖ್ ಖಾನ್​​ ಕೊನೆಯದಾಗಿ ರಾಜ್‌ಕುಮಾರ್ ಹಿರಾನಿ ಅವರ ಡಂಕಿ ಚಿತ್ರದಲ್ಲಿ ಕಾಣಿಸಿಕೊಂಡರು. ವಿಕ್ಕಿ ಕೌಶಲ್ ಮತ್ತು ತಾಪ್ಸಿ ಪನ್ನು ಅವರಂತಹ ಖ್ಯಾತ ಕಲಾವಿದರೊಂದಿಗೆ ತೆರೆ ಹಂಚಿಕೊಂಡಿದ್ದರು. ಈ ಚಿತ್ರ 2023ರ ಡಿಸೆಂಬರ್​​ನಲ್ಲಿ ಬಿಡುಗಡೆಯಾಯಿತು. ಅದೇ ವರ್ಷ ಪಠಾಣ್ ಮತ್ತು ಜವಾನ್​ನಂತಹ ಬ್ಲಾಕ್​​ಬಸ್ಟರ್ ಚಿತ್ರಗಳನ್ನು ಎಸ್​ಆರ್​ಕೆ ನೀಡಿದ್ದರು. ಇದು ಬಾಕ್ಸ್ ಆಫೀಸ್ ಅನೇಕ ದಾಖಲೆಗಳನ್ನು ಪುಡಿಗಟ್ಟಿದೆ. ಅವರ ಮುಂಬರುವ ಚಿತ್ರ 'ಕಿಂಗ್' ಎಂದು ವರದಿಯಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.