ಇಸಾಬೆಲ್ಲೆ ರೊಸೆಲ್ಲಿನಿ (Isabelle Rossellini) 97ನೇ ಅಕಾಡೆಮಿ ಪ್ರಶಸ್ತಿಗಳಲ್ಲಿ ಅತ್ಯುತ್ತಮ ಪೋಷಕ ನಟಿಯಾಗಿ ತಮ್ಮ ಮೊದಲ ಆಸ್ಕರ್ ನಾಮನಿರ್ದೇಶನವನ್ನು ಪಡೆದುಕೊಂಡಿದ್ದಾರೆ. ಆದಾಗ್ಯೂ, ಕಾನ್ಕ್ಲೇವ್ (Conclave) ಚಿತ್ರದಲ್ಲಿನ ಅವರ ಸ್ಕ್ರೀನ್ ಟೈಮ್ ಗಮನ ಸೆಳೆಯುವಂತಿದೆ. ಈ ಚಿತ್ರ ಅವರಿಗೆ ಪ್ರತಿಷ್ಠಿತ ಆಸ್ಕರ್ ನಾಮನಿರ್ದೇಶನವನ್ನು ತಂದುಕೊಟ್ಟಿತು. ಒಟ್ಟು 8 ನಿಮಿಷಗಳ ಸ್ಕ್ರೀನ್ ಟೈಮ್ ಹೊಂದಿರುವ ಈ ನಟಿ ಈಗ ವಿಶ್ವದ ಸಿನಿಪ್ರಿಯರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಪೋಷಕ ಪಾತ್ರಗಳ ಆಸ್ಕರ್ ನಾಮನಿರ್ದೇಶನಗಳಲ್ಲಿ ಸ್ಥಾನ ಪಡೆದ ಕಲಾವಿದರ ಪಟ್ಟಿ ಸೇರಿದ್ದಾರೆ.
ಇಸಾಬೆಲ್ಲೆ ರೊಸೆಲ್ಲಿನಿ 40 ವರ್ಷಗಳ ನಟನಾ ವೃತ್ತಿಜೀವನ ಹೊಂದಿದ್ದಾರೆ. ಬ್ಲೂ ವೆಲ್ವೆಟ್ ಮೂಲಕ ವಿಮರ್ಶಾತ್ಮಕ ಮೆಚ್ಚುಗೆ ಗಳಿಸಿದರು. ಆದಾಗ್ಯೂ, ಆಸ್ಕರ್ ಮನ್ನಣೆ ಅವರ ಎಪ್ಪತ್ತರ ವಯಸ್ಸಿನಲ್ಲಿ ಬಂದಿದೆ. ಎಡ್ವರ್ಡ್ ಬರ್ಗರ್ ನಿರ್ದೇಶನದ ಕಾನ್ಕ್ಲೇವ್‌ನಲ್ಲಿ 10 ನಿಮಿಷಕ್ಕೂ ಕಡಿಮೆ ಅವಧಿಯಲ್ಲಿ ಕಾಣಿಸಿಕೊಂಡಿರುವ 72ರ ಹರೆಯದ ರೊಸೆಲ್ಲಿನಿ ಆಸ್ಕರ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದಾರೆ. ಈ ಚಿತ್ರದಲ್ಲಿ ಸಿಸ್ಟರ್ ಆಗ್ನೆಸ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಅವರ ಈ ನಾಮನಿರ್ದೇಶನವು ಪಾತ್ರ ಕಡಿಮೆ ಅವಧಿ ಹೊಂದಿದ್ದರೂ, ಪ್ರಭಾವಶಾಲಿಯಾಗಿರೋದು ಪ್ರಮುಖ ಅನ್ನೋದನ್ನು ಸಾಬೀತುಪಡಿಸಿದೆ. ಕಾನ್ಕ್ಲೇವ್‌ನಲ್ಲಿ ಅವರ ಒಟ್ಟು ಸ್ಕೀನ್ ಟೈಮ್ 10 ನಿಮಿಷಕ್ಕೂ ಕಡಿಮೆಯಿರಬಹುದು. ಆದರೆ ಅವರ ಅಭಿನಯವು ಚಿತ್ರದ ನಿರೂಪಣೆಯಲ್ಲಿ ಬಹು ಮುಖ್ಯವಾಗಿ ಕಾರ್ಯನಿರ್ವಹಿಸಿದೆ. ರೊಸೆಲ್ಲಿನಿ ಆಸ್ಕರ್ ನಾಮಿನೇಷನ್ನಲ್ಲಿ 'ವಿಕೆಡ್'ನ ಅರಿಯಾನಾ ಗ್ರಾಂಡೆ, 'ಎ ಕಂಪ್ಲೀಟ್ ಅನ್‌ನೋನ್'ನ ಮೋನಿಕಾ ಬಾರ್ಬರೋ ಮತ್ತು 'ಎಮಿಲಿಯಾ ಪೆರೆಜ್'ನ ಜೊಯಿ ಸಲ್ಡಾನಾ ಸೇರಿದಂತೆ ಇತರೆ ಸ್ಪರ್ಧಿಗಳಿಂದ ತೀವ್ರ ಸ್ಪರ್ಧೆ ಎದುರಿಸಲಿದ್ದಾರೆ.
ಅತ್ಯಂತ ಕಡಿಮೆ ಸ್ಕ್ರೀನ್ಟೈಮ್ನಲ್ಲಿ ನಟಿಸಿ ಆಸ್ಕರ್ ಪ್ರವೇಶಿಸಿದ್ದು ಇಸಾಬೆಲ್ಲೆ ರೊಸೆಲ್ಲಿನಿ ಮಾತ್ರವಲ್ಲ. ಈ ಗೌರವವು ಬೀಟ್ರಿಸ್ ಸ್ಟ್ರೈಟ್ ಅವರಿಗೂ ಸಲ್ಲುತ್ತದೆ. ಅವರು ಸಿಡ್ನಿ ಲ್ಯೂಮೆಟ್‌ರ ನೆಟ್‌ವರ್ಕ್ (1976)ನಲ್ಲಿ ಲೂಯಿಸ್ ಸ್ಕುಮಾಚರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಕೇವಲ 5 ನಿಮಿಷ, 2 ಸೆಕೆಂಡುಗಳ ಕಾಲ ನಟಿಸಿದ್ದರು. ಕಡಿಮೆ ಸ್ಕ್ರೀನ್ಟೈಮ್ ಹೊರತಾಗಿಯೂ ಪ್ರತಿಷ್ಠಿತ ಆಸ್ಕರ್ ಗಳಿಸಬಹುದಾದ ಪ್ರದರ್ಶನಗಳ ಬಗ್ಗೆ ಇದು ಒಂದು ರೀತಿಯ ಮಾನದಂಡವನ್ನು ನಿಗದಿಪಡಿಸಿದೆ.
ಇದನ್ನೂ ಓದಿ: ಐಷಾರಾಮಿ ಬಂಗಲೆ 'ಮನ್ನತ್'ನಿಂದ ಬಾಡಿಗೆ ಮನೆಗೆ ಶಾರುಖ್ ಖಾನ್ ಫ್ಯಾಮಿಲಿ ಶಿಫ್ಟ್ : ಕಾರಣ ತಿಳಿಯಿರಿ
ಶೇಕ್ಸ್‌ಪಿಯರ್ ಇನ್ ಲವ್ (1998) ಚಿತ್ರದಲ್ಲಿ ರಾಣಿ ಎಲಿಜಬೆತ್ I ಪಾತ್ರದಲ್ಲಿ ನಟಿಸಿದ ಡೇಮ್ ಜೂಡಿ ಡೆಂಚ್ (Dame Judi Dench) ಪೋಷಕ ನಟಿ ಪ್ರಶಸ್ತಿಯಲ್ಲಿ ನಾಮನಿರ್ದೇಶನಗೊಂಡಿದ್ದರು. 5 ನಿಮಿಷ 52 ಸೆಕೆಂಡುಗಳ ಕಾಲ ಮಾತ್ರ ನಟಿಸಿದರಾದರೂ, ಅತ್ಯುತ್ತಮ ಪೋಷಕ ನಟಿ ಆಸ್ಕರ್ ಪ್ರಶಸ್ತಿಯನ್ನು ಗಿಟ್ಟಿಸಿಕೊಂಡರು. ಅಷ್ಟರ ಮಟ್ಟಿಗೆ ಅವರ ಪಾತ್ರ ಮತ್ತು ಅಭಿನಯ ಪವರ್ಫುಲ್ ಆಗಿತ್ತು.
ಇದನ್ನೂ ಓದಿ: ಡಿಎಂಕೆ, ಕೇಂದ್ರದ ವಿರುದ್ಧ 'ಗೆಟ್ ಔಟ್' ಅಭಿಯಾನ: '26ರ ಚುನಾವಣೆಯಲ್ಲಿ ಟಿವಿಕೆ ಇತಿಹಾಸ ಸೃಷ್ಟಿಸಲಿದೆ' ಎಂದ ವಿಜಯ್
ಹರ್ಮಿಯೋನ್ ಬ್ಯಾಡ್ಲಿ (Hermione Baddeley) ಅತ್ಯಂತ ಕಡಿಮೆ ಸ್ಕ್ರೀನ್ಟೈಮ್ ಹೊಂದಿ ದಾಖಲೆ ಬರೆದಿದ್ದಾರೆ. ಕೇವಲ 2 ನಿಮಿಷ 19 ಸೆಕೆಂಡುಗಳಲ್ಲಿ ಕಾಣಿಸಿಕೊಂಡಿದ್ದರು. ಅವರು 1959ರಲ್ಲಿ ಇಂಗ್ಲೆಂಡ್ನಲ್ಲಿ ನಿರ್ಮಿಸಲಾದ ರೂಮ್ ಅಟ್ ದಿ ಟಾಪ್ ಡ್ರಾಮಾದಲ್ಲಿ ನಟಿಸಿ ಅತ್ಯುತ್ತಮ ಪೋಷಕ ನಟಿ ವಿಭಾಗದಲ್ಲಿ ನಾಮನಿರ್ದೇಶನಗೊಂಡರು.