ETV Bharat / technology

ಸ್ಟನ್ನಿಂಗ್​ ಲುಕ್​, ಅದ್ಭುತ ಫೀಚರ್ಸ್​-ಎಂಜಿ ಕಾಮೆಟ್​ ಇವಿ ಬ್ಲಾಕ್‌ಸ್ಟಾರ್ಮ್ ಎಡಿಷನ್​ ಬೆಲೆ ಎಷ್ಟು ಗೊತ್ತಾ? - MG COMET EV BLACKSTORM EDITION

MG Comet EV Blackstorm Edition: ಎಂಜಿ ಕಾಮೆಟ್ ಇವಿ ಬ್ಲಾಕ್‌ಸ್ಟಾರ್ಮ್ ಆವೃತ್ತಿ ಮಾರುಕಟ್ಟೆಗೆ ಲಗ್ಗೆಯಿಟ್ಟಿದ್ದು ಬೆಲೆ, ವೈಶಿಷ್ಟ್ಯಗಳ ಬಗ್ಗೆ ಸಂಪೂರ್ಣ ವಿವರ.

COMET EV BLACKSTORM EDITION PRICE  MG COMET EV BLACKSTORM SPECS  MG COMET EV BLACKSTORM FEATURES  COMET EV BLACKSTORM EDITION LAUNCH
ಎಂಜಿ ಕಾಮೆಟ್​ ಇವಿ ಬ್ಲಾಕ್‌ಸ್ಟಾರ್ಮ್ (Photo Credit- JSW MG Motor India)
author img

By ETV Bharat Tech Team

Published : Feb 26, 2025, 10:07 PM IST

MG Comet EV Blackstorm Edition: ಜೆಎಸ್‌ಡಬ್ಲ್ಯೂ ಎಂಜಿ ಮೋಟಾರ್ ಇಂಡಿಯಾ ಭಾರತದಲ್ಲಿ ಮಾರಾಟ ಮಾಡುವ ಅತ್ಯಂತ ಕೈಗೆಟುಕುವ ಕಾರು 'ಎಂಜಿ ಕಾಮೆಟ್ ಇವಿ'. ಸದ್ಯ ಈ ಕಾರು ಈಗ ಜನಪ್ರಿಯತೆ ಗಳಿಸುತ್ತಿದ್ದು, ಮಾರಾಟದಲ್ಲಿ ಭರ್ಜರಿಯಾಗಿ ಮುನ್ನಡೆಯುತ್ತಿದೆ. ಇದರೊಂದಿಗೆ ಕಂಪನಿಯು ಈಗ 'MG ಕಾಮೆಟ್ EV ಬ್ಲಾಕ್‌ಸ್ಟಾರ್ಮ್' ಆವೃತ್ತಿಯನ್ನು ಬಿಡುಗಡೆ ಮಾಡಿದೆ. ಕಾಮೆಟ್ ಇವಿ ಬ್ಲಾಕ್‌ಸ್ಟಾರ್ಮ್ ಆವೃತ್ತಿಯು ಅದರ ಟಾಪ್-ಸ್ಪೆಕ್ ಎಕ್ಸ್‌ಕ್ಲೂಸಿವ್ ರೂಪಾಂತರವನ್ನು ಆಧರಿಸಿದೆ. ಇದು ವೀಲ್​ ಕವರ್ಸ್​, ಫ್ರಂಟ್​ ಸ್ಕಿಡ್ ಪ್ಲೇಟ್ ಮತ್ತು ಬ್ಯಾಡ್ಜಿಂಗ್‌ನಲ್ಲಿ ರೆಡ್​ ಕಲರ್​ ಆಕ್ಸೆಂಟ್ಸ್​ ಜೊತೆ ಪಾದಾರ್ಪಣೆ ಮಾಡಿತು.

ಈ ಬ್ರ್ಯಾಂಡ್ ಈಗಾಗಲೇ ತನ್ನ ಹೆಕ್ಟರ್, ಗ್ಲೋಸ್ಟರ್ ಮತ್ತು ಆಸ್ಟರ್ ಮಾದರಿಗಳ ಬ್ಲಾಕ್‌ಸ್ಟಾರ್ಮ್ ಆವೃತ್ತಿಯನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದೆ. ಎಂಜಿ ಕಾಮೆಟ್ ಇವಿ, ಎಂಜಿ ಗ್ಲೋಸ್ಟರ್, ಎಂಜಿ ಆಸ್ಟರ್ ಮತ್ತು ಎಂಜಿ ಹೆಕ್ಟರ್ ನಂತರ ಬ್ಲಾಕ್‌ಸ್ಟಾರ್ಮ್ ಎಡಿಷನ್ ಕ್ಲಬ್‌ಗೆ ಸೇರುತ್ತಿರುವ ಎಂಜಿ ಇಂಡಿಯಾ ಶ್ರೇಣಿಯ ನಾಲ್ಕನೇ ಕಾರು ಆಗಿದೆ. ಆದರೂ ಕಂಪನಿಯು ಎಲೆಕ್ಟ್ರಿಕ್ ವಾಹನ ವಿಭಾಗದಲ್ಲಿ ಬ್ಲ್ಯಾಕ್‌ಸ್ಟಾರ್ಮ್ ವಿಶೇಷ ಆವೃತ್ತಿಯನ್ನು ನೀಡುತ್ತಿರುವುದು ಇದೇ ಮೊದಲು.

ಬುಕಿಂಗ್ಸ್​: ಕಂಪನಿಯು ಈ 'MG ಕಾಮೆಟ್ EV ಬ್ಲಾಕ್‌ಸ್ಟಾರ್ಮ್ ಆವೃತ್ತಿ'ಗಾಗಿ ಬುಕಿಂಗ್ಸ್​ ಪ್ರಾರಂಭಿಸಿದೆ. ಗ್ರಾಹಕರು 11 ಸಾವಿರ ರೂ ಟೋಕನ್ ಅಮೌಂಟ್​ ಅನ್ನು ಪಾವತಿಸುವ ಮೂಲಕ ಇದನ್ನು ಬುಕ್ ಮಾಡಬಹುದು.

ಇಂಟೀರಿಯರ್​: ಈ ಕಾಮೆಟ್ ಇವಿ ಬ್ಲಾಕ್‌ಸ್ಟಾರ್ಮ್ ಆವೃತ್ತಿಯ ಇಂಟಿರಿಯರ್​ ವಿಷಯಕ್ಕೆ ಬಂದರೆ, ಇದು ಆಲ್​-ಬ್ಲ್ಯಾಕ್​ ಸೀಟ್ ಅಪ್ಹೋಲ್ಸ್ಟರಿಯೊಂದಿಗೆ ಫುಲ್​ ರೆಡ್​ ಕಲರ್​ ಸ್ಟಿಚಿಂಗ್​ ಮತ್ತು ಮುಂಭಾಗದ ಹೆಡ್‌ರೆಸ್ಟ್‌ಗಳಲ್ಲಿ 'ಬ್ಲ್ಯಾಕ್‌ಸ್ಟಾರ್ಮ್' ಬ್ಯಾಡ್ಜ್‌ಗಳೊಂದಿಗೆ ಬರುತ್ತದೆ. ಇದರರ್ಥ ಇದು ರೆಡ್​ ಸ್ಟಿಚ್​, ರೆಡ್​ ಆಕ್ಸಿಂಟ್ಸ್​ ಜೊತೆ ಆಲ್​ ಬ್ಲ್ಯಾಕ್​ ಥೀಮ್ ಫನಿಷಿಂಗ್​ ಜೊತೆ ಎಂಟ್ರಿ ನೀಡುತ್ತದೆ. ಇದರ ಡ್ಯಾಶ್‌ಬೋರ್ಡ್ ಇನ್ನೂ ವೈಟ್​ ಮತ್ತು ಗ್ರೇ ಕಲರ್​ ಥೀಮ್‌ನಲ್ಲಿ ಬರುತ್ತದೆ. ಆದರೂ ಒಟ್ಟಾರೆ ಕ್ಯಾಬಿನ್ ಡಿಸೈನ್​ ಸಾಮಾನ್ಯ ಕಾಮೆಟ್​ ರೀತಿ ಇದೆ.

ಎಕ್ಸ್​ಟೀರಿಯರ್​: ಈ ಕಾಮೆಟ್ ಇವಿ ಬ್ಲಾಕ್‌ಸ್ಟಾರ್ಮ್ ಸ್ಟಾರಿ ಬ್ಲ್ಯಾಕ್ ಎಕ್ಸ್​ಟಿರಿಯರ್​ ಶೇಡ್​ ಜೊತೆ ಬರುತ್ತದೆ. ಇದು ಬಂಪರ್ ಮೇಲೆ ರೆಡ್​ ಆ್ಯಕ್ಸಿಂಟ್ಸ್​, ಸ್ಕಿಡ್​ ಪ್ಲೇಟ್​, ಸೈಡ್​ ಕ್ಲಾಡಿಂಗ್​, ಹುಡ್ ಮೇಲೆ 'ಮೋರಿಸ್ ಗ್ಯಾರೇಜಸ್' ಬ್ಯಾಡ್ಜಿಂಗ್ ಜೊತೆ ಸ್ಟಾರೀ ಬ್ಲ್ಯಾಕ್​ ಎಕ್ಸ್​ಟಿರಿಯರ್​ ಶೇಡ್​ ಹೊಂದಿದೆ. ಕಾಮೆಟ್ ಇವಿಯ ವಿಶೇಷ ಆವೃತ್ತಿಯಾಗಿ ಎದ್ದು ಕಾಣುವಂತೆ ಮಾಡಲು ಕಂಪನಿಯು ಫೆಂಡರ್‌ನಲ್ಲಿ 'ಬ್ಲ್ಯಾಕ್ ಸ್ಟಾರ್ಮ್' ಬ್ಯಾಡ್ಜ್ ಅನ್ನು ಸಹ ನೀಡಿದೆ.

ರಿಯರ್​ ಡಿಸೈನ್​: MG ಕಾಮೆಟ್ ಬ್ಲಾಕ್‌ಸ್ಟಾರ್ಮ್ ಕಾರಿನ ರಿಯರ್​ ಡಿಸೈನ್​ ಬಗ್ಗೆ ಹೇಳುವುದಾದರೆ, ಇದು ಕಾಮೆಟ್ ಬ್ಯಾಡ್ಜಿಂಗ್ ಮತ್ತು ಹಿಂಭಾಗದ ಬಂಪರ್‌ನಲ್ಲಿ ಕೆಲವು ರೀತಿಯ ಬಣ್ಣದ ಆ್ಯಕ್ಸಿಂಟ್ಸ್​ ಒಳಗೊಂಡಂತೆ ಕೆಲವು ರೆಡ್​ ಕಲರ್​ ಎಲಿಮೆಂಟ್ಸ್​ ಹೊಂದಿದೆ.

ನೋ ಮೆಕಾನಿಕಲ್​ ಬೆಂಜೆಸ್​: MG ಕಾಮೆಟ್ EV ಬ್ಲಾಕ್‌ಸ್ಟಾರ್ಮ್ ಆವೃತ್ತಿಯಲ್ಲಿ ಯಾವುದೇ ಯಾಂತ್ರಿಕವಾಗಿ ಯಾವುದೇ ರೀತಿ ಬದಲಾವಣೆಯಿಲ್ಲ. ಇದು ಅದೇ 17.3 kWh ಬ್ಯಾಟರಿ ಪ್ಯಾಕ್‌ನೊಂದಿಗೆ ಬರುತ್ತದೆ. ಈ ಬ್ಯಾಟರಿಯು 42 PS ಮತ್ತು 110 Nm ಟಾರ್ಕ್ ಉತ್ಪಾದಿಸುವ ರಿಯರ್​-ಆಕ್ಸಲ್ ಮೌಂಟೆಡ್ (RWD) ಎಲೆಕ್ಟ್ರಿಕ್ ಮೋಟರ್‌ಗೆ ಶಕ್ತಿಯನ್ನು ನೀಡುತ್ತದೆ. ಇದರ ARAI-ಕ್ಲೈಮ್ಡ್​ ರೇಂಜ್​ 230 ಕಿಲೋ ಮೀಟರ್‌ ಆಗಿದೆ.

ಫೀಚರ್ಸ್​ ಮತ್ತು ಸೇಫ್ಟಿ: ಈ ಕಾಮೆಟ್ ಇವಿ ಆಲ್-ಬ್ಲಾಕ್ ಆವೃತ್ತಿಯು ವೈಶಿಷ್ಟ್ಯಗಳ ಲಿಸ್ಟ್​ನಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಿಲ್ಲ. ಇದು 10.25-ಇಂಚಿನ ಟಚ್‌ಸ್ಕ್ರೀನ್, 10.25-ಇಂಚಿನ ಡ್ರೈವರ್ ಡಿಸ್​ಪ್ಲೇ, ವೈರ್‌ಲೆಸ್ ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ಪ್ಲೇ ಮತ್ತು ಸಾಮಾನ್ಯ ಕಾಮೆಟ್‌ನಲ್ಲಿ ಕಂಡುಬರುವ ಮ್ಯಾನುವಲ್ ಎಸಿ ಮುಂತಾದ ವೈಶಿಷ್ಟ್ಯಗಳನ್ನು ಸಹ ಒಳಗೊಂಡಿದೆ. ಇದರ ಜೊತೆಗೆ ಇದು 4-ಸ್ಪೀಕರ್ ವಾಯ್ಸ್​ ಸಿಸ್ಟಮ್​ ಅನ್ನು ಹೊಂದಿದೆ.

ಇದರ ಸುರಕ್ಷತಾ ಸೂಟ್ ಕೂಡ ಸಾಮಾನ್ಯ ಕಾಮೆಟ್​ನಂತೆಯೇ ಇದೆ. ಇದು ಡ್ಯುಯಲ್ ಏರ್‌ಬ್ಯಾಗ್‌ಗಳು (ಸ್ಟ್ಯಾಂಡರ್ಡ್ ಆಗಿ), EBDಯೊಂದಿಗೆ ABS, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ಹಿಲ್-ಹೋಲ್ಡ್ ಅಸಿಸ್ಟ್, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS) ಮತ್ತು ಸೆನ್ಸಾರ್​ಗಳೊಂದಿಗೆ ರಿಯರ್​ ಪಾರ್ಕಿಂಗ್ ಕ್ಯಾಮೆರಾ ಸೇರಿದಂತೆ ಮುಂತಾದ ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ಬೆಲೆ: MG ಕಾಮೆಟ್ ಬ್ಲಾಕ್‌ಸ್ಟಾರ್ಮ್ ಆವೃತ್ತಿಯು ಸಾಮಾನ್ಯ ಮಾದರಿಗಿಂತ ಸ್ವಲ್ಪ ಹೆಚ್ಚು ಬೆಲೆ ಹೊಂದಿದೆ. ಇದರಿಂದಾಗಿ ಇದರ ಬೆಲೆ 7 ಲಕ್ಷ ರೂ.ದಿಂದ 9.84 ಲಕ್ಷ ರೂ.ಗಳವರೆಗೆ ಇರುತ್ತದೆ. ಆದರೂ, ನೀವು MG ಕಾಮೆಟ್‌ನೊಂದಿಗೆ ನೀಡುವ ಬ್ಯಾಟರಿ ಚಂದಾದಾರಿಕೆ ಯೋಜನೆಯನ್ನು ಆರಿಸಿಕೊಂಡರೆ ಬೆಲೆಗಳು ಇನ್ನೂ ಕಡಿಮೆಯಾಗುತ್ತವೆ. ಆಗ ಬೆಲೆಗಳು 5 ಲಕ್ಷ ರೂ.ಯಿಂದ 7.80 ಲಕ್ಷ ರೂ.ಗಳವರೆಗೆ ಇರುತ್ತದೆ. ಆದ್ರೆ ಈ ಸಬ್​ಸ್ಕ್ರೀಪ್ಶನ್​ ಪ್ಲಾನ್​ ಜೊತೆ ನೀವು ಬ್ಯಾಟರಿ ಸಬ್​ಸ್ಕ್ರಿಪ್ಶನ್​ ಖರ್ಚಿಗೆ ಎಂಜಿ ಮೋಟಾರ್​ ಕಂಪನಿ ಕಿ.ಮೀ.ಗೆ 2.5 ರೂ. ಲಕ್ಷ ಪಾವತಿಸಬೇಕಾಗುತ್ತದೆ.

ಮಾರುಕಟ್ಟೆಯಲ್ಲಿ ಸ್ಪರ್ಧೆ: MG ಕಾಮೆಟ್ EVಗೆ ಭಾರತದಲ್ಲಿ ನೇರ ಪ್ರತಿಸ್ಪರ್ಧಿ ಇಲ್ಲ. ಆದರೆ ಇದನ್ನು ಟಾಟಾ ಟಿಯಾಗೊ ಇವಿ ಮತ್ತು ಸಿಟ್ರೊಯೆನ್ ಇಸಿ3ಗೆ ಕೈಗೆಟುಕುವ ಪರ್ಯಾಯವೆಂದು ಪರಿಗಣಿಸಬಹುದು.

ಇದನ್ನೂ ಓದಿ: ಈ ಗ್ರಾಹಕರಿಗೆ ಖುಷಿ ಸುದ್ದಿ, ಮೊಬೈಲ್​ ರೀಚಾರ್ಜ್​ ಜೊತೆ ಜಿಯೋಹಾಟ್‌ಸ್ಟಾರ್ ಫ್ರೀ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.