ETV Bharat / entertainment

ಛಾವಾ ಕಲೆಕ್ಷನ್: ಭಾರತದಲ್ಲಿ 400, ವಿಶ್ವಾದ್ಯಂತ 500 ಕೋಟಿ ರೂ. ದಾಟಲು ಸಜ್ಜಾದ ವಿಕ್ಕಿ, ರಶ್ಮಿಕಾ ಸಿನಿಮಾ - CHHAAVA COLLECTION

ವಾರದ ದಿನಗಳಲ್ಲಿಯೂ ಛಾವಾ ಚಿತ್ರ ಉತ್ತಮ ಪ್ರದರ್ಶನ ಮುಂದುವರಿಸಿದೆ.

Chhaava Box Office Collection Day 12
ಛಾವಾ ಕಲೆಕ್ಷನ್ (Photo: Film Poster)
author img

By ETV Bharat Entertainment Team

Published : Feb 26, 2025, 1:56 PM IST

ರಾಷ್ಟ್ರಪ್ರಶಸ್ತಿ ವಿಜೇತ ನಟ ವಿಕ್ಕಿ ಕೌಶಲ್ ಮುಖ್ಯಭೂಮಿಕೆಯ ಐತಿಹಾಸಿಕ ನಾಟಕ 'ಛಾವಾ' ತನ್ನ ಬಾಕ್ಸ್ ಆಫೀಸ್ ಓಟವನ್ನು ಮುಂದುವರೆಸಿದೆ. ತೆರೆಕಂಡು 2 ವಾರ ಸಮೀಪಿಸಿದರೂ ಅಂಕಿ - ಅಂಶ ಕುಗ್ಗುವ ಯಾವುದೇ ಲಕ್ಷಣಗಳಿಲ್ಲ. ಮರಾಠಾ ರಾಜ ಛತ್ರಪತಿ ಸಂಭಾಜಿ ಮಹಾರಾಜರ ಜೀವನ ಮತ್ತು ಮೊಘಲ್ ಚಕ್ರವರ್ತಿ ಔರಂಗಜೇಬನ ವಿರುದ್ಧದ ಅವರ ಹೋರಾಟವನ್ನಾಧರಿಸಿದ ಈ ಚಿತ್ರ ಭಾರತ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗೆಲುವು ಕಾಣುವಲ್ಲಿ ಯಶಸ್ವಿಯಾಗಿದೆ. ಕೇವಲ 12 ದಿನಗಳಲ್ಲಿ, ಈ ಚಿತ್ರವು ಭಾರತೀಯ ಬಾಕ್ಸ್ ಆಫೀಸ್‌ನಲ್ಲಿ 350 ಕೋಟಿ ರೂ.ಗಳನ್ನು ದಾಟಿದೆ. ಜಾಗತಿಕವಾಗಿ 500 ಕೋಟಿ ರೂ.ಗಳನ್ನು ದಾಟುವ ಕ್ಷಣದಲ್ಲಿದೆ.

12ನೇ ದಿನದ ಛಾವಾ ಬಾಕ್ಸ್ ಆಫೀಸ್ ಕಲೆಕ್ಷನ್: ಸಿನಿಮಾ ಇಂಡಸ್ಟ್ರಿ ಟ್ರ್ಯಾಕರ್ ಸ್ಯಾಕ್ನಿಲ್ಕ್ ವರದಿ ಪ್ರಕಾರ, ರಶ್ಮಿಕಾ ಮಂದಣ್ಣ ಪ್ರಮುಖ ಪಾತ್ರ ವಹಿಸಿರುವ ಈ ಚಿತ್ರ ತನ್ನ 12ನೇ ದಿನದಂದು (ಮಂಗಳವಾರ) ಭಾರತದಲ್ಲಿ 18 ಕೋಟಿ ರೂ. (ಆರಂಭಿಕ ಅಂದಾಜು) ಗಳಿಸಿದೆ. ತನ್ನ ಮೊದಲ ದಿನ 31 ಕೋಟಿ ರೂಪಾಯಿಯೊಂದಿಗೆ ಬಾಕ್ಸ್​ ಆಫೀಸ್​ ಪ್ರಯಾಣ ಪ್ರಾರಂಭಿಸಿದ್ದ ಈ ಸಿನಿಮಾ ಮೊದಲ ವಾರದಲ್ಲಿ 219.25 ಕೋಟಿ ರೂ. ಕಲೆಕ್ಷನ್​ ಮಾಡಿತ್ತು. ವಾರಾಂತ್ಯ ಮಾತ್ರವಲ್ಲದೇ ವಾರದ ದಿನಗಳಲ್ಲಿಯೂ ಚಿತ್ರ ಉತ್ತಮ ಪ್ರದರ್ಶನ ಕಂಡಿದೆ. ಕಳೆದ ಶುಕ್ರವಾರ 23.5 ಕೋಟಿ ರೂ., ಶನಿವಾರ 44 ಕೋಟಿ ರೂ. ಮತ್ತು ಭಾನುವಾರ 40 ಕೋಟಿ ರೂ. ಗಳಿಸಿದ್ದ ಸಿನಿಮಾ ತನ್ನ 11ನೇ ದಿನ (ಸೋಮವಾರ) ಇದು 18.5 ಕೋಟಿ ರೂಪಾಯಿಯ ವ್ಯವಹಾರ ನಡೆಸಿದೆ.

ಇದನ್ನೂ ಓದಿ: ಪುನೀತ್​​​ ರಾಜ್​​​ಕುಮಾರ್​ ಚಾರಿಟಬಲ್​ ಟ್ರಸ್ಟ್​ ಉದ್ಘಾಟನೆ​: ಮಕ್ಕಳಿಗೆ ಕನ್ನಡಕ ವಿತರಣೆ

ತನ್ನ ಉತ್ತಮ ಪ್ರದರ್ಶನದೊಂದಿಗೆ, ಛಾವಾ ಭಾರತೀಯ ಬಾಕ್ಸ್ ಆಫೀಸ್‌ನಲ್ಲಿ 363.25 ಕೋಟಿ ರೂಪಾಯಿ ಗಳಿಸಿದೆ. ಸದ್ಯದ ಟ್ರೆಂಡ್ ಅನ್ನು ಗಮನಿಸಿದರೆ, ಈ ವಾರದ ಅಂತ್ಯದ ವೇಳೆಗೆ ಚಿತ್ರವು ಭಾರತದಲ್ಲಿ 400 ಕೋಟಿ ರೂ.ಗಳನ್ನು ದಾಟುವ ನಿರೀಕ್ಷೆಯಿದೆ.

ದಿನ/ವಾರಇಂಡಿಯಾ ನೆಟ್​ ಕಲೆಕ್ಷನ್​​
ಮೊದಲ ವಾರ219.25 ಕೋಟಿ ರೂಪಾಯಿ.
ಎಂಟನೇ ದಿನ23.5 ಕೋಟಿ ರೂಪಾಯಿ.
ಒಂಬತ್ತನೇ ದಿನ44 ಕೋಟಿ ರೂಪಾಯಿ.
ಹತ್ತನೇ ದಿನ40 ಕೋಟಿ ರೂಪಾಯಿ.
ಹನ್ನೊಂದನೇ ದಿನ18.5 ಕೋಟಿ ರೂಪಾಯಿ.
ಹನ್ನೆರಡನೇ ದಿನ 18.00 ಕೋಟಿ ರೂಪಾಯಿ (ಆರಂಭಿಕ ಅಂದಾಜು).
ಒಟ್ಟು363.25 ಕೋಟಿ ರೂಪಾಯಿ.

ಜಾಗತಿಕವಾಗಿಯೂ ಛಾವಾ ಉತ್ತಮ ಪ್ರದರ್ಶನ ನೀಡುತ್ತಿದೆ. ವಿಶ್ವಾದ್ಯಂತ ಒಟ್ಟು 483.35 ಕೋಟಿ ರೂ. ಗಳಿಸಿದೆ. ಬಾಕ್ಸ್ ಆಫೀಸ್‌ನಲ್ಲಿ ಯಾವುದೇ ಪ್ರಮುಖ ಸ್ಪರ್ಧೆಯಿಲ್ಲ. ಚಿತ್ರದ ಸದ್ಯದ ಪರ್ಫಾಮೆನ್ಸ್ ಗಮನಿಸಿದರೆ, ಇಂದೇ 500 ಕೋಟಿ ರೂ.ಗಳನ್ನು ದಾಟುವ ಸಾಧ್ಯತೆ ಹೆಚ್ಚಿದೆ.

ಇದನ್ನೂ ಓದಿ: ಖ್ಯಾತ ನಟ ಮೋಹನ್​ ಲಾಲ್​ ಜೊತೆ ರಾಗಿಣಿ ದ್ವಿವೇದಿ ಭರ್ಜರಿ ಭೋಜನ : ಶೀಘ್ರದಲ್ಲೇ ಬಿಗ್​ ಅನೌನ್ಸ್​ಮೆಂಟ್​​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.