ಭಾರತದಲ್ಲಿ ಆಧಾರ್ ಕಾರ್ಡ್ನ ಪ್ರಾಮುಖ್ಯತೆಯ ಬಗ್ಗೆ ವಿಶೇಷವಾಗಿ ಏನನ್ನೂ ಹೇಳಬೇಕಾಗಿಲ್ಲ. ಇಲ್ಲಿ ಎಲ್ಲಾ ಕೆಲಸಕ್ಕೂ ಮೊದಲು ಕೇಳುವುದು ಆಧಾರ್ ಕಾರ್ಡ್. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನೀಡುವ ಕಲ್ಯಾಣ ಯೋಜನೆಗಳು, ಸರ್ಕಾರಿ ಕಚೇರಿಗಳು, ಬ್ಯಾಂಕ್ಗಳು ಹೀಗೆ ಯಾವುದೇ ಕೆಲಸ ಮಾಡಬೇಕೆಂದರೂ ಆಧಾರ್ ಕಾರ್ಡ್ ಹೊಂದಿರಬೇಕು.
ಇಂಥ ಆಧಾರ್ಕಾರ್ಡ್ನಲ್ಲಿ ಚಿಕ್ಕದೊಂದು ತಪ್ಪುಗಳಿದ್ದರೆ ಹೊಸ ಆಧಾರ್ ಕಾರ್ಡ್ ಮಾಡಿಸಿಕೊಳ್ಳಲು ಅಥವಾ ಅಪ್ಡೇಟ್ ಮಾಡಲು ಆಧಾರ್ ಕೇಂದ್ರಕ್ಕೆ ಹೋಗಬೇಕು. ಇದರ ಆಧಾರದ ಮೇಲೆ ಆಧಾರ್ ಕೇಂದ್ರಗಳಿಗೆ ಯಾವ ರೀತಿಯ ಬೇಡಿಕೆ ಇದೆ ಎಂಬುದನ್ನು ಅರ್ಥಮಾಡಿಕೊಳ್ಳಿ. ನೀವು ಆಧಾರ್ ಸೇವಾ ಕೇಂದ್ರ ತೆರೆಯಬೇಕೆಂದಿದ್ದರೆ ನಿಮಗಾಗಿ ಇಲ್ಲಿದೆ ಸವಿವರ ಮಾಹಿತಿ.
ಮೊದಲು ಅದಕ್ಕೆ ಯುಐಡಿಎಐ ನಡೆಸುವ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕು. ಅದರ ನಂತರವೇ ಈ ಸೇವಾ ಕೇಂದ್ರವನ್ನು ಪ್ರಾರಂಭಿಸಲು ನಿಮಗೆ ಪರವಾನಗಿ ನೀಡಲಾಗುವುದು. ಬಳಿಕ ನೀವು ಆಧಾರ್ ನೋಂದಣಿ ಸಂಖ್ಯೆ, ಬಯೋಮೆಟ್ರಿಕ್ ಪರಿಶೀಲನೆಯನ್ನು ಮಾಡಬೇಕು. ನಂತರ ನೀವು ಸಾಮಾನ್ಯ ಸೇವಾ ಕೇಂದ್ರದಿಂದ ನೋಂದಾಯಿಸಿಕೊಳ್ಳಬೇಕು.
ಹೊಸ ಆಧಾರ್ ಫ್ರಾಂಚೈಸ್ ಪಡೆಯಲು ಹೇಗೆ ಅರ್ಜಿ ಸಲ್ಲಿಸಬೇಕು ಎಂದು ಈಗ ತಿಳಿಯೋಣ:
- ನೀವು ಮೊದಲು NSEIT ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬೇಕು.
- ಅಲ್ಲಿ 'ಕ್ರಿಯೇಟ್ ನ್ಯೂ ಯೂಸರ್' ಎಂಬ ಆಯ್ಕೆ ಇರುತ್ತದೆ, ಅದರ ಮೇಲೆ ಕ್ಲಿಕ್ ಮಾಡಿ.
- ಹೊಸ ಫೈಲ್ ತೆರೆಯುತ್ತದೆ. ಅದರಲ್ಲಿ, ಶೇರ್ ಕೋಡ್ ಅನ್ನು ನಮೂದಿಸಲು ನಿಮ್ಮನ್ನು ಕೇಳಲಾಗುತ್ತದೆ.
- ಆ ಶೇರ್ ಕೋಡ್‌ಗಾಗಿ ನೀವು ಆಫ್‌ಲೈನ್ ಇ - ಆಧಾರ್‌ಗೆ ಹೋಗಿ ಅದನ್ನು ಡೌನ್‌ಲೋಡ್ ಮಾಡಬೇಕು.
- ಈ ರೀತಿಯಾಗಿ, ನೀವು ಶೇರ್ ಕೋಡ್ ಮತ್ತು xml ಫೈಲ್ ಎರಡನ್ನೂ ಡೌನ್‌ಲೋಡ್ ಮಾಡುತ್ತೀರಿ.
ನಂತರ ಪ್ರಕ್ರಿಯೆಯು ಈ ರೀತಿಯಾಗಿ ಇರುತ್ತದೆ: ಅರ್ಜಿ ಸಲ್ಲಿಸುವಾಗ ಕಂಪ್ಯೂಟರ್/ಮೊಬೈಲ್ ಪರದೆಯ ಮೇಲೆ ಒಂದು ಫಾರ್ಮ್ ತೆರೆಯುತ್ತದೆ. ಅದರಲ್ಲಿ ನೀಡಿರುವ ಬಾಕ್ಸ್ಗಳಲ್ಲಿ ಎಲ್ಲ ಮಾಹಿತಿಯನ್ನು ಸರಿಯಾಗಿ ನಮೂದಿಸಿ ಸಲ್ಲಿಸಬೇಕು. ಅದರೊಂದಿಗೆ, ನಿಮ್ಮ ಬಳಕೆದಾರ ಐಡಿ ಮತ್ತು ಪಾಸ್‌ವರ್ಡ್ ನಿಮ್ಮ ಮೊಬೈಲ್ ಮತ್ತು ಇಮೇಲ್‌ಗೆ ಬರುತ್ತದೆ. ಅದರ ನಂತರ, ಆಧಾರ್ ಪರೀಕ್ಷಿಸಲು ಮತ್ತು ಪ್ರಮಾಣೀಕರಣ ಪೋರ್ಟಲ್‌ಗೆ ಸುಲಭವಾಗಿ ಲಾಗ್ ಇನ್ ಮಾಡಲು ನೀವು ಅವುಗಳನ್ನು ಬಳಸಬಹುದು.
ನಂತರ Continue ಆಯ್ಕೆಯನ್ನು ನೋಡುತ್ತೀರಿ.. ಅದರ ಮೇಲೆ ಒತ್ತಿದಾಗ ಮತ್ತೊಂದು ಫಾರ್ಮ್ ತೆರೆಯುತ್ತದೆ. ಈಗ ಅದರಲ್ಲಿ ಕೇಳಿರುವ ಮಾಹಿತಿಯನ್ನು ನೀಡಬೇಕು. ಅದರ ನಂತರ ನಿಮ್ಮ ವಿವರಗಳು ಸರಿಯಾಗಿವೆಯೇ ಅಥವಾ ಇಲ್ಲವೇ ಎಂಬುದನ್ನು ಪರಿಶೀಲಿಸಿ ಮತ್ತು ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಪ್ರೊಸೀಡ್ ಆಯ್ಕೆಯನ್ನು ಕ್ಲಿಕ್ ಮಾಡಿ. ಇದೆಲ್ಲವೂ ಆದ ನಂತರ ನೀವು ಗ್ರಾಹಕರಿಗೆ ಸೇವೆಗಳನ್ನು ಒದಗಿಸಲು ಪ್ರಾರಂಭಿಸಬಹುದು.
ಇದನ್ನೂ ಓದಿ: ಪಾಸ್‌ಪೋರ್ಟ್ ಪಡೆಯುವುದಕ್ಕೆ ವಿಳಂಬವೇ, ಹಾಗಾದರೆ ಈ ಮಾರ್ಗಗಳನ್ನು ಅನುಸರಿಸಿ