ಕರ್ನಾಟಕ

karnataka

ETV Bharat / lifestyle

ಲಂಚ್ ಬಾಕ್ಸ್ ಸ್ಪೆಷಲ್: ರುಚಿಕರ ನೆಲ್ಲಿಕಾಯಿ ರೈಸ್ ಮಕ್ಕಳಿಗೆ ತುಂಬಾ ಇಷ್ಟ, ಹತ್ತೇ ನಿಮಿಷದಲ್ಲಿ ಸಿದ್ಧ!

Amla Rice Recipe in Kannada: ಈ ಬಾರಿ ನಾವು ನಿಮಗಾಗಿ ಲಂಚ್ ಬಾಕ್ಸ್ ವಿಶೇಷ ರೆಸಿಪಿ ತಂದಿದ್ದೇವೆ. ನೆಲ್ಲಿಕಾಯಿ ರೈಸ್ ಮಕ್ಕಳಿಗೆ ತುಂಬಾ ಇಷ್ಟವಾಗುತ್ತೆ. ಈ ರೆಸಿಪಿಯನ್ನು ಹತ್ತೇ ನಿಮಿಷದಲ್ಲಿ ಸಿದ್ಧಪಡಿಸಬಹುದು.

LUNCH BOX RECIPES  EASY AMLA RICE RECIPE  AMLA RICE  HOW TO MAKE AMLA RICE RECIPE
ರುಚಿಕರ ಆಮ್ಲಾ ರೈಸ್ (ETV Bharat)

By ETV Bharat Lifestyle Team

Published : Dec 3, 2024, 11:40 AM IST

Amla Rice Recipe in Kannada: ನಮ್ಮಲ್ಲಿ ಬಹುತೇಕರು ನೆಲ್ಲಿಕಾಯಿಯಿಂದ ಉಪ್ಪಿನಕಾಯಿಯನ್ನು ತಯಾರಿಸುತ್ತಾರೆ. ಇದು ಆರೋಗ್ಯಕ್ಕೂ ತುಂಬಾ ಒಳ್ಳೆಯದು. ಈ ಬಾರಿ ನಾವು ನಿಮಗಾಗಿ ಲಂಚ್ ಬಾಕ್ಸ್ ವಿಶೇಷ ರೆಸಿಪಿಯನ್ನು ತಂದಿದ್ದೇವೆ. ಅದುವೇ.. ಸಖತ್​ ಟೇಸ್ಟಿಯಾದ ನೆಲ್ಲಿಕಾಯಿ ಅನ್ನ. ನೀವು ಕೆಲವೇ ನಿಮಿಷಗಳಲ್ಲಿ ನೆಲ್ಲಿಕಾಯಿಯಿಂದ ರುಚಿಕರವಾದ ರೈಸ್​​ ತಯಾರು ಮಾಡಬಹುದು. ಮಕ್ಕಳಿಗೆ ಲಂಚ್ ಬಾಕ್ಸ್​ಗಾಗಿ ಈ ಆಮ್ಲಾ ರೈಸ್ ಸಿದ್ಧಪಡಿಸಿ ಕಟ್ಟಿದರೆ, ಡಬ್ಬಿ ಎಲ್ಲಾ ಖಾಲಿ ಮಾಡಿಕೊಂಡು ಬರುತ್ತಾರೆ. ಹಾಗಾದರೆ, ನೆಲ್ಲಾಕಾಯಿ ರೈಸ್​ನ್ನು ಸರಳ ಹಾಗೂ ರುಚಿಕರವಾಗಿ ಮಾಡುವುದು ಹೇಗೆ ಎಂಬುದನ್ನು ತಿಳಿಯೋಣ.

ನೆಲ್ಲಿಕಾಯಿ ರೈಸ್​ಗೆ ಬೇಕಾಗುವ ಪದಾರ್ಥಗಳು:

  • ಅಕ್ಕಿ - ಕಪ್
  • ಎಳ್ಳು - 2 ಟೀಸ್ಪೂನ್
  • ಕರಿಮೆಣಸು - ಅರ್ಧ ಟೀಸ್ಪೂನ್
  • ಅರಿಶಿನ - ಕಾಲು ಟೀಚಮಚ
  • ನೆಲ್ಲಿಕಾಯಿ - 5
  • ಉಪ್ಪು - ರುಚಿಗೆ ತಕ್ಕಷ್ಟು
  • ಎಳ್ಳಿನ ಎಣ್ಣೆ - ಎರಡೂವರೆ ಟೀಸ್ಪೂನ್
  • ಶೇಂಗಾ - 3 ಟೀಸ್ಪೂನ್
  • ಸಾಸಿವೆ - 1 ಟೀಸ್ಪೂನ್
  • ಉದ್ದಿನಬೇಳೆ- 1 ಟೀಸ್ಪೂನ್
  • ಹಸಿ ಕಡಲೆಬೇಳೆ - 1 ಟೀಸ್ಪೂನ್
  • ಜೀರಿಗೆ - 1 ಟೀಸ್ಪೂನ್
  • ಹಸಿಮೆಣಸಿನಕಾಯಿ - 2
  • ಒಣಮೆಣಸಿನ - 2
  • ಕರಿಬೇವಿನ ಎಲೆಗಳು - ಎರಡು
  • ಒಂದು ಚಿಟಿಕೆ ಇಂಗು
  • ಸಾಂಬಾರ್ ಪುಡಿ - ಅರ್ಧ ಟೀಸ್ಪೂನ್

ನೆಲ್ಲಿಕಾಯಿ ರೈಸ್ ತಯಾರಿಸುವ ವಿಧಾನ:

  • ಮೊದಲು ಅಕ್ಕಿಯನ್ನು ಎರಡು ಅಥವಾ ಮೂರು ಬಾರಿ ನೀರಿನಲ್ಲಿ ತೊಳೆಯಿರಿ. ನಂತರ ನೆಲ್ಲಿಕಾಯಿ ಸ್ವಚ್ಛಗೊಳಿಸಿ ಪಕ್ಕಕ್ಕೆ ಇಡಿ.
  • ಈಗ ಕುಕ್ಕರ್ ತೆಗೆದುಕೊಂಡು ಅದಕ್ಕೆ ತೊಳೆದ ಅಕ್ಕಿ, ರುಚಿಗೆ ತಕ್ಕಷ್ಟು ಉಪ್ಪು, ಸ್ವಲ್ಪ ಅರಿಶಿನ ಮತ್ತು ಎರಡು ಕಪ್ ನೀರು ಹಾಕಿ ಒಲೆಯ ಮೇಲೆ ಇಡಬೇಕು. ಹೆಚ್ಚಿನ ಉರಿಯಲ್ಲಿ ಸ್ಟವ್ ಇಟ್ಟು ಮೂರು ಸೀಟಿ ಬರುವವರೆಗೆ ಬೇಯಿಸಿಕೊಳ್ಳಿ.
  • ನಂತರ ಸ್ಟವ್​​​ ಆಫ್ ಮಾಡಿ ಮತ್ತು ಹಬೆ ಹೋದ ನಂತರ, ಮುಚ್ಚಳ ತೆರೆಯಿರಿ. ಅಕ್ಕಿ ಸಂಪೂರ್ಣವಾಗಿ ತಣ್ಣಗಾಗಲು ಬಿಡಿ.
  • ಈಗ ಒಲೆ ಆನ್ ಮಾಡಿ ಹಾಗೂ ಪಾತ್ರೆ ಇಡಿ. ಇದರೊಳಗೆ ಕರಿಮೆಣಸು ಹಾಗೂ ಎಳ್ಳು ಸೇರಿಸಿ ಹುರಿಯಿರಿ. ತಣ್ಣಗಾದ ನಂತರ ಸ್ವಲ್ಪ ಒರಟಾಗಿ ರುಬ್ಬಿ ತಟ್ಟೆಗೆ ತೆಗೆದುಕೊಳ್ಳಿ.
  • ನಂತರ ಒಲೆಯ ಮೇಲೆ ಬಾಣಲೆಯನ್ನು ಇಡಿ 2 ಚಮಚ ಎಣ್ಣೆಯನ್ನು ಹಾಕಿ ಬಿಸಿ ಮಾಡಿ.
  • ಎಣ್ಣೆ ಬಿಸಿಯಾದ ನಂತರ ಸಾಸಿವೆ, ಶೇಂಗಾ, ಹಸಿಕಡಲೆ ಬೇಳೆ ಹಾಕಿ ಮಧ್ಯಮ ಉರಿಯಲ್ಲಿ ಕೆಂಪಗೆ ಆಗುವಂತೆ ಹುರಿದುಕೊಳ್ಳಿ.
  • ಒಣ ಕೆಂಪು ಮೆಣಸಿನಕಾಯಿ, ಹಸಿರು ಮೆಣಸಿನಕಾಯಿ ಮತ್ತು ಜೀರಿಗೆ ಸೇರಿಸಿ ಹಾಗೂ ಫ್ರೈ ಮಾಡಿ.
  • ಜೊತೆಗೆ ಇಂಗು ಹಾಗೂ ಕರಿಬೇವಿನ ಸೊಪ್ಪು ಹಾಕಿ ಹುರಿದುಕೊಳ್ಳಿ. ಈಗ ಸಾಂಬಾರ್ ಪುಡಿಯನ್ನು ಸೇರಿಸಿ ಹಾಗೂ ಕೇವಲ 30 ಸೆಕೆಂಡುಗಳ ಕಾಲ ಬಿಸಿ ಮಾಡಿ. ಬಳಿಕ ಸ್ಟವ್ ಆಫ್ ಮಾಡಿ.
  • ಈಗ ಅದಕ್ಕೆ ರುಬ್ಬಿದ ಎಳ್ಳು ಹಾಗೂ ಕಾಳುಮೆಣಸಿನ ಪುಡಿಯನ್ನು ಸೇರಿಸಿ ಮಿಶ್ರಣ ಮಾಡಿ.
  • ಜೊತೆಗೆ ತುರಿದ ನೆಲ್ಲಿಕಾಯಿಯ ಮಿಶ್ರಣ ಸೇರಿಸಿ ಮತ್ತು ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. (ಈ ಸಮಯದಲ್ಲಿ ಸ್ಟೌವ್ ಆಫ್ ಮಾಡಬೇಕು.)
  • ಈಗ ಸಿದ್ಧವಾಗಿರುವ ಅನ್ನಕ್ಕೆ ಈ ಒಗ್ಗರಣೆಯನ್ನು ಹಾಕಿ ಚೆನ್ನಾಗಿ ಕಲಸಿ. (ರೈಸ್​ಗೆ ಹುಳಿ ಕಡಿಮೆಯಾಗಿದೆ ಎಂದು ನಿಮಗೆ ಅನಿಸಿದರೆ, ನೀವು ಸ್ವಲ್ಪ ಹೆಚ್ಚು ತುರಿದ ನೆಲ್ಲಿಕಾಯಿ ಸೇರಿಸಿಕೊಳ್ಳಿ)
  • ಹೀಗೆ ಮಾಡಿದರೆ ಸಾಕು ತುಂಬಾ ರುಚಿಕರವಾದ ನೆಲ್ಲಿಕಾಯಿ ರೈಸ್ ಸಿದ್ಧವಾಗುತ್ತದೆ.

ಇವುಗಳನ್ನೂ ಓದಿ:

ABOUT THE AUTHOR

...view details