IRCTC Maha Kumbh Punya Kshetra Yatra: ಕುಂಭಮೇಳ ಭಾರತದ ಅತೀ ದೊಡ್ಡ ಧಾರ್ಮಿಕ ಕಾರ್ಯಕ್ರಮ. ಈ ಶುಭ ಸಮಯದಲ್ಲಿ ಪವಿತ್ರ ನದಿಗಳಲ್ಲಿ ಸ್ನಾನ ಮಾಡುವುದು ಮೋಕ್ಷಕ್ಕೆ ಮಾರ್ಗ ಹಾಗು ಇದರಿಂದ ಮನಸ್ಸು, ಆತ್ಮ ಶುದ್ಧವಾಗುತ್ತದೆ ಎಂಬುದು ಹಿಂದೂ ಧರ್ಮೀಯರ ಬಲವಾದ ನಂಬಿಕೆ. ಹೀಗಾಗಿ, ಲಕ್ಷಾಂತರ ಭಕ್ತರು ಪವಿತ್ರ ನದಿಗಳಾದ ಗಂಗಾ, ಯಮುನಾ ಮತ್ತು ಸರಸ್ವತಿ ಸಂಗಮದಲ್ಲಿ ಪುಣ್ಯಸ್ನಾನ ಮಾಡುತ್ತಾರೆ.
ನೀವೂ ಕೂಡಾ ಕುಂಭಮೇಳಕ್ಕೆ ಹೋಗಬೇಕೇ? ಹೌದು ಎಂದಾದರೆ, ಇಂಡಿಯನ್ ರೈಲ್ವೆ ಕೇಟರಿಂಗ್ ಮತ್ತು ಟೂರಿಸಂ ಕಾರ್ಪೊರೇಷನ್(IRCTC) ನಿಮಗಾಗಿ ಕೈಗೆಟುಕುವ ಬೆಲೆಯಲ್ಲಿ ಪ್ರವಾಸದ ಪ್ಯಾಕೇಜ್ಒದಗಿಸುತ್ತಿದೆ. ಭಾರತ್ ಗೌರವ್ ಪ್ರವಾಸಿ ರೈಲು ಕುಂಭಮೇಳದೊಂದಿಗೆ ವಾರಣಾಸಿ ಮತ್ತು ಅಯೋಧ್ಯೆಯನ್ನು ನೋಡಲು ಅವಕಾಶ ಒದಗಿಸುತ್ತಿದೆ. ಈ ಪ್ರವಾಸ ಯಾವಾಗ ಪ್ರಾರಂಭವಾಗುತ್ತದೆ? ಪ್ಯಾಕೇಜ್‌ಗೆ ನಿಗದಿಪಡಿಸಿದ ದರವೆಷ್ಟು? ಯಾವೆಲ್ಲಾ ಸ್ಥಳಗಳನ್ನು ನೋಡಬಹುದು ಎಂಬುದರ ಸಂಪೂರ್ಣ ವಿವರ ಇಲ್ಲಿದೆ.
ಐಆರ್ಸಿಟಿಸಿ ಈ ಪ್ಯಾಕೇಜ್‌ಗೆ 'ಮಹಾ ಕುಂಭ ಪುಣ್ಯಕ್ಷೇತ್ರ ಯಾತ್ರೆ' ಎಂದು ಹೆಸರಿಟ್ಟಿದೆ. ಪ್ರವಾಸದ ಒಟ್ಟು ಅವಧಿ 7 ರಾತ್ರಿ ಮತ್ತು 8 ಹಗಲು. ಹೈದರಾಬಾದ್‌ನಿಂದ ಪ್ರವಾಸವು ಆರಂಭವಾಗುತ್ತದೆ.
ಪ್ರವಾಸದ ವಿವರ:
- 1ನೇ ದಿನ: ಮಧ್ಯಾಹ್ನ 12ಕ್ಕೆ ಸಿಕಂದರಾಬಾದ್‌ನಿಂದ ಭಾರತ್ ಗೌರವ್ ಟೂರಿಸ್ಟ್ ರೈಲು ಮೂಲಕ ಯಾತ್ರೆ ಪ್ರಾರಂಭ. ಭುವನಗಿರಿ, ಜನಗಾಂ, ಕಾಜಿಪೇಟ್, ವಾರಂಗಲ್, ಮಹಬೂಬಾಬಾದ್, ಡೋರ್ನಕಲ್, ಖಮ್ಮಂ, ಮಧಿರಾ, ವಿಜಯವಾಡ, ಏಲೂರು, ರಾಜಮಂಡ್ರಿ, ಸಾಮರ್ಲಕೋಟಾದಲ್ಲಿಯೂ ರೈಲು ಹತ್ತಬಹುದು.
- 2 ಮತ್ತು 3ನೇ ದಿನ: ಎರಡನೇ ದಿನ ತುನಿ, ದುವ್ವಾಡ, ಪೆಂಡುರ್ತಿ ಮತ್ತು ವಿಜಯನಗರ ಮಾರ್ಗವಾಗಿ ಸಂಚರಿಸಿ ಮೂರನೇ ದಿನ ಬೆಳಗ್ಗೆ 8 ಗಂಟೆಗೆ ವಾರಣಾಸಿ ತಲುಪುವಿರಿ. ಅಲ್ಲಿಂದ ಹೋಟೆಲ್‌ಗೆ ಹೋಗಿ ಚೆಕ್ ಇನ್ ಮಾಡಿ ಊಟ ಮಾಡುವುದು. ಸಂಜೆ ಗಂಗಾರತಿ ನೋಡಿ ರಾತ್ರಿ ಅಲ್ಲೇ ತಂಗಬೇಕಾಗುತ್ತದೆ.
- 4ನೇ ದಿನ: ಉಪಹಾರದ ನಂತರ, ಪ್ರಯಾಗರಾಜ್‌ಗೆ ಹೊರಡುವುದು. ಪ್ರಯಾಗ್‌ರಾಜ್‌ನಲ್ಲಿರುವ ಹೋಟೆಲ್‌ನಲ್ಲಿ ಚೆಕ್-ಇನ್ ಮಾಡಿದ ನಂತರ ಅಲ್ಲಿಯೇ ಊಟದ ವ್ಯವಸ್ಥೆಯಿರುತ್ತದೆ. ನಂತರ ಕುಂಭಮೇಳಕ್ಕೆ ಹೋಗುವುದು. ದಿನ ಪೂರ್ತಿ ಅಲ್ಲಿಯೇ ಸಮಯ ಕಳೆಯುವುದು. ರಾತ್ರಿ ಪ್ರಯಾಗರಾಜ್‌ನಲ್ಲಿರುವ ಟೆಂಟ್ ಸಿಟಿಯಲ್ಲಿ ತಂಗುವುದು.
- 5ನೇ ದಿನ: ತಿಂಡಿ ಮುಗಿಸಿ ವಾರಣಾಸಿಗೆ ಹೊರಡುವುದು. ಹೋಟೆಲ್‌ನಲ್ಲಿ ಚೆಕ್ ಇನ್ ಮಾಡಿದ ನಂತರ ಕಾಶಿ ವಿಶ್ವನಾಥ, ಕಾಶಿ ವಿಶಾಲಕ್ಷ್ಮಿ ಮತ್ತು ಅನ್ನಪೂರ್ಣ ದೇವಿ ದೇವಸ್ಥಾನಗಳ ದರ್ಶನ. ರಾತ್ರಿ ಊಟ ಮಾಡಿ ಅಲ್ಲಿಯೇ ಉಳಿಯುವುದು.
- 6ನೇ ದಿನ: ಹೋಟೆಲ್‌ನಿಂದ ಚೆಕ್‌ಔಟ್ ಮಾಡಿ ಅಯೋಧ್ಯೆಗೆ ಹೊರಡುವುದು. ಅಲ್ಲಿ ಶ್ರೀರಾಮ ಜನ್ಮಭೂಮಿ ಹಾಗೂ ಹನುಮಾನ್ ದೇವಾಲಯಗಳ ದರ್ಶನ. ರಾತ್ರಿ ಅಯೋಧ್ಯೆಯಿಂದ ಹೈದರಾಬಾದ್ಗೆ ಪ್ರಯಾಣ. ರಾತ್ರಿಯಿಡೀ ಪ್ರಯಾಣವಿರುತ್ತದೆ.
- 7ನೇ ದಿನ: ಸಂಪೂರ್ಣ ಪ್ರಯಾಣದ ದಿನ.
- 8ನೇ ದಿನ: ವಿಜಯನಗರ, ಪೆಂಡುರ್ತಿ, ದುವ್ವಾಡ, ತುನಿ, ಸಾಮರ್ಲಕೋಟ, ರಾಜಮಂಡ್ರಿ, ಏಲೂರು, ವಿಜಯವಾಡ, ಮಧಿರಾ, ಖಮ್ಮಂ, ಡೋರ್ನಕಲ್, ಮಹಬೂಬಾಬಾದ್, ವಾರಂಗಲ್, ಕಾಜಿಪೇಟ್, ಜನಗಾಂ, ಭುವನಗಿರಿ ಮೂಲಕ ಸಿಕಂದರಾಬಾದ್ ತಲುಪುವುದರೊಂದಿಗೆ ಪ್ರವಾಸ ಮುಕ್ತಾಯ.
ಟೂರ್ ಪ್ಯಾಕೇಜ್‌ನ ಶುಲ್ಕ:
- ಎಕಾನಮಿಯಲ್ಲಿ ವಯಸ್ಕರು (SL) ವರ್ಗ ವಯಸ್ಕರಿಗೆ- ₹22,635 ಮತ್ತು 5ರಿಂದ 11 ವರ್ಷದ ಮಕ್ಕಳಿಗೆ- ₹21,740 ಶುಲ್ಕ.
- ಸ್ಟ್ಯಾಂಡರ್ಡ್‌ನಲ್ಲಿ (3AC) ವಯಸ್ಕರಿಗೆ ₹31,145 ಮತ್ತು 5 ರಿಂದ 11 ವರ್ಷ ವಯಸ್ಸಿನ ಮಕ್ಕಳಿಗೆ ₹30,095 ಎಂದು ದರ ನಿಗದಿಪಡಿಸಲಾಗಿದೆ.
- ಕಂಫರ್ಟ್‌ನಲ್ಲಿ (2AC) ವಯಸ್ಕರಿಗೆ ₹38,195 ಮತ್ತು 5ರಿಂದ 11 ವರ್ಷ ವಯಸ್ಸಿನ ಮಕ್ಕಳಿಗೆ ₹36,935.
- ಆಯ್ದ ಪ್ಯಾಕೇಜ್‌ಗೆ ಅನುಗುಣವಾಗಿ, ರೈಲು 2AC, 3AC ಮತ್ತು ಸ್ಲೀಪರ್ ಕ್ಲಾಸ್ ಪ್ರಯಾಣ ಹೊಂದಿರುತ್ತದೆ.
- ಪ್ಯಾಕೇಜ್ ಆಧರಿಸಿ, ಪ್ರಯಾಣಕ್ಕಾಗಿ ವಾಹನ ಒದಗಿಸಲಾಗುತ್ತದೆ.
- ಬೆಳಿಗ್ಗೆ ಕಾಫಿ, ಉಪಹಾರ, ಮಧ್ಯಾಹ್ನ ಮತ್ತು ರಾತ್ರಿಯ ಊಟ ನೀಡಲಾಗುತ್ತದೆ.
- ಪ್ರಯಾಣಿಕರಿಗೆ ಪ್ರಯಾಣ ವಿಮೆ ಒದಗಿಸಲಾಗುತ್ತದೆ.
- ಪ್ಯಾಕೇಜ್‌ನಲ್ಲಿ ಸೇರಿಸದ ಸ್ಥಳಗಳಿಗೆ ಭೇಟಿ ನೀಡಲು ಅಥವಾ ಮಾರ್ಗದರ್ಶಿಯನ್ನು ನೇಮಿಸಿಕೊಳ್ಳಲು ಪ್ರಯಾಣಿಕರು ಜವಾಬ್ದಾರರು.
- ಪ್ರವಾಸ ಜನವರಿ 19, 2025ರಂದು ಆರಂಭ.
- ಪ್ಯಾಕೇಜ್‌ನ ಸಂಪೂರ್ಣ ವಿವರಗಳಿಗೆ, ಪ್ಯಾಕೇಜ್ ಬುಕ್ ಮಾಡಲು ಈ ಲಿಂಕ್ ಕ್ಲಿಕ್ ಮಾಡಬಹುದು.
ಹೆಚ್ಚಿನ ಮಾಹಿತಿಗೆ ಐಆರ್ಟಿಸಿಟಿ ವೆಬ್ಸೈಟ್ ಸಂಪರ್ಕಿಸಿ:
https://www.irctctourism.com/pacakage_description?packageCode=SCZBG34
ಇದನ್ನೂ ಓದಿ: IRCTC ಭರ್ಜರಿ ಟೂರ್ ಪ್ಯಾಕೇಜ್: ಶೃಂಗಾರ ಶಿಲ್ಪಕಲೆಯ ಖಜುರಾಹೊ ಸೇರಿ ಮಧ್ಯಪ್ರದೇಶದ ವಿವಿಧ ತಾಣಗಳ ವೀಕ್ಷಿಸುವ ಅವಕಾಶ!