ETV Bharat / entertainment

ಕರ್ನಾಟಕದಲ್ಲಿ ಅವಧಿಗೂ ಮುನ್ನ 'ಪುಷ್ಪ 2' ಪ್ರದರ್ಶನ: ಕ್ರಮಕ್ಕೆ ನಿರ್ಮಾಪಕರ ಸಂಘದಿಂದ ಆಗ್ರಹ

ನಿಗದಿತ ಸಮಯಕ್ಕಿಂತ ಮುಂಚೆಯೇ ಪುಷ್ಪ ಸೀಕ್ವೆಲ್​ ಬಿಡುಗಡೆಗೊಳಿಸಲು ಕೆಲ ಚಿತ್ರಮಂದಿರಗಳು ರೆಡಿಯಾಗಿರೋ ಹಿನ್ನೆಲೆ ಚಲನಚಿತ್ರ ನಿರ್ಮಾಪಕರ ಸಂಘ ಆಕ್ರೋಶ ವ್ಯಕ್ತಪಡಿಸಿದೆ. ಜೊತೆಗೆ ಕ್ರಮಕ್ಕೆ ಆಗ್ರಹಿಸಿದೆ.

Allu Arjun
ಅಲ್ಲು ಅರ್ಜುನ್ (Photo: ETV Bharat)
author img

By ETV Bharat Entertainment Team

Published : 9 hours ago

ಭಾರತೀಯ ಚಿತ್ರರಂಗದ ಬಹುನಿರೀಕ್ಷಿತ ಚಿತ್ರ ''ಪುಷ್ಪ: ದಿ ರೂಲ್​​'' ಅಬ್ಬರಕ್ಕೆ ಕ್ಷಣಗಣನೆ ಆರಂಭಗೊಂಡಿದ್ದು, ಗುರುವಾರ ಮುಂಜಾನೆ ವಿಶ್ವದಾದ್ಯಂತ 12,500 ಸ್ಕ್ರೀನ್​​​ಗಳಲ್ಲಿ ಪುಷ್ಪರಾಜ್​ ಸದ್ದು ಮಾಡಲಿದ್ದಾನೆ. ಸಿನಿಮಾ ನೋಡಿ ಆನಂದಿಸಲು ಅಪಾರ ಸಂಖ್ಯೆಯ ಅಭಿಮಾನಿಗಳು ಕಾತರರಾಗಿದ್ದಾರೆ. ಆದ್ರೆ ರಾಜ್ಯದಲ್ಲಿ ನಿಗದಿತ ಸಮಯಕ್ಕಿಂತ ಮುಂಚೆಯೇ ಬಿಡುಗಡೆಗೊಳಿಸಲು ಕೆಲ ಚಿತ್ರಮಂದಿರಗಳು ಸಿದ್ಧವಾಗಿರುವ ಹಿನ್ನೆಲೆ ಚಲನಚಿತ್ರ ನಿರ್ಮಾಪಕರ ಸಂಘ ಆಕ್ರೋಶ ವ್ಯಕ್ತಪಡಿಸಿದೆ.

ರಾಜ್ಯಾದ್ಯಂತ ಗುರುವಾರ ಅಲ್ಲು ಅರ್ಜುನ್ ರಶ್ಮಿಕಾ ಮಂದಣ್ಣ ಅಭಿನಯದ ಪುಷ್ಪ 2 ಸಿನಿಮಾ ಬಿಡುಗಡೆ ಆಗಲಿದೆ. ಆದ್ರೆ ಬುಧವಾರ ರಾತ್ರಿಯಿಂದಲೇ ಪುಷ್ಪ 2 ಪ್ರದರ್ಶನಕ್ಕೆ ಅವಕಾಶ ಕೊಟ್ಟ ಹಿನ್ನೆಲೆ, ಬೆಂಗಳೂರು ಜಿಲ್ಲಾಧಿಕಾರಿ ಹಾಗೂ ಪೊಲೀಸ್ ಕಮಿಷನರ್​ಗೆ ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್ ದೂರು ಸಲ್ಲಿಸಿದ್ದಾರೆ. ಅವಧಿಗೂ ಮುನ್ನ ಸಿನಿಮಾ ಪ್ರದರ್ಶನಗೊಳ್ಳಲಿರುವ ಬಗ್ಗೆ ಕ್ರಮ ಕೈಗೊಳ್ಳಲು ಮನವಿ ಮಾಡಿದ್ದಾರೆ.

Producers Association demands to action
ಕ್ರಮಕ್ಕೆ ನಿರ್ಮಾಪಕರ ಸಂಘದಿಂದ ಆಗ್ರಹ (Photo: ETV Bharat)

ನಿಯಮದ ಪ್ರಕಾರ, ಕರ್ನಾಟಕದಲ್ಲಿ ಬೆಳಗ್ಗೆ 6 ಗಂಟೆಗೂ ಮುನ್ನ ಚಿತ್ರಮಂದಿರಗಳಲ್ಲಿ ಸಿನಿಮಾ ಪ್ರದರ್ಶನ ಶುರು ಮಾಡುವಂತಿಲ್ಲ. ಆದರೆ ರಾಜ್ಯದಲ್ಲಿ ಅವಧಿಗೂ ಮುನ್ನವೇ ಪುಷ್ಪ 2 ಸಿನಿಮಾ ಪ್ರದರ್ಶನ ಮಾಡಲಾಗುತ್ತಿದೆ. ಅಲ್ಲದೇ, ಪುಷ್ಪ 2 ಸಿನಿಮಾದ ಟಿಕೆಟ್ ದರವನ್ನು ಮನಸೋಇಚ್ಛೆ ಹೆಚ್ಚಿಸಿದ್ದಾರೆ. ಮಲ್ಟಿಪ್ಲೆಕ್ಸ್​​ನಲ್ಲಿ 3,000 ಸಾವಿರ ರೂಪಾಯಿ, ಸಿಂಗಲ್ ಥಿಯೇಟರ್​ಗಳಲ್ಲಿ 600 ರಿಂದ 1,000 ರೂಪಾಯಿ ಇದೆ. ಬೆಂಗಳೂರಿನ ಬಹುತೇಕ ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳಲ್ಲಿ ವಿಐಪಿ ಟಿಕೆಟ್ ಬೆಲೆ 4 ಸಾವಿರದಿಂದ 5 ಸಾವಿರ ರೂಪಾಯಿ ಇದೆ. ಹಾಗಾಗಿ ಚಿತ್ರಮಂದಿರಗಳ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳುವಂತೆ ನಿರ್ಮಾಪಕರ ಉಮೇಶ್ ಬಣಕಾರ್ ಮನವಿ ಮಾಡಿದ್ದಾರೆ.

ಇದನ್ನೂ ಓದಿ: ಅಡ್ವಾನ್ಸ್​ ಬುಕಿಂಗ್​​​ನಲ್ಲೇ 100 ಕೋಟಿ ದಾಟಿದ 'ಪುಷ್ಪ 2': ಮೊದಲ ದಿನವೇ 275 ಕೋಟಿ ಗಳಿಸುವ ಸಾಧ್ಯತೆ

ಬಿಡುಗಡೆಗೂ ಮುನ್ನ ಪುಷ್ಪ 2 ಬಾಕ್ಸ್ ಆಫೀಸ್‌ನಲ್ಲಿ ಪ್ರಭಾವ ಬೀರಿದೆ. ಚಿತ್ರ ತಯಾರಕರ ಅಧಿಕೃತ ಮಾಹಿತಿ ಪ್ರಕಾರ, ಪುಷ್ಪ ಸೀಕ್ವೆಲ್​​ ಅಡ್ವಾನ್ಸ್ ಟಿಕೆಟ್​ ಬುಕಿಂಗ್‌ನಲ್ಲಿ ಜಾಗತಿಕವಾಗಿ 100 ಕೋಟಿ ರೂಪಾಯಿ ದಾಟಿದೆ. ರಾಷ್ಟ್ರ ಪ್ರಶಸ್ತಿ ವಿಜೇತ ನಟ ಅಲ್ಲು ಅರ್ಜುನ್ ಸಿಂಹಾಸನದ ಮೇಲೆ ಕುಳಿತಿರುವ ಪವರ್​ಫುಲ್​​ ಪೋಸ್ಟರ್ ಬಿಡುಗಡೆಗೊಳಿಸಿ ಚಿತ್ರತಂಡ ಈ ಮಾಹಿತಿ ಒದಗಿಸಿದೆ. ಇನ್ನು, ಸಿನಿಮಾ ಇಂಡಸ್ಟ್ರಿ ಟ್ರ್ಯಾಕರ್​​ ಸ್ಯಾಕ್ನಿಲ್ಕ್ ವರದಿ ಪ್ರಕಾರ, ಚಿತ್ರ ತೆರೆಕಂಡ ದಿನ 250-275 ಕೋಟಿ ರೂಪಾಯಿಗಳ ನಡುವೆ ಕಲೆಕ್ಷನ್​ ಮಾಡುವ ಸಾಧ್ಯತೆ ಇದೆ. ಅಲ್ಲಿಗೆ ಅಲ್ಲು ಅರ್ಜುನ್​ ಮತ್ತು ರಶ್ಮಿಕಾ ಮಂದಣ್ಣ ಅವರ ವೃತ್ತಿಜೀವನದಲ್ಲೇ ಬಿಗ್ಗೆಸ್ಟ್​ ಓಪನರ್​ ಆಗಲಿದೆ. ಒಟ್ಟಾರೆ ಸುಕುಮಾರ್​ ನಿರ್ದೇಶನದ ಈ ಚಿತ್ರ ಬ್ಲಾಕ್​ಬಸ್ಟರ್ ಆಗೋದು ಬಹುತೇಕ ಪಕ್ಕಾ ಆಗಿದೆ.

ಇದನ್ನೂ ಓದಿ: 'ಪುಷ್ಪ 2' ಪ್ರಚಾರ: ಡಿ.8ರಂದು ಅಲ್ಲು ಅರ್ಜುನ್‌ ಬೆಂಗಳೂರಿಗೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.