ETV Bharat / technology

ವಾಹನ​ ಪ್ರಿಯರಿಗೆ ಗುಡ್​ ನ್ಯೂಸ್​: ಕೆಟಿಎಂ ಇಂಡಿಯಾ ಬೈಕ್​ ಮೇಲೆ ಭಾರೀ ಡಿಸ್ಕೌಂಟ್​!

2024 KTM 250 Duke: ಕೆಟಿಎಂ ಇಂಡಿಯಾ ಬೈಕ್​ ಅಭಿಮಾನಿಗಳಿಗೆ ಸಿಹಿ ಸುದ್ದಿಯೊಂದಿದೆ. 2024 KTM 250 ಡ್ಯೂಕ್ ಮೇಲೆ 20 ಸಾವಿರ ರೂಪಾಯಿವರೆಗೆ ರಿಯಾಯಿತಿ ಘೋಷಿಸಿದೆ.

KTM 250 DUKE PRICE CUT  KTM 250 DUKE  KTM 250 DUKE FEATURES  KTM INDIA YEAR END OFFER
ಕೆಟಿಎಂ ಇಂಡಿಯಾ ಬೈಕ್​ ಮೇಲೆ ಭಾರೀ ಡಿಸ್ಕೌಂಟ್​ (KTM INDIA)
author img

By ETV Bharat Tech Team

Published : 18 hours ago

2024 KTM 250 Duke: ಬೈಕ್ ಪ್ರಿಯರಿಗೆ ಸಂತಸದ ಸುದ್ದಿ. ಪ್ರೀಮಿಯಂ ಮತ್ತು ಸ್ಪೋರ್ಟ್ಸ್ ಬೈಕ್‌ಗಳ ತಯಾರಕ ಕೆಟಿಎಂ ಇಂಡಿಯಾ ತನ್ನ ವರ್ಷಾಂತ್ಯದ ಕೊಡುಗೆ ಪ್ರಕಟಿಸಿದೆ. ಇನ್ನು ಕೆಲವೇ ದಿನಗಳಲ್ಲಿ ಹೊಸ ವರ್ಷ ಬರಲಿದೆ. ಈ ಹಿನ್ನೆಲೆ ಕಂಪನಿಯು ತನ್ನ '2024 KTM 250 Duke' ಪರ್ಫಾರ್ಮೆನ್ಸ್​ ಬೈಕ್ ಮೇಲೆ ವರ್ಷಾಂತ್ಯದ ಕೊಡುಗೆಯಾಗಿ ಭಾರೀ ರಿಯಾಯಿತಿ ನೀಡುತ್ತಿದೆ ಎಂದು ಬಹಿರಂಗಪಡಿಸಿದೆ. ಈ ಬೈಕಿನ ಬೆಲೆ ರೂ.20,000 ಇಳಿಕೆಯಾಗಿದ್ದು, ಇದೀಗ ರೂ. 2.25 ಲಕ್ಷಕ್ಕೆ ಮಾರಾಟವಾಗುತ್ತಿದೆ. ಈ ಕೊಡುಗೆಯು ಡಿಸೆಂಬರ್ 31 ರವರೆಗೆ ಮಾತ್ರ ಮಾನ್ಯವಾಗಿರುತ್ತದೆ.

ಅಕ್ಟೋಬರ್​​ನಲ್ಲಿ ಅಪ್ಡೇಟ್​​ ವರ್ಶನ್​ ಬಿಡುಗಡೆ: ಹಿಂದಿನ ಮಾದರಿಯನ್ನು ಅಪ್​ಡೇಟ್​ ಮಾಡಿ '2024 KTM 250 ಡ್ಯೂಕ್' ಬೈಕ್ ಅನ್ನು ಇತ್ತೀಚೆಗೆ ಅಕ್ಟೋಬರ್‌ನಲ್ಲಿ ಬಿಡುಗಡೆ ಮಾಡಲಾಯಿತು. KTM 250 ಡ್ಯೂಕ್ ಹಳೆಯ ಮಾದರಿಯಲ್ಲಿ TFT ಡಿಸ್​ಪ್ಲೇ ಮತ್ತು ಹೆಡ್‌ಲೈಟ್‌ನಂತಹ ವಿಷಯಗಳನ್ನು ನವೀಕರಿಸುವ ಮೂಲಕ ವಿನ್ಯಾಸಗೊಳಿಸಲಾಗಿದೆ. ಇವುಗಳ ಜೊತೆಗೆ, ಕಂಪನಿಯು ಈ '2024 KTM 250 ಡ್ಯೂಕ್' ಮಾದರಿಯಲ್ಲಿ 'ಸ್ಟ್ರೀಟ್' ಮತ್ತು 'ಟ್ರ್ಯಾಕ್' ಎಂಬ ಎರಡು ರೈಡಿಂಗ್ ಮೋಡ್‌ಗಳನ್ನು ಅಳವಡಿಸಿದೆ.

ಸ್ಮಾರ್ಟ್​​ಫೋನ್​​​​ನೊಂದಿಗೂ ಕನೆಕ್ಟ್​ ಮಾಡಿಕೊಳ್ಳಬಹುದು: ಇದನ್ನು ಸ್ಮಾರ್ಟ್‌ಫೋನ್‌ಗೆ ಸಂಪರ್ಕಿಸುವ ಆಯ್ಕೆಯನ್ನು ಸಹ ಹೊಂದಿದೆ. ಇದು TFT ಡ್ಯಾಶ್‌ನಲ್ಲಿ ಟರ್ನ್-ಬೈ-ಟರ್ನ್ ನ್ಯಾವಿಗೇಷನ್, ಮ್ಯೂಸಿಕ್​ ಪ್ಲೇಬ್ಯಾಕ್ ಕಂಟ್ರೋಲ್​ ಸಹ ಸಪೋರ್ಟ್​ ಮಾಡುತ್ತದೆ. ಆದರೆ, ಕಂಪನಿಯು ಈ ಬೈಕ್​ ಅಪ್​ಡೇಟ್​ ಮಾಡಿದರೂ ಸಹ ಅದರಲ್ಲಿ ಯಾವುದೇ ಯಾಂತ್ರಿಕ ಬದಲಾವಣೆಗಳನ್ನು ಮಾಡಿಲ್ಲ. ಅಂದರೆ ಅದರ ಹಿಂದಿನ ಮಾದರಿಯಂತೆಯೇ ಯಾಂತ್ರಿಕ ಲಕ್ಷಣಗಳನ್ನು ಹೊಂದಿದೆ.

249cc, ಸಿಂಗಲ್-ಸಿಲಿಂಡರ್ ಎಂಜಿನ್: ಬೈಕ್​ ಅದರ ಹಿಂದಿನ ಮಾದರಿಯಂತೆ ಅದೇ ಲಿಕ್ವಿಡ್-ಕೂಲ್ಡ್, 249cc, ಸಿಂಗಲ್-ಸಿಲಿಂಡರ್ ಎಂಜಿನ್ ಹೊಂದಿದೆ. ಇದು 9,250rpm ನಲ್ಲಿ 31hp ಪವರ್ ಮತ್ತು 7,250rpm ನಲ್ಲಿ 25Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ಅನ್ನು 6-ಸ್ಪೀಡ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ. ಇದು ಸ್ಲಿಪ್ಪರ್ ಕ್ಲಚ್ ಮತ್ತು ಬೈಡೈರೆಕ್ಷನಲ್ ಕ್ವಿಕ್‌ಶಿಫ್ಟರ್ ಎರಡನ್ನೂ ಹೊಂದಿದೆ.

ಮೂರು ಬಣ್ಣಗಳಲ್ಲಿ ಆಯ್ಕೆಗೆ ಲಭ್ಯ: ಇನ್ನು 2024 KTM 250 ಡ್ಯೂಕ್ ಬೈಕ್ ಡಾರ್ಕ್ ಗಾಲ್ವನೋ, ಎಲೆಕ್ಟ್ರಾನಿಕ್ ಆರೆಂಜ್ ಮತ್ತು ಅಟ್ಲಾಂಟಿಕ್ ಬ್ಲೂ ಎಂಬ ಮೂರು ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿದೆ. ಇದರ ಬೆಲೆ ಕಡಿಮೆಯಾದರೂ ಈ 'KTM 250 Duke' ಬೈಕ್ ದರ.. ಇದರ Husqvarna ಪ್ರತಿರೂಪವಾದ Vitpilen 250 ಬೆಲೆ ರೂ. 8,000 ಹೆಚ್ಚಾಗಿದೆ.. ಆದ್ರೆ ಈ ಬಗ್ಗೆ ಹೆಚ್ಚು ಚಿಂತೆ ಮಾಡುವ ಅವಶ್ಯಕತೆಯಿಲ್ಲ. ಏಕೆಂದ್ರೆ ಇದು ಹೆಚ್ಚು ಸೌಲಭ್ಯಗಳೊಂದಿಗೆ ಬರುತ್ತದೆ.

ಓದಿ: ನವೆಂಬರ್​ ತಿಂಗಳಲ್ಲಿ ಯಾವಾವ ಕಾರುಗಳು ಎಷ್ಷೆಷ್ಟು ಮಾರಾಟವಾಗಿವೆ ಗೊತ್ತಾ? ಇಲ್ಲಿದೆ ಮಾಹಿತಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.