Chilli Tamarind Chutney Recipe: ಕೇವಲ ಐದರಿಂದ ಹತ್ತೇ ನಿಮಿಷದಲ್ಲಿ ಸಿದ್ಧಪಡಬಹುದಾದ ರೆಸಿಪಿಯನ್ನು ನಾವಿಂದು ನಿಮಗಾಗಿ ತಂದಿದ್ದೇವೆ. ಒಲೆ ಹೊತ್ತಿಸದೆ, ಎಣ್ಣೆ ಬಳಸದೆ ಕೆಲವೇ ನಿಮಿಷಗಳಲ್ಲಿ ಸಖತ್ ಟೇಸ್ಟಿಯಾದ 'ಮೆಣಸಿನಕಾಯಿ ಹುಣಸೆಹಣ್ಣಿನ ಚಟ್ನಿ' ರೆಡಿ ಮಾಡಬಹುದು.
ಬೇಕಾಗುವ ಪದಾರ್ಥಗಳು:
- ಹುಣಸೆಹಣ್ಣು - ನಿಂಬೆ ಗಾತ್ರದಷ್ಟು
- ಹಸಿ ಮೆಣಸಿನಕಾಯಿ - ಐದು (ಬ್ಯಾಡಗಿ ಮೆಣಸಿನಕಾಯಿ)
- ದೊಡ್ಡ ಗಾತ್ರದ ಒಂದು ಈರುಳ್ಳಿ
- ಬೆಳ್ಳುಳ್ಳಿ ಎಸಳು - ಐದು
- ಉಪ್ಪು - ರುಚಿಗೆ ತಕ್ಕಷ್ಟು
- ಜೀರಿಗೆ- ಸ್ವಲ್ಪ
- ಕೊತ್ತಂಬರಿ ಸೊಪ್ಪಿನ ಪುಡಿ- ಸ್ವಲ್ವ
ಚಟ್ನಿ ತಯಾರಿಸುವ ವಿಧಾನ:
- ಮೊದಲು ಹಸಿರು ಮೆಣಸಿನಕಾಯಿಯನ್ನು ತೆಳುವಾಗಿ ಕತ್ತರಿಸಿಕೊಳ್ಳಿ
- ಒಂದು ಬಟ್ಟಲಿನಲ್ಲಿ ನಿಂಬೆ ಗಾತ್ರದ ಹುಣಸೆಹಣ್ಣನ್ನು ತೆಗೆದುಕೊಂಡು ಅದರಲ್ಲಿ ನೀರು ಸುರಿಯಿರಿ ಅದರೊಳಗೆ ನೆನೆಸಿ ಇಟ್ಟುಕೊಳ್ಳಬೇಕು.
- ಸಿಪ್ಪೆ ತೆಗೆದಿರುವ ಬೆಳ್ಳುಳ್ಳಿಯ ಐದರಿಂದ ಆರು ಎಸಳುಗಳು
- ದೊಡ್ಡ ಈರುಳ್ಳಿಯನ್ನು ದೊಡ್ಡ ತುಂಡುಗಳಾಗಿ ಕತ್ತರಿಸಿ ಇಟ್ಟುಕೊಳ್ಳಿ.
- ಈಗ ಚಟ್ನಿಗೆ ಸ್ವಲ್ಪ ಜೀರಿಗೆ ಹಾಕಿ ನಿಧಾನವಾಗಿ ರುಬ್ಬಿಕೊಳ್ಳಿ.
- ಆ ನಂತರ ಅದರಲ್ಲಿ ರುಬ್ಬಿದ ಹುಣಸೆ ಹಣ್ಣಿನ ತಿರುಳನ್ನು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ.
- ಈಗ ಬೆಳ್ಳುಳ್ಳಿ ಎಸಳು ಹಾಗೂ ಉಪ್ಪನ್ನು ಹಾಕಿ ರುಬ್ಬಿಕೊಳ್ಳಿ.
- ಅದರ ನಂತರ, ಕತ್ತರಿಸಿದ ಹಸಿ ಮೆಣಸಿನಕಾಯಿಯನ್ನು ಚಟ್ನಿಯಲ್ಲಿ ಹಾಕಿ ಮತ್ತು ಅವುಗಳನ್ನು ಮೃದುವಾಗಿ ರುಬ್ಬಿಕೊಳ್ಳಿ.
- ಈಗ ಅದಕ್ಕೆ ಈರುಳ್ಳಿ ತುಂಡುಗಳನ್ನು ಹಾಕಿ ಸ್ವಲ್ಪ ರುಬ್ಬಿಕೊಳ್ಳಿ.
- ಈ ಚಟ್ನಿಗೆ ಸ್ವಲ್ಪ ಕೊತ್ತಂಬರಿ ಸೊಪ್ಪನ್ನು ಸೇರಿಸಿ ಮಿಕ್ಸ್ ಮಾಡಿ ಬಟ್ಟಲಿಗೆ ಹಾಕಿಕೊಂಡರೆ ಸಾಕು. ತುಂಬಾ ರುಚಿಯಾದ ಹಸಿರು ಮೆಣಸಿನಕಾಯಿ ಹುಣಸೆಹಣ್ಣು ಚಟ್ನಿ (Chilli Tamarind Chutney) ಸಿದ್ಧವಾಗಿದೆ.
- ಒಂದು ಹನಿ ಎಣ್ಣೆ ಕೂಡ ಬಳಸದೆ, ಒಲೆಯ ಅಗತ್ಯವೇ ಇಲ್ಲದೇ ಚಟ್ನಿ ರೆಡಿ ಮಾಡಲಾಗಿದೆ.
- ಈ ಚಟ್ನಿಯನ್ನು ಬಿಸಿ ಬಿಸಿ ಅನ್ನದ ಜೊತೆ ತಿಂದರೆ ವಾವ್ ಎನ್ನುವಂತ ಅನುಭವವನ್ನು ನೀಡುತ್ತೀರಿ. ಅದಕ್ಕೆ ಸ್ವಲ್ಪ ತುಪ್ಪ ಹಾಕಿದರೆ ಸಾಕು ಮತ್ತಷ್ಟು ರುಚಿ ಬರುತ್ತದೆ.
- ಮನೆಯಲ್ಲಿ ಯಾವುದೇ ತರಕಾರಿ ಇಲ್ಲದ ಸಮಯದಲ್ಲಿ ಈ ರೆಸಿಪಿಯನ್ನು ಮಾಡಬಹುದು. ನೀವು ಕೂಡ ಟ್ರೈ ಮಾಡಿ ನೋಡಬಹುದು.