ETV Bharat / lifestyle

ಮಹಾ ಕುಂಭಮೇಳ, ವಾರಣಾಸಿ & ಅಯೋಧ್ಯೆಕ್ಕೆ ಕಡಿಮೆ ದರದಲ್ಲಿ IRCTC ಸೂಪರ್ ಟೂರ್​ ಪ್ಯಾಕೇಜ್ - IRCTC MAHA KUMBH PUNYA KSHETRA TOUR

ಐಆರ್​ಸಿಟಿಸಿ ಕಡಿಮೆ ವೆಚ್ಚದಲ್ಲಿ ಮಹಾ ಕುಂಭಮೇಳ, ವಾರಣಾಸಿ, ಅಯೋಧ್ಯೆಯ ತಾಣಗಳಿಗೆ 8 ದಿನಗಳ ಪ್ರವಾಸದ ಪ್ಯಾಕೇಜ್​ನ್ನು ತಂದಿದೆ. ಈ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ.

IRCTC MAHA KUMBH MELA TOUR  IRCTC MAHA KUMBH PUNYA KSHETRA TOUR  MAHA KUMBH MELA 2025  MAHA KUMBH PUNYA KSHETRA TOUR
ಸಾಂದರ್ಭಿಕ ಚಿತ್ರ (ETV Bharat)
author img

By ETV Bharat Lifestyle Team

Published : Jan 6, 2025, 11:50 AM IST

Updated : Jan 6, 2025, 12:21 PM IST

IRCTC Maha Kumbh Punya Kshetra Yatra: ಪ್ರತಿ 12 ವರ್ಷಗಳಿಗೊಮ್ಮೆ ನಡೆಯುವ ಅತಿ ದೊಡ್ಡ ಆಧ್ಯಾತ್ಮಿಕ ಹಬ್ಬವಾದ ಮಹಾ ಕುಂಭಮೇಳಕ್ಕೆ ಪ್ರಯಾಗ್ರಾಜ್ ಸಜ್ಜಾಗುತ್ತಿದೆ. ಈ ಮಹಾ ಕುಂಭಮೇಳ ಜನವರಿ 13 ರಿಂದ ಫೆಬ್ರವರಿ 26 ರವರೆಗೆ 45 ದಿನಗಳ ಕಾಲ ನಡೆಯಲಿದೆ. ಕುಂಭಮೇಳದ ಸಮಯದಲ್ಲಿ ಪವಿತ್ರ ನದಿಗಳಲ್ಲಿ ಸ್ನಾನ ಮಾಡುವುದರಿಂದ ಮೋಕ್ಷ ಸಿಗುತ್ತದೆ ಎಂಬುದು ಅನೇಕ ಭಕ್ತರು ನಂಬಿಕೆಯಾಗಿದೆ.

ಇದರಿಂದ ಪವಿತ್ರ ಗಂಗಾ, ಯಮುನಾ ಮತ್ತು ಸರಸ್ವತಿ ನದಿಗಳ ಸಂಗಮದಲ್ಲಿ ಸ್ನಾನ ಮಾಡಲು ಅಪಾರ ಸಂಖ್ಯೆಯ ಭಕ್ತರು ಬರುತ್ತಾರೆ. ನೀವು ಸಹ ಮಹಾ ಕುಂಭಮೇಳಕ್ಕೆ ಹೋಗಲು ಬಯಸುತ್ತೀರಾ? ನಿಮಗಾಗಿ ಇಂಡಿಯನ್ ರೈಲ್ವೆ ಕೇಟರಿಂಗ್ ಆ್ಯಂಡ್ ಟೂರಿಸಂ ಕಾರ್ಪೊರೇಷನ್ ಗುಡ್​ನ್ಯೂಸ್​ ನೀಡಿದೆ. ಕುಂಭಮೇಳಕ್ಕೆ ಪ್ರವಾಸವು ಭಾರತ್ ಗೌರವ್ ಟೂರಿಸ್ಟ್ ಟ್ರೈನ್ ಮೂಲಕ ನಡೆಯಲಿದೆ. ಈ ಪ್ರವಾಸ ಯಾವಾಗ ಪ್ರಾರಂಭವಾಗುತ್ತದೆ? ಪ್ರವಾಸದ ದರ ಎಷ್ಟು? ಯಾವ ತಾಣಗಳನ್ನು ವೀಕ್ಷಿಸಬಹುದು ಎಂಬುದರ ವಿವರಗಳನ್ನು ತಿಳಿಯೋಣ.

IRCTC 'ಮಹಾ ಕುಂಭ ಪುಣ್ಯಕ್ಷೇತ್ರ ಯಾತ್ರೆ' ಎಂಬ ಪ್ರವಾಸದ ಪ್ಯಾಕೇಜ್ ಅನ್ನು ಘೋಷಣೆ ಮಾಡಿದೆ. ಈ ಟೂರ್ ಪ್ಯಾಕೇಜ್‌ನ ಒಟ್ಟು ಅವಧಿಯು 7 ರಾತ್ರಿಗಳು ಮತ್ತು 8 ಹಗಲು ಆಗಿರುತ್ತದೆ. ಸಿಕಂದರಾಬಾದ್, ಕಾಜಿಪೇಟ್, ವಾರಂಗಲ್, ಖಮ್ಮಂ, ವಿಜಯವಾಡ, ಎಲೂರು, ರಾಜಮಂಡ್ರಿ, ತುನಿ, ದುವ್ವಾಡ, ವಿಜಿಯನಗರಂ ನಿಲ್ದಾಣಗಳಲ್ಲಿ ಯಾತ್ರಾರ್ಥಿಗಳು ಈ ಟ್ರೈನ್​ನ್ನು ಹತ್ತಬಹುದು. ಪ್ರವಾಸವನ್ನು ಪೂರ್ಣಗೊಳಿಸಿದ ನಂತರ, ನೀವು ಆಯಾ ನಿಲ್ದಾಣಗಳಲ್ಲಿ ಹಿಂತಿರುಗಬಹುದು. ಮಹಾಕುಂಭ ಮೇಳದ ಜೊತೆಗೆ ವಾರಣಾಸಿ ಮತ್ತು ಅಯೋಧ್ಯೆಗೆ ಭೇಟಿ ನೀಡಬಹುದು.

ಪ್ರವಾಸದ ಮಾಹಿತಿ:

1ನೇ ದಿನ: ಭಾರತ್ ಗೌರವ್ ಪ್ರವಾಸಿ ರೈಲು ಮೊದಲ ದಿನ ಮಧ್ಯಾಹ್ನ 12ಕ್ಕೆ ಹೈದರಾಬಾದ್​ನ ಸಿಕಂದರಾಬಾದ್‌ನಿಂದ ಹೊರಡಲಿದೆ. ಕಾಜಿಪೇಟ್, ವಾರಂಗಲ್, ಖಮ್ಮಂ, ವಿಜಯವಾಡ, ಏಲೂರು, ರಾಜಮಂಡ್ರಿಯಲ್ಲಿ ನೀವು ರೈಲು ಹತ್ತಬಹುದು.

2ನೇ ಮತ್ತು 3ನೇ ದಿನ: ಎರಡನೇ ದಿನ ತುನಿ, ದುವ್ವಾಡ, ಪೆಂಡುರ್ತಿ, ವಿಜಿಯನಗರಂ ಮಾರ್ಗವಾಗಿ ಸಂಚರಿಸಿ ಮೂರನೇ ದಿನ ಮಧ್ಯಾಹ್ನ ವಾರಣಾಸಿ ತಲುಪಲಿದೆ. ಅಲ್ಲಿಂದ ಹೋಟೆಲ್‌ಗೆ ಹೋಗಿ ಅಲ್ಲಿ ಚೆಕ್-ಇನ್ ಮಾಡಿ ಫ್ರೆಶ್​ಅಪ್​ ಆಗಬೇಕು. ಸಂಜೆ ವಾರಣಾಸಿಯಲ್ಲಿ ಗಂಗಾ ಆರತಿಯನ್ನು ವೀಕ್ಷಿಸಿ ಮತ್ತು ರಾತ್ರಿ ಅಲ್ಲಿ ಉಳಿದುಕೊಳ್ಳಬೇಕಾಗುತ್ತದೆ.

4ನೇ ದಿನ: ನಾಲ್ಕನೇ ದಿನ ಉಪಹಾರದ ನಂತರ, ಪ್ರಯಾಗರಾಜ್‌ಗೆ ಹೋಗಲಾಗುವುದು. ಹೋಟೆಲ್‌ನಲ್ಲಿ ಚೆಕ್-ಇನ್ ಮಾಡಿದ ಬಳಿಕ ಊಟ ಮಾಡಿ, ಕುಂಭಮೇಳಕ್ಕೆ ತೆರಳಲಾಗುವುದು. ಆ ದಿನ ಪೂರ್ತಿ ಅಲ್ಲಿಯೇ ಉಳಿಯಬೇಕಾಗುತ್ತದೆ. ಆ ರಾತ್ರಿ ಪ್ರಯಾಗರಾಜ್​ನ ಟೆಂಟ್ ಸಿಟಿಯಲ್ಲಿ ವಾಸ್ತವ್ಯ ಹೂಡಲಾಗುವುದು.

5ನೇ ದಿನ: ಐದನೇ ದಿನ ಉಪಹಾರದ ನಂತರ, ವಾರಣಾಸಿಗೆ ಹೊರಡುತ್ತಾರೆ. ಹೋಟೆಲ್‌ನಲ್ಲಿ ಚೆಕ್​ಇನ್​ ಮಾಡಿದ ನಂತರ ಕಾಶಿ ವಿಶ್ವನಾಥ, ಕಾಶಿ ವಿಶಾಲಕ್ಷ್ಮಿ ಮತ್ತು ಅನ್ನಪೂರ್ಣ ದೇವಿ ದೇವಸ್ಥಾನಗಳಿಗೆ ಭೇಟಿ ನೀಡಲಾಗುವುದು. ರಾತ್ರಿ ಊಟದ ಬಳಿಕ ಅಲ್ಲಿಯೇ ತಂಗಲಾಗುವುದು.

6ನೇ ದಿನ: ಆರನೇ ದಿನ ಹೋಟೆಲ್‌ನಿಂದ ಚೆಕ್ ಔಟ್ ಮಾಡಿ, ಅಯೋಧ್ಯೆಗೆ ಹೊರಡಲಾಗುವುದು. ಅಲ್ಲಿ ಶ್ರೀರಾಮ ಜನ್ಮಭೂಮಿ ಮತ್ತು ಹನುಮಾನ್ ದೇವಾಲಯಗಳಿಗೆ ಭೇಟಿ ಕೊಡಲಾಗುವುದು. ಅಂದು ರಾತ್ರಿ ಅಯೋಧ್ಯೆಯಿಂದ ಹೈದರಾಬಾದ್‌ಗೆ ಹಿಂತಿರುಗಲಾಗುವುದು. ಇಡೀ ರಾತ್ರಿ ಪ್ರಯಾಣ ನಡೆಯುತ್ತದೆ.

7ನೇ ದಿನ: ಏಳನೇ ದಿನ ಇಡೀ ಪ್ರಯಾಣವಿರುತ್ತದೆ.

8ನೇ ದಿನ: ಎಂಟನೇ ದಿನ ವಿಜಿಯನಗರಂ, ದುವ್ವಾಡ, ತುನಿ, ರಾಜಮಂಡ್ರಿ, ಏಲೂರು, ವಿಜಯವಾಡ, ಖಮ್ಮಂ, ವಾರಂಗಲ್, ಕಾಜಿಪೇಟ್ ಮೂಲಕ ಸಿಕಂದರಾಬಾದ್ ತಲುಪುವ ಮೂಲಕ ಪ್ರವಾಸ ಕೊನೆಗೊಳ್ಳುತ್ತದೆ.

ಪ್ರವಾಸದ ಶುಲ್ಕ:

  • ಎಕಾನಮಿ (SL)- ವಯಸ್ಕರಿಗೆ ₹22,635
  • ಮತ್ತು 5 ರಿಂದ 11 ವರ್ಷದ ಮಕ್ಕಳಿಗೆ ಬೆಲೆ ₹21,740
  • ಸ್ಟ್ಯಾಂಡರ್ಡ್‌ನಲ್ಲಿ (3AC)- ವಯಸ್ಕರಿಗೆ ₹31,145
  • 5 ರಿಂದ 11 ವರ್ಷ ವಯಸ್ಸಿನ ಮಕ್ಕಳಿಗೆ ₹30,095 ಪಾವತಿಸಬೇಕು.
  • ಕಂಫರ್ಟ್‌ನಲ್ಲಿ (2AC)- ವಯಸ್ಕರಿಗೆ ₹38,195
  • 5ರಿಂದ 11 ವರ್ಷ ವಯಸ್ಸಿನ ಮಕ್ಕಳಿಗೆ ₹36,935 ಪಾವತಿಸಬೇಕು.

ಪ್ಯಾಕೇಜ್​ನಲ್ಲಿರುವ ಸೌಲಭ್ಯ:

  • ಆಯ್ಕೆಮಾಡಿದ ಪ್ಯಾಕೇಜ್ ಅನ್ನು ಅವಲಂಬಿಸಿ ರೈಲಿನಲ್ಲಿ 2AC, 3AC, ಸ್ಲೀಪರ್ ವರ್ಗದಲ್ಲಿ ಪ್ರಯಾಣಿಸಿ
  • ಹೋಟೆಲ್ ವಸತಿ
  • ಪ್ಯಾಕೇಜ್ ಅನ್ನು ಅವಲಂಬಿಸಿ ಪ್ರಯಾಣಕ್ಕಾಗಿ ವಾಹನ
  • ಬೆಳಿಗ್ಗೆ ಕಾಫಿ, ಉಪಹಾರ, ಮಧ್ಯಾಹ್ನದ ಊಟ, ರಾತ್ರಿಯ ಊಟ
  • ಪ್ರಯಾಣಿಕರಿಗೆ ಪ್ರಯಾಣ ವಿಮೆ
  • ಪ್ಯಾಕೇಜ್‌ನಲ್ಲಿ ಸೇರಿಸದೆ ಇರುವ ಸ್ಥಳಗಳಿಗೆ ಭೇಟಿ ನೀಡಲು ಅಥವಾ ಗೈಡ್​ನ್ನು ನೇಮಿಸಿಕೊಳ್ಳಲು ಪ್ರಯಾಣಿಕರು ಜವಾಬ್ದಾರರಾಗಿರುತ್ತಾರೆ.
  • ಈ ಪ್ರವಾಸವು ಜನವರಿ 20 ರಂದು ಆರಂಭವಾಗುತ್ತದೆ.
  • ಈ ಪ್ರವಾಸ ಪ್ಯಾಕೇಜ್‌ನ ಸಂಪೂರ್ಣ ವಿವರಗಳಿಗಾಗಿ ಹಾಗೂ ಪ್ಯಾಕೇಜ್​ನ್ನು ಬುಕ್ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ.

ಇದನ್ನೂ ಓದಿ: ಹೊಸ ವರ್ಷದ ಆರಂಭದಲ್ಲೇ ಜ್ಯೋತಿರ್ಲಿಂಗಗಳ ವೀಕ್ಷಿಸುವ ಅವಕಾಶ: ಅಗ್ಗದ ದರದಲ್ಲಿ IRCTC ಟೂರ್​ ಪ್ಯಾಕೇಜ್

Last Updated : Jan 6, 2025, 12:21 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.