ETV Bharat / bharat

ನಾನೊಬ್ಬ ಕೃಷ್ಣ ಭಕ್ತೆ, ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ಸಹಿಸಲಾಗದು: ಹೇಮಾಮಾಲಿನಿ

ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯವನ್ನು ನಟಿ ಹೇಮಾಮಾಲಿನಿ ಖಂಡಿಸಿದ್ದಾರೆ.

ಹೇಮಾಮಾಲಿನಿ
ಹೇಮಾಮಾಲಿನಿ (IANS)
author img

By ETV Bharat Karnataka Team

Published : 9 hours ago

ನವದೆಹಲಿ: ಬಾಂಗ್ಲಾದೇಶದಲ್ಲಿ ಹಿಂದೂಗಳ ವಿರುದ್ಧ ನಡೆಯುತ್ತಿರುವ ದೌರ್ಜನ್ಯವನ್ನು ಮಥುರಾದ ಬಿಜೆಪಿ ಸಂಸದೆ ಹೇಮಾಮಾಲಿನಿ ಬುಧವಾರ ಬಲವಾಗಿ ಖಂಡಿಸಿದ್ದಾರೆ. ಭಾರತಕ್ಕೆ ಈ ವಿಷಯದ ಭಾವನಾತ್ಮಕ ಮತ್ತು ಧಾರ್ಮಿಕ ಮಹತ್ವವನ್ನು ಅವರು ವಿವರಿಸಿದರು. ಲೋಕಸಭೆಯಲ್ಲಿ ಶೂನ್ಯ ವೇಳೆಯಲ್ಲಿ ಮಾತನಾಡಿದ ಹೇಮಾಮಾಲಿನಿ, ನೆರೆಯ ದೇಶದಲ್ಲಿ ಹಿಂದೂಗಳು, ವಿಶೇಷವಾಗಿ ಇಸ್ಕಾನ್ ಭಕ್ತರಿಗೆ ಕಿರುಕುಳ ನೀಡಲಾಗುತ್ತಿರುವ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದರು.

"ನಾನು ಕೃಷ್ಣನ ಭಕ್ತೆ ಮತ್ತು ಇಸ್ಕಾನ್ ಅನುಯಾಯಿ. ಧರ್ಮದ ಮೇಲಿನ ಯಾವುದೇ ದಾಳಿಯನ್ನು ಸಹಿಸಲಾಗದು. ಕೃಷ್ಣ ನಮ್ಮ ಹೃದಯದಲ್ಲಿದ್ದಾರೆ ಮತ್ತು ನಾನು ಮಥುರಾದ ಸಂಸದೆ" ಎಂದು ಮಾಲಿನಿ ಒತ್ತಿ ಹೇಳಿದರು.

"ಬಾಂಗ್ಲಾದೇಶದಲ್ಲಿ ಹಿಂದೂಗಳು ಮತ್ತು ಇಸ್ಕಾನ್ ಭಕ್ತರ ಮೇಲೆ ನಡೆಯುತ್ತಿರುವ ದೌರ್ಜನ್ಯದಿಂದ ನನಗೆ ತುಂಬಾ ಬೇಸರವಾಗಿದೆ. ಹಿಂದೂಗಳ ಮೇಲೆ ನಿರಂತರ ದಾಳಿಗಳು ನಡೆಯುತ್ತಿವೆ ಮತ್ತು ತೀವ್ರಗಾಮಿಗಳಿಂದಾಗಿ ಅವರ ಸುರಕ್ಷತೆ ಮತ್ತು ಭದ್ರತೆ ಅಪಾಯದಲ್ಲಿದೆ" ಎಂದು ಅವರು ತಿಳಿಸಿದರು.

ಇಸ್ಕಾನ್‌ನ ಜಾಗತಿಕ ವ್ಯಾಪ್ತಿಯನ್ನು ಎತ್ತಿ ತೋರಿಸಿದ ಸಂಸದೆ ಹೇಮಾಮಾಲಿನಿ, ವಿಶ್ವಾದ್ಯಂತ ಸುಮಾರು 1,000 ಕೇಂದ್ರಗಳನ್ನು ಹೊಂದಿರುವ ಸಂಸ್ಥೆ ವೈದಿಕ ಸಂಸ್ಕೃತಿಯನ್ನು ಪಸರಿಸುವಲ್ಲಿ ಮತ್ತು ಜನರ ಕಲ್ಯಾಣಕ್ಕೆ ಸಕಾರಾತ್ಮಕ ಕೊಡುಗೆ ನೀಡುವಲ್ಲಿ ಹೆಸರುವಾಸಿಯಾಗಿದೆ ಎಂದು ಹೇಳಿದರು.

ಬಾಂಗ್ಲಾದೇಶದಲ್ಲಿ ಹಿಂದೂಗಳ ಕಿರುಕುಳದ ವಿರುದ್ಧ ಶಾಂತಿಯುತವಾಗಿ ಪ್ರತಿಭಟಿಸಿದ ನಂತರ ದೇಶದ್ರೋಹದ ಆರೋಪದ ಮೇಲೆ ಬಂಧಿಸಲ್ಪಟ್ಟ ಪ್ರಮುಖ ಹಿಂದೂ ಸನ್ಯಾಸಿ ಮತ್ತು ಇಸ್ಕಾನ್ ಭಕ್ತ ಚಿನ್ಮಯ್ ಕೃಷ್ಣ ದಾಸ್ ಅವರ ಪ್ರಕರಣದ ಬಗ್ಗೆ ಹೇಮಾಮಾಲಿನಿ ಸದನದಲ್ಲಿ ಪ್ರಸ್ತಾಪಿಸಿದರು.

"ಚಿನ್ಮಯ್ ಕೃಷ್ಣ ದಾಸ್ ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯದ ವಿರುದ್ಧ ಶಾಂತಿಯುತವಾಗಿ ಪ್ರತಿಭಟಿಸುತ್ತಿದ್ದರು. ಆದರೆ ಅವರನ್ನು ದೇಶದ್ರೋಹದ ಆರೋಪದ ಮೇಲೆ ಜೈಲಿಗಟ್ಟಲಾಗಿದೆ. ಅವರ ಪರವಾಗಿ ಸಾಕ್ಷಿ ನುಡಿದ ಇಬ್ಬರು ವ್ಯಕ್ತಿಗಳನ್ನು ಸಹ ಜೈಲಿಗೆ ಹಾಕಲಾಗಿದೆ. ಹಿಂದೂಗಳ ವಿರುದ್ಧದ ಈ ದೌರ್ಜನ್ಯಗಳನ್ನು ನಾವು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಈ ವಿಷಯವು ಕೇವಲ ರಾಜತಾಂತ್ರಿಕ ವಿಷಯವಲ್ಲ, ಲಕ್ಷಾಂತರ ಜನರ ಭಾವನೆಗಳಿಗೆ ಸಂಬಂಧಿಸಿದೆ" ಎಂದು ಅವರು ಹೇಳಿದರು.

ಹಿಂದೂಗಳ ಸುರಕ್ಷತೆ ಮತ್ತು ಭದ್ರತೆಗಾಗಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಬಾಂಗ್ಲಾದೇಶ ಸರ್ಕಾರಕ್ಕೆ ಕರೆ ನೀಡಿದ ಮಾಲಿನಿ, "ನಾವು ಬಾಂಗ್ಲಾದೇಶ ಸರ್ಕಾರದಿಂದ ಹಿಂದೂಗಳಿಗೆ ಸುರಕ್ಷತೆ ನೀಡುವಂತೆ ಒತ್ತಾಯಿಸುತ್ತೇವೆ" ಎಂದು ಹೇಳಿದರು.

ಇದನ್ನೂ ಓದಿ: ಕೇಂದ್ರ ಸರ್ಕಾರಿ ನೌಕರರ ವಯೋಮಿತಿ ಬದಲಾವಣೆ ಪ್ರಸ್ತಾವ ಸರ್ಕಾರದ ಮುಂದಿಲ್ಲ: ಸಚಿವ ಜಿತೇಂದ್ರ ಸಿಂಗ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.