ಹಿಟ್ಟು ರುಬ್ಬದೆ ಕೆಲವೇ ನಿಮಿಷಗಳಲ್ಲಿ 'ರವೆ ವಡೆ' ರೆಡಿ ಮಾಡೋದು ಹೇಗೆ? - INSTANT RAVA VADA RECIPE
Rava Vada Recipe: ಇಂದು ನಾವು ನಿಮ್ಮ ನಾಳಿನ ಉಪಹಾರಕ್ಕಾಗಿ ಸೂಪರ್ ರೆಸಿಪಿಯೊಂದನ್ನು ತಂದಿದ್ದೇವೆ. ಅದರ ಹೆಸರು ರವೆ ವಡೆ. ಇದನ್ನು ನೀವು ಕೆಲವೇ ನಿಮಿಷಗಳಲ್ಲಿ ಸರಳವಾಗಿ ಸಿದ್ಧಪಡಿಸಬಹುದು.
Rava Vada Recipe:ನಾಳೆ ಬೆಳಗಿನ ಉಪಹಾರಕ್ಕೆ ಏನು ಮಾಡಬೇಕೆಂದು ನಿಮಗೆ ತಿಳಿಯುತ್ತಿಲ್ಲವೇ? ಹಾಗಾದ್ರೆ ಈ ಸೂಪರ್ ರೆಸಿಪಿಯನ್ನು ಪ್ರಯತ್ನಿಸಿ ನೋಡಿ. ಇದಕ್ಕೆ ನೀವು ಉದ್ದಿನಬೇಳೆಯನ್ನು ನೆನೆಸಿ ಮಿಕ್ಸರ್ ಮಾಡುವ ಅಗತ್ಯವಿಲ್ಲ. ಕೆಲವೇ ನಿಮಿಷಗಳಲ್ಲಿ ಸರಳವಾಗಿ ತಯಾರಿಸಬಹುದು. ಅದುವೇ, ಬಾಯಲ್ಲಿ ನೀರೂರಿಸುವ ರವೆ ವಡೆ.
ಹೊರಗೆ ಗರಿಗರಿಯಾದ ಮತ್ತು ಒಳಭಾಗದಲ್ಲಿ ಮೃದುವಾಗಿರುವ ಈ ವಡೆಗಳ ರುಚಿ ಸೂಪರ್ ಆಗಿರುತ್ತವೆ. ಮಕ್ಕಳಿಂದ ಹಿಡಿದು ಹಿರಿಯರವರೆಗೂ ಎಲ್ಲರೂ ಕೂಡ ಈ ವಡೆಗಳನ್ನು ಇಷ್ಟಪಟ್ಟು ಸೇವಿಸುತ್ತಾರೆ. ಸೂಪರ್ ಟೇಸ್ಟಿಯಾದ ವಡೆಗಳನ್ನು ಮಾಡಲು ಬೇಕಾಗುವ ಪದಾರ್ಥಗಳೇನು? ತಯಾರಿಸುವುದು ಹೇಗೆ ಎಂಬುದನ್ನು ನೋಡೋಣ.
ಈಗ ಒಲೆಯ ಮೇಲೆ ಪಾತ್ರೆ ಇಡಿ ಹಾಗೂ 1 ಕಪ್ ನೀರು ಸುರಿಯಿರಿ. ಬಳಿಕ ಉಪ್ಪು, ಎಣ್ಣೆ ಹಾಕಿ, ಮೊದಲೇ ತಯಾರಿಸಿದ ತುರಿದ ಆಲೂಗಡ್ಡೆ ಹಾಕಿ ಕುದಿಸಿ.
ನೀರು ಕುದಿಯಲು ಆರಂಭಿಸಿದಾಗ ಬಾಂಬೆ ರವೆಯನ್ನು ಗಂಟುಗಳಾಗದಂತೆ ಸ್ವಲ್ಪ ಸ್ವಲ್ಪವಾಗಿ ಹಾಕಿ. ಎಲ್ಲಾ ರವೆಯನ್ನು ಸೇರಿಸಿದ ಬಳಿಕ ಮಿಶ್ರಣವು ಎಲ್ಲಾ ನೀರನ್ನು ಹೀರಿಕೊಳ್ಳುತ್ತದೆ ಹಾಗೂ ಗಟ್ಟಿಯಾಗುತ್ತದೆ. ಬಳಿಕ ಕಡಿಮೆ ಉರಿಯಲ್ಲಿ ಇಡಿ. ಒಮ್ಮೆ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕಾಗುತ್ತದೆ.
ಇದಾದ ನಂತರ, ಸ್ಟೌವ್ ಆಫ್ ಮಾಡಿ ಪಾತ್ರೆ ಕೆಳಗಿಳಿಸಿ. ಇದರ ಮುಚ್ಚಳ ಮುಚ್ಚಿ ಹಾಗೂ ಸ್ವಲ್ಪ ಸಮಯದವರೆಗೆ ಪಕ್ಕಕ್ಕೆ ಹೀಗೆ ಇಡಿ. ಈ ಮಿಶ್ರಣವನ್ನು ತಣ್ಣಗಾಗಲು ಬಿಡಬೇಕಾಗುತ್ತದೆ.
ರವೆ ಸ್ವಲ್ಪ ತಣ್ಣಗಾದ ಬಳಿಕ ಅದನ್ನು ಮಿಕ್ಸಿಂಗ್ ಬೌಲ್‌ಗೆ ತೆಗೆದುಕೊಂಡು ಅದರಲ್ಲಿ ತೆಳುವಾಗಿ ಕಟ್ ಮಾಡಿದ ಈರುಳ್ಳಿಯನ್ನು ಸೇರಿಸಿ ಹಾಗೂ ಅದನ್ನು ನಿಮ್ಮ ಕೈಗಳಿಂದ ಹರಡಬೇಕಾಗುತ್ತದೆ. ಬಳಿಕ ತೆಳ್ಳಗೆ ಶುಂಠಿ ಪೇಸ್ಟ್, ತೆಳುವಾಗಿ ಕತ್ತರಿಸಿದ ಹಸಿ ಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು, ಕರಿಬೇವಿನ ಪುಡಿ ಹಾಗೂ ಜೀರಿಗೆ ಒಂದೊಂದಾಗಿ ಸೇರಿಸಬೇಕಾಗುತ್ತದೆ.
ಇದೀಗ ಮೊಸರಿಗೆ ಅಡುಗೆ ಸೋಡಾ ಸೇರಿಸಿ. ಅದನ್ನು ಮಿಶ್ರಣಕ್ಕೆ ಸೇರಿಸಿ ಹಾಗೂ ಎಲ್ಲಾ ಪದಾರ್ಥಗಳನ್ನು ಸಂಯೋಜಿಸಲು ಚೆನ್ನಾಗಿ ಮಿಕ್ಸ್ ಮಾಡಿ. ಹಿಟ್ಟು ತುಂಬಾ ಗಟ್ಟಿಯಾಗಿರದೆ ಮೃದುವಾಗಿ ಹಾಗೂ ಸ್ವಲ್ಪ ಜಿಗುಟಾಗದಂತೆ ನೋಡಿಕೊಳ್ಳಬೇಕಾಗುತ್ತದೆ. ಮೊಸರು ಕಡಿಮೆಯಾಗಿದೆ ಎಂದು ನೀವು ಭಾವಿಸಿದರೆ, ನೀವು ಸ್ವಲ್ಪ ನೀರು ಸೇರಿಸಿ, ಜೊತೆಗೆ ಹಿಟ್ಟು ಸೇರಿಸಬಹುದು.
ನಂತರ ಕಡಾಯಿಯನ್ನು ಒಲೆಯ ಮೇಲೆ ಇರಿಸಿ ಹಾಗೂ ಎಣ್ಣೆಯನ್ನು ಸೇರಿಸಿ ಬಿಸಿ ಮಾಡಬೇಕಾಗುತ್ತದೆ. ಎಣ್ಣೆ ಬಿಸಿಯಾಗುವ ಮೊದಲು ಕೈಗಳನ್ನು ನೀರಿನಲ್ಲಿ ಮುಳುಗಿಸಿ ಮೊದಲೇ ಕಲಸಿದ ಹಿಟ್ಟನ್ನು ಸ್ವಲ್ಪ ತೆಗೆದುಕೊಂಡು ವಡೆ ರೆಡಿ ಮಾಡಿಕೊಳ್ಳಿ.
ಬಳಿಕ ವಡೆಯನ್ನು ರೆಡಿ ಮಾಡಿ ಕಾದ ಎಣ್ಣೆಗೆ ಹಾಕಬೇಕಾಗುತ್ತದೆ. ಅದೇ ಪ್ರಕ್ರಿಯೆಯಲ್ಲಿ ಪ್ರತಿಯೊಂದು ವಡೆಯನ್ನು ರೆಡಿ ಎಣ್ಣೆಯಲ್ಲಿ ಬಿಡಬೇಕಾಗುತ್ತದೆ.
ಹಾಗೆಯೇ ವಡೆಗಳನ್ನು ಎಣ್ಣೆಗೆ ಹಾಕಿದ ತಕ್ಷಣ ತಿರುಗಿಸಬೇಡಿ. ಸ್ವಲ್ಪ ಸಮಯದ ಬಳಿಕ ಎರಡೂ ಬದಿಗಳು ಚೆನ್ನಾಗಿ ಕಂದು ಬಣ್ಣ ಬರುವವರೆಗೆ ಮಧ್ಯಮ ಉರಿಯಲ್ಲಿ ಫ್ರೈ ಮಾಡಿ.
ಬಳಿಕ ಈ ವಡೆಗಳನ್ನು ತಟ್ಟೆಗೆ ತೆಗೆದುಕೊಂಡು ಬಿಸಿಯಾಗಿ ಬಡಿಸಿ. ಇದೀಗ ಸೂಪರ್ ಟೇಸ್ಟಿಯಾದ ಮತ್ತು ಗರಿಗರಿಯಾದ ತ್ವರಿತ 'ರವೆ ವಡೆ' ಸವಿಯಲು ಸಿದ್ಧವಾಗಿದೆ!
ಈ ವಡೆಗಳನ್ನು ಶೇಂಗಾ, ತೆಂಗಿನಕಾಯಿ ಮತ್ತು ಶುಂಠಿ ಚಟ್ನಿಯೊಂದಿಗೆ ಸೇವಿಸಿದರೆ ರುಚಿ ಅದ್ಭುತವಾಗಿದ್ದು, ನಿಮಗೆ ಇಷ್ಟವಾದರೆ ಉಪಹಾರಕ್ಕಾಗಿ ಒಮ್ಮೆ ಟ್ರೈ ಮಾಡಿ.