ETV Bharat / bharat

ಪ್ರಯಾಗ್​ರಾಜ್​ನಿಂದ ಹಿಂತಿರುಗುತ್ತಿದ್ದ ಮಿನಿ ಬಸ್​- ಟ್ರಕ್​ ನಡುವೆ ಭೀಕರ ಅಪಘಾತ : 7 ಜನ ಸಾವು - BUS TRUCK ACCIDENT

ಪ್ರಯಾಗ್​ರಾಜ್​ನಿಂದ ಹಿಂತಿರುಗುತ್ತಿದ್ದ ಭೀಕರ ಅಪಘಾತ ಸಂಭವಿಸಿ 7 ಮಂದಿ ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ಜಬಲ್ಪುರ ಜಿಲ್ಲಾಧಿಕಾರಿ ಹಾಗೂ ಪೊಲೀಸ್​ ವರಿಷ್ಠಾಧಿಕಾರಿ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿದರು.

mini Bus Truck Accident
ಮಿನಿ ಬಸ್​ ಟ್ರಕ್​ ನಡುವೆ ಅಪಘಾತ (ETV Bharat)
author img

By ETV Bharat Karnataka Team

Published : Feb 11, 2025, 11:31 AM IST

Updated : Feb 11, 2025, 11:57 AM IST

ಜಬಲ್ಪುರ : ಕುಂಭಮೇಳದಿಂದ ಹಿಂತಿರುಗುತ್ತಿದ್ದ ಮಿನಿ ಬಸ್​ ಹಾಗೂ ಟ್ರಕ್​ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ 7 ಜನ ಸಾವನ್ನಪ್ಪಿರುವ ಘಟನೆ ಮಧ್ಯಪ್ರದೇಶದ ಜಬಲ್ಪುರ- ಪ್ರಯಾಗ್​ರಾಜ್​ ಮಾರ್ಗದಲ್ಲಿ ಇಂದು ಸಂಭವಿಸಿದೆ.

ಜಬಲ್ಪುರ - ಪ್ರಯಾಗ್​ರಾಜ್​ ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುತ್ತಿದ್ದ ಮಿನಿ ಬಸ್,​ ವಿರುದ್ಧ ದಿಕ್ಕಿನಿಂದ ವೇಗವಾಗಿ ಬರುತ್ತಿದ್ದ ಸಿಮೆಂಟ್​ ತುಂಬಿದ್ದ ಟ್ರಕ್​ಗೆ ಡಿಕ್ಕಿ ಹೊಡೆದಿದೆ. ಪರಿಣಾಮ 7 ಜನ ಪ್ರಾಣ ಕಳೆದುಕೊಂಡಿದ್ದಾರೆ. ಮೃತರೆಲ್ಲರೂ ಆಂಧ್ರಪ್ರದೇಶದ ನಿವಾಸಿಗಳು ಎಂದು ಹೇಳಲಾಗುತ್ತಿದೆ.

ಭೀಕರ ಅಪಘಾತದ ಬಗ್ಗೆ ಮಾಹಿತಿ ನೀಡುತ್ತಿರುವ ಅಧಿಕಾರಿ (ETV Bharat)

ಜಬಲ್ಪುರ ಜಿಲ್ಲಾಧಿಕಾರಿ ಹಾಗೂ ಪೊಲೀಸ್​ ವರಿಷ್ಠಾಧಿಕಾರಿ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸುತ್ತಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

ಟ್ರಕ್​ಗೆ ಹಿಂದಿನಿಂದ ಗುದ್ದಿದ ಕಾರು, ಇಬ್ಬರು ಭಕ್ತರು ಸಾವು : ರಸ್ತೆ ಬದಿ ನಿಲ್ಲಿಸಿದ್ದ ಟ್ರಕ್​ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಕಾರು ಚಾಲಕ ಹಾಗೂ 5 ವರ್ಷದ ಬಾಲಕ ಸಾವನ್ನಪ್ಪಿದ್ದು, 5 ಜನ ಗಾಯಗೊಂಡಿರುವ ಘಟನೆ ದೇಹತ್​ ಕೊತ್ವಾಲಿ ಪ್ರದೇಶದ ರೇವಾ- ವಾರಾಣಸಿ ಹೆದ್ದಾರಿಯಲ್ಲಿ ನಡೆದಿದೆ.

Car hit the Truck
ಟ್ರಕ್​ಗೆ ಗುದ್ದಿದ ಕಾರು (ETV Bharat)

ಕಾರಿನಲ್ಲಿದ್ದವರು ಮಹಾರಾಷ್ಟ್ರದಿಂದ ಪ್ರಯಾಗ್​ರಾಜ್​ಗೆ ಬಂದಿದ್ದರು. ತ್ರಿವೇಣಿ ಸಂಗಮದಲ್ಲಿ ಸ್ನಾನ ಮುಗಿಸಿ ಎಲ್ಲರೂ ಕಾಶಿ ವಿಶ್ವನಾಥನ ದರ್ಶನ ಮುಗಿಸಿಕೊಂಡು ಮಿರ್ಜಾಪುರ ಮೂಲಕ ಮಹಾರಾಷ್ಟ್ರಕ್ಕೆ ಹಿಂತಿರುಗುತ್ತಿದ್ದರು. ಈ ಸಮಯದಲ್ಲಿ ಇಂದು ಬೆಳಗ್ಗೆ ದೇಹತ್​ ಕೊತ್ವಾಲಿ ಪೊಲೀಸ್​ ಠಾಣೆ ವ್ಯಾಪ್ತಿಯ ಬರ್ಕಾಚಾ ಕಲಾ ರೇವಾ- ವಾರಾಣಸಿ ಹೆದ್ದಾರಿಯಲ್ಲಿ ರಸ್ತೆಯ ಬದಿ ನಿಲ್ಲಿಸಿದ್ದ ಟ್ರಕ್​ಗೆ ಹಿಂದಿನಿಂದ ಕಾರು ಡಿಕ್ಕಿ ಹೊಡೆದಿದೆ. ಕಾರು ಚಾಲಕ ಸನ್ನಿ ಜಸ್ವಾಲ್​ ಹಾಗೂ 5 ವರ್ಷದ ಬಾಲಕ ಶ್ರೇಯಂಶ್​ ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಜೆಸಿಬಿ ಸಹಾಯದಿಂದ ಕಾರಿನೊಳಗೆ ಸಿಕ್ಕಿಹಾಕಿಕೊಂಡಿದ್ದವರನ್ನು ಹೊರತೆಗೆದು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಇದನ್ನೂ ಓದಿ: ಚಾಲಕನಿಗೆ ಮೂರ್ಛೆ ಬಂದು ಮರಕ್ಕೆ ಬಸ್ ಡಿಕ್ಕಿ: ಐವರಿಗೆ ಗಾಯ, 40 ಮಂದಿ ಪಾರು

Last Updated : Feb 11, 2025, 11:57 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.