ETV Bharat / state

ಬೆಂಗಳೂರು ಏರೋ ಇಂಡಿಯಾ ಶೋ: NETRA-5 ಡ್ರೋನ್ ಸಾಮರ್ಥ್ಯ, ವಿಶೇಷತೆಗಳೇನು? - AERO INDIA 2025

ಐಡಿಯಾಫೋರ್ಜ್ ಟೆಕ್ನಾಲಜಿ ಲಿಮಿಟೆಡ್‌ ರಕ್ಷಣಾ ಮತ್ತು ನಾಗರಿಕ ಅನ್ವಯಿಕೆಗಳಿಗಾಗಿ ವಿನ್ಯಾಸ ಮಾಡಿರುವ ತನ್ನ ಮಾನವರಹಿತ ವೈಮಾನಿಕ ವಾಹನ (UAV) NETRA-5 ಅನ್ನು ಏರೋ ಇಂಡಿಯಾ 2025ರಲ್ಲಿ ಅನಾವರಣಗೊಳಿಸಿದೆ.

netra 5 drone
NETRA 5 ಡ್ರೋನ್ (ETV Bharat)
author img

By ETV Bharat Karnataka Team

Published : Feb 11, 2025, 4:18 PM IST

ಬೆಂಗಳೂರೂ: ದೇಶದಲ್ಲಿ ಡ್ರೋನ್ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಐಡಿಯಾಫೋರ್ಜ್ ಟೆಕ್ನಾಲಜಿ ಲಿಮಿಟೆಡ್​​​ ವಿನ್ಯಾಸಗೊಳಿಸಿರುವ ಮಾನವರಹಿತ ವೈಮಾನಿಕ ವಾಹನ (UAV) NETRA-5 ಇಂದು ಏರೋ ಇಂಡಿಯಾ 2025ರಲ್ಲಿ ಅನಾವರಣಗೊಂಡಿತು.

ಈ ಕುರಿತು 'ಈಟಿವಿ ಭಾರತ್‌' ಜೊತೆಗೆ ಮಾತನಾಡಿದ ಐಡಿಯಾಫೋರ್ಜ್‌ನ ಹಿರಿಯ ವ್ಯವಸ್ಥಾಪಕ ತುಷಾರ್, NETRA-5 ಡ್ರೋನ್‌ನ ಸಾಮರ್ಥ್ಯ, ವಿವಿಧ ವಲಯಗಳಲ್ಲಿ ಭದ್ರತೆ ಮತ್ತು ಕಣ್ಗಾವಲನ್ನು ಬಲಪಡಿಸುವಲ್ಲಿ ಅದರ ಪಾತ್ರದ ಕುರಿತು ವಿವರಿಸಿದರು.

ಐಡಿಯಾಫೋರ್ಜ್‌ನ ಹಿರಿಯ ವ್ಯವಸ್ಥಾಪಕ ತುಷಾರ್ (ETV Bharat)

"NETRA-5ನ್ನು ನಿರ್ದಿಷ್ಟವಾಗಿ ಸೇನೆ, ನೌಕಾಪಡೆ ಮತ್ತು ವಾಯುಪಡೆ ಮಾತ್ರವಲ್ಲದೆ ನಾಗರಿಕ ಬಳಕೆಗಾಗಿ ವಿನ್ಯಾಸಗೊಳಿಸಲಾಗಿದೆ. ಗಡಿ ನಿರ್ವಹಣೆ, ಭದ್ರತಾ ಕಾರ್ಯಾಚರಣೆಗಳು, ಕಣ್ಗಾವಲು ಮತ್ತು ದೊಡ್ಡ ಪ್ರಮಾಣದ ಸಮೀಕ್ಷೆಗಳಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ಅಲ್ಲದೇ ದಂಗೆಗಳನ್ನು ನಿಯಂತ್ರಿಸುವ‌ ಕ್ರಮಗಳಿಗೆ, ಅಪರಾಧ ನಿಯಂತ್ರಣ ಮತ್ತು ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಗಳಿಗೂ ಅನುಕೂಲವಾಗುವಂತೆ ಸಜ್ಜುಗೊಳಿಸಲಾಗಿದೆ. ಸಮುದ್ರ ಗಡಿಗಳ ಭದ್ರತೆ ಮತ್ತು ಕಣ್ಗಾವಲಿನಲ್ಲಿ ಹೆಚ್ಚು ಪರಿಣಾಮಕಾರಿಯಾಗಿದೆ" ಎಂದು ತಿಳಿಸಿದರು.

netra 5 drone
NETRA 5 ಡ್ರೋನ್ (ETV Bharat)

"ಸರಿಸುಮಾರು 8 ಕೆ.ಜಿ ತೂಕದ NETRA-5, 10ರಿಂದ 15 ಕಿ.ಮೀ ವ್ಯಾಪ್ತಿಯಲ್ಲಿ ಕಾರ್ಯಾಚರಣೆಯ ಸಾಮರ್ಥ್ಯ ಹೊಂದಿದೆ ಹಾಗೂ ಇದು ಸತತ 75 ನಿಮಿಷಗಳವರೆಗೆ ಹಾರಬಲ್ಲದ್ದಾಗಿದ್ದು, 1.5 ರಿಂದ 2 ಕೆ.ಜಿವರೆಗಿನ ಪೇಲೋಡ್‌ಗಳನ್ನ ಸಾಗಿಸುವ ಸಾಮರ್ಥ್ಯವಿರುವ ಡ್ರಾಪ್ ಮೆಕ್ಯಾನಿಸಂ ಹೊಂದಿದೆ. ಹೆಚ್ಚು ನಿಖರ ಕಣ್ಗಾವಲಿಗಾಗಿ ಸಿದ್ಧಪಡಿಸಿದ NETRA-5ನಲ್ಲಿ ಹೈ ರೆಸಲ್ಯೂಶನ್ ಕ್ಯಾಮೆರಾವಿದ್ದು ಜೂಮ್ ಸಾಮರ್ಥ್ಯಗಳು ಮತ್ತು ಥರ್ಮಲ್ ಇಮೇಜಿಂಗ್‌ನ ಸೌಲಭ್ಯವಿದೆ" ಎಂದು ವಿವರಿಸಿದರು.

"ನಾಗರಿಕ ಬಳಕೆಯಲ್ಲಿ ಭೂ ಸಮೀಕ್ಷೆ ಮತ್ತು ಮ್ಯಾಪಿಂಗ್‌ನಲ್ಲಿ NETRA-5ನ್ನು ವ್ಯಾಪಕವಾಗಿ ಬಳಸಲಾಗುತ್ತದೆ. ಇದರ ಪ್ರಮುಖ ಬಳಕೆ ಕ್ಷೇತ್ರಗಳಲ್ಲಿ ಒಂದು ಗಣಿಗಾರಿಕಾ ಯೋಜನೆಯ ಪ್ರದೇಶ, ಅದರ ಪರಿಮಾಣದ ಅಂದಾಜು ಮತ್ತು ತೈಲ ಮತ್ತು ಅನಿಲ ಕ್ಷೇತ್ರಗಳ ಮ್ಯಾಪಿಂಗ್ ಆಗಿದೆ. ಸರ್ವೆ ಆಫ್ ಇಂಡಿಯಾ ಈಗಾಗಲೇ NETRA-5 ಡ್ರೋನ್‌ ಬಳಸುತ್ತಿದೆ" ಎಂದು ತಿಳಿಸಿದರು.

ಸ್ಥಳೀಯ ವಿನ್ಯಾಸ ಮತ್ತು ನಾವೀನ್ಯತೆಗಳಿಗೆ ಹೆಸರುವಾಸಿಯಾಗಿರುವ ಐಡಿಯಾಫೋರ್ಜ್ ಟೆಕ್ನಾಲಜಿ ಲಿಮಿಟೆಡ್‌ ಸಂಸ್ಥೆಯು ಭಾರತದಲ್ಲಿ ಡ್ರೋನ್ ತಂತ್ರಜ್ಞಾನ ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿದೆ. ಭದ್ರತೆ, ಕಣ್ಗಾವಲು ಮತ್ತು ನಾಗರಿಕ ಕಾರ್ಯಾಚರಣೆಗಳನ್ನು ಹೆಚ್ಚಿಸುವ ಗುರಿಯನ್ನು ಹೊಂದಿರುವ ಐಡಿಯಾಫೋರ್ಜ್ ಕಂಪೆನಿ NETRA-5 ಮಾತ್ರವಲ್ಲದೆ ಹಲವಾರು ಸುಧಾರಿತ ತಂತ್ರಜ್ಞಾನ ವ್ಯವಸ್ಥೆಗಳನ್ನು ತಯಾರಿಸುತ್ತದೆ.

ಇದನ್ನೂ ಓದಿ: ರಾಜ್ಯದ 'ಪ್ರಗತಿಯ ಮರುಕಲ್ಪನೆ' ಇನ್ವೆಸ್ಟ್‌ ಕರ್ನಾಟಕ 2025ಕ್ಕೆ ಇಂದು ಚಾಲನೆ: ರಕ್ಷಣಾ ಸಚಿವರಿಂದ ಉದ್ಘಾಟನೆ

ಇದನ್ನೂ ಓದಿ: ಏರೋ ಇಂಡಿಯಾ 2025: ಸೂರ್ಯ ಕಿರಣ್ ಏರೋಬ್ಯಾಟಿಕ್ ತಂಡದಲ್ಲಿ ಕನ್ನಡಿಗ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.