Tomato Corn Soup Recipe: ಅನೇಕರು ವರ್ಷದ ಯಾವುದೇ ಸಮಯದಲ್ಲಿ ಸುಲಭವಾಗಿ ಜೀರ್ಣವಾಗುವ ಸೂಪ್‌ಗಳನ್ನು ಸೇವಿಸಲು ಇಷ್ಟಪಡುತ್ತಾರೆ. ಚಿಕನ್, ಮಟನ್ ಸೇರಿದಂತೆ ವಿವಿಧ ತರಕಾರಿಗಳಿಂದ ತಯಾರಿಸುವಂತಹ ಸೂಪ್‌ಗಳು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದರಲ್ಲಿ ಒಂದು ಟೊಮೆಟೊ ಕಾರ್ನ್ ಸೂಪ್. ಸಂಜೆ ಸಮಯದಲ್ಲಿ ಈ ಸೂಪ್ ಸೇವಿಸಿದರೆ ತುಂಬಾ ಹಿತಕರವಾಗಿರುತ್ತದೆ.
ಟೊಮೆಟೊ ಕಾರ್ನ್ ಸೂಪ್ ಸಿದ್ಧಪಡಿಸುವುದು ತುಂಬಾ ಸುಲಭ. ಈ ಸೂಪ್ನ ರುಚಿ ಕೂಡ ತುಂಬಾ ಟೇಸ್ಟಿಯಾಗಿರುತ್ತದೆ. ನೀವು ಒಮ್ಮೆ ಮಾಡಿದರೆ ಮನೆಯಲ್ಲಿರುವ ಪ್ರತಿಯೊಬ್ಬರು ತುಂಬಾ ಇಷ್ಟಪಟ್ಟು ಕುಡಿಯುತ್ತಾರೆ. ಸೂಪರ್ ಟೇಸ್ಟಿಯಾಗಿರುವ ಸೂಪ್ ಮಾಡಲು ಬೇಕಾಗುವ ಪದಾರ್ಥಗಳೇನು ಹಾಗೂ ಇದನ್ನು ಸಿದ್ಧಪಡಿಸುವುದು ಹೇಗೆ ಅನ್ನೋದರ ಮಾಹಿತಿ ಇಲ್ಲಿದೆ..
ಟೊಮೆಟೊ ಕಾರ್ನ್ ಸೂಪ್ಗೆ ಅಗತ್ಯವಿರುವ ಪದಾರ್ಥಗಳೇನು ?
- ಸ್ಟೀಟ್ ಕಾರ್ನ್ - ಒಂದು ಕಪ್
- ಟೊಮೆಟೊ - ಅರ್ಧ ಕಿಲೋ
- ಬೆಣ್ಣೆ - 6 ಟೀಸ್ಪೂನ್
- ಸಣ್ಣಗೆ ಕಟ್ ಮಾಡಿದ ಈರುಳ್ಳಿ - ಒಂದು ಕಪ್
- ತುರಿದ ಕ್ಯಾರೆಟ್ - ಅರ್ಧ ಕಪ್
- ಉಪ್ಪು - ರುಚಿಗೆ ಬೇಕಾಗುಷ್ಟು
- ಈರುಳ್ಳಿ ಸೊಪ್ಪು - ಸ್ವಲ್ಪ
- ಕಾಳು ಮೆಣಸಿನ ಪುಡಿ - 1 ಟೀಸ್ಪೂನ್
- ಸಕ್ಕರೆ - ಒಂದು ಟೀಸ್ಪೂನ್
- ಬೆಳ್ಳುಳ್ಳಿ ಪೇಸ್ಟ್ - 1 ಟೀಸ್ಪೂನ್
- ಕೊತ್ತಂಬರಿ ಸೊಪ್ಪು - ಕಾಲು ಕಪ್
ಟೊಮೆಟೊ ಕಾರ್ನ್ ಸೂಪ್ ತಯಾರಿಸುವ ವಿಧಾನ :
- ಮೊದಲು ಟೊಮೆಟೊಗಳನ್ನು ಪೀಸ್ಗಳನ್ನು ಮಾಡಿ ಪಕ್ಕಕ್ಕೆ ಇಡಿ. ಈರುಳ್ಳಿ ಮತ್ತು ಈರುಳ್ಳಿ ಸೊಪ್ಪನ್ನು ಕಟ್ ಮಾಡಿ ಪಕ್ಕಕ್ಕೆ ಇಡಿ. ಕ್ಯಾರೆಟ್ ತುರಿದು ಇಟ್ಟುಕೊಳ್ಳಿ.
- ಪಾತ್ರೆ ತೆಗೆದುಕೊಂಡು ಅದಕ್ಕೆ ಬೆಣ್ಣೆ ಹಾಕಿ. ಕರಗಿ ಬಿಸಿಯಾದ ನಂತರ ನುಣ್ಣಗೆ ಕತ್ತರಿಸಿದ ಬೆಳ್ಳುಳ್ಳಿ ಹಾಗೂ ತೆಳುವಾಗಿ ಕತ್ತರಿಸಿದ ಈರುಳ್ಳಿ ಮತ್ತು ತುರಿದ ಕ್ಯಾರೆಟ್ ಸೇರಿಸಬೇಕು. ಎಲ್ಲವನ್ನೂ ಎರಡು ನಿಮಿಷಗಳವರೆಗೆ ಚೆನ್ನಾಗಿ ಫ್ರೈ ಮಾಡಿ.
- ಮೊದಲೇ ಕತ್ತರಿಸಿದ ಟೊಮೆಟೊ ಪೀಸ್, ಉಪ್ಪು, ಮೆಣಸಿನ ಪುಡಿ, ಅರಿಶಿನ ಮತ್ತು ಈರುಳ್ಳಿ ಸೊಪ್ಪುಗಳನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
- ಬಳಿಕ ಕಡಿಮೆ ಉರಿಯಲ್ಲಿ ಅರ್ಧ ಗಂಟೆ ಬೇಯಿಸಬೇಕಾಗುತ್ತದೆ. ಬಳಿಕ ಸ್ವಲ್ಪ ತಣ್ಣಗಾಗಲು ಬಿಡಿ.
- ನಂತರ ಅದನ್ನು ಒಂದು ಒಳ್ಳಿನಲ್ಲಿ ರುಬ್ಬಿಕೊಳ್ಳಿ, ರಸವನ್ನು ಬಿಟ್ಟು ಉಳಿದ ತಿರುಳನ್ನು ತೆಗೆದುಹಾಕಿ.
- ಇದೀಗ ಸ್ವೀಟ್‌ಕಾರ್ನ್ ಸೇರಿಸಿ ಹಾಗೂ ಒಲೆಯ ಮೇಲೆ ಇನ್ನೊಂದು ನಾಲ್ಕು ನಿಮಿಷ ಬೇಯಿಸಬೇಕಾಗುತ್ತದೆ.
- ಕೊತ್ತಂಬರಿ ಸೊಪ್ಪನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಬೇಕಾಗುತ್ತದೆ. ಆಗ ರುಚಿಕರವಾದ 'ಟೊಮೆಟೋ ಕಾರ್ನ್ ಸೂಪ್' ಸಿದ್ಧವಾಗುತ್ತದೆ.
- ನಿಮಗೆ ಇಷ್ಟವಾದರೆ, ಈ ಸೂಪ್ ಪ್ರಯತ್ನಿಸಿ ನೋಡಿ. ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಎಲ್ಲರೂ ಈ ಸೂಪ್ನ್ನು ಕುಡಿಯಲು ಇಷ್ಟಪಡುತ್ತಾರೆ.
ಟೊಮೆಟೊದ ಲಾಭಗಳೇನು : ಟೊಮೆಟೊದಿಂದ ಆರೋಗ್ಯಕ್ಕೆ ಅನೇಕ ಪ್ರಯೋಜನಗಳು ದೊರೆಯುತ್ತವೆ. ಟೊಮೆಟೊದಲ್ಲಿ ಫೋಲೇಟ್, ವಿಟಮಿನ್ ಎ ಹಾಗೂ ಸಿ, ಫೈಬರ್, ರಂಜಕ, ಮೆಗ್ನೀಸಿಯಮ್, ಥಯಾಮಿನ್ ಹಾಗೂ ವಿಟಮಿನ್ ಬಿ ಹೇರಳವಾಗಿವೆ. ಟೊಮೆಟೊ ವಿಟಮಿನ್ ಕೆ ಮತ್ತು ಕ್ಯಾಲ್ಸಿಯಂನಂತಹ ಪೋಷಕಾಂಶಗಳನ್ನು ಹೊಂದಿವೆ. ಮೂಳೆಗಳನ್ನು ಆರೋಗ್ಯಕ್ಕೆ ಉತ್ತಮವಾಗಿ ಕೆಲಸ ಮಾಡುತ್ತವೆ. ಟೊಮೆಟೊದಲ್ಲಿರುವ ಲೈಕೋಪೀನ್ ಹೃದಯ ಕಾಯಿಲೆಯ ಅಪಾಯ ತಡೆಯುತ್ತದೆ.
ನೀವು ನಿಯಮಿತವಾಗಿ ನಿಮ್ಮ ಆಹಾರದಲ್ಲಿ ಟೊಮೆಟೊವನ್ನು ಸೇರಿಸಿಕೊಂಡರೆ, ಕೊಲೆಸ್ಟ್ರಾಲ್ ಹಾಗೂ ಟ್ರೈಗ್ಲಿಸರೈಡ್ ಮಟ್ಟ ಕಡಿಮೆ ಮಾಡುತ್ತದೆ. ಟೊಮೆಟೊ ತಿನ್ನುವುದರಿಂದ ಜೀರ್ಣಕ್ರಿಯೆ ಸುಧಾರಿಸುತ್ತದೆ. ಇದು ದೇಹದಿಂದ ವಿಷವನ್ನು ಸಹ ತೆಗೆದುಹಾಕುತ್ತವೆ. ಜೊತೆಗೆ ಅನೇಕ ರೋಗಗಳಿಂದ ರಕ್ಷಿಸುತ್ತದೆ. ಕಾಮಾಲೆಯಂತಹ ರೋಗಗಳನ್ನು ಕಡಿಮೆ ಮಾಡುವಲ್ಲಿ ಟೊಮೆಟೊ ಪರಿಣಾಮಕಾರಿ ಕೆಲಸ ಮಾಡುತ್ತದೆ. ಟೊಮೆಟೊ ತಿನ್ನುವುದರಿಂದ ರಾತ್ರಿ ಕುರುಡುತನ ತಡೆಯಬಹುದು, ಚರ್ಮ ಮತ್ತು ಕೂದಲಿಗೆ ಪ್ರಯೋಜನಕಾರಿಯಾಗಿದೆ. ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸುತ್ತದೆ. ರೋಗನಿರೋಧಕ ಶಕ್ತಿಯನ್ನು ಬಲಪಡಿಸಲು ಟೊಮೆಟೊ ಸಹಾಯ ಮಾಡುತ್ತದೆ ಎಂದು ತಜ್ಞರು ತಿಳಿಸುತ್ತಾರೆ
ಸ್ವೀಟ್‌ಕಾರ್ನ್ ಪ್ರಯೋಜನಗಳು : ಸ್ವೀಟ್ಕಾರ್ನ್ನಲ್ಲಿ ಫೈಬರ್ ಸಮೃದ್ಧವಾಗಿದ್ದು, ಮಲಬದ್ಧತೆ ಹಾಗೂ ಪೈಲ್ಸ್‌ನಿಂದ ಬಳಲುತ್ತಿರುವವರಿಗೆ ಸ್ವೀಟ್‌ಕಾರ್ನ್ ಒಳ್ಳೆಯದರು. ಇದರಲ್ಲಿ ಆ್ಯಂಟಿಆಕ್ಸಿಡೆಂಟ್ ಅಧಿಕವಾಗಿದೆ. ಕ್ಯಾನ್ಸರ್ ಉಂಟುಮಾಡುವ ಸ್ವತಂತ್ರ ರಾಡಿಕಲ್‌ಗಳನ್ನು ತಡೆಯಲು ಸಹಾಯ ಮಾಡುತ್ತದೆ. ನಿರ್ದಿಷ್ಟವಾಗಿ ಸ್ತನ ಹಾಗೂ ಯಕೃತ್ತಿನ ಕ್ಯಾನ್ಸರ್ ತಡೆಗಟ್ಟುವ ಉತ್ಕರ್ಷಣ ನಿರೋಧಕಗಳು ಮುಖ್ಯ ಪಾತ್ರವಹಿಸುತ್ತವೆ.
ಸ್ವೀಟ್ ಕಾರ್ನ್ ಸೇವಿಸಿದರೆ ಅಸಿಡಿಟಿ ಸಮಸ್ಯೆಯಿಂದ ಮುಕ್ತಿ ಲಭಿಸುತ್ತದೆ. ಜೊತೆಗೆ ಕೊಲೆಸ್ಟ್ರಾಲ್ ಮಟ್ಟ ಕಡಿಮೆ ಮಾಡುತ್ತದೆ. ಸ್ವೀಟ್‌ಕಾರ್ನ್‌ನಲ್ಲಿನ ವಿಟಮಿನ್- ಸಿ, ಕ್ಯಾರೊಟಿನಾಯ್ಡ್‌ಗಳು ಹಾಗೂ ಬಯೋಫ್ಲೇವನಾಯ್ಡ್‌ಗಳು ಹೃದಯದ ಆರೋಗ್ಯಕ್ಕೆ ಉತ್ತಮವಾಗಿದೆ. ಇದರಲ್ಲಿರುವ ವಿಟಮಿನ್ ಬಿ-12, ಕಬ್ಬಿಣ, ಫೋಲಿಕ್ ಆಮ್ಲವು ರಕ್ತಹೀನತೆ ಹೋಗಲಾಡಿಸುತ್ತದೆ. ಸ್ವೀಟ್ಕಾರ್ನ್ನಲ್ಲಿರುವ ರಂಜಕ, ಕಬ್ಬಿಣ, ತಾಮ್ರ, ಮೆಗ್ನೀಸಿಯಮ್, ಮ್ಯಾಂಗನೀಸ್, ಸತು ವಿವಿಧ ಖನಿಜಗಳು ಮೂಳೆಗಳನ್ನು ಸದೃಢಗೊಳಿಸುತ್ತದೆ ಎಂದು ತಜ್ಞರು ವಿವರಿಸುತ್ತಾರೆ.