How to Make Cheese Omelette Recipe: ಹೆಚ್ಚಿನವರು ಮನೆಯಲ್ಲಿ ಮೊಟ್ಟೆಗಳಿದ್ದರೆ ಸಾಕು ಆಮ್ಲೆಟ್ ರೆಡಿ ಮಾಡಿ ಸೇವಿಸಲು ಇಷ್ಟಪಡುತ್ತಾರೆ. ಆದರೆ, ನೀವು ಯಾವಾಗಲೂ ಒಂದೇ ಬಗೆಯ ಆಮ್ಲೆಟ್ ಸಿದ್ಧಪಡಿಸಿದರೆ ನಿಮಗೆ ಅದನ್ನು ಸೇವಿಸಲು ಇಷ್ಟಪಡುವುದಿಲ್ಲ. ಇದರಿಂದಾಗಿ ನಾವು ನಿಮಗೆ ಸೂಪರ್ ಫ್ಲಫಿ ಚೀಸ್ ಆಮ್ಲೆಟ್ ರೆಸಿಪಿಯನ್ನು ಪರಿಚಯಿಸಲಿದ್ದೇವೆ.. ನಾವು ತಿಳಿಸಿದಂತೆ ನೀವು ಚೀಸ್ ಆಮ್ಲೆಟ್ ರೆಡಿ ಮಾಡಿದರೆ ಸೂಪರ್ ಟೇಸ್ಟಿಯಾಗಿರುತ್ತದೆ.
ಸ್ಟ್ರೀಟ್ ಫುಡ್ ಸ್ಟೈಲ್ನ ರೀತಿ ಅದ್ಭುತ ರುಚಿ ಹೊಂದಿರುತ್ತದೆ. ಈ ಆಮ್ಲೆಟ್ ಮಕ್ಕಳಿಗೆ ಸಂಜೆಯ ತಿಂಡಿಗೆ ಉತ್ತಮ ಆಯ್ಕೆಯಾಗಿದೆ. ಮಕ್ಕಳು ತಿಂಡಿಯನ್ನು ತುಂಬಾ ಇಷ್ಟಪಟ್ಟು ಸೇವಿಸುತ್ತಾರೆ. ಸರಳವಾಗಿ ಚೀಸ್ ಆಮ್ಲೆಟ್ ತಯಾರಿಸುವುದು ಹೇಗೆ? ಸಿದ್ಧಪಡಿಸಲು ಯಾವ ಪದಾರ್ಥಗಳು ಬೇಕಾಗುತ್ತವೆ ಎಂಬುದನ್ನು ತಿಳಿದುಕೊಳ್ಳೋಣ.
ಸಾಫ್ಟ್ ಚೀಸ್ ಆಮ್ಲೆಟ್‌ಗೆ ಅಗತ್ಯವಿರುವ ಪದಾರ್ಥಗಳು :
- 6 ಮೊಟ್ಟೆಗಳು
- ರುಚಿಗೆ ತಕ್ಕಷ್ಟು ಉಪ್ಪು
- ಬೆಣ್ಣೆ - ಬೇಕಾದಷ್ಟು
- ಸಣ್ಣಗೆ ಹೆಚ್ಚಿದ ಈರುಳ್ಳಿ - ಅರ್ಧ ಕಪ್
- ಟೊಮೆಟೊ ಪೇಸ್ಟ್ - ಕಾಲು (1/4) ಕಪ್
- ಹಸಿಮೆಣಸಿನ ಪೇಸ್ಟ್ - 3 ಟೀಸ್ಪೂನ್
- ಕಾಳು ಮೆಣಸಿನ ಪುಡಿ - ಬೇಕಾದಷ್ಟು
- ಸಂಸ್ಕರಿಸಿದ ಚೀಸ್ ಸ್ಲೈಸ್ಗಳು - 9
ಸಾಫ್ಟ್ ಚೀಸ್ ಆಮ್ಲೆಟ್ ತಯಾರಿಸುವ ವಿಧಾನ :
- ಮೊದಲು 2 ಬೌಲ್ಗಳನ್ನು ತೆಗೆದುಕೊಳ್ಳಿ. ನಂತರ ಮೊಟ್ಟೆಗಳನ್ನು ಒಡೆದು ಒಂದು ಬೌಲ್ನಲ್ಲಿ ಹಳದಿ ಭಾಗವನ್ನು ಹಾಗೂ ಇನ್ನೊಂದು ಬೌಲ್ನಲ್ಲಿ ಮೊಟ್ಟೆಯ ಬಿಳಿ ಭಾಗವನ್ನು ಹಾಕಿ.
- ಬಳಿಕ ಮೊಟ್ಟೆಯ ಬಿಳಿಭಾಗವನ್ನು ಬೀಟರ್‌ನಿಂದ ನೊರೆ ಬರುವವರೆಗೆ ಚೆನ್ನಾಗಿ ಮಿಕ್ಸ್ ಮಾಡಿ. ನೆನಪಿಡಿ ಮೊಟ್ಟೆಯ ಬಿಳಿಭಾಗದಲ್ಲಿ ಹೆಚ್ಚು ನೊರೆ ಇದ್ದಷ್ಟೂ ಆಮ್ಲೆಟ್ ಮೃದುವಾಗಿರುತ್ತದೆ.
- ಹಳದಿ ಲೋಳೆಯನ್ನು ಮೊಟ್ಟೆ ಬೀಟರ್‌ನಿಂದ 5 ನಿಮಿಷಗಳ ಕಾಲ ಮಿಕ್ಸ್ ಮಾಡಿ.
- ನಂತರ ಮೊಟ್ಟೆಯ ಬಿಳಿ ಭಾಗದ ಮಿಶ್ರಣಕ್ಕೆ ಹಳದಿ ಲೋಳೆಯನ್ನು ಸುರಿಯಿರಿ ಹಾಗೂ ಅದನ್ನು ಮೇಲಕ್ಕೆ, ಕೆಳಕ್ಕೆ ಮಿಶ್ರಣ ಮಾಡಿ.
- ಇದೀಗ ಒಲೆ ಆನ್ ಮಾಡಿ ನಾನ್ಸ್ಟಿಕ್ ಪ್ಯಾನ್‌ಗೆ ಇಡಬೇಕಾಗುತ್ತದೆ. ಪ್ಯಾನ್ ಬಿಸಿಯಾದ ಬಳಿಕ ಬೆಣ್ಣೆಯನ್ನು ಸೇರಿಸಿ ಕರಗಿಸಿ. ಈಗ ಒಲೆಯ ಮೇಲಿನ ಉರಿಯನ್ನು ಮಧ್ಯಮದಲ್ಲಿ ಇರಿಸಿ. ಪ್ಯಾನ್ ಮೇಲೆ ಮೊಟ್ಟೆಯ ಮಿಶ್ರಣ ಸುರಿಯಿರಿ. (ಇದರಿಂದ ಮೂರು ಚೀಸ್ ಆಮ್ಲೆಟ್‌ಗಳನ್ನು ತಯಾರಿಸಬಹುದು.)
- ಬಳಿಕ ಆಮ್ಲೆಟ್‌ಗೆ ಒಂದು ಚಮಚ ತೆಳುವಾಗಿ ಕತ್ತರಿಸಿದ ಈರುಳ್ಳಿ, ಟೊಮೆಟೊ ಪೇಸ್ಟ್ ಹಾಗೂ ಸ್ವಲ್ಪ ಹಸಿಮೆಣಸಿನಕಾಯಿ ಪೇಸ್ಟ್ ಸೇರಿಸಿ. ಜೊತೆಗೆ ಸ್ವಲ್ಪ ಉಪ್ಪು ಹಾಗೂ ಕಾಳುಮೆಣಸಿನ ಪುಡಿ ಸಿಂಪಡಿಸಬೇಕು.
- ಪ್ಯಾನ್‌ನಲ್ಲಿ ಆಮ್ಲೆಟ್ ಬೇರ್ಪಡುತ್ತಿರುವ ವೇಳೆಯಲ್ಲಿ ಪ್ಯಾನ್‌ನ ಅಂಚುಗಳ ಉದ್ದಕ್ಕೂ ಸ್ವಲ್ಪ ಬೆಣ್ಣೆಯನ್ನು ಹರಡಬೇಕಾಗುತ್ತದೆ.
- ನಂತರ ಆಮ್ಲೆಟ್‌ನ ಒಂದು ಬದಿಗೆ ಮೂರು ಸಂಸ್ಕರಿಸಿದ ಚೀಸ್ ಸ್ಲೈಸ್ ಸೇರಿಸಿ ಹಾಗೂ ಅದನ್ನು ಇನ್ನೊಂದು ಬದಿಗೆ ತಿರುಗಿಸಿ.
- ಅರ್ಧ ನಿಮಿಷದ ಬಳಿಕ ಆಮ್ಲೆಟ್ ಅನ್ನು ತಟ್ಟೆಯಲ್ಲಿ ತೆಗೆದುಕೊಳ್ಳಬೇಕಾಗುತ್ತದೆ. ಆಗ ರುಚಿಕರವಾದ ಚೀಸ್ ಆಮ್ಲೆಟ್ ಸಿದ್ಧವಾಗುತ್ತದೆ.
- ಬಿಸಿ ಬಿಸಿಯಾದ ಚೀಸ್ ಆಮ್ಲೆಟ್ ಅನ್ನು ಟೊಮೆಟೊ ಸಾಸ್ ಜೊತೆಗೆ ಸೇವಿಸಿದರೆ ತುಂಬಾ ರುಚಿಯಾಗಿರುತ್ತದೆ. ಈ ಆಮ್ಲೆಟ್ ರೆಸಿಪಿ ನಿಮಗೆ ಇಷ್ಟವಾಗಿದರೆ ಮನೆಯಲ್ಲಿಯೇ ಪ್ರಯತ್ನಿಸಿ ನೋಡಿ, ಎಲ್ಲರಿಗೂ ಖುಷಿಪಟ್ಟು ತಿನ್ನುತ್ತಾರೆ.