ETV Bharat / technology

ಸ್ಪ್ಯಾಡೆಕ್ಸ್​ ಮಿಷನ್​ನಲ್ಲಿ ಯಾವುದೇ ಸಮಸ್ಯೆಯಿಲ್ಲ; ಇಸ್ರೋ ಮುಖ್ಯಸ್ಥ ವಿ. ನಾರಾಯಣನ್ - NO GLITCHES IN SPADEX MISSION

ಇಸ್ರೋದ ಮೊದಲ ಬಾಹ್ಯಾಕಾಶ ಡಾಕಿಂಗ್ ಪ್ರಯೋಗ ತಾಂತ್ರಿಕ ಸಮಸ್ಯೆಗಳು ಉದ್ಭವಿಸಿದ್ದು, ಎರಡು ಉಪಗ್ರಹಗಳ ಅನ್‌ಡಾಕ್ ಮಾಡಲು ಸಾಧ್ಯವಾಗಲಿಲ್ಲ ಎಂಬ ವರದಿಯಾಗಿತ್ತು. ಆದ್ರೆ ಈ ಬಗ್ಗೆ ಇಸ್ರೋ ಸ್ಪಷ್ಟನೆ ನೀಡಿದೆ.

ISRO CHAIRMAN V NARAYANAN  ISRO SUCCESSFULLY DOCKING  UNDOCKING PROCESS DELAYED  NAVIGATION SATELLITE
ಇಸ್ರೋ ಮುಖ್ಯಸ್ಥ (Photo Credit: ANI)
author img

By ETV Bharat Tech Team

Published : Feb 8, 2025, 6:02 PM IST

Undocking Process Delayed: ಇಸ್ರೋದ ಮೊದಲ ಬಾಹ್ಯಾಕಾಶ ಡಾಕಿಂಗ್ ಮಿಷನ್ ಆಗಿರುವ ಸ್ಪಾಡೆಕ್ಸ್‌ನಲ್ಲಿ ಯಾವುದೇ ದೋಷಗಳಿಲ್ಲ. ಈ ಕಾರ್ಯಾಚರಣೆ ಹಂತ-ಹಂತವಾಗಿ ನಡೆಯುತ್ತಿದೆ ಎಂದು ಇಸ್ರೋ ಅಧ್ಯಕ್ಷ ವಿ.ನಾರಾಯಣನ್ ಸ್ಪಷ್ಟಪಡಿಸಿದ್ದಾರೆ. 2025 ಏರೋ ಇಂಡಿಯಾ ಅಂತಾರಾಷ್ಟ್ರೀಯ ಸೆಮಿನಾರ್‌ನ 15 ನೇ ದ್ವೈವಾರ್ಷಿಕ ಆವೃತ್ತಿಯ ಸಂದರ್ಭದಲ್ಲಿ ಮಾತನಾಡಿದ ಅವರು, ‘ಯಾವುದೇ ದೋಷಗಳಿಲ್ಲ, ಇದೀಗ ಅದನ್ನು ಡಾಕ್ ಮಾಡಲಾಗಿದೆ. ನಾವು ಹಂತ ಹಂತವಾಗಿ ಹೋಗುತ್ತಿದ್ದೇವೆ. ನಾವು ಅಧ್ಯಯನ ಮಾಡುತ್ತಿದ್ದೇವೆ. ಇದಾದ ಬಳಿಕ ನಾವು ಬಹಳಷ್ಟು ಪ್ರಯೋಗಗಳನ್ನು ಮಾಡಲು ಯೋಜಿಸುತ್ತಿದ್ದೇವೆ’ ಎಂದು ಬಾಹ್ಯಾಕಾಶ ಇಲಾಖೆಯ ಕಾರ್ಯದರ್ಶಿ ನಾರಾಯಣನ್ ಮಾಧ್ಯಮಕ್ಕೆ ತಿಳಿಸಿದರು.

ಜನವರಿ 16 ರಂದು, ಇಸ್ರೋ ಬಾಹ್ಯಾಕಾಶ ಡಾಕಿಂಗ್ ಪ್ರಯೋಗದ (ಸ್ಪಾಡೆಕ್ಸ್) ಭಾಗವಾಗಿ ಉಪಗ್ರಹಗಳ ಡಾಕಿಂಗ್ ಅನ್ನು ಯಶಸ್ವಿಯಾಗಿ ನಿರ್ವಹಿಸಿತು. ಡಾಕಿಂಗ್ ನಂತರ ಎರಡು ಉಪಗ್ರಹಗಳನ್ನು ಒಂದೇ ವಸ್ತುವಾಗಿ ನಿಯಂತ್ರಿಸುವುದು ಯಶಸ್ವಿಯಾಗಿದೆ ಎಂದು ಬಾಹ್ಯಾಕಾಶ ಸಂಸ್ಥೆ ಘೋಷಿಸಿತು. ಈ ಕಾರ್ಯಾಚರಣೆಯಲ್ಲಿ NVS-02 ನ್ಯಾವಿಗೇಷನ್ ಉಪಗ್ರಹವನ್ನು ಉದ್ದೇಶಿತ ಜಿಯೋಸಿಂಕ್ರೋನಸ್ ಟ್ರಾನ್ಸ್‌ಫರ್ ಆರ್ಬಿಟ್‌ಗೆ ಯಶಸ್ವಿಯಾಗಿ ಜೋಡಿಸಲಾಯಿತು.

ಫೆಬ್ರವರಿ 2 ರಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಒಂದು ಅಪ್​ಡೇಟ್​ ಅನ್ನು ಬಿಡುಗಡೆ ಮಾಡಿತು. ಆಗ ಇಸ್ರೋ.. ಉಪಗ್ರಹವನ್ನು ಗೊತ್ತುಪಡಿಸಿದ ಕಕ್ಷೆಯ ಸ್ಲಾಟ್‌ಗೆ ಇರಿಸುವ ಕಡೆಗೆ ಕಕ್ಷೆ ಏರಿಸುವ ಕಾರ್ಯಾಚರಣೆಗಳನ್ನು ಕೈಗೊಳ್ಳಲು ಸಾಧ್ಯವಿಲ್ಲ ಎಂದು ತಿಳಿಸಿತು. ಏಕೆಂದರೆ ಕಕ್ಷೆ ಏರಿಸುವ ಥ್ರಸ್ಟರ್‌ಗಳನ್ನು ಹಾರಿಸಲು ಆಕ್ಸಿಡೈಸರ್ ಅನ್ನು ಪ್ರವೇಶಿಸುವ ಕವಾಟಗಳು ತೆರೆಯಲಿಲ್ಲ.

SDX-01 ಮತ್ತು SDX-02 ಎಂಬ ಎರಡು ಬಾಹ್ಯಾಕಾಶ ನೌಕೆಗಳು ಇನ್ನೂ ಅನ್‌ಡಾಕ್ ಮಾಡದ ಕಾರಣ ಬಾಹ್ಯಾಕಾಶ ಡಾಕಿಂಗ್ ತಾಂತ್ರಿಕ ಸಮಸ್ಯೆಗಳನ್ನು ಎದುರಿಸಬಹುದು ಎಂದು ಕೆಲವು ವರದಿಗಳು ಇತ್ತೀಚೆಗೆ ಹೊರ ಬಿದ್ದಿದ್ದವು. ಆದರೆ ಬಾಹ್ಯಾಕಾಶ ಸಂಸ್ಥೆ ಇನ್ನೂ ಅನ್‌ಡಾಕಿಂಗ್ ಪ್ರಕ್ರಿಯೆಯ ಪರಿಶೀಲನೆಯನ್ನು ನಡೆಸುತ್ತಿದೆ ಮತ್ತು ಈ ಕ್ರಮವು ಸ್ವಲ್ಪ ಸಮಯ ತೆಗೆದುಕೊಳ್ಳಬಹುದು ಎಂದು ನಾರಾಯಣನ್ ಮೊದಲೇ ಹೇಳಿದ್ದರು.

ಇಸ್ರೋ ಪ್ರಕಾರ, ಸ್ಪಾಡೆಕ್ಸ್ ಮಿಷನ್ ಪಿಎಸ್‌ಎಲ್‌ವಿ ರಾಕೆಟ್‌ನಿಂದ ಉಡಾಯಿಸಲಾದ ಎರಡು ಸಣ್ಣ ಬಾಹ್ಯಾಕಾಶ ನೌಕೆಗಳನ್ನು ಬಳಸಿಕೊಂಡು ಬಾಹ್ಯಾಕಾಶದಲ್ಲಿ ಡಾಕಿಂಗ್‌ನ ಪ್ರದರ್ಶನಕ್ಕಾಗಿ ವೆಚ್ಚ-ಪರಿಣಾಮಕಾರಿ ತಂತ್ರಜ್ಞಾನ ಪ್ರದರ್ಶಕ ಕಾರ್ಯಾಚರಣೆಯಾಗಿದೆ. ಬಾಹ್ಯಾಕಾಶದಲ್ಲಿ ಸಾಮಾನ್ಯ ಮಿಷನ್ ಉದ್ದೇಶಗಳನ್ನು ಸಾಧಿಸಲು ಬಹು ರಾಕೆಟ್ ಉಡಾವಣೆಗಳು ಅಗತ್ಯವಿದ್ದಾಗ ಡಾಕಿಂಗ್ ತಂತ್ರಜ್ಞಾನ ಅತ್ಯಗತ್ಯ. ಭಾರತೀಯ ಅಂತರಿಕ್ಷ ನಿಲ್ದಾಣ ಮತ್ತು ಚಂದ್ರನ ಮೇಲೆ ಗಗನಯಾತ್ರಿಯನ್ನು ಇಳಿಸುವಂತಹ ಇಸ್ರೋದ ಭವಿಷ್ಯದ ಕಾರ್ಯಾಚರಣೆಗಳಿಗೆ ಈ ಪ್ರಯೋಗವು ನಿರ್ಣಾಯಕವಾಗಿದೆ.

ತಡವಾಗಿದ್ದ ಡಾಕಿಂಗ್​ ಪ್ರಕ್ರಿಯೆ : ಜನವರಿ 7 ರಂದು ಡಾಕಿಂಗ್ ಮಾಡುವ ಆರಂಭಿಕ ಯೋಜನೆಯ ಒಂಬತ್ತು ದಿನಗಳ ನಂತರ ಜನವರಿ 16 ರಂದು ಇವೆರಡೂ ಡಾಕಿಂಗ್​ ಮಾಡಲಾಗಿತ್ತು. ಈಗ ಜನವರಿ ಅಂತ್ಯ ಅಥವಾ ಫೆಬ್ರವರಿ ಮೊದಲ ವಾರದೊಳಗೆ ಅನ್​ಡಾಕಿಂಗ್​ ಮಾಡಲು ಯೋಜಿಸಲಾಗಿತ್ತು. ಆದ್ರೆ ತಾಂತ್ರಿಕ ಸಮಸ್ಯೆಗಳಿಂದಾಗಿ ಈ ಪ್ರಕ್ರಿಯೆ ವಿಳಂಬವನ್ನು ಎದುರಿಸುತ್ತಿದೆ. ಸ್ಪಾಡೆಕ್ಸ್ ಕಾರ್ಯಾಚರಣೆಯಲ್ಲಿ ಭಾಗಿಯಾಗಿರುವ ಹಿರಿಯ ಇಸ್ರೋ ವಿಜ್ಞಾನಿಯೊಬ್ಬರು ಇದು "ಮಾರ್ಚ್-ಏಪ್ರಿಲ್‌ನಲ್ಲಿ ಮಾತ್ರ ಸಂಭವಿಸುವ ಸಾಧ್ಯತೆಯಿದೆ" ಎಂದು ಮಾಧ್ಯಮಕ್ಕೆ ತಿಳಿಸಿದ್ದರು.

ಅನ್‌ಡಾಕಿಂಗ್ ಎಂದರೆ ಎರಡು ಬಾಹ್ಯಾಕಾಶ ನೌಕೆಗಳ ಪ್ರತ್ಯೇಕತೆ ಮತ್ತು ಸ್ಪಾಡೆಕ್ಸ್ ಒಂದು ಪ್ರಾಯೋಗಿಕ ಡಾಕಿಂಗ್/ಅನ್‌ಡಾಕಿಂಗ್ ಕಾರ್ಯಾಚರಣೆಯಾಗಿದೆ. ಆದ್ರೂ ಅದರ ಉದ್ದೇಶಗಳನ್ನು ಯಶಸ್ವಿಯಾಗಿ ಪೂರೈಸಲು ಲೈವ್ ಮಿಷನ್‌ನಲ್ಲಿ ಎರಡನ್ನೂ ಬೇರ್ಪಡಿಸುವುದು ಅತ್ಯಂತ ನಿರ್ಣಾಯಕವಾಗಿದೆ. ಇನ್ನು ಅನ್​ಡಾಕಿಂಗ್​ ಪ್ರಕ್ರಿಯೆ ವಿಳಂಬವಾಗುತ್ತಿದ್ದು, ಈ ಪ್ರಕ್ರಿಯೆ ಯಾವಾಗ ಆರಂಭವಾಗುತ್ತದೆ ಎಂಬುದರ ಬಗ್ಗೆ ಇಸ್ರೋ ಸ್ಪಷ್ಟಪಡಿಸಿಲ್ಲ.

ಓದಿ: ಚಂದ್ರಶಿಲೆ ತರಲು 2027ರಲ್ಲಿ ಚಂದ್ರಯಾನ -4 ಮಿಷನ್, 26ರಲ್ಲಿ ಸಮುದ್ರದಾಳಕ್ಕೆ ಪಯಣ : ಸಚಿವ ಜಿತೇಂದ್ರ ಸಿಂಗ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.