How to Make Tomato Pickle Recipe: ಹೆಚ್ಚಿನ ಜನರು ಟೊಮೆಟೊದಿಂದ ವಿವಿಧ ಅಡುಗೆಗಳನ್ನು ಮಾಡುತ್ತಾರೆ. ಊಟದ ಜೊತೆಗೆ ಸಾಮಾನ್ಯವಾಗಿ ಟೊಮೆಟೊ ಚಟ್ನಿ ಇಲ್ಲವೇ ಯಾವುದಾದರು ಒಂದು ಚಟ್ನಿ ಇದ್ದೇ ಇರುತ್ತದೆ. ಇಂದು ನಾವು ನಿಮಗಾಗಿ ಸಖತ್ ರುಚಿಯಾದ ಟೊಮೆಟೊ ಉಪ್ಪಿನಕಾಯಿ ರೆಸಿಪಿಯನ್ನು ತಂದಿದ್ದೇವೆ. ಇತ್ತೀಚಿನ ದಿನಗಳಲ್ಲಿ ಉಪ್ಪಿನಕಾಯಿ ತಯಾರಿಸಲು ಸಮಯವಿಲ್ಲದಿದ್ದಾಗ ಮಾರುಕಟ್ಟೆಯಲ್ಲಿ ರೆಡಿಮೇಡ್ ಉಪ್ಪಿನಕಾಯಿ ತಂದು ಸೇವನೆ ಮಾಡುತ್ತಾರೆ.
ನಾವು ತಿಳಿಸುವ ಪ್ರಕಾರ ಮನೆಯಲ್ಲಿ ಟೊಮೆಟೊ ಉಪ್ಪಿನಕಾಯಿ (Tomato Pickle) ತಯಾರಿಸಿದರೆ ಸೂಪರ್ ಟೇಸ್ಟಿಯಾಗಿರುತ್ತದೆ. ಕೆಲವು ತಿಂಗಳುಗಳವರೆಗೆ ಸಂಗ್ರಹಿಸಿ ಇಡಬಹುದು. ಇದೀಗ ಟೊಮೆಟೊ ಉಪ್ಪಿನಕಾಯಿ ಸಿದ್ಧಪಡಿಸಲು ಬೇಕಾಗುವ ಪದಾರ್ಥಗಳೇನು? ರೆಸಿಪಿ ತಯಾರಿಸುವ ವಿಧಾನ ಹೇಗೆ ಎಂಬುದನ್ನು ತಿಳಿಯೋಣ.
ಟೊಮೆಟೊ ಉಪ್ಪಿನಕಾಯಿಗೆ ಬೇಕಾಗುವ ಪದಾರ್ಥಗಳು :
- ಟೊಮೆಟೊ - ಅರ್ಧ ಕೆಜಿ
- ಎಣ್ಣೆ - 1 ಟೀಸ್ಪೂನ್
- ಹುಣಸೆಹಣ್ಣು - 50 ಗ್ರಾಂ
- ಮೆಂತ್ಯಕಾಳು - 1 ಟೀಸ್ಪೂನ್
- ಸಾಸಿವೆ - 2 ಟೀಸ್ಪೂನ್
- ಸಿಪ್ಪೆ ಸುಲಿದ ಬೆಳ್ಳುಳ್ಳಿ- ಕಾಲು ಕಪ್
- ಖಾರದ ಪುಡಿ - ಅರ್ಧ ಕಪ್
- ಉಪ್ಪು - ಕಾಲು ಕಪ್
ಒಗ್ಗರಣೆಗಾಗಿ :
- ಎಣ್ಣೆ - ಅರ್ಧ ಕಪ್
- ಸಾಸಿವೆ - 1 ಟೀಸ್ಪೂನ್
- ಜೀರಿಗೆ - ಅರ್ಧ ಟೀಸ್ಪೂನ್
- ಹಸಿಕಡಲೆ ಕಾಳು - 1 ಟೀಸ್ಪೂನ್
- ಉದ್ದಿನಬೇಳೆ - 1 ಟೀಸ್ಪೂನ್
- ಒಣ ಮೆಣಸಿನಕಾಯಿ - 2
- ಬೆಳ್ಳುಳ್ಳಿ ಎಸಳು - 8
- ಕರಿಬೇವು - ಎರಡು ಚಿಗುರುಗಳು
ಟೊಮೆಟೊ ಉಪ್ಪಿನಕಾಯಿ ತಯಾರಿಸುವ ವಿಧಾನ :
- ಟೊಮೆಟೊ ಸ್ವಚ್ಛವಾಗಿ ತೊಳೆದು ಒಣಗಿಸಬೇಕು, ಬಳಿಕ ತುಂಡುಗಳಾಗಿ ಕಟ್ ಮಾಡಿ ಪಕ್ಕಕ್ಕೆ ಇರಿಸಿ.
- ಸ್ಟೌವ್ ಆನ್ ಮಾಡಿ ಪಾತ್ರೆ ಇಡಿ. ಅದರೊಳಗೆ ಎಣ್ಣೆ ಹಾಕಿ ಟೊಮೆಟೊ ಪೀಸ್ಗಳನ್ನು ಹುಣಸೆಹಣ್ಣು ಹಾಕಿ ಮುಚ್ಚಳ ಮುಚ್ಚಬೇಕು.
- ಟೊಮೆಟೊ ಚೂರುಗಳನ್ನು ಬೇಯಿಸಿದ ಪಾತ್ರೆಯನ್ನು ಕೆಳಗೆ ಇಳಿಸಬೇಕಾಗುತ್ತದೆ. ಇದನ್ನು ಸಂಪೂರ್ಣವಾಗಿ ತಣ್ಣಗಾಗಲು ಬಿಡಬೇಕಾಗುತ್ತದೆ.
- ಒಲೆಯ ಮೇಲೆ ಇನ್ನೊಂದು ಪಾತ್ರೆ ಇಡಿ, ಅದರೊಳಗೆ ಸಾಸಿವೆ ಹಾಗೂ ಮೆಂತ್ಯಕಾಳುಗಳನ್ನು ಹುರಿದು ಸ್ಟವ್ ಆಫ್ ಮಾಡಿ.
- ಸಾಸಿವೆ ಹಾಗೂ ಮೆಂತ್ಯ ಸಂಪೂರ್ಣವಾಗಿ ತಣ್ಣಗಾದ ನಂತರ, ಅವುಗಳನ್ನು ಮಿಕ್ಸರ್ ಜಾರ್‌ಗೆ ಹಾಕಿ ನುಣ್ಣಗೆ ರುಬ್ಬಿಕೊಳ್ಳಬೇಕಾಗುತ್ತದೆ.
- ಈಗ ಅದೇ ಮಿಕ್ಸರ್ ಜಾರ್‌ಗೆ ಬೇಯಿಸಿದ ಟೊಮೆಟೊ ತುಂಡುಗಳು, ಸಿಪ್ಪೆ ಸುಲಿದ ಬೆಳ್ಳುಳ್ಳಿ ಎಸಳು, ಒಣ ಮೆಣಸಿನಕಾಯಿ, ಸಾಸಿವೆ, ಮೆಂತ್ಯ ಪುಡಿ ಮತ್ತು ಉಪ್ಪನ್ನು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಬೇಕಾಗುತ್ತದೆ. ರುಚಿಗೆ ತಕ್ಕಷ್ಟು ಉಪ್ಪು ಮತ್ತು ಖಾರದ ಪುಡಿ ಹಾಕಬೇಕಾಗುತ್ತದೆ.
- ರುಬ್ಬಿದ ಮಿಶ್ರಣದ ಜೊತೆಗೆ ಸರಿಯಾಗಿ ಮಿಕ್ಸ್ ಮಾಡಬೇಕಾಗುತ್ತದೆ. ಬಳಿಕ ಒಲೆ ಆನ್ ಮಾಡಿ ಪಾತ್ರೆ ಇಡಿ. ಬಳಿಕ ಎಣ್ಣೆ ಹಾಕಿ ಬಿಸಿ ಮಾಡಿಕೊಳ್ಳಬೇಕಾಗುತ್ತದೆ.
- ಎಣ್ಣೆ ಬಿಸಿಯಾದ ಬಳಿಕ ಸಾಸಿವೆ, ಜೀರಿಗೆ, ಉದ್ದಿನಬೇಳೆ ಹಾಗೂ ಕಡಲೆಯನ್ನು ಹಾಕಿ ಫ್ರೈ ಮಾಡಿಕೊಳ್ಳಬೇಕಾಗುತ್ತದೆ.
- ಇದಾದ ನಂತರ ಒಣಮೆಣಸಿನಕಾಯಿ ಹಾಗೂ ಬೆಳ್ಳುಳ್ಳಿ ಎಸಳು ಸೇರಿಸಿ ಹುರಿಯಬೇಕು. ಅದರೊಳಗೆ ಕರಿಬೇವಿನ ಎಲೆಗಳು ಹಾಗೂ ಅರಿಶಿನ ಸೇರಿಸಿ ಫ್ರೈ ಮಾಡಿ.
- ಕೊನೆಯದಾಗಿ ಇದರೊಳಗೆ ರುಬ್ಬಿದ ಟೊಮೆಟೊ ಮಿಶ್ರಣ ಸೇರಿಸಿ ಹಾಗೂ ಚೆನ್ನಾಗಿ ಮಿಶ್ರಣ ಮಾಡಿ, ಗಾಳಿಯಾಡದ ಡಬ್ಬದಲ್ಲಿ ಸಂಗ್ರಹಿಸಬೇಕಾಗುತ್ತದೆ. ಈಗ ತುಂಬಾ ಟೇಸ್ಟಿಯಾದ ಟೊಮೆಟೊ ಉಪ್ಪಿನಕಾಯಿ (Tomato Pickle) ಸವಿಯಲು ಸಿದ್ಧವಾಗಿದೆ.
- ಈ ಉಪ್ಪಿನಕಾಯಿಯನ್ನು ಫ್ರಿಡ್ಜ್ನಲ್ಲಿಟ್ಟರೆ ಆರು ತಿಂಗಳು ಮತ್ತು ಹೊರಗೆ ಎರಡು ತಿಂಗಳು ಸಂಗ್ರಹಿಸಿ ಇಡಬಹುದು.
- ನೀವು ದೊಡ್ಡ ಪ್ರಮಾಣದಲ್ಲಿ ಈ ಉಪ್ಪಿನಕಾಯಿ ತಯಾರಿಸಿದರೆ ಅದನ್ನು ಗಾಜಿ ಪಾತ್ರೆಯಲ್ಲಿ ಹಾಕಿ ಫ್ರಿಜ್ಡ್ನಲ್ಲಿ ಇಡಬೇಕಾಗುತ್ತದೆ. ನಂತರ ನಿಮಗೆ ಬೇಕಾದಾಗ ಸ್ವಲ್ಪ ಸ್ವಲ್ಪವೇ ಉಪ್ಪಿನಕಾಯಿಯನ್ನು ತೆಗೆದುಕೊಂಡು ಹೊರಗೆ ಸಂಗ್ರಹಿಸಿ ಇಟ್ಟುಕೊಳ್ಳಿ. ಈ ರೆಸಿಪಿ ನಿಮಗೆ ಇಷ್ಟವಾದರೆ ಒಮ್ಮೆ ಟ್ರೈ ಮಾಡಿ ನೋಡಬಹುದು.