ETV Bharat / bharat

ಹಳಿ ತಪ್ಪಿದ ಪ್ರಯಾಣಿಕರಿಲ್ಲದ ಮಹಾಕುಂಭದ ವಿಶೇಷ ರೈಲಿನ ಇಂಜಿನ್​: ತಪ್ಪಿದ ಅನಾಹುತ, ತನಿಖೆಗೆ ಆದೇಶ - TRAIN ENGINE DERAILS IN JAUNPUR

ಪ್ರಯಾಗ್​ರಾಜ್​ನ ಮಹಾಕುಂಭ ಯಾತ್ರಿಕರಿಗಾಗಿಯೇ ಇರುವ ವಿಶೇಷ ರೈಲು ಜೋಡಣೆ ವೇಳೆ ಹಳಿ ತಪ್ಪಿದೆ

empty-mahakumbh-special-train-engine-derails-in-jaunpur
ಸಾಂದರ್ಭಿಕ ಚಿತ್ರ (ಐಎಎನ್​ಎಸ್​)
author img

By ETV Bharat Karnataka Team

Published : Feb 11, 2025, 11:38 AM IST

ಜೌನಪುರ, ಉತ್ತರಪ್ರದೇಶ: ಮಹಾಕುಂಭದ ವಿಶೇಷ ರೈಲಿನ ಬೋಗಿಗೆ ಎಂಜಿನ್​ ಜೋಡಿಸುವ ವೇಳೆ ಹಳಿ ತಪ್ಪಿರುವ ಘಟನೆ ಜೌನ್‌ಪುರ ಜಂಕ್ಷನ್‌ನಲ್ಲಿ ನಡೆದಿದೆ. ಜೌನಪುರ ಜಂಕ್ಷನ್​ನ ಮೂರನೇ ಫ್ಲಾಟ್​ಫಾರ್ಮ್​ನಲ್ಲಿ ನಡೆದ ಈ ಘಟನೆ ರೈಲ್ವೆ ನೌಕರರಲ್ಲಿ ಆತಂಕಕ್ಕೆ ಕಾರಣವಾಯಿತು. ಆದರೆ, ಅದೃಷ್ಟವಶಾತ್​ ರೈಲು ಖಾಲಿ ಇದ್ದ ಕಾರಣ ಯಾವುದೆ ಅಹಿತಕರ ಘಟನೆ ನಡೆದಿಲ್ಲ.

ಪ್ರಯಾಗರಾಜ್‌ನ ಮಹಾಕುಂಭ ಮೇಳಕ್ಕೆ ಸಂಚರಿಸುವ ವಿಶೇಷ ರೈಲನ್ನು ಜೌನಪುರ ಜಂಕ್ಷನ್‌ನ ಪ್ಲಾಟ್‌ಫಾರ್ಮ್ ನಂಬರ್ ಮೂರರಲ್ಲಿ ಸಿದ್ಧಪಡಿಸಲಾಗುತ್ತಿತ್ತು. ನೌಕರರು ಜೋಡಣೆ ಕೆಲಸವನ್ನು ನಿರ್ವಹಿಸುತ್ತಿದ್ದರು. ಈ ವೇಳೆ, ರೈಲು ಹಿಂದಕ್ಕೆ ಮುಂದಕ್ಕೆ ಚಲಿಸುವಾಗ ಇಂಜಿನ್‌ನ ಎರಡು ಚಕ್ರಗಳು ಏಕಾಏಕಿ ಹಳಿಯಿಂದ ಹೊರಬಂದು, ನೌಕರರಲ್ಲಿ ಆತಂಕಕ್ಕೆ ಕಾರಣವಾಯ್ತು.

ಈ ಅಪಘಾತದ ಸಮಯದಲ್ಲಿ, ರೈಲು ಸಂಪೂರ್ಣವಾಗಿ ಖಾಲಿಯಾಗಿತ್ತು. ಇದರಿಂದಾಗಿ ಭಾರಿ ಅನಾಹುತ ತಪ್ಪಿದೆ. ಈ ಅಪಘಾತಕ್ಕೆ ಕಾರಣ ಏನು ಎಂಬುದು ಇನ್ನೂ ತಿಳಿದುಬಂದಿಲ್ಲ ಎಂದು ಅಲ್ಲಿನ ಸಿಬ್ಬಂದಿ ಹೇಳಿದೆ.

ಸದ್ಯ ರೈಲು ಸಿದ್ದವಾಗಿದ್ದು, ಖಾಲಿ ರೈಲು ಪ್ರಯಾಗ್​ರಾಜ್​ಗೆ ತಲುಪಿ ಅಲ್ಲಿಂದ ಪ್ರಯಾಣಿಕರೊಂದಿಗೆ ಈ ನಿಲ್ದಾಣಕ್ಕೆ ಹಿಂತಿರುಗುತ್ತದೆ ಎಂದು ನಿಲ್ದಾಣದ ಸಿಬ್ಬಂದಿ ತಿಳಿಸಿದ್ದಾರೆ.

ಈ ನಡುವೆ, ರೈಲಿನ ಚಕ್ರ ಹಳಿತಪ್ಪಿದ ಮಾಹಿತಿ ಪಡೆದ ಎಡಿಆರ್‌ಎಂ ಲಾಲ್ಜಿ ಚೌಧರಿ ತಡರಾತ್ರಿಯೇ ತಮ್ಮ ತಂಡದೊಂದಿಗೆ ಜೌನ್ಪುರ ಜಂಕ್ಷನ್‌ಗೆ ಭೇಟಿ ನೀಡಿ, ಅಪಘಾತಕ್ಕೆ ಕಾರಣ ಕುರಿತು ಸಿಬ್ಬಂದಿಯೊಂದಿಗೆ ಮಾತನಾಡಿದರು. ರೈಲ್ವೆ ಸಿಬ್ಬಂದಿ ತಡರಾತ್ರಿಯವರೆಗೂ ತನಿಖೆ ಮುಂದುವರೆಸಿ, ಎಂಜಿನ್​ ಅನ್ನು ಮತ್ತೆ ಹಳಿಗೆ ತರಲು ಎಲ್ಲಾ ಪ್ರಯತ್ನಗಳು ಮಾಡಿದರು. ಈ ನಡುವೆ ಈ ಅಪಘಾತಕ್ಕೆ ಕಾರಣ ಏನು ಎಂಬುದು ತಿಳಿದಿಲ್ಲ. ಈ ಕುರಿತು ಸಂಪೂರ್ಣ ತನಿಖೆ ನಡೆಸಲಾಗುವುದು ಎಂದು ಎಡಿಆರ್​​ಎಂ ತಿಳಿಸಿದ್ದಾರೆ.

ಇದನ್ನೂ ಓದಿ: ಕುಂಭ, ಗಂಗಾ, ಜಮುನಾ, ಬಸಂತಿ: ಮಹಾ ಕುಂಭಮೇಳದಲ್ಲಿ ಜನಿಸಿದ ಶಿಶುಗಳಿಗೆ ನಾಮಕರಣ

ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ 167 ಗೀಲನ್​ ಬಾ ಸಿಂಡ್ರೋಮ್ ಪ್ರಕರಣಗಳು ಪತ್ತೆ; ರೋಗಕ್ಕೆ 7 ಮಂದಿ ಬಲಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.